Hi Bangalore
Hi Bangalore

Hi Bangalore

This is an e-magazine. Download App & Read offline on any device.

ಸೃಷ್ಟಿ 1035 : ಸಂಪುಟ 20, ಸಂಚಿಕೆ 47, ಆಗಸ್ಟ್ 20, 2015 ಖಾಸ್‌ಬಾತ್ ಬೇರೆ ಏನನ್ನಾದರೂ ಬಿಡ್ತಾರೆ ತಮ್ಮ ಇಮೇಜ್‌ನ ಹೊರತು! ನನಗೆ ನಿಜಕ್ಕೂ ಇಷ್ಟ. ಒಂದು ಸಿನೆಮಾ ಇತ್ತು: ಜಿಸ್ ದೇಶ್ ಮೆ ಗಂಗಾ ಬೆಹತೀ ಹೈ! ಅದರ ನಾಯಕ ರಾಜಕಪೂರ್. ಖಳನಾಯಕ ಪ್ರಾಣ್. ಬಳ್ಳಾರಿಯ ರಾಯಲ್ ಟಾಕೀಸ್‌ನಲ್ಲಿ ಅಮ್ಮನೊಂದಿಗೆ ಕುಳಿತು ನೋಡುತ್ತಿದ್ದೆ. ಆಗ ತುಂಬ ಚಿಕ್ಕವನು ನಾನು. ಪಕ್ಕದಲ್ಲಿ ಕುಳಿತ ಅಮ್ಮ ವಿಪರೀತ ದೇಶ ಭಕ್ತಳು. ಚಿಕ್ಕದೊಂದು ಎಮೋಶನಲ್ ಸೀನ್ ಬಂದರೂ ಸಾಕು: ಅಮ್ಮನ ಕಣ್ಣು ಒದ್ದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ನಾನು ವಿಲನ್‌ಗಳ ದಿವ್ಯಾಭಿಮಾನಿ. ‘ಜಿಸ್ ದೇಶ್ ಮೆ’ ಸಿನೆಮಾದಲ್ಲಿ ಪ್ರಾಣ್ ತುಂಬ ದುಷ್ಟ. ಅದರಲ್ಲಿ ಆತ ಅದೆಷ್ಟು ಚೆಂದಗೆ ನಟಿಸಿದ್ದನೆಂದರೆ, ಆತನಕ ನನಗೆ ರಾಜ್‌ಕಪೂರ್ ಬಗ್ಗೆ ಚೂರೋ ಪಾರೋ ಪ್ರೀತಿಯಿತ್ತಲ್ಲ? ಅದಿಷ್ಟು ಮಟಾಷ್. “ನಿಂಗೆ ಬರೀ negative things ಇಷ್ಟವಾಗ್ತವೆ ನೋಡು!" ಅಂತ ಗದರಿದ್ದಳು ಅಮ್ಮ. ಇರಬಹುದೇನೋ? ದೇಶಭಕ್ತಿಯ ಹಲವಾರು ಸಿನೆಮಾಗಳನ್ನು ನಾನು ನೋಡಿದ್ದೇನೆ. ಚೀನಾದ ವಂಚನೆಯಿಂದಾಗಿ ನಾವು ಸಾವಿರಾರು ಯೋಧರನ್ನು 1962ರಲ್ಲಿ ಕಳೆದುಕೊಂಡೆವಲ್ಲ? ಹಿಂದಿಯಲ್ಲಿ ಅದೇ “ಹಕೀಕತ್" ಆಯಿತು. ಅದನ್ನು ನೋಡಿದಾಗ ನಾನಿನ್ನೂ ಬ್ರಿಗೇಡಿಯರ್ ಜಾನ್ ಪರಶುರಾಮ ದಳವಿ ಅವರ ‘ಹಿಮಾಲಯನ್ ಬ್ಲಂಡರ್’ ಓದಿರಲಿಲ್ಲ. ರವಿ ಬೆಳಗೆರೆ ಸಾಫ್ಟ್‌ಕಾರ್ನರ್ ತುಂಬ ಮುಖ್ಯವಾದ ಒಂದು ಕೆಲಸವಿದೆ ನಂಗೆ... “ಹಾಯ್ ಶೋಭಾ..." ಅಂತೇನೆ. ಆಚೆಯಿಂದ ಅಷ್ಟೇ ಆತ್ಮೀಯ ದನಿಯಲ್ಲಿ ಉತ್ತರ ಬರುತ್ತದೆ. ಆ ಮಿತ್ರ ಫ್ರಾನ್ಸ್‌ನಲ್ಲಿರುತ್ತಾನೆ. ಮೊದಲು ‘ಶೋಭಸಕ್ತಿ’ ಅಂತ ಮಾತ್ರ ಬರೆಯುತ್ತಿದ್ದ. ಈಗ ಅದಕ್ಕೆ ಆಂಥನಿ ಥಾಸನ್ ಅಂತ ಸೇರಿಸಿಕೊಂಡಿದ್ದಾನೆ. “ರವೀ, ತುಂಬ ವರ್ಷಗಳ ಹಿಂದೆ ಶೋಭ ಅಂತ ಒಬ್ಬ ನಟಿಯಿದ್ದಳು. ನನ್ನ ಇಷ್ಟದ ನಟಿ. ಹೀಗಾಗಿ ‘ಶೋಭ’ ಎಂಬುದನ್ನು ನನ್ನ ಕಾವ್ಯನಾಮ ಮಾಡಿಕೊಂಡೆ. Beautiful she was..." ಅಂತ ವಿವರಿಸಿದ. ಅದೇ ಕಾವ್ಯನಾಮದಲ್ಲಿ ಆತ ಒಂದು ಕಾದಂಬರಿ ಬರೆದ. ‘ಗೊರಿಲ್ಲಾ’ ಅಂತ. ನಂತರ ಬರೆದದ್ದು ‘mmm’ ಎಂಬ ಕಾದಂಬರಿ. “ಶೋಭಾ, ನಂಗೆ ನೀನು ಹೇಳೋ ಚಿತ್ರನಟಿ ಗೊತ್ತು. ಅವಳ ಮೂಲ ಹೆಸರು ಮಹಾಲಕ್ಷ್ಮಿ. ತಮಿಳಿನ ‘ಪಸಿ’ ಚಿತ್ರದಲ್ಲಿ ನಟಿಸಿದಾಗ ಆಕೆಗೆ ಬರೀ ಹದಿನೇಳು. ಅದಕ್ಕೆ ರಾಷ್ಟ್ರಪ್ರಶಸ್ತಿ ಬಂತು. ತುಂಬ ಚಿಕ್ಕವಯಸ್ಸಿನಲ್ಲೇ child artist ಆಗಿ ತೆರೆಯೆಡೆಗೆ ನೋಡಿದಳು. ಮಹಾಮಹಿಮರೊಂದಿಗೆ ನಟಿಸಿದಳು. ತುಂಬ ಬೇಗ ಮದುವೆಯಾದಳು. ಅದಕ್ಕಿಂತ ಬೇಗ, ಹದಿನೇಳು ತುಂಬುವುದಕ್ಕಿಂತ ಮುಂಚೆ ಆತ್ಮಹತ್ಯೆ ಮಾಡಿಕೊಂಡಳು. ಆಕೆ ಸುಪ್ರಸಿದ್ಧ ನಿರ್ದೇಶಕ ಬಾಲು ಮಹೇಂದ್ರರನ್ನ ಮದುವೆಯಾಗಿದ್ದಳು. ಇದಿಷ್ಟೂ ನಿಂಗೆ ಗೊತ್ತಿರುವಂಥ ವಿವರಗಳು. ರವಿ ಬೆಳಗೆರೆ ಬಾಟಮ್ ಐಟಮ್ ನಿಮ್ಮ ಮಗಳಿಗೆ ಮೊಬೈಲ್ ಕೊಡಿಸಿದ್ದಾಯಿತಾ? ಮಗಳು ವಯಸ್ಸಿಗೆ ಬಂದಿದ್ದಾಳೆ. ಮದುವೆ ಮಾಡೋದು ಯಾವಾಗ? ಇದು ಎಲ್ಲಾ ಹೆತ್ತವರನ್ನು ಕಾಡುವ ಪ್ರಶ್ನೆ. ಹಾಗೆ ನೋಡಿದರೆ ಹೆಣ್ಮಗು ಹುಟ್ಟಿದ ತಕ್ಷಣ ಅದರ ಜೊತೆಗೇ ಈ ಪ್ರಶ್ನೆಯೂ ಹುಟ್ಟುತ್ತದೆ. ತಲೆಮೇಲೊಂದು ಜವಾಬ್ದಾರಿಯ ಮೂಟೆ ದೊಪ್ಪಂತ ಬಿದ್ದಂತೆ ಅಪ್ಪ ಚಡಪಡಿಸುತ್ತಾನೆ. ಮಗಳ ಮದುವೆ ಅನ್ನುವುದು ಸಂಭ್ರಮಕ್ಕಿಂತ ಹೆಚ್ಚಾಗಿ ಸಮಸ್ಯೆಯಾಗುತ್ತದೆ. ಹೆಣ್ಮಗಳನ್ನು ಹೆತ್ತವರು ಸುಮ್ಮನಿದ್ದರೂ ನೆರೆ-ಹೊರೆ, ಬಂಧು-ಬಳಗದವರು ಸುಮ್ಮನಿರುವುದಿಲ್ಲ. ಮಗಳ ಮದುವೆ ಯಾವಾಗ ಮಾಡ್ತೀಯಾ ಮಾರಾಯಾ ಎಂದು ಪೀಡಿಸುತ್ತಾರೆ. ವಯಸ್ಸು ಮೀರಿದರೆ ಗಂಡು ಸಿಗುವುದಿಲ್ಲ ಎಂಬ ಭಯ ಹುಟ್ಟಿಸುತ್ತಾರೆ, ಹುಡುಗಿ ಹಾದಿತಪ್ಪಬಹುದು ಎಂಬ ಆತಂಕ ಮೂಡಿಸುತ್ತಾರೆ. ಹಾಗಾಗಿ ಹೆತ್ತವರು ಆಕೆಗೆ ಒಂದಿಷ್ಟು ಓದಿಸಿದ ಶಾಸ್ತ್ರ ಮಾಡಿ ಗಂಡು ಹುಡುಕುವುದಕ್ಕೆ ಶುರು ಮಾಡುತ್ತಾರೆ. ರವಿ ಬೆಳಗೆರೆ ಹಲೋ ರಾಜ್ಯದ ಪಾಲಿಗೆ ಮೋದಿಯಂತಹ ಮತ್ತೊಬ್ಬ ಶತ್ರು ಇನ್ನೊಬ್ಬ ಇರಲು ಸಾಧ್ಯವೇ? ಪ್ರಧಾನಿ ನರೇಂದ್ರ ಮೋದಿಯ ಅಚ್ಚೇ ದಿನ್‌ಗಳು ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಬರುತ್ತಿವೆ. ಅವನ್ನು ಎದುರುಗೊಳ್ಳಲು ಜನ ಸಿದ್ಧರಾಗುವುದೊಂದು ಬಾಕಿ ಇದೆ ಅನ್ನಿಸುತ್ತಿದೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಡೀ ದೇಶದುದ್ದ ತಿರುಗಿ, ಕೇಂದ್ರದ ಯುಪಿಎ ಸರ್ಕಾರವನ್ನು ವಾಚಾಮಗೋಚರವಾಗಿ ಬೈದ ನರೇಂದ್ರ ಮೋದಿ ಬಗ್ಗೆ ಈ ದೇಶದ ಜನ ದೊಡ್ಡ ಮಟ್ಟದ ಕನಸು ಕಂಡಿದ್ದು ಅಸಹಜವೇನಲ್ಲ. ಅವತ್ತು ಕೇಂದ್ರ ಸರ್ಕಾರದ ಮೇಲೆ ಕೇಳಿ ಬಂದ ಹಗರಣಗಳ ಆರೋಪ ಪಟ್ಟಿಯೇ ಹಾಗಿತ್ತು. ಅಂದ ಹಾಗೆ ಆ ಆರೋಪಗಳ ಬಗ್ಗೆ ಮಾತ್ರ ಮೋದಿ ಪ್ರಸ್ತಾಪಿಸಲಿಲ್ಲ. ಬದಲಿಗೆ ಈ ಆರೋಪಗಳ ಸುಳಿಯನ್ನೇ ಭೇದಿಸಿ, ಅರ್ಜುನನ ಥರ ಯುದ್ಧ ಗೆಲ್ಲುವುದು ಇಂದಿನ ಅಗತ್ಯ ಎಂದು ಪ್ರತಿಪಾದಿಸಿದರು. ರವಿ ಬೆಳಗೆರೆ ಮುಖಪುಟ ವರದಿ ಬಾರಲೆ ಸ್ವಾಮೀ... ಹಿತ್ತಿಲಿಗೆ ಆಡೋಣ ಬಾರಲೆ ಬೆತ್ತಲೆಗೆ ಅಂದ! ರಾಮಚಂದ್ರಾಪುರ ಮಠದ ಹೋರಿ ಸ್ವಾಮಿಯ ರಕ್ಷಣೆಯ ಮೂಲಕ ಹವ್ಯಕ ಓಟು ಪಡೆಯುವ ಹುನ್ನಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಇರುವಾಗಲೇ ಮಹಿಳಾ ಆಯೋಗದ ಮೂಲಕ ಕೇಂದ್ರ ಸರ್ಕಾರ, ಕಾಮುಕ ಸ್ವಾಮಿಗೆ ತಪರಾಕಿ ಬಾರಿಸಿದೆ. ಇನ್ನೊಂದೆಡೆ ಸದ್ದಿಲ್ಲದೆ ಹೊಸನಗರದ ಅರಣ್ಯ ಇಲಾಖೆ ಎಸಿಎಫ್ ಆಲ್ವಿನ್, ಮಠದಿಂದ ಅಕ್ರಮವಾಗಿ ಒತ್ತುವರಿಯಾಗಿರುವ 19 ಎಕರೆ ಅರಣ್ಯ ಭೂಮಿಯನ್ನು ಬಿಟ್ಟು ಕೊಡುವಂತೆಯೂ, 62 ಲಕ್ಷ ರುಪಾಯಿ ದಂಡ ಕಟ್ಟುವಂತೆಯೂ ಆದೇಶಿಸಿ ಮಠದ ಮಾಣಿಗಳ ತಳಮಳಕ್ಕೆ ಕಾರಣವಾಗಿದೆ. ವರದಿಗಾರ ರಾಜಕೀಯ ಕುಮ್ಮಿ ತಡವಿದ ಸಿದ್ದು ಸರ್ಕಾರಕ್ಕೆ ಕಾದಿದೆಯಾ ಕೇಡುಗಾಲ! ಸರ್ಕಾರಕ್ಕೆ ಕಳೆದೆರಡು ವರ್ಷಗಳಿಂದಲೂ ಸವಾಲಾಗುತ್ತಲೇ ಬಂದ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಕನಿಷ್ಟ ಎರಡು ದಿನಗಳ ಮಟ್ಟಿಗೆ ಅರೆಸ್ಟ್ ಮಾಡುವ ಮೂಲಕ ವಿರೋಧಿಗಳಿಗೆ ಬೆದರಿಕೆ ಒಡ್ಡುವ ಸಿಎಂ ಸಿದ್ದರಾಮಯ್ಯ ಸರ್ಕಾರದ ತಂತ್ರ ಅಟ್ಟರ್ ಫ್ಲಾಪ್ ಆಗಿದೆ. ಅಂದ ಹಾಗೆ ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ವೇಳೆ ಸಂತೋಷ್ ಹೆಗ್ಡೆ ನೀಡಿದ ವರದಿಯ ಆಧಾರದ ಮೇಲೆ ಕುಮ್ಮಿ ವಿರುದ್ಧ ಎಸ್‌ಐಟಿಯನ್ನು ಛೂ ಬಿಟ್ಟು ಅರೆಸ್ಟ್ ಮಾಡಿಸಲು ಹೆಣಗಾಡಿದ, ಆ ಮೂಲಕ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ವಿರುದ್ಧ ಭ್ರಮನಿರಸನ ಉಂಟಾಗುವಂತೆ ಮಾಡುವುದು ಸಿದ್ದು ಗ್ಯಾಂಗಿನ ಪ್ಲಾನ್ ಆಗಿತ್ತು. ಅಂದ ಹಾಗೆ ನಿರ್ದಿಷ್ಟ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದ ಅದಿರನ್ನು ಸರಬರಾಜು ಮಾಡಿದರೆ ಅದನ್ನು ಎಸ್‌ಐಟಿ ಮೂಲಕ ತನಿಖೆ ನಡೆಸಲು ಅನುಮತಿ ಸೃಷ್ಟಿಸಿಕೊಳ್ಳಲಾಗಿತ್ತಲ್ಲ? ಇದನ್ನೇ ಬಳಸಿಕೊಂಡು ಕುಮ್ಮಿಯನ್ನು ಸದೆಬಡಿಯಲು ಸಿದ್ದು ಸರ್ಕಾರ ಪ್ಲಾನು ರೂಪಿಸಿತ್ತು. ಆರ್.ಟಿ.ವಿಠ್ಠಲಮೂರ್ತಿ ವರದಿ ಇಸ್ಕಾನ್ ನೌಕರಿಗಿದ್ದ ರವಿಕುಮಾರ್ ನಿಗೂಢ ಸಾವು! ರವಿಕುಮಾರ್ ನಾಲ್ಕು ವರ್ಷದಿಂದ ಮನೆಯವರ ಜೊತೆ ಫೋನಿನ ಸಂಪರ್ಕದಲ್ಲಿದ್ದ. ಬೆಂಗಳೂರಿಗೆ ಪ್ರವಚನಕ್ಕೆಂದು ಹೋದಾಗಲೆಲ್ಲಾ ತನ್ನ ಮನೆಗೆ ಭೇಟಿ ಕೊಡುತ್ತಲೇ ಇದ್ದ. ಕಳೆದ ಮೇ ತಿಂಗಳಲ್ಲಷ್ಟೇ ಬೆಂಗಳೂರಿನ ಮನೆಗೆ ಹೋಗಿದ್ದ. ಅದೇ ಕಡೆ. ಮತ್ತೆ ಆತನ ಮುಖವನ್ನ ಕುಟುಂಬದವರು ನೋಡಿದ್ದು ಶವವಾಗಿ. ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಡಂಕುದ್ರು ಎಂಬಲ್ಲಿ ನೇತ್ರಾವತಿ ನದಿಯ ಹರಿವಿನ ಜಾಗದಲ್ಲಿ ಕೊಳೆತ ಸ್ಥಿತಿಯಲ್ಲಿ ರವಿಕುಮಾರ್‌ನ ಶವ ದೊರೆಕಿತ್ತು. ಅಡಂಕುದ್ರು ನಿವಾಸಿ ಮೀನುಗಾರಿಕೆಗೆಂದು ನದಿಯ ಬಳಿ ಬಂದಾಗ ರವಿಕುಮಾರ್ ಶವ ಕಾಣಿಸಿದೆ. ದಾರಿಹೋಕರೊಬ್ಬರು ನೀಡಿದ ಮಾಹಿತಿ ಪ್ರಕಾರ ಸ್ಥಳಕ್ಕಾಗಮಿಸಿದ ಉಳ್ಳಾಲ ಠಾಣೆಯ ಪೊಲೀಸರು ಶವ ರವಿಕುಮಾರ್‌ನದ್ದೆಂದು ಗುರುತಿಸಿದ್ದಾರೆ. ಮೃತದೇಹ ಪತ್ತೆಯಾದಾಗ ಶವದ ಕುತ್ತಿಗೆಯನ್ನು ಮೊಬೈಲ್ ಚಾರ್ಜರ್ ವೈರ್‌ನಿಂದ ಬಿಗಿಯಲಾಗಿತ್ತು. ರವಿಕುಮಾರ್ ಬ್ಯಾಗಿನೊಳಗೆ ಕಲ್ಲುಗಳನ್ನ ತುಂಬಲಾಗಿತ್ತು. ಇದೊಂದು ವ್ಯವಸ್ಥಿತ ಕೊಲೆ ಎಂಬುದನ್ನ ನೋಡಿದ ತಕ್ಷಣವೇ ಗುರುತಿಸಬಹುದಾಗಿತ್ತು. ವಸಂತ್ ಗಿಳಿಯಾರ್ ವರದಿ ಹಾಡಹಗಲೇ ಹಡಗಲಿ ಕಾಲೇಜಿನಲ್ಲಿ ಲವ್ವು-ಲಟಕ್! ಚಪಲ ಚೆನ್ನಿಗ ಗುರುಬಸವರಾಜರ ಹೆಸರು ಕೇಳಿದರೆ ಸಾಕು, ಹೂವಿನಹಡಗಲಿಯ ಡಿಗ್ರಿ ಹಾಗೂ ಪಿಯುಸಿ ಕಾಲೇಜುಗಳಲ್ಲಿ ಹುಡುಗಿಯರು ಬೆಚ್ಚಿ ಬೀಳುತ್ತಾರೆ. ವಿಚಿತ್ರವಾದ ಮುಜುಗರಕ್ಕೀಡಾಗುತ್ತಾರೆ. ಮೈಮೇಲೆ ವಿಷಜಂತುಗಳು ಹರಿದಾಡಿದಂತೆ ವರ್ತಿಸತೊಡಗುತ್ತಾರೆ. ಒಳಗೊಳಗೇ ತಳಮಳಗೊಳ್ಳುತ್ತಾರೆ. ನಂಬರ್ ಎಂಟರ ಸೊಂಟದ ಸಂಕೇತವೂ ಸೇರಿದಂತೆ ಕಾಶ್ಮೀರಿ ಆಪಲ್‌ನಂಥ ಕೆನ್ನೆಗಳ ವರ್ಣನೆ, ಇನ್ನು ಅಶ್ಲೀಲ ಮಾತುಗಳು ಓತಪ್ರೋತವಾಗಿ ಕ್ಲಾಸುಗಳಲ್ಲಿ ಅನುರಣಿಸುತ್ತವೆ ಅಂದರೆ ಅಲ್ಲಿನ ಶೈಕ್ಷಣಿಕ ವಾತಾವರಣ ಯಾವ ರೀತಿ ಎಕ್ಕುಟ್ಟಿ ಹೋಗಿರಬಹುದು ಎಂಬುದನ್ನು ಗಂಭೀರವಾಗಿ ಯೋಚಿಸಬೇಕಾಗುತ್ತದೆ. ಹೌದು, ಹಡಗಲಿ ಕಾಲೇಜಿನಲ್ಲಿ ಹೀಗೂ ಉಂಟಾ? ಅಂತ ಜನ ಆಶ್ವರ್ಯಚಕಿತರಾಗಿ ಅಲ್ಲಿನ ವಿದ್ಯಾರ್ಥಿಗಳನ್ನು ಆ ದೇವರೇ ಕಾಪಾಡಬೇಕು ಅಂತ ಆತಂಕಿತರಾಗುತ್ತಿದ್ದಾರೆ. ಮಲ್ಲಪ್ಪ ಬಣಕಾರ ವರದಿ ಉಡುಪಿಗೆ ಅಮರಿದ ಡಾ.ಓಕುಡೆ ಎಂಬ ಪೀಡೆ! ಯಾವಾಗ ಮಹಿಮ್ ಕುಮಾರ್ ಹೆಗ್ಡೆ ಸಾವಿಗೀಡಾದರೋ? ಆಗ ತಪ್ಪೆಲ್ಲವೂ ನನ್ನದೇ ಎಂಬುದನ್ನ ತಿಳಿದ ಅಶೋಕ್, ಮಹಿಮ್ ಕುಮಾರ್ ಹೆಗ್ಡೆಯವರ ಮನೆಯಲ್ಲಿ ರಾಜಿ ಮಾತುಕತೆಗೆ ಮುಂದಾಗಿದ್ದಾನೆ. ಕೆಲವು ಪ್ರಭಾವಿಗಳ ಮೂಲಕ ರಾಜಿಗಾಗಿ ಸಂಪರ್ಕಿಸಿದ್ದಾನೆ. ಯಾವ ರಾಜಿ ಮಾಡಿದರೇನು, ಹೋದ ಜೀವ ಮರಳಿ ಬಂದೀತೆ? ಮಹಿಮ್ ಕುಮಾರ್ ಹೆಗ್ಡೆಯವರ ಶ್ರೀಮತಿ ಶ್ರೀಲತಾ ಹೆಗ್ಡೆಯವರ ನೋವನ್ನ ಮರೆಸುವುದು ಸಾಧ್ಯವಾದೀತೆ? ಅವರ ಕುಟುಂಬದವರ ಯಾತನೆಯನ್ನ ನೀಗಲಾದೀತೆ? ಹಾಗಾಗಿ ಯಾರೂ ಕೂಡ ರಾಜಿ ಮಾತುಕತೆಗೆ ಸೊಪ್ಪು ಹಾಕಿಲ್ಲ. ಶ್ರೀಮತಿ ಶ್ರೀಲತಾ ಹೆಗ್ಡೆಯವರು ಉಡುಪಿಯ ಪ್ರಖ್ಯಾತ ವಕೀಲರಾದ ಲತಾ ಸಿ.ಎಸ್. ಹೊಳ್ಳರ ಮೂಲಕ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದರು. ವಸಂತ್ ಗಿಳಿಯಾರ್ ವರದಿ ಹೊಸಪೇಟೆ: ಬಿಎಂಎಂ ಫ್ಯಾಕ್ಟರಿಯ ವಿಕಟ ಅಟ್ಟಹಾಸ ಶುರು ಬಿಎಂಎಂ ಅಕ್ರಮಗಳಿಗೆ ಮೊದಲು-ಕೊನೆ ಎಂಬುದಿಲ್ಲ. 2002-03ರಲ್ಲಿ ಆರಂಭವಾದ ಕಾರ್ಖಾನೆ 2009ರ ಸುಮಾರಿಗೆ ಸಾವಿರ ಎಕರೆಯಷ್ಟು ವಿಸ್ತಾರ ಹೊಂದಿದ್ದ ಕಾರ್ಖಾನೆ ಆ ನಂತರದ ಮೂರೇ ವರ್ಷಗಳಲ್ಲಿ ಐದು ಸಾವಿರದ ನಾನೂರ ಅರವತ್ತಾರು ಎಕರೆಯಷ್ಟು ವ್ಯಾಪಿಸಿ ಬೆಳೆದುಬಿಟ್ಟಿತು. ರೈತರ ಕೃಷಿಭೂಮಿಯನ್ನು ದೌರ್ಜನ್ಯದಿಂದ ಕೆಐಎಡಿಬಿ ವತಿಯಿಂದ ವಶಪಡಿಸಿಕೊಂಡು ತಂತಿಬೇಲಿ ಸುತ್ತಿ ಬಿಟ್ಟರು. ಜಿಲ್ಲೆಯ ನಿಷ್ಠಾವಂತ ಡೀಸಿ ಎನಿಸಿದ್ದ ಆದಿತ್ಯ ಬಿಸ್ವಾಸ್ ಸಹ ಸಿಂಗ್ವಿಯ ಮನೆ ಅಳಿಯನಂತೆ ವರ್ತಿಸಿ, ರೈತರಿಗೆ ಕೊಟ್ಟಷ್ಟೇ ಪರಿಹಾರ ಅಂದುಬಿಟ್ಟರು. ಹೋರಾಟಕ್ಕಿಳಿದ ಕೆಲವು ರೈತರಿಗೆ ಲಾಠಿಯೇಟು, ಪೊಲೀಸ್ ಕೇಸುಗಳು ಮಾಮೂಲಿಯಾಗಿದ್ದವು. ಗುಂಡಾ ಗ್ರಾಮದಲ್ಲಿದ್ದ ಐತಿಹಾಸಿಕ ಮಾದನಾಯಕನ ಕೆರೆಯನ್ನೇ ಕಾರ್ಖಾನೆ ನುಂಗಿಕೊಂಡಿತ್ತು. ಸತೀಶ್ ಬಿಲ್ಲಾಡಿ ನೇವಿ ಕಾಲಂ ಮನದ ಅಂಚಿಗೆ ಬರೆದುಕೊಂಡ ಬಾಲ್ಯಕಾಲದ ಬೀದಿ ನಿಮಗೆ ರಥಬೀದಿ ಗೊತ್ತಾ? ಅದು ರಥೋತ್ಸವ ನಡೆಯುವ ಸ್ಥಳ. ದೇವರ ಉತ್ಸವ ಮೂರ್ತಿಯನ್ನು ಹೊತ್ತು ಮರದ ಅಥವಾ ಬೆಳ್ಳಿಯ ಅಥವಾ ಚಿನ್ನದ ರಥ ನಿಧಾನವಾಗಿ ಕೃಷ್ಣಮಠದ ಪ್ರಾಂಗಣವನ್ನು ಬಿಟ್ಟು ಹೊರಡುತ್ತದೆ. ಭಕ್ತಿ ಪರವಶತೆಯಿಂದ ದೊಡ್ಡ ಹುರಿ ಹಗ್ಗವನ್ನು ಹಿಡಿದು ದೊಡ್ಡ ಗಾಲಿಗಳ ರಥವನ್ನು ಭಕ್ತರು ಎಳೆಯತೊಡಗುತ್ತಲೇ ಅದು ನಿಧಾನವಾಗಿ ಉರುಳುತ್ತಾ, ಆಚೆಗೊಮ್ಮೆ ಈಚೆಗೊಮ್ಮೆ ತೊನೆದಾಡುತ್ತಾ ಹೊರಡುತ್ತದೆ. ಜನ ಇಂಚಿಂಚೇ ಹಿಂದೆ ಸರಿಯುತ್ತಾ ದೇವರನ್ನು ಉತ್ಸವದ ಮೇಲೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಭಾವಿಸಿಕೊಳ್ಳುತ್ತಾರೆ. ಅದು ತಮ್ಮನ್ನು ಹೊರೆದ, ಈ ಭೂಮಿ ಮೇಲೆ ಹೊತ್ತು ತಿರುಗುವ ದೇವನೆಂಬ ಪಾಲಕನಿಗೆ ಮನುಷ್ಯ ನೀಡುವ ಕೃತಜ್ಞತೆಯ ಶ್ರಮವೇ ಇರಬೇಕು. ನೇವಿ ಜಾನಕಿ ಕಾಲಂ ಒಂದು ಪ್ರಸಂಗ ಮತ್ತು ಪರಿಣಾಮ ಭಾಗ-2 ನಿರ್ಮಲಾ ಮನಸ್ಸು ಮಾಡಿದರೆ ಇಷ್ಟು ಹೊತ್ತಿಗೆ ಈ ಮನೆಯ ದೀಪ ಅವಳೇ ಹಚ್ಚುವಂತಾಗುತ್ತಿತ್ತು ಅಂತ ಆ ಮಳೆಯ ರಾತ್ರಿ ದತ್ತಣ್ಣ ಜಗಲಿಯಲ್ಲಿ ನಿಂತು ಯೋಚಿಸಿದರು. ಅಕಾಲದಲ್ಲಿ ಬಂದ ಮಳೆಯಿಂದಾಗಿ ಸುಟ್ಟು ಸುಡುಗಾಡಾಗಿದ್ದ ಮಣ್ಣು ಹಿತವಾದ ಪರಿಮಳ ಸೂಸುತ್ತಿತ್ತು. ಮಣ್ಣು ಸೂಸುವ ಪರಿಮಳಕ್ಕೆ ಮೃದ್ಗಂಧ ಅನ್ನುತ್ತಾರೆ ಎಂದು ನೆನಪಿಸಿಕೊಳ್ಳುತ್ತಾ ದತ್ತಣ್ಣ ಆಕಾಶವನ್ನೂ ಭೂಮಿಯನ್ನೂ ನೋಡಿದರು. ಮಳೆ ಬರುವ ಸಣ್ಣ ಸೂಚನೆಯನ್ನೂ ಕೊಡದ ಆಕಾಶದಲ್ಲಿ ಕಪ್ಪು ಮೋಡ ಕವಿದದ್ದಾದರೂ ಹೇಗೆ, ಮಳೆ ಸುರಿದದ್ದಾದರೂ ಹೇಗೆ, ಸಂಜೆ ತನ್ನ ಕೈಗೆ ಬಿದ್ದಿದ್ದು ಮಳೆ ಹನಿಯೇ ಇರಬೇಕಲ್ಲವೇ-ಎಂದೆಲ್ಲ ಬೆರಗಾಗುತ್ತಾ ದತ್ತಣ್ಣ ಅಲ್ಲೇ ಹಾಗೇ ತುಂಬ ಹೊತ್ತು ನಿಂತಿದ್ದರು. ಜಾನಕಿ ವರದಿ ಬಳ್ಳಾರಿಯ ಗೇಟ್ ರಮೇಶನ ವಂಚನೆಯ ಸುತ್ತ-ಮುತ್ತ ಬಗೆದಷ್ಟು ಆಳಕ್ಕೆ ಹೋಗುವ ಈತನ ರಂಕಲುಗಳು, ಹೆಂಡತಿ ಜ್ಞಾನೇಶ್ವರಿ ವಿಚಾರದಲ್ಲೂ ವ್ಯಾಪಿಸಿದೆ. ಗೋನಾಳು ಭೀಮಪ್ಪ ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ವೇಳೆ ನಡೆದ ಕರ್ಮಕಾಂಡಗಳ ಫಲಾನುಭವಿಗಳಲ್ಲಿ ಶ್ರೀಮತಿ ಜ್ಞಾನೇಶ್ವರಿ ಕೂಡ ಒಬ್ಬರು ಎಂಬ ಮಾತುಗಳಿವೆ. ಕೆಪಿಎಸ್ಸಿ ಮೌಖಿಕ ಪರೀಕ್ಷೆಗೆ ಜ್ಞಾನೇಶ್ವರಿಯವರು ಹಾಜರಾಗಿಯೇ ಇಲ್ಲ. ಕಾರಣ ಹೆರಿಗೆಯಾಗಿತ್ತು. ಆದರೂ ನೂರನಾಲ್ಕರ ವೇಯ್‌ಟಿಂಗ್ ಲಿಸ್ಟ್‌ನಲ್ಲಿದ್ದ ಜ್ಞಾನೇಶ್ವರಿ ಏಕಾಏಕಿ ನಾಲ್ಕಕ್ಕೆ ಬಂದು ಕೂರುತ್ತಾರೆ. ಇದರ ಹಿಂದೆ ಖದೀಮ ರಮೇಶ ಆರು ಲಕ್ಷ ಡೀಲಿಂಗ್ ನಡೆಸಿರುವ ಗುಮಾನಿ ಇದೆ. ಆ ಬಗ್ಗೆ ಸರಿಯಾಗಿ ತನಿಖೆಯಾಗಬೇಕಿದೆ. ಒಟ್ಟಿನಲ್ಲಿ ಹಲವು ವಂಚನೆಗಳ ಸರದಾರ ರಮೇಶನನ್ನ ಕಟ್ಟಿ ಹಾಕುವವರು ಇಲ್ಲವಾಗಿದ್ದಾರೆ. ಸರಿಯಾಗಿ ತನಿಖೆ ನಡೆದರೆ ಈತ ಪರ್ಮನೆಂಟ್ ಆಗಿ ಒಳಗೆ ಸೇರುವುದು ಗ್ಯಾರಂಟಿ. ಮಲ್ಲಪ್ಪ ಅಂಕಣ : ಆಕಾಶಬುಟ್ಟಿ ಕತ್ತಲಲ್ಲಿ ಹಿತ್ತಲಲ್ಲಿ ಹಾದಿ ಕಾದವನ್ಯಾರೇ ಸಖೀ.... ಅದೊಂದು ನಿದ್ದೆಯ ರಾತ್ರಿ. ಮಧ್ಯ ರಾತ್ರಿ ಒಂದೂಮುಕ್ಕಾಲಿಗೆ ಎಚ್ಚರವಾಯಿತು. ನಮ್ಮ ಮನೆ ಹಿಂಭಾಗದಲ್ಲಿ ಚಿಕ್ಕ ಓಣಿಯಿದೆ. ಯಾಕೋ ಗೊತ್ತಿಲ್ಲ, ಅಲ್ಲಿ ಯಾರೋ ಅಡಗಿ ಕೂತಿದ್ದಾರೆ ಎನ್ನಿಸುವ ಭಾವ. ಇವತ್ತಲ್ಲ. ಸುಮಾರು ಒಂದು ತಿಂಗಳಿಂದ ಹೀಗನ್ನಿಸುತ್ತಿದೆ. ಹಿತ್ತಲ ಓಣಿಯಲ್ಲಿ ಯಾರೋ ಕೂತಿದ್ದಾರೆ. ಏನೋ ಮಾಡುತ್ತಿದ್ದಾರೆ ಅಥವಾ ಏನೋ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕಳ್ಳ ಹೆಜ್ಜೆಯಲ್ಲಿ ನಡೆದಂತೆ. ಯಾರು ಯಾರಿಗೋ ಸನ್ನೆ ಮಾಡಿದಂತೆ. ಕರೆದಂತೆ. ಸರಿಯಾಗಿ ಒಂದೂಮುಕ್ಕಾಲಿಗೆ ಶುರುವಾಗುವ ಕಳ್ಳ ಹೆಜ್ಜೆ ಸದ್ದುಗಳು ಮೂರೂವರೆಯಿಂದ ಮೂರೂಮುಕ್ಕಾಲಿಗೆ ನಿಲ್ಲುತ್ತವೆ. ಕರೆಕ್ಟು ರಾತ್ರಿ ಒಂದೂಮುಕ್ಕಾಲಿಗೆ ನಾನು ಗಕ್ಕನೆ ಕಣ್ಣು ಬಿಡುವುದು. ಓಣಿಯಲ್ಲಿ ಯಥಾಪ್ರಕಾರ ಚಪ್ಪಲಿ ಕಾಲುಗಳು ಸರಿದಾಡಿದ ಸದ್ದು, ಸಣ್ಣಗೆ ಸಿಳ್ಳು ಹಾಕಿದ ಸದ್ದು. ನನಗೆ ರಕ್ತವೆಲ್ಲ ಮುಖಕ್ಕೆ ಹರಿದಂತಾಗಿ ಬಿಸಿಯಾಗುತ್ತಿತ್ತು. ಎಚ್.ಡಿ. ಸುನೀತಾ ಅಂಕಣ : ನೂರು ಮುಖ ಸಾವಿರ ದನಿ ಮಲಯಾಳಂ ಚಿತ್ರರಂಗದ ಸುವರ್ಣ ಪುಷ್ಪ ಚೆಮ್ಮೀನ್ 1960-70ರ ದಶಕಗಳಲ್ಲಿ ಕನ್ನಡ ಚಿತ್ರಗಳಲ್ಲಿ ನಾಯಕರು ಡಾ|| ರಾಜ್, ಉದಯ್ ಮತ್ತು ಕಲ್ಯಾಣ್ ಕುಮಾರತ್ರಯರು. ತಮಿಳಿನಲ್ಲಿ ಆಗ ಎಂ.ಜಿ.ಆರ್., ಶಿವಾಜಿ ಗಣೇಶನ್ ಮತ್ತು ಜೆಮಿನಿ ಗಣೇಶನ್, ತೆಲುಗಿನಲ್ಲಿ ಎನ್.ಟಿ. ರಾಮರಾವ್, ಎ.ನಾಗೇಶ್ವರರಾವ್ ಮತ್ತು ಕಾಂತಾರಾವ್. ಮಲಯಾಳಂನಲ್ಲಿ ಪ್ರೇಮ್ ನಜೀರ್, ಸತ್ಯನ್ ಮತ್ತು ಮಧು ಆಗ ತ್ರಿನಾಯಕರು. ದಕ್ಷಿಣ ಭಾರತದ ಪಶ್ಚಿಮದ ಅಂಚಿನಲ್ಲಿ ಅರಬ್ಬೀ ಸಮುದ್ರದ ಉದ್ದಕ್ಕೂ ಮೇಲಿನಿಂದ ಕೆಳಕ್ಕೆ ಚಾಚಿಕೊಂಡಿರುವ ಕಿರುರಾಜ್ಯ ಕೇರಳ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಈ ರಾಜ್ಯದ ವೈಶಿಷ್ಟ್ಯಗಳು ಅನೇಕ. ಶಿಕ್ಷಣದಲ್ಲಿ ನೂರಕ್ಕೆ ನೂರು ಸಾಧನೆ. ಮನೆ ಮಂದಿಯೆಲ್ಲಾ ರಾಜ್ಯದ ಒಳಗೂ ಹೊರಗೆ (ಗಲ್ಫ್‌ನಲ್ಲಿ ಅತಿ ಹೆಚ್ಚು) ಇಡೀ ವಿಶ್ವದಲ್ಲೇ ವ್ಯಾಪಿಸಿಕೊಂಡು ದುಡಿಯುವ ಜನ ಈ ಕೇರಳಿಗರು. ಅಂತಹ ಚಿಕ್ಕರಾಜ್ಯದಲ್ಲಿ ಪ್ಲಾಂಟೇಶನ್ ಬೆಳೆಗಳು, ಹೆಚ್ಚು ದೇವಸ್ಥಾನಗಳು, ಹೆಚ್ಚು ಸಿನೆಮಾಗಳು, ಅಷ್ಟೇ ಅಲ್ಲ; ಒಬ್ಬನೇ ನಟ ಒಂದಕ್ಕಿಂತ ಹೆಚ್ಚು ವಿಧದಲ್ಲಿ ಗಿನ್ನೆಸ್ ದಾಖಲೆ ಸಹ ಸ್ಥಾಪಿಸಿರುವುದು ಇದೇ ಮಲಯಾಳಂ ಚಿತ್ರರಂಗದಲ್ಲಿ. ಎಂ.ವಿ. ರೇವಣಸಿದ್ದಯ್ಯ

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.