Hi Bangalore
Hi Bangalore

Hi Bangalore

This is an e-magazine. Download App & Read offline on any device.

ಸೃಷ್ಟಿ 1029 ಸಂಪುಟ 20, ಸಂಚಿಕೆ 41, ಜುಲೈ 9, 2015 ಖಾಸ್‌ಬಾತ್ ಒಂದು ಪುಸ್ತಕ ಪ್ರಕಟಿಸುವುದರ ಹಿಂದೆ ಹಿಸ್ಟರಿಯೇನೂ ಇರಲ್ಲ; ಎಕನಾಮಿಕ್ಸ್ ಇರುತ್ತೆ! “ರೀ ಅವನ ಬಗ್ಗೆ ಮಾತಾಡ್ತಿದೀರಾ? ಅವನು ಶುದ್ಧಾನು ಶುದ್ಧ ಶೆಟ್ಟಿ ಕಣ್ರೀ. ಅವನೊಳಗೆ ಒಂದು ನೂರು ಮಾರ್ವಾಡಿಗಳಿದಾರೆ! ಪೈಸೆಗೆ ಪೈಸೆ ಲೆಕ್ಕ ಹಾಕದೆ ಬಿಡೋನಲ್ಲ. ಏನಂದುಕೊಂಡಿದ್ದೀರಿ ಅವನನ್ನ?" ಎಂಬ ಮಾತು ಕಿವಿಗೆ ಬಿತ್ತು. ಕೊಂಚ ಆಶ್ಚರ್ಯ, ಕೊಂಚ ಕಿರಿಕಿರಿ ಆದದ್ದು ಸುಳ್ಳೇನಲ್ಲ. ಏಕೆಂದರೆ, ಅವಿಷ್ಟೂ ಮಾತುಗಳನ್ನ ಅವರು ಆಡಿದುದು ನನ್ನ ಬಗ್ಗೆ. ವಿಪರೀತ ಸಿಟ್ಟೇನೂ ಬರಲಿಲ್ಲ. ಕೊಂಚ ನೋವಾ ದದ್ದು ನಿಜ. ಎರಡು ಸಂಗತಿಗಳನ್ನು ನಾನು ಬುದ್ಧಿ ಪೂರ್ವಕವಾಗಿ ದೂರ ಇರಿಸಿದ್ದೇನೆ. ಮೊದಲನೆಯದು ಈ ಲಾಭ-ನಷ್ಟದ ಕುರಿತು ತುಂಬ ತಲೆ ಕೆಡಿಸಿಕೊಳ್ಳುವುದು. ಎರಡನೇದು, ಕಂಪ್ಯೂಟರ್ ಕಲಿಯುವುದು! ಇವೆರಡನ್ನೂ ತುಂಬ ಸೀರಿಯಸ್ಸಾಗಿ ಮಾಡಲು ಹೊರಟರೆ ನನ್ನ ಕ್ರಿಯೇಟಿವಿಟಿಗೆ ಏಟು ಬೀಳುತ್ತದೆ. ಹಾಗಂತ ನಾನು ಅಂದುಕೊಂಡಿದ್ದೇನೆ. ರವಿ ಬೆಳಗೆರೆ ಸಾಫ್ಟ್‌ಕಾರ್ನರ್ ಅದು ಕಿರುಚಿತ್ರವೆಂಬ ಮರೀಚಿಕೆಯ ಬೇಟೆ! ಆತನ ಹೆಸರು ವರುಣ್ ಪೃಥಿ. ಪೃಥಿ ಅಂದರೇನೋ? ಮಹಾಭಾರತದಲ್ಲಿ ಪೃಥಿಯ ಪಾತ್ರವಿದೆ. ಕುಂತಿಯನ್ನು ಪೃಥೆ ಅನ್ನು ತ್ತಾರೆ. ಪೃಥಾ ಅನ್ನುತ್ತಾರೆ. ಅರ್ಥವಿಷ್ಟೆ: ಆಕೆ ದೊಡ್ಡ ದಾದ ಅಂಡು ಉಳ್ಳವಳು. ನನಗೆ ಅವನ ಹೆಸರಿನಲ್ಲಿ ಏನೂ ಸಮಸ್ಯೆ ಇಲ್ಲ. ವರುಣ್ ಅನ್ನೋದು ತುಂಬ ಸಲ ಕಿವಿಗೆ ಬೀಳುವ ಸಾಮಾನ್ಯ ಹೆಸರು. ಆದರೆ ಪೃಥಿ ಅಂತ ಯಾಕೆ ಸೇರಿಸಲಾಗಿದೆಯೋ? ವಿವರಣೆ ಇಲ್ಲ. ನೋಡಲಿಕ್ಕೆ ಆತ ಅಂಥ ಅಪರ ಸುಂದರ ನೇನಲ್ಲ. ಇನ್ನೂ ಸ್ಪಷ್ಟವಾಗಿ ಹೇಳೋಣವೆಂದು ಕೊಂಡರೆ, ಆತ ಸುಂದರನಲ್ಲವೇ ಅಲ್ಲ. ತೆಳ್ಳಗಿದ್ದಾನೆ, ಎತ್ತರಕ್ಕೆ. ಆತ ಕೆಲವು short films ಮಾಡುತ್ತಿರುತ್ತಾನೆ. ಅವು ಇಂಟರ್‌ನೆಟ್‌ನಲ್ಲಿ ಸಿಗುತ್ತವೆ. ಕೆಲ ವನ್ನು ನೋಡಿದ್ದೇನೆ. “My choice" ಅಂತ ಒಂದು short film ಬಂತಲ್ಲ? ಅದಕ್ಕೆ reaction ಎಂಬಂತೆ ವರುಣ್ ಒಂದು short film ಮಾಡಿದ. ರವಿ ಬೆಳಗೆರೆ ಬಾಟಮ್ ಐಟಮ್ ನಾಯಕನ ಸೋಲು ನಮ್ಮ ಸೋಲಿಗೂ ರೂಪಕ ಹಾಗಾದ್ರೆ ಧೋನಿ ಕತೆ ಮುಗೀತು ಅಂತೀರಾ? ಹಾಗಂತ ಯಾರೋ ಕೇಳಿದರು. ಪುಣ್ಯಕ್ಕೆ ಈ ಧೋನಿ ಎಂಬ ವ್ಯಕ್ತಿ ಕ್ರಿಕೆಟ್ ಎಂಬ ಆಟವನ್ನು ಆಡುತ್ತಾನೆ ಮತ್ತು ಟೀಂ ಇಂಡಿಯಾದ ಕ್ಯಾಪ್ಟನ್ ಆಗಿದ್ದಾನೆ ಅನ್ನುವುದು ನನಗೆ ಗೊತ್ತಿತ್ತು. ಆದರೆ ಧೋನಿ ಕತೆ ಶುರುವಾಗಿದ್ದು ಯಾವಾಗ ಮತ್ತು ಮುಗಿಯೋದು ಯಾಕೆ ಅನ್ನುವುದು ಗೊತ್ತಾಗಲಿಲ್ಲ. ಪ್ರಶ್ನೆ ಕೇಳಿದವರನ್ನೇ ವಿಚಾರಿಸಿದೆ. ಇತ್ತೀಚೆಗೆ ಧೋನಿ ಚೆನ್ನಾಗಿ ಆಡುತ್ತಿಲ್ಲ ಮತ್ತು ಬಾಂಗ್ಲಾದಂಥ ಎಳಸು ತಂಡದ ಜೊತೆಗೂ ಇಂಡಿಯಾವನ್ನು ಗೆಲ್ಲಿಸುವುದಕ್ಕೆ ಆತನಿಗೆ ಸಾಧ್ಯವಾಗಿಲ್ಲ, ಹಾಗಾಗಿ ಆತನನ್ನು ನಾಯಕನ ಪಟ್ಟದಿಂದ ಇಳಿಸ ಬೇಕು ಎಂಬ ಗದ್ದಲ ಶುರುವಾಗಿದೆ ಎಂದು ಹೇಳಿದರು. ರವಿ ಬೆಳಗೆರೆ ಹಲೋ ನಾಯಕರೇ ಕಳ್ಳ ಬುದ್ಧಿ ತೋರಿದರೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಹೋಗುತ್ತದೆ ಇತ್ತೀಚಿನ ಹಲವು ಬೆಳವಣಿಗೆಗಳನ್ನು ನೋಡಿ ಪ್ರಜಾಪ್ರಭುತ್ವದ ಬಗ್ಗೆಯೇ ಜನರಿಗೆ ಅಪನಂಬಿಕೆ ಬರುತ್ತಿದೆ. ನಾಯಕರು ಅನ್ನಿಸಿಕೊಂಡಿರುವ ಜನರಲ್ಲಿ ಸರ್ವಾಧಿಕಾರಿ ಮನೋಭಾವ ಹೆಚ್ಚಾಗುತ್ತಿದ್ದಂತೆಯೇ ಪ್ರಜಾಪ್ರಭುತ್ವದ ನೆಲೆಯಲ್ಲಿ ಅವರು ನಡೆದುಕೊಳ್ಳು ವುದು ಕಷ್ಟ. ಮತ್ತು ಅಂತಹವರಿಂದ ಪ್ರಜಾಪ್ರಭುತ್ವಕ್ಕೆ ರಕ್ಷಣೆ ಸಿಗುತ್ತದೆ ಎಂದು ಭಾವಿಸಿದವರಿಗೆ ಸಹಜವಾಗಿಯೇ ಇದನ್ನೆಲ್ಲ ನೋಡಿ ಭ್ರಮನಿರಸನವಾಗುತ್ತದೆ. ಉದಾಹರಣೆಗೆ ದಿಲ್ಲಿಯಲ್ಲಿನ ಬೆಳವಣಿಗೆಯನ್ನೇ ನೋಡಿ. ಐಪಿಎಲ್ ಹಗರಣದ ಲಲಿತ್ ಮೋದಿ ವಿದೇಶಕ್ಕೆ ಓಡಿಹೋಗಲು ಹಿಂದೆ ಅಕಾರದಲ್ಲಿದ್ದವರು, ಈಗ ಅಕಾರದಲ್ಲಿರುವವರು ನೆರವು ನೀಡಿದ್ದರು ಎಂಬ ಸಂಗತಿ ಬಯಲಿಗೆ ಬರುತ್ತಿದ್ದಂತೆಯೇ ಕೋಲಾಹಲ ಶುರುವಾಯಿತು. ಈ ಪೈಕಿ ಮೊದಲು ಕಂಡಿದ್ದು ಕೇಂದ್ರ ವಿದೇಶಾಂಗ ಸಚಿವೆ ಶ್ರೀಮತಿ ಸುಷ್ಮಾ ಸ್ವರಾಜ್ ಹೆಸರು. ಆಕೆ ಭಾರತ ಕಂಡ ಮಹಾ ತಾಯಂದಿರ ಪೈಕಿ ಒಬ್ಬರು. ಸೋನಿಯಾ ಗಾಂಧಿ ಪ್ರಧಾನಿಯಾದರೆ ತಲೆ ಬೋಳಿಸಿ ಕೊಂಡು, ಬಿಳಿ ಸೀರೆ ಉಟ್ಟು ತಿರುಗುತ್ತೇನೆ ಎಂದು ಕೂಗಾಡಿದರು. ಬಳ್ಳಾರಿ ಚುನಾವಣೆಗೆ ನಿಂತು ಸೋನಿಯಾ ಗಾಂಯನ್ನು ಸೋಲಿಸಲು ಹರಸಾಹಸ ಮಾಡುವಾಗ ಆಕೆಗೆ ಗಣಿರೆಡ್ಡಿಗಳ ಪಡೆ ಬೇಕಿತ್ತು. ಅದಕ್ಕಾಗಿ ಅವರನ್ನು, ಇವರೆಲ್ಲ ನನ್ನ ಮಕ್ಕಳಿದ್ದಂತೆ ಎಂದರು. ರವಿ ಬೆಳಗೆರೆ ಮುಖಪುಟ ವರದಿ ಒಂದೇ ಒಂದು ವಾಟ್ಸಪ್ ಮೆಸೇಜ್ ಚೆಲುವೆಯ ಪ್ರಾಣ ತೆಗೆಯಿತು! ರೂಪೇಶ್ ಮತ್ತು ನವ್ಯಶ್ರೀ ದಾಂಪತ್ಯಕ್ಕೆ ಹದಿನಾಲ್ಕು ತಿಂಗಳು ಪೂರೈಸಿದರೂ, ಯಾವೊಂದು ಸಮಸ್ಯೆಯಿಲ್ಲದೆ ಅನ್ಯೋನ್ಯವಾಗಿದ್ದರು. ಇಬ್ಬರೂ well educated and very good profil. ಆದುದರಿಂದ ಅವರಿಬ್ಬರದ್ದು ಶ್ರೀಮಂತಿಕೆಯ ಜೀವನಶೈಲಿ. ಹೀಗಿರುವಾಗ ಅದೊಂದು ದಿನ ವಿಲಿಖಿತವೆಂಬಂತೆ ವಾಟ್ಸಾಪ್ ಮೆಸೇಜೊಂದು ಬಿರುಗಾಳಿಯಂತೆ ಬೀಸಿ ಇಬ್ಬರ ದಾಂಪತ್ಯದ ಸವಿಗೆ ವಿಷ ಬೆರೆಸಿಬಿಟ್ಟಿತ್ತು. ಅಂದು ಜೂನ್ ಇಪ್ಪತ್ತು, ೨೦೧೫ರ ಶನಿವಾರ. ಗಂಡ-ಹೆಂಡತಿ ಇಬ್ಬರಿಗೂ ರಜೆ ಇದ್ದುದರಿಂದ ನವ್ಯಶ್ರೀ ಮತ್ತು ರೂಪೇಶ್ ಮನೆಯಲ್ಲಿಯೇ ಇದ್ದರು. ಲೋಕೇಶ್ ಕೊಪ್ಪದ್ ರಾಜಕೀಯ ಈಗ ಸಿದ್ದು ವಿರುದ್ಧ ದೇವೆಗೌಡ ಮತ್ತು ಎಸ್ಸೆಂ ಕೃಷ್ಣ! ಅಂದ ಹಾಗೆ ಇತ್ತೀಚಿನ ದಿನಗಳಲ್ಲಿ ಎಸ್.ಎಂ.ಕೃಷ್ಣ ಅವರಿಗೂ ಸಿದ್ಧರಾಮಯ್ಯ ಮೇಲೆ ವಿಪರೀತ ಮುನಿಸು ಶುರುವಾಗಿದೆ. ಇದಕ್ಕೆ ಕಾರಣ ಎರಡು. ಮೊದಲನೆಯದಾಗಿ ತಮ್ಮ ಪರಮಾಪ್ತರಾದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಡಿಸಿಎಂ ಆಗಲು ಸಿದ್ಧು ಅವಕಾಶ ನೀಡದಿರುವುದು. ಎರಡನೆಯದಾಗಿ, ಸಿದ್ಧು ವಿರುದ್ಧ ಟೈಮು ನೋಡಿ ಬಂಡಾಯ ಏಳಲು ನಾನು ರೆಡಿ ಅಂದಿದ್ದ ಡಿಕೆಶಿ ಇದ್ದಕ್ಕಿದ್ದಂತೆ ಸಿದ್ಧರಾಮಯ್ಯ ಜತೆಗೇ ಸೇರಿರುವುದು. ಈ ಎಲ್ಲದರ ನಡುವೆ ತಮ್ಮ ಬೆಂಬಲಿಗರನ್ನು ಸರ್ಕಾರದ ಮಟ್ಟದಲ್ಲಿ ಸಿದ್ಧರಾಮಯ್ಯ ಮೂಲೆಗುಂಪು ಮಾಡಿರುವುದು ಕೂಡಾ ಎಸ್.ಎಂ.ಕೃಷ್ಣ ಅವರ ಆಕ್ರೋಶವನ್ನು ಕೆರಳಿಸಿದೆ. ಒಂದು ಕಾಲದಲ್ಲಿ ಧರಂಸಿಂಗ್ ಸರ್ಕಾರವನ್ನು ಬೀಳಿಸಲು ಇದೇ ಸಿದ್ಧರಾಮಯ್ಯ ಅವರ ಜತೆ ತೆರೆ ಮರೆಯ ಹೊಂದಾಣಿಕೆ ಮಾಡಿಕೊಂಡಿದ್ದ ಕೃಷ್ಣ, ಇದೀಗ ಅದೇ ಸಿದ್ಧರಾಮಯ್ಯ ಅವರನ್ನು ಕೆಳಗಿಳಿಸಲು ದೇವೇಗೌಡರ ಜತೆ ಸಂಧಾನ ಮಾಡಿಕೊಂಡಿದ್ದಾರೆ ಆರ್.ಟಿ.ವಿಠ್ಠಲಮೂರ್ತಿ ವರದಿ ಇವನು ಮೂವತ್ತು ಸಾವಿರಕ್ಕೆ ಹೆಂಡತೀನ ಮಾರಿ ಬಿಟ್ಟ ಇದೊಂದು ವಿಚಿತ್ರ ಕಥೆ! ಇದು ಕಟ್ಟಿಕೊಂಡ ಗಂಡನೇ ಕೈ ಹಿಡಿದ ಹೆಂಡತಿಯನ್ನ ಹಣಕ್ಕಾಗಿ ಮಾರಿದ ದಾರುಣ ಕಥೆ. ಬೆಂಗಳೂರಿನ ವೇಶ್ಯಾವಾಟಿಕೆ ಎಂಬ ಪಾಪದ ಕೂಪಕ್ಕೆ ಬಲಿಯಾದ ಈ ಹೆಣ್ಣು ಮಗಳು ಪಟ್ಟ ಪಾಡು ಅಂತಿಂಥದಲ್ಲ. ಅಂದಹಾಗೆ ಆ ಹೆಣ್ಣು ಮಗಳ ಹೆಸರು ವಾಣಿ. ಆಕೆಗಿನ್ನು ಜಸ್ಟ್ ಇಪ್ಪತ್ನಾಲ್ಕು ವರ್ಷ ವಯಸ್ಸು. ಆದರೆ ನಡೆದ ಘಟನೆ ಮಾತ್ರ ಕ್ರೂರಾತೀ ಕ್ರೂರ. ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನವಳಾದ ವಾಣಿ ಚಿಕ್ಕವಯಸ್ಸಿನಲ್ಲೆ ತಾಯಿಯನ್ನ ಕಳೆದುಕೊಂಡಳು. ಆಗ ಆಕೆಗೆ ಸುಮಾರು ಹದಿನೈದು ವರ್ಷ. ಅಶ್ವಿನ್ ಕುಮಾರ್ ವರದಿ ಹೊಸಪೇಟೆ ರೈತರ ಜೀವನಾಡಿಯ ದುರಂತ ಕಥೆ ಅತ್ತ ಹೊಸಪೇಟೆಯ ಸಕ್ಕರೆ ಕಾರ್ಖಾನೆಯ ಕತೆ-ವ್ಯಥೆಯೇ ಬೇರೆ ತೆರನಾಗಿದೆ. ಅದಾವ ಅವತಾರ ಪುರುಷ ಹುಟ್ಟಿ ಬಂದರೂ ಅದರ ಆತ್ಮಹತ್ಯೆಯನ್ನು ತಡೆಯಲು ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ಕಾರ್ಖಾನೆಯ ಅವಸಾನವನ್ನು ತಪ್ಪಿಸಲು ಆವತ್ತು ಈ ಮೂರೂ ಶಕ್ತಿಗಳಿಗೆ ಸಾಧ್ಯವಿತ್ತು. ಒಬ್ಬರು ಹೊಸಪೇಟೆಯ ಹಾಲಿ ಶಾಸಕ ಆನಂದ್‌ಸಿಂಗ್, ಮತ್ತೊಬ್ಬರು ಬಳ್ಳಾರಿ ಸಂಸದ ಶ್ರೀರಾಮುಲು. ಇನ್ನೊಬ್ಬರೆಂದರೆ ಹರಪನಹಳ್ಳಿ ಶಾಸಕ, ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಎಂ.ಪಿ.ರವೀಂದ್ರ. ಈ ಮೂರೂ ಶಕ್ತಿಗಳು ಯಾಕೋ ಪೂರ್ಣಪ್ರಮಾಣದ ಮನಸ್ಸು ಮಾಡಲಿಲ್ಲ. ಆದರೆ ಈ ಮೂರು ಜನ ಒಗ್ಗೂಡಿ ಯೋಚಿಸಿದ್ದರೆ ಕಾರ್ಖಾನೆ ಮಾಲೀಕ ಪತರುಗುಟ್ಟಿ ಹೋಗುತ್ತಿದ್ದ. ಸತೀಶ್ ಬಿಲ್ಲಾಡಿ ವರದಿ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಮಗಳ ಖೊಟ್ಟಿ ಕೇಸ್ ಅತ್ಯಾಚಾರ ಮತ್ತು ವರದಕ್ಷಿಣೆ ಎಂಬ ಪೆಡಂಭೂತ ಬಡ-ಮಧ್ಯಮ ವರ್ಗದ ಕುಟುಂಬ ವನ್ನಷ್ಟೇ ಅಲ್ಲದೇ, ಶ್ರೀಮಂತ, ಪ್ರತಿಷ್ಠಿತ ಮನೆತನವನ್ನು ಕಾಡದೆ ಬಿಟ್ಟಿಲ್ಲ. ಸ್ವಾರ್ಥಕ್ಕೆ, ಮೈಯಕ್ತಿಕ ಪ್ರತಿಷ್ಠೆಗೆ ಹಾಗೂ ಇತರರಿಗೆ ತೊಂದರೆ ನೀಡಲೇ ಬೇಕೆಂಬ ದುರುದ್ದೇಶದಿಂದ ಇಂತಹ ಗಂಭೀರ ಪ್ರಕರಣಗಳು ಜನ್ಮತಾಳಿದೆಯಾ? ಅತ್ಯಾಚಾರ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣಗಳು ವ್ಯಾಪಕವಾಗಿ ದುರುಪಯೋಗವಾಗುತ್ತಿವೆ ಎಂಬ ಕೂಗು ದೇಶಾದ್ಯಂತ ಕೇಳಿ ಬರುತ್ತಲಿದೆ. ಇದರ ನಡುವೆಯೇ ಮೈಸೂರಿನ ಒಂದು ಪ್ರತಿಷ್ಠಿತ ಹಾಗೂ ಗೌರವಾನ್ವಿತ ವೈದ್ಯ ಕುಟುಂಬದ ವಿರುದ್ಧ ರಾಜ್ಯದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಪುತ್ರಿ ನಿಕ್ಕಿಸಿಂಗ್ ಎಂಬಾಕೆ ಅತ್ಯಾಚಾರ ಹಾಗೂ ವರದಕ್ಷಿಣೆ ಕಿರುಕುಳದ ಗೂಬೆ ಕೂರಿಸಿ ಚರ್ಚೆಗೆ ಗ್ರಾಸವಾಗಿದ್ದಾಳೆ. ವಿನಯ್ ವರದಿ ಶಿವಮೊಗ್ಗ ಖಜಾನೆ ಪೂರ್ತಿ ಖಾಲಿ ಮಾಡಿದ ಈಶಪ್ಪನ ಗ್ಯಾಂಗ್‌ನ ಕಥೆ ಕೇಳಿ! ಶಿವಮೊಗ್ಗ ನಗರ ಪಾಲಿಕೆಗೆ ಜಾಹೀರಾತು ಪ್ರದರ್ಶಕ ಫಲಕ ಅಥವಾ ಹೋರ್ಡಿಂಗ್ಸ್‌ನಿಂದ ಬರಬಹುದಾದ ಕೋಟ್ಯಂತರ ರುಪಾಯಿ ಆದಾಯವನ್ನು ಪಾಲಿಕೆಯ ಕೆಲವು ಸದಸ್ಯರು, ಹೋರ್ಡಿಂಗ್ಸ್ ಮಾಲೀಕರು ಹಾಗೂ ಜಾಹೀರಾತು ಏಜೆನ್ಸಿಯವರು ಸೇರಿಕೊಂಡು ಲೂಟಿ ಮಾಡುತ್ತಿದ್ದು, ಈ ಗಂಟುಕಳ್ಳರಿಗೆ ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನವರೇ ರಕ್ಷಕರಾಗಿರುವ ವಿದ್ಯಮಾನ ಶಿವಮೊಗ್ಗ ಜನರನ್ನು ಬೆಚ್ಚಿ ಬೀಳಿಸುತ್ತಿದೆ. ಶೃಂಗೇಶ್ ನೇವಿ ಕಾಲಂ ಅವನು ಇದ್ದ ಅಂತ ಗೊತ್ತಾಗುವ ಹೊತ್ತಿಗೆ ಅವನಿರಲಿಲ್ಲ ಅವನು ಹೊರಟು ಹೋದ. ಅದರಿಂದ ಗ್ರಹ ಚಲನೆಯಲ್ಲೂ, ಗೃಹ ಚಲನೆಯಲ್ಲೂ ಅಂಥ ದೊಡ್ಡ ಬದಲಾವಣೆಯೇನೂ ಆಗಲಿಲ್ಲ. ಬೆಂಗಳೂರಿನ ಯಾವ ರಸ್ತೆಗಳೂ ಖಾಲಿಯಾಗಲಿಲ್ಲ, ಯಾವ ಶಾಲೆಗೂ ರಜೆ ಸಿಗಲಿಲ್ಲ. ಯಾವ ಬೀದಿಯಲ್ಲೂ ಜನ ಸೇರಿ ಕಲ್ಲು ತೂರಲಿಲ್ಲ. ಗಡಿಯಾರ ಚಲಿಸಿದಂತೆ, ಗಾಳಿ ಬೀಸಿದಂತೆ ಹಿಂದಿನ ದಿನದ ಜತೆಯ ನಗರ ಆ ದಿನವೂ ನಡೆದು ಹೊರಟಿತು. ಅವನ ಜೊತೆ ಅವನು ಬಳಸುತ್ತಿದ್ದ ಒಂದು ಕರವಸ ಅವನ ನೆನಪಿಗೆಂಬಂತೆ ಅ ಉಳಿದಿತ್ತು. ರಾತ್ರಿಯೇ ಎಲ್ಲಾ ಯೋಜನೆ ಸಿದ್ಧಪಡಿಸಿದ್ದನೇನೋ ಎಂಬಂತೆ ಅವನ ಕಬೋರ್ಡ್‌ನ ಪುಸ್ತಕಗಳು ಖಾಲಿಯಾಗಿದ್ದವು. ಶೂ ಲೇಸ್, ಪೆನ್ನಿನ ಕ್ಯಾಪ್, ಪರ್‌ಫ್ಯೂಮ, ಪೌಡರ್ ಖಾಲಿಯಾದರೂ ಮತ್ತೆ ಮತ್ತೆ ಒತ್ತಿ ಬಳಸುತ್ತಿದ್ದ ಫೇರ್ ಅಂಡ್ ಲವ್ಲಿಗಳೂ ಹಳ್ಳಿಗೆ ಹಿಂದಿರುಗಿದ್ದವು. ಬೆಂಗಳೂರಿನ ಬೀದಿಯ ಅಸಂಖ್ಯ ಮಚ್ಚೆಗಳಂದರಂತೆ ಆ ಮನೆಯ ಅಸ್ತಿತ್ವದಲ್ಲಿ ಸೇರಿದ್ದ ಒಂದು ಅಂಶ ಸದ್ದಿಲ್ಲದೇ ಕಳೆದುಹೋಯಿತು. ನೇವಿ ಜಾನಕಿ ಕಾಲಂ ಕವಿಯೊಬ್ಬರ ಅಕ್ಕರೆಯ ಅಕ್ಷರಮಾಲೆ ಎಚ್. ಎಸ್.ವೆಂಕಟೇಶಮೂರ್ತಿ ಅವರನ್ನು ಮೆಚ್ಚು ವುದಕ್ಕೆ ವಿಶೇಷ ಕಾರಣಗಳು ಬೇಕಾಗಿಲ್ಲ. ಅವರ ಕಾವ್ಯ ಪ್ರೀತಿ, ಓದುಗರ ಮೇಲಿರುವ ಅಕ್ಕರೆ, ತಮ್ಮ ಕೈಂಕ ರ್ಯದ ಮೇಲಿರುವ ಶ್ರದ್ಧೆ, ತಾನು ತಿಳಿದದ್ದನ್ನು ಜೊತೆಗೆ ಮತ್ತೊಮ್ಮೆ ತಿಳಿಯುವ ಹುಮ್ಮಸ್ಸು ಅವರನ್ನು ನಮ್ಮ ಕಾಲದ ಪ್ರೀತಿಯ ಕವಿಗಳನ್ನಾಗಿಸಿದೆ. ಅವರದು ಪ್ರಯೋಗ ಶೀಲ ಮನಸ್ಸು ಕೂಡ. ಕವಿ ತನ್ನ ಸಮಕಾಲೀನರಿಗಾಗಿ ಬರೆಯುವ ಹೊತ್ತಿಗೇ, ತನ್ನ ಮುಂದಿನ ಜನಾಂಗಕ್ಕಾಗಿಯೂ ಬರೆಯುತ್ತಾನೆ ಎಂಬುದನ್ನು ಬಲ್ಲ ಕವಿಗಿರುವ ದೂರದರ್ಶಿತ್ವ ಮತ್ತು ಹುಡುಕಾಟದ ನೆಲೆ ಅವರ ಎಲ್ಲಾ ಪದ್ಯಗಳಲ್ಲೂ ಕಾಣಬಹುದು. ಜಾನಕಿ ಅಂಕಣ : ಒಲಿದಂತೆ ಹಾಡುವೆ ಫ್ರೆಂಚ್ ಟೀಚರ್ ಒಂದು ಚಳಿಗಾಲದ ಸಂಜೆ ವೊರೊಟೊವ್ ಏನನ್ನೋ ಓದುತ್ತಾ ಕುಳಿತಿದ್ದಾಗ ಸೇವಕ ಬಂದು ಆತನನ್ನ ನೋಡಲು ಯುವತಿಯೊಬ್ಬರು ಬಂದಿದ್ದಾ ರೆಂದು ತಿಳಿಸಿದ. “ಒಳಗೆ ಕಳಿಸು" ಎಂದ ವೊರೊಟೊವ್ ಪುಸ್ತಕ ಮುಚ್ಚಿಟ್ಟು ಆಕೆಯನ್ನ ಸ್ವಾಗತಿಸಿದ. ಇತ್ತೀಚಿನ ಫ್ಯಾಷನ್‌ನಲ್ಲಿ ತುಂಬಾ ಸೊಗಸಾಗಿ ಅಲಂಕರಿಸಿಕೊಂಡಿದ್ದ ಯುವತಿ ಒಳ ಬಂದಳು. ತನ್ನನ್ನ ಫ್ರೆಂಚ್ ಟೀಚರ್ ಎಂದು ಪರಿಚಯಿಸಿಕೊಂಡಳು. ಫ್ರೆಂಚ್ ಶಿಕ್ಷಕಿ ಆಲಿಸ್‌ಳನ್ನ ರೊಟೊವ್‌ನ ಸ್ನೇಹಿತ ರೊಬ್ಬರು ಕಳಿಸಿಕೊಟ್ಟಿದ್ದರು. ಒಂದೆರಡು ಲೋಕಾಭಿ ರಾಮದ ಮಾತನ್ನಾಡುತ್ತಿರುವಾಗ ವೊರೊಟೊವ್ ಆಲಿಸ್‌ಳನ್ನ ಕುತೂಹಲದಿಂದ ಗಮನಿಸುತ್ತಿದ್ದ : ಆಕೆ ಅಪ್ಪಟ ಫ್ರೆಂಚ್ ಯುವತಿಯಂತೆ ಇದ್ದಳು. ತುಂಬಾ ನವಿರಾಗಿ, ಚೆಲುವಾಗಿ ಕಾಣುತ್ತಿದ್ದಳು. ಆಕೆಯ ಸುಂದರ ವಾದ ಮುಖ, ಗುಂಗುರ ಇಳಿ ಬಿದ್ದಿದ್ದ, ಕತ್ತರಿಸಿದ ಕೂದಲು, ತೀರಾ ಪುಟ್ಟದಾಗಿ ಕಾಣುತ್ತಿದ್ದ ನಡು... ಆಕೆಯ ನಡುವನ್ನ ಕಂಡರೆ ಹದಿನೆಂಟು ದಾಟಿಲ್ಲ ಅನ್ನಿಸುತ್ತಿತ್ತು. ಆದರೆ ವಿಶಾಲವಾದ ಭುಜ ಮತ್ತು ಬೆನ್ನುಗಳನ್ನ ಕಂಡಾಗ ಇಪ್ಪತ್ಮೂರು, ಇಪ್ಪತ್ನಾಲ್ಕು ಹೆಚ್ಚೆಂದರೆ ಇಪ್ಪತ್ತೈದು ಇರಬಹುದೇನೋ ಅನ್ನಿಸುತ್ತಿತ್ತು. ಚಂದ್ರಶೇಖರ ಆಲೂರು ಅಂಕಣ : ಆಕಾಶಬುಟ್ಟಿ ಚಿತ್ರಾನ್ನ ನನಗೆ ಯಾವ ಟಾಪಿಕ್ಕೂ ಹೊಳೆಯದ ದಿನ ಬೇಕಾದೀತು ಅಂತ ಒಂದು ಟಾಪಿಕ್ ಇಟ್ಟು ಕೊಂಡಿದ್ದೆ. ಅದೇ ಚಿತ್ರಾನ್ನ. ಯಾಕೆಂದರೆ ಚಿತ್ರಾನ್ನದ ಬಗ್ಗೆ ಯಾರು ಬೇಕಾದರೂ ಬರೆಯಬಹುದು, ಏನನ್ನು ಬೇಕಾದರೂ ಬರೆಯಬಹುದು. ಹೇಗೇ ಬರೆದರೂ ತನ್ನ ಅರಿಶಿನ ಬಣ್ಣಕ್ಕೆ ಹೊಂದಿಸಿಕೊಳ್ಳುವ ಗುಣ ಚಿತ್ರಾನ್ನಕ್ಕಿದೆ. ಎಚ್.ಡಿ. ಸುನೀತಾ ಅಂಕಣ : ನೂರು ಮುಖ ಸಾವಿರ ದನಿ ಸಾವಿನ ದವಡೆಯಿಂದ ಮಗು ರಕ್ಷಣೆ ಇಪ್ಪತ್ತು ವರ್ಷಗಳ ಹಿಂದಿನ ಮಾತು. ದಾವಣಗೆರೆಯ ಜೆ.ಜೆ.ಎಂ.ಸಿ. ಆಸ್ಪತ್ರೆಯಲ್ಲಿ ನಮ್ಮ ಆತ್ಮೀಯ ಗಣ್ಯರೊಬ್ಬರು ದಾಖಲಾಗಿದ್ದರು. ಅವರನ್ನು ನೋಡಲು ನಾನು, ನನ್ನ ಬಳಿ ಇದ್ದ ಪ್ರಿಮಿಯರ್ ಪದ್ಮಿನಿ (ಫಿಯಟ್) ಡಿಲಕ್ಸ್ ಕಾರನ್ನು ನಾನೇ ಡ್ರೈವ್ ಮಾಡಿಕೊಂಡು ಹೋದೆ. ಆಸ್ಪತ್ರೆಯ ಆವರಣದಲ್ಲಿ ಕಾರು ನಿಲ್ಲಿಸಿ ಮುಖ್ಯದ್ವಾರದ ಒಳಗೆ ಹೋಗುವ ಮುನ್ನ ಬಲಗಡೆಗೆ ದೃಷ್ಟಿ ಹೋಯಿತು. ಗೋಡೆಯ ಪಕ್ಕದಲ್ಲಿ ವಯಸ್ಕ ಅಜ್ಜಿಯೊಂದು ಚಕ್ಕಲುಬಕ್ಕಲು ಕೂತಿತ್ತು. ಅಜ್ಜಿಯ ಬೊಚ್ಚುಬಾಯಿ, ಬದುಕಿನ ಬೇಸಾಯಕ್ಕೆ ಸಿಕ್ಕ ಸುಕ್ಕು ಮುಖ ಬದುಕಿನ ಬವಣೆಗಳ ಸಾಕ್ಷಿಯಾಗಿದ್ದ ಬಿಳಿಯ ನೆರೆಕೂದಲು, ತೆಳ್ಳಗೆ ಎಲುಬು, ಚರ್ಮಗಳ ಗೂಡಿನಂತಿದ್ದ ಅದರ ತೊಡೆಯ ಮೇಲೆ ಒಂದು ಹೆಣ್ಣುಮಗು. ಎಂ.ವಿ. ರೇವಣಸಿದ್ದಯ್ಯ

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.