logo

Get Latest Updates

Stay updated with our instant notification.

logo
logo
account_circle Login
O Manase
O Manase

O Manase

By: Bhavana Prakashana
20.00

Single Issue

20.00

Single Issue

About this issue

ನಾವು ಮಾಡೋದೆಲ್ಲಾ ತಮಾಷೆಗಾಗಿ ನಾಯಕರು ಹಾಸ್ಯನಟರಾಗುತ್ತಿದ್ದಾರೆ, ಹಾಸ್ಯನಟರು ನಾಯಕರಾಗುತ್ತಿದ್ದಾರೆ. ಯಾಕೆಂದರೆ ಜನ ಚೇಂಜ್ ಕೇಳುತ್ತಿದ್ದಾರೆ. ಅಳಿಸುವುದಕ್ಕೆ ಟೀವಿ ಸೀರಿಯಲ್ಲುಗಳಿವೆ, ಸಿಟ್ಟು ತರಿಸುವುದಕ್ಕೆ ಫೇಸ್ ಬುಕ್ ಇದೆ, ಹಾಗಾಗಿ ನಗಿಸುವ ಕೆಲಸವನ್ನು ಸಿನಿಮಾಗಳಿಗೆ ವಹಿಸಲಾಗಿದೆ. ಸೆಂಟಿಮೆಂಟು, ಹೊಡೆದಾಟ, ಸಸ್ಪೆನ್ಸು, ಹಾರರ್, ಇದ್ಯಾವುದೂ ಈಗ ಪ್ರೇಕ್ಷಕರಿಗೆ ಇಷ್ಟವಾಗುತ್ತಿಲ್ಲ. ಎರಡು ತಾಸು ನಾನ್ ಸ್ಟಾಪ್ ನಗುವಂತೆ ಮಾಡುವ ಸಿನಿಮಾ ಕೊಡಿ ಪ್ಲೀಸ್ ಎಂದು ಅವರು ಕೇಳುತ್ತಿದ್ದಾರೆ. ಹಾಗಾಗಿ ನಾಯಕರು, ಖಳನಾಯಕರು, ಪೋಷಕರು, ಎಲ್ಲರೂ ಈಗ ವಿದೂಷಕರಾಗುತ್ತಿದ್ದಾರೆ. ಪ್ರೇಕ್ಷಕರು ಅವರ ಅವಸ್ಥೆಯನ್ನು ನೋಡಿ ಗಹಗಹಿಸಿ ನಗುತ್ತಿದ್ದಾರೆ. ಕನ್ನಡದಲ್ಲಿ ನಡೀತಾ ಇರೋದು ಈಗ ಒಂದೇ ಟ್ರೆಂಡ್. ಅದುವೇ - ಕಾಮೆಡಿ ಟೈಮ್ ಅಲ್ಲಿ ತನಕ ಎಲ್ಲವೂ ಚೆನ್ನಾಗಿತ್ತು. ಹೊಟ್ಟೆಪಾಡಿಗೆ ಒಂದು ಪುಟ್ಟ ನೌಕರಿ, ಕಾಲಕಳೆಯುವುದಕ್ಕೆ ಗೆಳೆಯರ ಬಳಗ, ಗೊತ್ತುಗುರಿಯಿಲ್ಲದ ಬದುಕು, ಸಂತೋಷ ಅನ್ನುವುದು ಕಾಲ ಕೆಳಗೆ ಅಂಗಾತ ಮಲಗಿತ್ತು. ಆದರೆ ಯಾವಾಗ ಆ ಹುಡುಗಿ ಅವನ ಬದುಕೊಳಗೆ ಎಂಟ್ರಿ ಕೊಟ್ಟಳೋ, ಅಲ್ಲಿಂದ ಎಲ್ಲವೂ ಅಲ್ಲೋಲಕಲ್ಲೋಲವಾಯಿತು. ಇದ್ಯಾಕೆ ಹೀಗಾಗುತ್ತದೆ? ಒಂದೇ ತಟ್ಟೆಯಲ್ಲಿ ಊಟ ಮಾಡಿದ ಫ್ರೆಂಡ್ಸ್ ದೂರಾಗೋದು ಯಾಕೆ? ಫ್ರೆಂಡ್ಸ್ ಜೊತೆ ಇದ್ದಿದ್ದಕ್ಕೆ ಹುಡುಗಿ ಸಿಟ್ಟಾಗೋದು ಯಾಕೆ? ಒಬ್ಬಳ ಪ್ರೀತಿಗೋಸ್ಕರ ಮಿಕ್ಕೆಲ್ಲರ ಪ್ರೀತಿಯನ್ನೂ ಕಳೆದುಕೊಳ್ಳೋದು ಕಂಪಲ್ಸರಿಯಾ? ಇದು ಅವನು, ಅವಳು ಮತ್ತು ಅವರ ಕಥೆ - ಪ್ರೀತಿಯ ಬಲೆ = ಸ್ನೇಹದ ಕೊಲೆ ಕೆಲವು ಸಲ ಒಂದು ಭಾಷೆಯ ಜನರಿಗೆ ಮಾತ್ರ ಅರ್ಥವಾಗುವ, ಅನುವಾದದಲ್ಲಿ ಅರ್ಥ ಕಳೆದುಹೋಗುವ ಅಪಾಯವಿರುವ ಸಂಗತಿಗಳಿರುತ್ತವೆ. ಉದಾಹರಣೆಗೆ ನಮ್ಮದೇ “ದೇಸಿ"ಯನ್ನು ತೆಗೆದುಕೊಳ್ಳಿ. “ಎನಿಥಿಂಗ್ ದಟ್ ಈಸ್ ಟಿಪಿಕಲಿ ಇಂಡಿಯನ್" ಎನ್ನುವುದು ಅವು ಸೂಚಿಸುತ್ತಿರುವ ಅರ್ಥ. ವಿಶೇಷವೆಂದರೆ ದೇಸಿ ಎಂಬುದನ್ನು ಎಷ್ಟು ಉದ್ದಕ್ಕೆ ನಿಘಂಟಿನಲ್ಲಿ ವಿವರಿಸಿ ಹಾಕಿದರೂ ಉಳಿದವರಿಗೆ ಅದೊಂದು ಪದ ಅಷ್ಟೆ. ಕೇವಲ ಪದವಲ್ಲ; ಅದಕ್ಕಿಂತ ಹೆಚ್ಚಿನ ಇನ್ನೇನನ್ನೋ ಅದು ಸೂಚಿಸುತ್ತಿದೆ ಎನ್ನುವುದು ಗೊತ್ತಾಗುವುದು ಭಾರತೀಯನಿಗೆ ಮಾತ್ರ. ಹೆರಿಗೆಬೇನೆಯನ್ನು ಸ್ವತಃ ಅನುಭವಿಸಿದ ತಾಯಿಗೆ ಭಾಷೆಯಲ್ಲಿ ಹೇಳಲಾರದ ಯಾವುದೋ ಭಾವ ಕೊನೆಗೂ ಒಳಗೆ ಉಳಿದುಬಿಡುತ್ತದಲ್ಲ; ಹಾಗೆಯೇ ಇದು. - ರಂಗ್‌ಬಿರಂಗಿ ಪರಂಗಿ ನಾಮಗಳು ಒತ್ತಾಯಪೂರ್ವಕವಾಗಿ ಏನೋ ಒಂದನ್ನು ಕಲಿಯಲೇಬೇಕಾದಾಗ ಆ ಮಗು, ತನ್ನ ಸಹಜವಾದ ಪ್ರತಿಭೆಯನ್ನು ಒತ್ತಟ್ಟಿಗಿಡುತ್ತದೆ. ಚಿತ್ರ ಬರೆಯುವುದರಲ್ಲಿ ಆಸಕ್ತಿಯಿರುವ ಮಗು ಸಂಗೀತ ಕಲಿಯುವಂತೆ ಮಾಡುವುದರಿಂದ ಅದು ಸಂಗೀತವನ್ನೂ ಕಲಿಯುವುದಿಲ್ಲ, ಚಿತ್ರ ಬರೆಯುವುದರಲ್ಲೂ ಪರಿಣತಿ ಪಡೆಯುವುದಿಲ್ಲ. ಅಪ್ಪ ಅಮ್ಮಂದಿರೇ ಮಕ್ಕಳಿಗೆ ಶತ್ರುವಾಗುವುದು ಇಂಥ ಸಂದರ್ಭಗಳಲ್ಲೇ. "ಅಪ್ಪ ಅಮ್ಮ ದೇವರಲ್ಲ" ಜಾನಕಿ ಕಾಲಂನ ಮತ್ತೊಂದು ಅಧ್ಯಾಯ -ನೀವು ನಿಮ್ಮ ಮಕ್ಕಳ ಪಾಲಿಗೆ ಹಿರಣ್ಯಕಶಿಪು ಆಗೋದು ಹೀಗೆ! ಅಬ್ದುಲ್ ಖಾಲಿಕ್ ಎಂಬಾತ ತನ್ನ ಪಿಸ್ತೂಲನ್ನು ನನ್ನ ಹಣೆಗೆ ಹಿಡಿಯುತ್ತಾ ಹತ್ತಿರ ಬಂದ. ಸೇಡು ತೀರಿಸಿಕೊಳ್ಳುವ ತವಕದಲ್ಲಿ ಉನ್ಮತ್ತನಾಗಿದ್ದ ಅವನ ಕಣ್ಣುಗಳಲ್ಲಿ ಸೇಡಿನ ಜ್ವಾಲೆ ಉರಿಯುತ್ತಿದ್ದವು. ನಾನು ಆ ಕ್ಷಣಕ್ಕೆ ಅಸಹಾಯಕಳಾಗಿದ್ದೆ. ಆ ಸನ್ನಿವೇಶವನ್ನು ಎದುರಿಸಲು ಸನ್ನದ್ಧಳಾಗಿ ತಲೆ ಎತ್ತಿ ಫೈಜಾನ ಮುಖ ನೋಡುತ್ತಿದ್ದಂತೆ, ಆತ ತನ್ನ ತಲೆಯನ್ನು ಅಲುಗಾಡಿಸಿ ನೇರವಾಗಿ ನನ್ನನ್ನು ನೋಡಲು ಆರಂಭಿಸಿದ. ಕೆಲ ಹೊತ್ತು ಮೌನ ಆವರಿಸಿತು. ನಾನು ಮನದೊಳಗೆ ದೇವರನ್ನು ಪ್ರಾರ್ಥಿಸುತ್ತಿದ್ದೆ. ಇದ್ದಕ್ಕಿದ್ದಂತೆ ಮುಂಗಾರಿನ ಮಳೆ ಮತ್ತು ಸಿಡಿಲು ಒಮ್ಮೆಲೆ ಅಪ್ಪಳಿಸಿದಂತೆ ಆಯಿತು. ಮುಂದೇನಾಯಿತು. ಓದಿ "ಮೂಕ ಹಕ್ಕಿಯ ಹಾಡು" ಧಾರಾವಾಹಿಯ ಎರಡನೇ ಭಾಗ - ಹರಿಣಿಯ ಮೇಲೆ ಎರಗಿದ ಹಸಿದ ಹೆಬ್ಬುಲಿಗಳು "ನಾನು ಒಬ್ಬಳನ್ನು ಪ್ರೀತಿಸಿದೆ, ಅದನ್ನು ಅವಳ ಮುಂದೆ ಹೇಳಿಕೊಂಡೆ. ಮಾರನೇ ದಿನವೇ ಐದಾರು ಹುಡುಗರನ್ನು ಕರಕೊಂಡು ಬಂದು ಕಾಲೇಜಲ್ಲೇ ನನಗೆ ಹೊಡೆಸಿದಳು. ಆ ಅವಮಾನದಲ್ಲಿ ಪರೀಕ್ಷೆಯಲ್ಲಿ ಫೇಲಾದೆ. ಇನ್ನೊಂದು ಊರಿಗೆ ಬಂದೆ. ಅಲ್ಲಿ ಬಸ್ ಸ್ಟಾಪಲ್ಲಿ ನಿಂತಿದ್ದಾಗ ಯಾರೋ ಪುಂಡರು ಅಲ್ಲಿದ್ದ ಹೆಣ್ಮಕ್ಕಳನ್ನು ಚುಡಾಯಿಸಿ ಓಡಿ ಹೋದರು. ಆ ಕೆಲಸವನ್ನು ನಾನೇ ಮಾಡಿದೆ ಎಂದು ಜನರೆಲ್ಲಾ ಸೇರಿ ನನಗೆ ಹೊಡೆದರು. ನನ್ನದಲ್ಲದ ತಪ್ಪಿಗೆ ನಾನು ಅನುಭವಿಸಿದ ಇವೆರಡು ಶಿಕ್ಷೆಗಳಿಂದ ನನಗೆ ಬದುಕೇ ಬೇಡ ಅನಿಸಿದೆ. ಪರಿಹಾರ ನೀಡಿ". ಇದು ಸಮಾಧಾನ ಅಂಕಣಕ್ಕೆ ಬಂದ ಒಂದು ಪತ್ರ. ಇದಕ್ಕೆ ರವಿ ಬೆಳಗೆರೆ ನೀಡಿದ ಸಮಾಧಾನ ಏನು? -ವಿಮಾನಕ್ಕಾಗಿ ತಲೆ ಒಡ್ಡಿದರೆ ಬಿದ್ದದ್ದು ಬರಸಿಡಿಲು ರೈಲು ಹಳಿಗಳ ಮೇಲೆ ಓಡಬಲ್ಲುದು...ಓಡುತ್ತಿರುತ್ತದೆ. ಅದೇ ಅದರ ಗತಿ...ಅದರ ಲಯ...ಅದೇ ಅದರ ವ್ಯವಸ್ಥಿತ ಕಾರ್ಯವೈಖರಿ. ಇದರ ಹೊರತುಪಡಿಸಿ ರಸ್ತೆಯಲ್ಲಿ ಹೋಗು ಅಂದರೆ ರೈಲು ಹೋಗಲಾರದು. ಎರಡು ಹಳಿಗಳಿಲ್ಲದೇ ಅದು ನಡೆಯಲಾರದು. ಇದೇ ಬದುಕಿನ ನಿಯಮವೂ ಹೌದು. ಒಂದು ಕಾಲದಲ್ಲಿ ಪರಸ್ಪರ ಇಷ್ಟಪಟ್ಟ, ಅನಂತರ ಬೇರೆಬೇರೆ ಹಾದಿಗಳನ್ನು ಹಿಡಿದವರು ಎಲ್ಲೋ ಒಂದು ಕಡೆ ಮತ್ತೆ ಭೇಟಿಯಾದರೆ ಏನಾಗುತ್ತದೆ? ರೇಣುಕಾ ಹೇಳ್ತಾರೆ ಕೇಳಿಃ -ಕಳೆದು ಹೋಗುವುದು ಬರೀ ಕಾಲವಷ್ಟೇ ಅಲ್ಲ ಒನ್ ಫೈನ್ ಡೇ ಈ ದೇಶದಲ್ಲಿ ಹೆಣ್ಮಕ್ಕಳ ದರ್ಬಾರು ಶುರುವಾದರೆ ಏನಾಗುತ್ತದೆ? ಇಲ್ಲಿತನಕ ಹೆಣ್ಮಕ್ಕಳ ಮೇಲೆ ನಡೆಯುತ್ತಿದ್ದ ಅತ್ಯಾಚಾರ, ಅನಾಚಾರಗಳೆಲ್ಲಾ ಗಂಡಸರ ಮೇಲೆ ನಡೆಯೋದಕ್ಕೆ ಶುರುವಾಗುತ್ತದೆ. ಇದೊಂದು ಊಹೆ ಅಷ್ಟೆ, ಆದರೆ ಇದು ನಿಜವಾಗುವ ಸುಳಿವು ಈಗಾಗಲೇ ಸಿಕ್ಕಿದೆ. ಫೇಸ್‌ಬುಕ್ ಯುಗದಲ್ಲಿ ಇದಕ್ಕೆಲ್ಲ ಬಹಳ ಸಮಯ ಹಿಡಿಯುವುದಿಲ್ಲ. ಹಾಗಾಗಿ ಈ ಲೇಖನವನ್ನು ತಮಾಷೆ ಎಂದು ಪರಿಗಣಿಸದಿರಿ. - ಹೆಣ್ಮಕ್ಕಳು ಸ್ಟ್ರಾಂಗು ಮತ್ತು ರಾಂಗು ಆಗ್ತಿದಾರೆ! ಮನೋಲ್ಲಾಸಕ್ಕೆ ಕತೆ, ಕವನಗಳು. ಸಿಂಪಲ್ ಸಯನ್ಸ್, ಪದಸಂಪತ್ತಿಗೆ ವಾಗರ್ಥ ಚೂಡಾಮಣಿ. ನೊಂದ ಮನಸ್ಸುಗಳಿಗೆ ಸಮಾಧಾನ. ಆರೋಗ್ಯ ರಕ್ಷಣೆಗೆ ಗುಣಮುಖ. ಜೀವನಸ್ಪೂರ್ತಿಗೆ ಚೈತನ್ಯದ ಚಿಲುಮೆ. ದೇವದಾನವರ ಕತೆಗಳಿಗೆ ಪುರಾಣ ಪ್ರಪಂಚ. ವೈವಿಧ್ಯಮಯ ಅಂಕಣಗಳು, ನವನವೀನ ಲೇಖನಗಳು. ಓ ಮನಸೇಯ 114ನೇ ಸಂಚಿಕೆ ಮಾರುಕಟ್ಟೆಗೆ ಬಂದಿದೆ. ತ್ವರೆ ಮಾಡಿರಿ

About O Manase

O manase