logo

Get Latest Updates

Stay updated with our instant notification.

logo
logo
account_circle Login
Hi Bangalore
Hi Bangalore

Hi Bangalore

By: Bhavana Prakashana
15.00

Single Issue

15.00

Single Issue

About this issue

ಸೃಷ್ಟಿ 1024 ಸಂಪುಟ 20, ಸಂಚಿಕೆ 36, ಜೂನ್ 04, 2015 ಖಾಸ್‌ಬಾತ್ ಬಾಯಿ ಸತ್ತ ಜಯಕುಮಾರ್ ಹೆಂಡತಿಯ ಕೊಲೆಗೆ ಸಿದ್ಧನಾಗಿದ್ದ! “Oh! ನೀವಾ... ಬನ್ನಿ ಬನ್ನಿ" ಅಂದೆ. ಆತ ಬಾಗಿಲಲ್ಲೇ ನಿಂತಿದ್ದ. ಕೊಂಚ ಮಾನಸಿಕವಾಗಿ upset ಆದಂತೆ ಕಂಡ. ಕೆಲವು ಸಲ ನನಗೆ ಹೆಸರು ಮರೆತು ಹೋಗುತ್ತೆ. Not the face. ನನಗೆ ಮುಖ ಮರೆವಾಗುವುದಿಲ್ಲ. ಆತ ಕೊಂಚ ಸುಧಾರಿಸಿಕೊಂಡು, ಒಳಕ್ಕೆ ಬಂದ. ನಂಗೆ ಸ್ವಲ್ಪ ನೀರು ಬೇಕು ಅಂದ. ನನ್ನಲ್ಲಿಗೆ ಹೀಗೆ ಅನೇಕರು ಬರುತ್ತಾರೆ. ತುಂಬ ಗೊಂದಲದಲ್ಲಿರುತ್ತಾರೆ. ಕೆಲವರು ನನ್ನೆದುರಿಗೆ ಬಂದ ತಕ್ಷಣ excite ಆಗುತ್ತಾರೆ. ಕುಡಿಯಲು ನೀರು ಕೊಟ್ಟು, ಬೇರೆ ಏನೋ ಮಾಡುತ್ತಾ ಕೂತವನಂತೆ ಕೂಡುತ್ತೇನೆ. ಅವರ‍್ಯಾರೂ ಕೆಟ್ಟವರಲ್ಲ. ಕರುಣೆಗೆ ಅರ್ಹರು ಅಂತ ನನಗೆ ಅನ್ನಿಸಲ್ಲ. ಆ ಕ್ಷಣಕ್ಕೆ ಅವರಿಗೊಂದು ಆಸರೆ, ಒಂದು comfort ಬೇಕು. ಕೊಂಚ ಸಹನೆಯಿಂದ, ಒಳ್ಳೆಯ ಮಾತಿನಿಂದ, ಒಳ್ಳೆಯ ಮನಸ್ಸಿನಿಂದ ಅವರನ್ನು ಆಲಿಸುವವರು ಬೇಕು. I am a good listener. I speak well also. ರವಿ ಬೆಳಗೆರೆ ಸಾಫ್ಟ್‌ಕಾರ್ನರ್ ಮನಸ್ಸು ರಿಪೇರಿಗೆ ಬಂದಾಗ ಅದನ್ನು ನಾವೇ ಸರಿಮಾಡಿಕೊಳ್ಳಬೇಕು! ಒಲವೆಂಬ ಹೊತ್ತಿಗೆಯನ್ನು ಓದುತ್ತ ನೀನು ಅದರ ಬೆಲೆ ಎಷ್ಟೆಂದು ಕೇಳುತಿಹೆಯಾ? ಹುಚ್ಚ! ಹಗಲಿರುಳು ದುಡಿದರೂ ಹಲು ಜನುಮ ಕಳೆದರೂ ತೆತ್ತಲಾರೆ ಬರೀ ಅಂಚೆ ವೆಚ್ಚ! ಹಾಗಂತ ಬರೆದ ವರಕವಿ ಬೇಂದ್ರೆಯವರಿಗೆ ಆಗ ವಯಸ್ಸು ಎಷ್ಟಾಗಿತ್ತು? ನಾನು ಲೆಕ್ಕ ಹಾಕಿಲ್ಲ. ಬೇಂದ್ರೆಯವರಲ್ಲಿ ಅಗಾಧ ಪ್ರೇಮವೊಂದು ಜೀವನದುದ್ದಕ್ಕೂ ಇದ್ದೇ ಇತ್ತು. ತುಂಬ ಇತ್ತೀಚೆಗೆ ಹುಡುಗಿಯೊಬ್ಬಳು ಕೇಳಿದಳು, “ಸರ್, ನಿಮ್ಮ ವಯಸ್ಸಿನವರನ್ನು ನಾನು ನೋಡಿದ್ದೇನೆ. ಅವರಿಗಾಗಲೇ ಕಣ್ಣು ಮಂಜಾಗಿರುತ್ತವೆ. ಹಲ್ಲು ಸಡಿಲ. ಅವರ ಪ್ರಪಂಚವೇ ಬೇರೆ. ಅರವತ್ತಕ್ಕೆ ಮುಂಚೆ, ಅಂದ್ರೆ ಐವತ್ತೆಂಟಕ್ಕೇ ವಿ.ಆರ್.ಎಸ್. ತಗೊಳ್ಳೋಣಾ ಅಂತ ಯೋಚಿಸುತ್ತಿರುತ್ತಾರೆ. ಅವರಲ್ಲಿ warmth ಉಳಿದಿರೋದೇ ಇಲ್ಲ. But ನೀವು: ನೀವು always an young man. “ಇದು ಹೇಗೆ ಸಾಧ್ಯ?" ಅಂತ ಕೇಳಿದಳು. ರವಿ ಬೆಳಗೆರೆ ಬಾಟಮ್ ಐಟಮ್ ನೀವು ನಿಮ್ಮದೇ ನಿಲುವು ತಾಳುವುದು ಯಾವಾಗ ಸ್ವಾಮೀ? ನಗುವ ಹೆಂಡತಿಯನ್ನೂ, ಅಳುವ ಪ್ರೇಯಸಿಯನ್ನೂ ನಂಬಬೇಡ-ಷೇಕ್ಸ್‌ಪಿಯರ್. ಇದೊಂದು Quotation. ಹಾಗಂತ ಷೇಕ್ಸ್‌ಪಿಯರ್ ನಿಜಕ್ಕೂ ಹೇಳಿದ್ದಾನಾ? ಆತನ ಯಾವ ನಾಟಕದಲ್ಲಿ ಈ ವಾಕ್ಯವಿದೆ? ಯಾವನಿಗೆ ಗೊತ್ತು. ಒಟ್ಟಲ್ಲಿ ಒಂದು ಕೊಟೇಷನ್ ಬರೀಬೇಕಾಗಿತ್ತು, ಬರೆದುಬಿಟ್ಟೆ. ಷೇಕ್ಸ್‌ಪಿಯರ್ ಜಾಗದಲ್ಲಿ ಬರ್ನಾರ್ಡ್ ಶಾ ಎಂದು ಬರೆದರೂ ನಡೀತಿತ್ತು. ಆದರೆ ಅಪ್ಪಿತಪ್ಪಿಯೂ ತಿಪ್ಪೇಶಿ, ಕೊಟ್ರೇಶಿಗಳಿಗೆ ಕ್ರೆಡಿಟ್ ಕೊಡುವ ಹಾಗಿಲ್ಲ. ಯಾಕೆಂದರೆ ಆಗ ಕೊಟೇಷನ್ನಿಗೆ ತೂಕ ಬರುವುದಿಲ್ಲ. ಜನ ಅದನ್ನು ಓದುವುದಿಲ್ಲ. ಓದಿದರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ದೊಡ್ಡ ದೊಡ್ಡ ಮಾತುಗಳು ದೊಡ್ಡವರ ಬಾಯಲ್ಲಿ ಬಂದರೇ ಚೆನ್ನ. ರಾಜ್‌ಕುಮಾರ್ ಬಾಯಲ್ಲಿ ಬರಬೇಕಾದ ಡೈಲಾಗನ್ನು ಕೋಬ್ರಾ ವಿಜಿ ಹೇಳಿದರೆ ಹೇಗಾದೀತು? ಜನ ಅಂಡು ಬಡಿದುಕೊಂಡು ನಗುತ್ತಾರೆ ಅಷ್ಟೆ.. ರವಿ ಬೆಳಗೆರೆ ಹಲೋ ಒಂದೇ ವರ್ಷದಲ್ಲಿ ಸರ್ವಾಧಿಕಾರಿ ಪ್ರಜಾಪ್ರಭುತ್ವ ರೂಪಿಸಿದ್ದು ಮೋದಿ ಸಾಧನೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಒಂದು ವರ್ಷ ಭರ್ತಿಯಾಗಿದೆ. ಸರ್ಕಾರಗಳಿಗೆ ವರ್ಷ ತುಂಬುವುದು, ಎರಡು ವರ್ಷ ತುಂಬುವುದು, ಮೂರು ವರ್ಷ ತುಂಬುವುದು, ಇವೆಲ್ಲ ಈಗ ಸಾಧನೆಯಂತೆಯೇ ಕಾಣಬಹುದು. ಆದರೆ ಜನ ಒಂದು ಸರ್ಕಾರಕ್ಕೆ ಐದು ವರ್ಷ ಅಧಿಕಾರ ನಡೆಸಲು ಜನಾದೇಶ ನೀಡಿರುತ್ತಾರೆ ಎಂಬುದನ್ನು ಮರೆಯಬಾರದು. ನನಗೆ ಕುತೂಹಲವಾಗುವುದೆಂದರೆ, ಸ್ವಾತಂತ್ರ್ಯ ಸಿಕ್ಕ ಈ ಅವಧಿಯಲ್ಲಿ ನಮ್ಮ ಸರ್ಕಾರಗಳು ಹೇಗೆ ಬದಲಾಗುತ್ತಾ ಬಂದಿವೆ ಎಂಬುದು, ಪಂಡಿತ್ ನೆಹರೂ ಅವರಿಂದ ಹಿಡಿದು ನರಸಿಂಹರಾಯರ ಸರ್ಕಾರ ಬರುವ ತನಕ ಭಾರತದಲ್ಲಿ ಸಮಾಜವಾದಿ ಸರ್ಕಾರ ಇತ್ತು. ಇಂತಹ ಸರ್ಕಾರಗಳಲ್ಲಿ ಕೆಲವರು ದುರುಳರು ಕಂಡು ಬಂದಿರಬಹುದು, ಹಗರಣಗಳನ್ನು ಮಾಡಿರಬಹುದು, ಕೆಲವರು ಸರ್ವಾಧಿಕಾರದ ಮನಸ್ಥಿತಿಯನ್ನೂ ತೋರಿರಬಹುದು. ಆದರೆ ಒಟ್ಟಾರೆಯಾಗಿ ಗಮನಿಸಿದಾಗ ದೇಶದಲ್ಲಿ ಸಮಾಜವಾದಿ ಪ್ರಜಾಪ್ರಭುತ್ವ ಇತ್ತು. ರವಿ ಬೆಳಗೆರೆ ಮುಖಪುಟ ವರದಿ ಲಾಟರಿ ಏಟಿಗೆ ಅಲೋಕ ಢಮಾರ್! ಸಿಬಿಐ ಬಂದ್ರೆ ಮಟಾಷ್ ಇವತ್ತು ಇಡೀ ಪ್ರಕರಣ ಹೊರಬೀಳುವುದಕ್ಕೆ ಮೂಲ ಕಾರಣಕರ್ತರೇ ಈ ಚಂದ್ರಕಾಂತ್. ಈ ಚಂದ್ರಕಾಂತ್ ಬೇರಾರು ಅಲ್ಲ ಲಾಟರಿ ವಿಚಕ್ಷಣ ದಳದ ಆಡಳಿತ ವಿಭಾಗದ ಎಸ್ಪಿಯಾಗಿದ್ದವರು. ಅದೇ ವಿಚಕ್ಷಣದಳದಲ್ಲಿದ್ದ ಮತ್ತೊಬ್ಬ ಎಸ್ಪಿ ಅಂದರೆ ಧರಣೇಂದ್ರ. ಲಾಟರಿ ವಿಚಕ್ಷಣ ದಳದ ಐಜಿಪಿಯಾಗಿದ್ದ ಅರುಣ್‌ ಚಕ್ರವರ್ತಿಯವರು ಕುಲಬಾಂಧವ ಎಂಬ ಕಾರಣಕ್ಕಾಗಿ ಏನೋ ಎಸ್ಪಿ ಧರಣೇಂದ್ರನಿಗೆ ಭರ್ತಿ ಮೇಯಲು ಬಿಟ್ಟಿದ್ದರು. ಸಹಜವಾಗಿಯೇ ಇದರಿಂದ ಕನಲಿ ಕುಳಿತವರು ಅವರದೇ ಗ್ರೇಡ್‌ನ ಚಂದ್ರಕಾಂತ್ ಸಾಹೇಬರು. ಈ ಕಾರಣಕ್ಕಾಗಿಯೇ ವಿಚಕ್ಷಣ ದಳದ ಅಕಾರಿಗಳಾದ ಎಸ್ಪಿ ಚಂದ್ರಕಾಂತ್‌ಗೂ ಎಸ್ಪಿ ಧರಣೇಂದ್ರನಿಗೂ ಆಂತರಿಕ ಕಲಹ ತಲೆದೋರಿತು. ಲಾಟರಿ ಅಕ್ರಮ ದಂಧೆಯಲ್ಲಿ ಕಿಂಗ್‌ಪಿನ್ ಮಾರ್ಟಿನ್ ಮುಖಾಂತರ ಚೆನ್ನಾಗಿಯೇ ಕಾಸು ಸುಲಿಯಲು ನಿಂತ ಧರಣೇಂದ್ರ. ಈತನ ಜೊತೆ ಐಜಿ ಅರುಣ್‌ ಚಕ್ರವರ್ತಿಯೂ ಕೂಡ ದುಂಡಗಾದರು. ಆದರೆ ಚಂದ್ರಕಾಂತ್ ಗೆ ತಾನು ನಿರೀಕ್ಷಿಸಿದಷ್ಟು ಮಾಮೂಲಿ ಹೋಗುತ್ತಿರಲಿಲ್ಲ. ಲೋಕೇಶ್ ಕೊಪ್ಪದ್ ರಾಜಕೀಯ ಪ್ರಧಾನಿ ಮೋದಿಯ ಹೊಸ ನೋಟ ಜಯಾ ಜೊತೆ ಏನೀದು ಆಟ ಇತ್ತೀಚಿನ ದಿನಗಳಲ್ಲಿ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸುವುದು ಕರ್ನಾಟಕಕ್ಕೆ ಅನಿವಾರ್ಯವಾಗಿದೆ. ಮೊದಲನೆಯದಾಗಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಬೇಕು. ಎರಡನೆಯದಾಗಿ ಉಭಯ ರಾಜ್ಯಗಳ ನಡುವೆ ಸೌಹಾರ್ದಯುತ ಮಾತುಕತೆ ನಡೆದರೆ ಎರಡಲ್ಲ, ಮೂರು ಕಡೆ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ನಿರ್ಮಿಸಿ, ಒಂದು ಸಾವಿರದ ಐದು ನೂರು ಮೆಗಾವ್ಯಾಟ್ ಕರೆಂಟು ಉತ್ಪಾದಿಸಬಹುದು. ಆದರೆ ಈಗಾಗಲೇ ಮೇಕೆದಾಟು ಯೋಜನೆಯ ವಿಷಯದಲ್ಲಿ ತಮಿಳ್ನಾಡು ವಿರೋಧ ಶುರು ಮಾಡಿದೆ. ಬಂದ್ ಆಚರಿಸಿದೆ. ಇನ್ನು ಜಯಾ ಕೇಸಿನ ವಿಷಯದಲ್ಲಿ ಕರ್ನಾಟಕ ಮಿತಿ ಮೀರಿದ ಆಸಕ್ತಿ ತೋರಿದರೆ ಜಯಾ ವಿರುದ್ಧ ದೊಡ್ಡ ಮಟ್ಟದ ಪರಿಣಾಮವೇನೂ ಆಗುವುದಿಲ್ಲ. ಆದರೆ ಕರ್ನಾಟಕ ಹಾಗೂ ತಮಿಳ್ನಾಡುಗಳ ನಡುವೆ ನಿಶ್ಚಿತವಾಗಿಯೂ ಸಂಘರ್ಷ ಶುರುವಾಗುತ್ತದೆ. ಇಂತಹ ಸಂಘರ್ಷದ ನಡುವೆ ಕರ್ನಾಟಕ ತಲೆ ಬಾಗುವ ಸ್ಥಿತಿ ಬಂದರೆ ಅನುಮಾನವೇ ಬೇಡ. ಸಿದ್ದರಾಮಯ್ಯ ಸರ್ಕಾರದ ವರ್ಚಸ್ಸು ನೆಲ ಕಚ್ಚುತ್ತದೆ. ಆರ್.ಟಿ.ವಿಠ್ಠಲಮೂರ್ತಿ ವರದಿ ಎಲ್ಲಾ ಬಿಟ್ಟು ಫಕೀರನ ಬೆನ್ನಿಗೆ ಗನ್ ಇಟ್ಟ ರವಿಪೂಜಾರಿ! ಯಾವುದೇ ಶಂಕು ಸ್ಥಾಪನೆ, ಉದ್ಘಾಟನೆಗಳಿಗೆ ತೆರಳದೆ, ರಿಬ್ಬನ್ ಕಟ್ ಮಾಡದೆ ವಿಶೇಷತೆಯನ್ನ ಮೆರೆಯುವ ಹಾಲಾಡಿಯವರು ರಾಜಕೀಯವಾಗಿ ‘ಅಜಾತ ಶತ್ರು’ ಅಂತಲೇ ಕರೆಯಿಸಿಕೊಂಡವರು. ರಸ್ತೆಗಳ ಶಾಸಕ ಎಂಬ ಬಿರುದನ್ನ ಪಡೆದಿರುವ ಹಾಲಾಡಿ ರಾಜಕೀಯಕ್ಕೆ ಬರುವ ಮೊದಲೇ ‘ಮಹಾದಾನಿ’ ಎಂದು ಗುರುತಿಸಿಕೊಂಡವರು. ಹಾಲಾಡಿ ಒಮ್ಮೆ ಮಾತು ಕೊಟ್ಟರೆ ಮುಗಿಯಿತು ಅದಕ್ಕೆ ತಪ್ಪುತ್ತಿರಲಿಲ್ಲ. ತನ್ನ ವಿದ್ಯಾರ್ಥಿ ಜೀವನದಲ್ಲೇ ನಾಯಕನಾಗಿ ಮೆರೆದಿದ್ದ ಹಾಲಾಡಿ ತನ್ನ ಮಾವ ಆನಂದ ಕುಂದ ಹೆಗ್ಡೆಯವರ ವಿಧಾನಸಭಾ ಚುನಾವಣೆಯ ಗೆಲುವಿನಲ್ಲಿ ಪ್ರಮುಖವಾದ ಪಾತ್ರವಹಿಸಿದ್ದರು. ಅದೇ ರೀತಿ ಹಲವಾರು ಸಮಸ್ಯೆಗಳನ್ನು ವಿದ್ಯಾರ್ಥಿ ಜೀವನದಲ್ಲೇ ಪರಿಹರಿಸುತ್ತಿದ್ದವರು. ಅನಿವಾರ್ಯ ಕಾರಣಕ್ಕಾಗಿ ರಾಜಕೀಯಕ್ಕೆ ಬಂದವರು ಈ ಹಾಲಾಡಿ ಶೆಟ್ಟರು. ತನ್ನ ಮನೆಯ ಹೆಂಚುಗಳನ್ನೇ ಕಿತ್ತು ಜನರಿಗೆ ಹಂಚಿದ್ದ ಕೀರ್ತಿ ಇವರದ್ದು. ರಸ್ತೆ ಅಗಲೀಕರಣಕ್ಕೆ ತನ್ನ ಮನೆಯ ಪಡಸಾಲೆಯನ್ನೇ ಒಡೆಸಿ ಅವಕಾಶ ಮಾಡಿಕೊಟ್ಟವರು. ವಸಂತ್ ಗಿಳಿಯಾರ್ ವರದಿ ತಂಗಡಗಿ ಶಿವರಾಜನಿಗೆ ರಾಯರೆಡ್ಡಿ ಇಟ್ಟ ಪಕ್ಕಾ ಮುಹೂರ್ತ ಸಚಿವ ಶಿವರಾಜ್ ತಂಗಡಗಿಯ ಬಲಗೈ ಬಂಟ ಹನುಮೇಶ್ ನಾಯಕ ಎಂಬ ಕೊಲೆ ಪಾತಕಿಯ ಬಗ್ಗೆ ಕಳೆದ ವಾರವಷ್ಟೇ ‘ಹಾಯ್ ಬೆಂಗಳೂರ್!’ ಸವಿಸ್ತಾರವಾಗಿ ವರದಿ ಮಾಡಿತ್ತು. ಆದರೆ ಆತನ ಗೂಂಡಾಗಿರಿ ಮಾತ್ರ ದಿನೇದಿನೆ ಹೆಚ್ಚಾಗುತ್ತಿದೆ ಹೊರತು ಕಡಿಮೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಮಗ ಮಹಂತೇಶ್ ನಾಯಕ, ಯಲ್ಲಾಲಿಂಗನ ಕೊಲೆ ಕೇಸಿನಲ್ಲಿ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದರೂ ಕೂಡ ಈ ಹಲಾಲುಕೋರ ತಂದೆ ಹನುಮ್ಯಾ ದಿನಕ್ಕೊಂದು ನಾಟಕ ಶುರುವಿಟ್ಟಿದ್ದಾನೆ. ವರದಿಗಾರ ವರದಿ ಶಿವಮೊಗ್ಗದ ಖತರ್‌ನಾಕ್ ಮಹೇಶನ ಪೂರ್ತಿ ಕತೆ ಒಂದು ಸಂದರ್ಭದಲ್ಲಿ ಹಾದಿತಪ್ಪಿದ ಮಹೇಶ್‌ಕುಮಾರ್ ಸರಿ ದಾರಿಗೆ ಬರುತ್ತಾನೆಂಬ ಅವನ ಕೆಲವು ಗೆಳೆಯರ ನಂಬಿಕೆಯೇ ಹುಸಿಯಾಗಿದೆ. ಭದ್ರಾವತಿಯಲ್ಲಿ ಅಪ್ಪಾಜಿ-ಸಂಗಮೇಶ್ ನಡುವಿನ ರಾಜಕೀಯ ಕದನದಲ್ಲಿ ತಾನು ಜಾಗ ಮಾಡಿಕೊಳ್ಳಲು ಮುಂದಾಗಿದ್ದ ಮಹೇಶ್‌ಕುಮಾರ್‌ನನ್ನು ಕುಮಾರ್ ಬಂಗಾರಪ್ಪ, ಸಿ.ಎಂ.ಇಬ್ರಾಹಿಂ ಸೇರಿದಂತೆ ಹಲವರು ಒಂದಿಷ್ಟು ಕಾಲ ಬೆಂಬಲಿಸಿದ್ದರು. ಆದರೆ ಈ ಮಹೇಶ್‌ಕುಮಾರ್ ಮಾಜಿ ಸಚಿವ ಕುಮಾರ್‌ಬಂಗಾರಪ್ಪಗೇ ಮುಳುಗು ನೀರು ತಂದುಬಿಟ್ಟ. ಸದ್ಯ ಸಿ.ಎಂ.ಇಬ್ರಾಹಿಂಗೂ ಅದೇ ಗತಿ ಕಾದಿದೆ. ಶಿವಮೊಗ್ಗ ಎಸ್ಪಿ ರವಿಚನ್ನಣ್ಣನವರ್ ತಾವೊಬ್ಬ ದಿಟ್ಟ ಅಧಿಕಾರಿಯೆಂದು ತೋರಿಸಿಕೊಳ್ಳುತ್ತಿದ್ದಾರೆ. ಆದರೆ ಈ ಪ್ರಕರಣ ಕುರಿತಾದ ತನಿಖೆ ಕೌಶಲೇಂದ್ರಕುಮಾರ್ ವರ್ಗಾವಣೆಯೊಂದಿಗೆ ನಿಂತಲ್ಲೇ ನಿಂತು ಬಿಟ್ಟಿದೆ. ಮಹೇಶ್‌ಕುಮಾರ್‌ನನ್ನು ಸರಿಯಾಗಿ ವಿಚಾರಣೆಗೊಳಪಡಿಸಿದರೆ ಪುಟ್ಟಪರ್ತಿಯ ಲಕ್ಷಾಂತರ ಕೋಟಿ ರುಪಾಯಿಗಳ ಒಡೆಯ ರತ್ನಾಕರ್ ಕೂಡ ಸರಿಯಾಗಿಯೇ ಸಿಕ್ಕಿ ಬೀಳುತ್ತಾನೆ. ವರದಿಗಾರ ವರದಿ ಬಸಂತ ಪಾಟೀಲ್ ಕರೆದರು ಎಲ್ರೂ ರೊಟ್ಟಿ ತಿಂದೆದ್ದು ಬಂದರು! ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಕರೆದಿದೆ. ಈ ಬಾರಿ ಕರೆದಿರುವುದಕ್ಕೆ ಕಾರಣವೇನು ಎಂದು ಹೆಚ್ಚು ಹುಡುಕಬೇಕಿಲ್ಲ. ಇತ್ತೀಚೆಗೆ ಜಾಹೀರಾತೊಂದನ್ನು ನೀಡಿರುವ ಮಂಡಳಿಯು, ಕನ್ನಡ ಚಿತ್ರರಂಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಅದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಸಭೆ ಕರೆಯಲಾಗಿದೆ ಎಂದು ಸಮಜಾಯಿಷಿ ನೀಡಿದೆ. ಅದರಂತೆ ಸದ್ಯದಲ್ಲೇ ಬಸಂತ್ ರೆಸಿಡೆನ್ಸಿಯಲ್ಲಿ ಜೋಳದ ರೊಟ್ಟಿ ಊಟ ಮಾಡುತ್ತಾ ಮಂಡಳಿ ಮತ್ತು ಕನ್ನಡ ಚಿತ್ರರಂಗದ ಅಂಗಸಂಸ್ಥೆಗಳು ಕೂತು ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಲಿವೆ. ಅಮೃತ್ ನೇವಿ ಕಾಲಂ ರಾಮಾಯಣದ ಕೊಳ ಕಲಕಿದ ರಾವಣ-ಸ್ವಪ್ನವೆಂಬೋ ಕಲ್ಲು ಕವಿಯನ್ನು ಕವಿ ಸೋಲಿಸುವುದು ಅಂದರೆ ಹೀಗೇ. ವಾಲ್ಮೀಕಿ ಬರೆದ ರಾಮಾಯಣವನ್ನು ಕುವೆಂಪು ಕೊಂಚ ಕದಲಿಸಿ ಅದಕ್ಕಿರುವ ಅರ್ಥವನ್ನೇ ಸಹಸ್ರವಾಗಿಸುತ್ತಾರೆ. ಒಂದು ಕಲ್ಲಿನಿಂದ ಸಾವಿರ ತರಂಗಗಳು ಎದ್ದು ಕೊಳದ ಕಳವಳವನ್ನು ಹೇಳುವಂತೆ ಇಲ್ಲೂ ಆಗುತ್ತದೆ. ನೀವೆಲ್ಲಾ ರಾಮಾಯಣವನ್ನು ಸಾವಿರ ಸಲ ಕೇಳಿದ್ದೀರಿ. ರಾಮ ಪಿತೃವಾಕ್ಯ ಪರಿಪಾಲನೆಗೋಸ್ಕರ ವನವಾಸಕ್ಕೆ ನಡೆದ, ರಾವಣ ಸೋದರಿ ವಾತ್ಸಲ್ಯಕ್ಕೆ ಕಟ್ಟುಬಿದ್ದು ರಾಮನ ಮಧ್ಯೆ ದ್ವೇಷ ಕಟ್ಟಿಕೊಂಡ, ಸ್ತ್ರೀಮೋಹಕ್ಕೆ ಸಿಲುಕಿ, ಸೀತೆಯನ್ನು ಅಪಹರಿಸಿ ತನಗೆ ತಾನೇ ನಾಶವಾದ. ಇದು ರಾಮಾಯಣ. ಇಲ್ಲಿ ರಾಮ ನಾಯಕ, ರಾವಣ ಪ್ರತಿನಾಯಕ. ನೇವಿ ಜಾನಕಿ ಕಾಲಂ ಊರಿಗೆ ಒಂದು ಪ್ರವೇಶ ಪತ್ರ ಉಪ್ಪಿನಂಗಡಿಯನ್ನು ನೀವು ಯಾವ ದಿಕ್ಕಿನಿಂದ ಹೊಕ್ಕರೂ ಒಂದಲ್ಲ ಒಂದು ಸೇತುವೆಯ ಮೇಲಿಂದಲೇ ಪ್ರವೇಶಿಸಬೇಕು. ಬೆಂಗಳೂರಿನ ಕಡೆಯಿಂದ ಶಿರಾಡಿ ಘಾಟಿ ಇಳಿದು ಹೋಗುವವರಿಗೆ ಉಪ್ಪಿನಂಗಡಿಯೊಳಗೆ ಕಾಲಿಡುವ ಮುಂಚೆಯೇ ಅಡ್ಡಹೊಳೆಯೊಂದು ಎದುರಾಗುತ್ತದೆ. ಹೆಸರಿಲ್ಲದ ಉಪನದಿಯೊಂದು ನೇತ್ರಾವತಿಗೆ ಸೇರಿಕೊಳ್ಳುವ ಜಾಗದಲ್ಲಿ ಪುಟ್ಟದೊಂದು ಸೇತುವೆಯಿದೆ. ನೋಡುವುದಕ್ಕೆ ಸಣ್ಣ ಸೇತುವೆಯಂತೆ ಕಂಡರೂ ಅದಕ್ಕೆ ಅಸಂಖ್ಯಾತ ಮಂದಿಯನ್ನು ಬಲಿತೆಗೆದುಕೊಂಡ ಖ್ಯಾತಿ ಉಂಟು. ಕೂಟೇಲು ಸಂಕ ಎಂದು ಉಪ್ಪಿನಂಗಡಿಯ ಮಂದಿ ಕರೆಯುವ ಆ ಪುಟ್ಟ ಸೇತುವೆಯನ್ನು ದಾಟುತ್ತಿದ್ದಂತೆ ಊರೊಳಗೆ ಹೊಕ್ಕ ಅನುಭವವಾಗುತ್ತದೆ. ಜಾನಕಿ ಅಂಕಣ : ಒಲಿದಂತೆ ಹಾಡುವೆ ಒಂದು ಸುಂದರ ಮನಸ್ಸು ಮೊನ್ನೆ ಮೇ ಇಪ್ಪತ್ಮೂರರಂದು ಅಮೆರಿಕಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನೊಬೆಲ್ ವಿಜೇತ ವಿಜ್ಞಾನಿ ಜಾನ್‌ನ್ಯಾಷ್ ಮತ್ತು ಆತನ ಪತ್ನಿ ಅಲಿಷಿಯಾ ದುರ್ಮರಣಕ್ಕೆ ಈಡಾದರು. ಸುಮಾರು ಹದಿಮೂರು ವರ್ಷಗಳ ಹಿಂದೆ ಈ ಅಂಕಣದಲ್ಲಿ ಕಾಣಿಸಿಕೊಂಡು ಕನ್ನಡ ಜನಮಾನಸ ತಲುಪಿದ ಈ ವಿಜ್ಞಾನಿಯ ಬಗೆಗಿನ ವಿವರಗಳನ್ನು ಮತ್ತಷ್ಟು ಸಂಗ್ರಹಿಸಿ ಹೊಸ ಪೀಳಿಗೆಯ ಓದುಗರಿಗಾಗಿ ನೀಡುತ್ತಿದ್ದೇನೆ. 2002ರ ವರ್ಷದ ಅತ್ಯುತ್ತಮ ಚಿತ್ರ ಪ್ರಶಸ್ತಿಯೊಂದಿಗೆ ಇನ್ನೂ ಮೂರು ಆಸ್ಕರ್‌ಗಳನ್ನು ದೋಚಿದ ‘ಎ ಬ್ಯೂಟಿಫುಲ್ ಮೈಂಡ್’ ನ್ಯಾಷ್‌ನ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರ. ಸಿಲ್ವಿಯಾ ನಾಸರ್ ಎಂಬ ವಿಖ್ಯಾತ ಪತ್ರಕರ್ತೆ ಬರೆದ ನ್ಯಾಷ್‌ರ ಜೀವನ ಚರಿತ್ರೆಯ ಹೆಸರೇ ‘ಎ ಬ್ಯೂಟಿಫುಲ್ ಮೈಂಡ್’ ಚಂದ್ರಶೇಖರ ಆಲೂರು ಅಂಕಣ : ಆಕಾಶಬುಟ್ಟಿ ಬಸ್ಸಿನಲ್ಲಿ ಅರಳುವ ಹೂವು-ಹಾವು ದಾವಣಗೆರೆಗೆ ಪರ್ಸನಲ್ ಕೆಲಸದ ಮೇಲೆ ಹೋಗಿದ್ದೆ. ಕೆಲಸ ಮುಗಿಸಿಕೊಂಡು ರಾತ್ರಿ ಬಸ್ಸು ಹತ್ತಿದೆ. ಬಸ್ಸಿನಲ್ಲಿ ಕಿಟಕಿ ಪಕ್ಕ ಕೂತ ಹಲವು ಗಂಡಸರು ಖಾಲಿ ಸೀಟಿನ ಮೇಲೆ ಕೈ ಇರಿಸಿಕೊಂಡಿದ್ದರು. ಯಾರಾದರೂ ಸುಂದರ ಹುಡುಗಿಯರು ಸೀಟು ಹುಡುಕುತ್ತಾ ಬಂದರೆ ಮೆಲ್ಲಗೆ ಕೈ ತೆಗೆಯುತ್ತಿದ್ದರು. ಇಲ್ಲಿ ಸೀಟ್ ಖಾಲಿ ಇದೆ, ಬೇಕಾದ್ರೆ ಕೂತ್ಕೊಳ್ಳಿ ಎಂಬಂತೆ ನೋಡುತ್ತಾ. ಹೆಂಗಸರು ರಾತ್ರಿ ಆಟದ ಇವರ ಕಚಡಾ ಆಫರ್ ಒಪ್ಪಿಕೊಂಡುಬಿಡುತ್ತಾರಾ? ಹೋಗಲೇ ಎಂಬಂತಹ ನಿರ್ಲಕ್ಷ್ಯದ ನೋಟ ಬೀರಿ ಮುಂದೆ ಹೋಗುತ್ತಿದ್ದರು. ಎಲ್ಲಾದರೂ ಲೇಡೀಸ್ ಪಕ್ಕ ಸೀಟ್ ಸಿಗುತ್ತೇನೋ ಅಂತ. ಎಚ್.ಡಿ. ಸುನೀತಾ ಅಂಕಣ : ನೂರು ಮುಖ ಸಾವಿರ ದನಿ ಅವಿನಾಶೀ ಪಿತ್ರಾರ್ಜಿತ ಆಸ್ತಿಗಳ ಹಿನ್ನೆಲೆ ಹುಡುಕುತ್ತಾ.. ವ್ಯವಸಾಯ, ಮೂಲ ಕಸುಬಿನ ಜೊತೆಗೆ ಪೌರೋಹಿತ್ಯ, ಆಯುರ್ವೇದ ವೈದ್ಯಕೀಯ ಕ್ಷೇತ್ರ ಮತ್ತು ಕಾಂಟ್ರ್ಯಾಕ್ಟ್ ಕೆಲಸ ಇವುಗಳಲ್ಲಿ ದುಡಿದ ನನ್ನ ತಂದೆ (ಎಂ.ಎನ್.ವೀರಯ್ಯ) 1965ರ ಹೊತ್ತಿಗೆ ಇವೆಲ್ಲವನ್ನು ಬಿಟ್ಟರು. 1964ರಲ್ಲೇ ನನ್ನ ತಾಯಿ ತೀರಿಕೊಂಡಿದ್ದರು. ನಂತರ ಇದ್ದ ಹೊಲ-ಮನೆಗಳನ್ನು ಮಾರಿದರು. ಮಕ್ಕಳೆಲ್ಲರಿಗೂ (ಬಿ.ವಿ. ಹಾಲಯ್ಯ, ಬಿ.ವಿ. ನಂಜುಂಡಯ್ಯ, ಬಿ.ವಿ. ರುದ್ರಯ್ಯ ಮತ್ತು ನಾನು, ನನ್ನ ತಮ್ಮ ಉಮೇಶ) ನೌಕರಿಗೆ ಹಚ್ಚಿದರು. ಎಂ.ವಿ. ರೇವಣಸಿದ್ದಯ್ಯ

About Hi Bangalore

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.