logo

Get Latest Updates

Stay updated with our instant notification.

logo
logo
account_circle Login
Hi Bangalore
Hi Bangalore

Hi Bangalore

By: Bhavana Prakashana
15.00

Single Issue

15.00

Single Issue

About this issue

ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೩೨, ಮೇ ೮, ೨೦೧೪ ಬೆಲೆ : ೧೫ ರು ಮುಖಪುಟ ಲೇಖನ : ರಾಯರ ಮಠದ ರಕ್ತಕ್ಕೇ ಅಂಟಿದೆ ದಾಯಾದಿ ಕಲಹ! ಖುದ್ದು ರಾಯರೇ ಎದ್ದು ಬರಬೇಕು! ಇದು ಮಂತ್ರಾಲಯದ ರಾಯರ ಮಠಕ್ಕಂಟಿದ ಶಾಪ. ಶತ- ಶತಮಾನಗಳಿಂದಲೂ ನೂತನ ಪೀಠಾಧಿಪತಿಗಳು ಅಧಿಕಾರ ಹಿಡಿದಾಗ ಮಠದ ಅಂಗಳದಲ್ಲಿ ದಾಯಾದಿ ಕಲಹ ಸ್ಫೋಟಗೊಳ್ಳುವುದು ಇಲ್ಲಿ ಮಾಮೂಲು. ದಾಯಾದಿ ಕಲಹವೆಂಬುದು ರಾಯರ ಮಠಕ್ಕೆ ಅಧಿಕಾರಕ್ಕೆ ಬರುವವರ ರಕ್ತದಲ್ಲೇ ಹರಿದು ಬಂದಿದೆ. ಹಾಗಾಗಿ ಮಠದ ಬಗ್ಗೆ ಗೌರವವಿಟ್ಟುಕೊಂಡಿರುವ ಕೆಲ ಭಕ್ತರು ಇದನ್ನು ರಾಯರ ಮಠಕ್ಕೆ ಅಂಟಿರುವ ಸಾಂಕ್ರಾಮಿಕ ರೋಗವೆಂದು ಕಟುವಾಗಿ ಟೀಕಿಸುತ್ತಾರೆ. ಸ್ವಾಮಿಗೌಡ ಖಾಸ್‌ಬಾತ್ ಬಳ್ಳಾರಿಯ ಗಿಡ್ಡ ಫಣಿ ಎಂಬ ಬಾಲ್ಯದ ಗೆಳೆಯನ ನೆನಪಿನಲ್ಲಿ.. ಇವತ್ತೇಕೋ ಫಣಿ ನೆನಪಾದ. ಅವತ್ತಿಗೆ ಫಣಿ ಎಂಬ ಹೆಸರಿನವರೇ ಮೂವರು ಮಿತ್ರರಿದ್ದರು. ಅಲ್ಲಿ ಪ್ರತಿಯೊಬ್ಬರ ಹೆಸರಿಗೂ ಒಂದು ಪ್ರಿಫಿಕ್ಸ್ ಇರುತ್ತದೆ. ಇವನು ಗಿಡ್ಡ ಫಣಿ. ಇನ್ನೊಬ್ಬನು ಸಿ.ಫಣಿ. ಮೂರನೆಯವನು ಎಂ.ಡಿ. ಫಣಿ! ಕೆಲವೊಮ್ಮೆ ಹೆಸರುಗಳಿಗಿಂತ ಅವುಗಳ ಪ್ರಿಫಿಕ್ಸುಗಳೇ ಜಾಸ್ತಿ ಜನಪ್ರಿಯವಾಗಿರುತ್ತಿದ್ದವು. ನನಗಿಂತ ಕೊಂಚ ಹಿರಿಯನೊಬ್ಬಾತನನ್ನು ನಾವು "ಮುಂಡೇ ಮಗ ಇರುಪಾಕ್ಷಿ" ಅಂತ ಕರೆಯುತ್ತಿದ್ದೆವು. ಆರ್.ಬಿ ಹಲೋ ಯಾರೋ ಬಂದು ಬದಲಾವಣೆ ಮಾಡುತ್ತಾರೆಂಬುದು ಮೂರ್ಖತನ! ದಿಲ್ಲಿ ಗದ್ದುಗೆಯ ಮೇಲೆ ಕೂರುವ ವಿಶ್ವಾಸ ಬಿಜೆಪಿ ನೇತೃತ್ವದ ಎನ್‌ಡಿಎಗೆ ಯಾವ ಮಟ್ಟಿಗೆ ಬಂದಿದೆ ಎಂದರೆ ಇನ್ನೇನು ಮೋದಿ ಪ್ರಧಾನಿಯಾಗಿಯೇ ಬಿಟ್ಟರು. ಅವರ ಸಚಿವ ಸಂಪುಟದಲ್ಲಿ ಯಾರ್‍ಯಾರು ಪ್ರಮಾಣ ವಚನ ಸ್ವೀಕರಿಸಬೇಕು ಎಂಬ ಮಟ್ಟಕ್ಕೆ ಚರ್ಚೆ ನಡೆಯುತ್ತಿದೆ. ಯಾರೇನೇ ಹೇಳಲಿ, ರಾಷ್ಟ್ರಮಟ್ಟದಲ್ಲಿ ನರೇಂದ್ರಮೋದಿಯನ್ನು ವೈಭವೀಕ ರಿಸಿದಷ್ಟು ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಯಾರನ್ನೂ ವೈಭವೀಕರಿ ಸಿರಲಿಲ್ಲ. ರವಿ ಬೆಳಗೆರೆ ಬಾಟಮ್ ಐಟಮ್ ಸ್ವಾಮಿಗಳ ಸಿಟ್ಟು ಮತ್ತು ಬಡ ನಿರ್ದೇಶಕನ ದವಡೆ “ನಾಲ್ಕು ದಿನಗಳಿಂದ ನನ್ನ ಮೇಲೆ ಪ್ರಹಾರದ ಮೇಲೆ ಪ್ರಹಾರ! ಆದರೂ ನಾನೂ ತಾಳ್ಮೆಯಿಂದ ಇದ್ದೆ. ಅಮ್ಮ ಕಲಿಸಿದ ಪಾಠ ನನ್ನನ್ನು ಕಾಪಾಡಿತು. ಆದರೆ ನನ್ನ ಪತ್ನಿ ಅನುಪಮಳ ಬಿಪಿ ಹೆಚ್ಚಾಗಿ ಚಿಕಿತ್ಸೆ ಪಡೆಯುವಂತಾಯಿತು. ಮಗ ಪ್ರಥಮ ಮಂಕಾಗಿ ಬಿಟ್ಟ. ಫೋನ್ ಕರೆಗಳ ಪ್ರವಾಹವನ್ನು ತಡೆಯ ಲಾರದೇ ನನ್ನ ಮೊಬೈಲ್ ಜಾಮ್ ಆಗಿ ಹೋಯಿತು. ರವೀ ವರದಿ ಮಳವಳ್ಳಿ ಶಿಲ್ಪಾ ದಹನದ ಹಿಂದಿದೆ ನೆಲಮಾಕನ ಹಳ್ಳಿಯ ನೆತ್ತರ ಗಾಥೆ! ನೆಲಮಾಕನಹಳ್ಳಿ ಎಂಬ ಪುಟ್ಟ ಹಳ್ಳಿಯ ನೆಲದ ಗುಣವೇ ಇಂತಹುದಾ? ಎಂಬುದೊಂದು ಪ್ರಶ್ನೆ ಖುದ್ದು ಮಂಡ್ಯದ ಎಸ್ಪಿ ಭೂಷಣ್ ಜಿ. ಬೊರಸೆಯವರ ಮನಸ್ಸಿನಲ್ಲಿ ಮೂಡಿಬಿಟ್ಟಿದೆ. ನೆತ್ತರದಾಹದ ಹಿನ್ನೆಲೆಯುಳ್ಳ ಈ ಊರಲ್ಲಿ ಈಗ್ಗೆ ಕೆಲ ವರ್ಷಗಳ ಹಿಂದಷ್ಟೇ ಅಲೆಮಾರಿ ಜನಾಂಗದ ಮಹಿಳೆ ಸಾವಿತ್ರಮ್ಮ ಎಂಬಾಕೆಯನ್ನು ಜೀವಂತವಾಗಿ ಹುಲ್ಲಿನ ಬಣವೆಯೊಂದಕ್ಕೆ ಹಾಕಿ ಬೆಂಕಿ ಹಚ್ಚಿ ಕೊಂದು ಕ್ರೌರ್ಯ ಮೆರೆದಿದ್ದರು. ಲಕ್ಷ್ಮೀಸಾಗರ ಸ್ವಾಮಿಗೌಡ ವರದಿ ಗರಗರ ತಿರುಗುವ ಕುಣಿಗಲ್ ಗಿರಿ ಕೈಯಲ್ಲಿ ರಿವಾಲ್ವರ್! ಕುಣಿಗಲ್ ಗಿರಿ! ಬೆಂಗಳೂರು ಭೂಗತಲೋಕ ಕಂಡ ಖತರ್‌ನಾಕ್ ದರೋಡೆಕೋರನೀತ. ನಿಂತ ಜಾಗದಲ್ಲಿ ನಿಲ್ಲದೇ ಗರಗರ ಸುತ್ತುವ ಈತನನ್ನು ಅವನ ಪಟಾಲಮ್ಮಿನ ಹುಡುಗರು ಕರೆಯೋದು ‘ಬಾಸ್’ ಎಂದೇ. ಈಗ್ಗೆ ನಾಲ್ಕು ತಿಂಗಳ ಹಿಂದಷ್ಟೇ ಪರಪ್ಪನ ಅಗ್ರಹಾರದ ಜೈಲಿನಿಂದ ಹೊರಬಂದಿದ್ದ ಕುಣಿಗಲ್ ಗಿರಿ ಅಲಿಯಾಸ್ ಮೋದೂರು ಗಿರಿ ತನ್ನದೇ ಸುಲಿಗೆಕೋರರದೊಂದು ಗ್ಯಾಂಗು ಕಟ್ಟಿದ್ದ. ಲಕ್ಷ್ಮೀಸಾಗರ ಸ್ವಾಮಿಗೌಡ ವರದಿ ಹೊಸಪೇಟೆ ಕಾರ್ಮಿಕ ಇಲಾಖೆಯಲ್ಲಿ ಕಸರಾಮಸರ! ಹೊಸಪೇಟೆಯ ಕಾರ್ಮಿಕ ಇಲಾಖೆ ಹಡಾಲೆದ್ದು ಹೋಗಿದೆ. ಇಲ್ಲಿ ಕಾರ್ಮಿಕರ ಗೋಳು ಕೇಳುವ ಮಾತಿರಲಿ, ತಾಲೂಕಿನ ಅಷ್ಟೂ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು ಕೂಡ ಬಾಯಿ ಬಾಯಿ ಬಡಿದುಕೊಳ್ಳುವ ದೃಶ್ಯ ಕಾಣಿಸುತ್ತಿದೆ. ಸರ್ಕಾರಿ ಬಾಬ್ತು ಅಷ್ಟೇ ತುಂಬಿದರೆ ಇಲ್ಲಿ ಯಾವ ಕೆಲಸವೂ ಆಗುವುದಿಲ್ಲ. ಅಕಾರಿಗಳ ಜೇಬು, ಪರ್ಸುಗಳನ್ನು ತುಂಬಿಸಿದರೆ ಮಾತ್ರ ಕಾಯಕ ಸಲೀಸು ಅನ್ನುವಂತಾಗಿದೆ. ಸತೀಶ್ ಬಿಲ್ಲಾಡಿ ವರದಿ ದೇವಿಶ್ರೀ ಸ್ವಾಮಿಯ ಸೆಕ್ಸ್ ಸ್ಕ್ಯಾಮ್ ಡೀಲು ನಾಯ್ಡು ಬಾಲು ಕುಂತಲ್ಲೇ ಹೊಡೆದ ಗೋಲು! ‘ಝೀ ಕನ್ನಡ’ ವಾಹಿನಿಯಲ್ಲಿ ಪ್ರತಿನಿತ್ಯ ಪ್ರಸಾರವಾಗುತ್ತಿದ್ದ ರವಿಶಂಕರ್ ಗುರೂಜೀ ಎಂಬಾತನ ಜ್ಯೋತಿಷ್ಯ ಕಾರ್ಯಕ್ರಮ ಪ್ರೇಕ್ಷಕರಿಲ್ಲದೇ ಸೊರಗಿತ್ತು. ಟಿ.ಆರ್.ಪಿ ಕೂಡ ಬಿದ್ದಿತ್ತು. ಆಗ ‘ಝೀ ವಾಹಿನಿ’ಯ ನಾನ್‌ಫಿಕ್ಷನ್ ಹೆಡ್ ಆದ ಬಾಲರಾಜ್ ನಾಯ್ಡು ದೇವಿಶ್ರೀ ಗುರೂಜೀಯನ್ನು ಕರೆತಂದು ಚಾನೆಲ್‌ನಲ್ಲಿ ಕೂರಿಸಿದರು. ಕಾರ್ಯಕ್ರಮಕ್ಕೆ ‘ಓಂಕಾರ’ ಎಂದು ಹೆಸರಿಟ್ಟರು. ಸೋಮವಾರದಿಂದ ಶುಕ್ರವಾರದ ತನಕ ಪ್ರತಿದಿನ ಬೆಳಿಗ್ಗೆ ಎಂಟರಿಂದ ಒಂಬತ್ತರ ತನಕ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮಕ್ಕೆ ದೇವಿಶ್ರೀಗೆ ತಿಂಗಳಿಗೆ ಒಂದು ಲಕ್ಷ ಸಂಭಾವನೆ ಸಿಗುತ್ತಿತ್ತು. ಲೋಕೇಶ್ ಕೊಪ್ಪದ್ ವರದಿ ದಿಗಿಲಿಗೆ ಬಿದ್ದ ನೋದಿ ಷರೀಫ್‌ರಿಗೆ ಪರಾಕು ಅಂದರು! ದಿಲ್ಲಿಯಲ್ಲಿ ಅಧಿಕಾರ ಹಿಡಿಯಲು ಸಿಕ್ಕ ಸಿಕ್ಕ ಸರ್ಕಸ್ಸು ಮಾಡುತ್ತಿರುವ ನರೇಂದ್ರಮೋದಿ ಈಗ ಕರ್ನಾಟಕದ ಮುಸ್ಲಿಂ ಲೀಡರ್ ಜಾಫರ್ ಷರೀಫ್ ಮೇಲೆ ಕಣ್ಣು ಹಾಕಿರುವುದು ಕುತೂಹಲಕಾರಿಯಾಗಿದೆ. ಹಾಗೆ ನೋಡಿದರೆ ನರೇಂದ್ರಮೋದಿ ಅವರು ಜಾಫರ್ ಷರೀಫ್ ಅವರ ಮೇಲೆ ಕಣ್ಣು ಹಾಕುವ ಅಗತ್ಯವೇನಿರಲಿಲ್ಲ. ಆರ್.ಟಿ.ವಿಠ್ಠಲಮೂರ್ತಿ ವರದಿ ಐಜಿ ರಾಮಚಂದ್ರರಾವ್‌ಗೆ ಸವಾಲು ಹಾಕಿತ್ತು ಹವಾಲ ದಂಧೆ! ರಾಮನಗರ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಅಂಡಿಗೆ ಉಂಡೆನಾಮ ತಿಕ್ಕಿಕೊಂಡು ಜಿಲ್ಲೆಯ ಅದೆಲ್ಲಾ ಅಕ್ರಮ ದಂಧೆಕೋರರಿಂದ ವಸೂಲಿಗೆ ನಿಂತು ದುಂಡಗಾಗಿರುವ ಎಸ್ಪಿ ಅನುಪಮ್ ಅಗರ್‌ವಾಲ್ ದಂಗಾಗಿ ಕುಳಿತು ಬಿಟ್ಟಿದ್ದಾರೆ. ಈಗ್ಗೆ ವಾರದ ಹಿಂದಷ್ಟೇ ರಾಮನಗರದ ಎಸ್ಪಿ ಕಚೇರಿಗೆ ಕೂಗಳತೆಯಲ್ಲಿರುವ ಗೌಸಿಯಾ ಕಾಲೇಜಿನ ಬಳಿ ಭಾರೀ ದರೋಡೆಯೊಂದು ನಡೆದು ಹೋಗಿದೆ. ಲಕ್ಷ್ಮೀಸಾಗರ ಸ್ವಾಮಿಗೌಡ ವರದಿ ದಂಧೆಕೋರರ ಮುಂದೆ ಅಂಬೋ ಅಂದವನು ಎಸ್ಸೈ ಕುಸಗಲ್! ಇಸವಿ ೨೦೦೫ರಲ್ಲಿ ಈತ ಎಸ್ಸೈ ಆಗಿ ಪೊಲೀಸ್ ಇಲಾಖೆ ಸೇರಿದ್ದ. ತರಬೇತಿ ಅವಧಿಯಲ್ಲಿ ತನ್ನ ಎಡಬಿಡಂಗಿತನದಿಂದಲೇ ಸಹಪಾಠಿಗಳೆದುರು ನಗೆಪಾಟಲಿಗೀಡಾಗಿದ್ದ. ಅಸಲಿಗೆ ಈತ ಕಡ್ಡಿ ಪೈಲ್ವಾನ. ನೌಕರಿಯಲ್ಲಿ ಚುರುಕುತನವಿಲ್ಲದಿದ್ದರೂ, ಆದಷ್ಟು ಬೇಗ ಹಣ ಮಾಡಿ ಆಗರ್ಭ ಶ್ರೀಮಂತನಾಗುವ ರಣ ಹಸಿವಂತೂ ಈತನಿಗಿದೆ. ಈ ಹಿಂದೆ ಈತ ಹೂವಿನ ಹಡಗಲಿಯಲ್ಲಿ ಪಿ.ಎಸ್ಸೈ ಆಗಿದ್ದಾಗ ಅಲ್ಲಿನ ಯುವತಿಯೊಬ್ಬಳ ಜೊತೆ ಜಮ್ಮಾ-ಚಕ್ಕಾ ಶುರುವಿಟ್ಟುಕೊಂಡಿದ್ದ. ರವಿ ಕುಲಕರ್ಣಿ ವರದಿ ಐಜಿ ಸಾಹೇಬರಿಗೆ ಬಂದು ಆನಾಮಧೇಯ ಪತ್ರ ಕೊಲೆಯ ರಹಸ್ಯ ಹೇಳಿತ್ತು! ದಾವಣಗೆರೆಯ ಐಜಿ ಡಾ|| ಪರಶಿವಮೂರ್ತಿ ಖಡಕ್ಕಾಗಿಯೇ ಲಾಠಿ ಬೀಸಿದ್ದಾರೆ. ತಮಗೆ ಬಂದ ಅನಾಮಧೇಯ ಪತ್ರವನ್ನು ಅವರು ಹಾಗೇ ಪಕ್ಕಕ್ಕಿಡಲಿಲ್ಲ. ಬದಲಿಗೆ ಅದನ್ನು ನೇರವಾಗಿ ದಾವಣಗೆರೆಯ ಟಫ್‌ಕಾಪ್ ಚಂದ್ರಹಾಸ ನಾಯ್ಕ್‌ರ ಕೈಗಿಟ್ಟು ತನಿಖೆ ನಡೆಸುವಂತೆ ಹುಕುಂ ಜಾರಿಗೊಳಿಸಿದ್ದರು. ಇನ್ಸ್‌ಪೆಕ್ಟರ್ ಚಂದ್ರಹಾಸ ನಾಯ್ಕ್‌ರೂ ಅಷ್ಟೇ, ತಮ್ಮ ಸರ್ವೀಸಿನುದ್ದಕ್ಕೂ ಇಲಾಖೆಯಲ್ಲಿ ಖಡಕ್ಕು ಅಕಾರಿ ಎಂದೇ ಹೆಸರು ಪಡೆದವರು. ಕಾಂತರಾಜ್ ಅರಸ್ ನೇವಿ ಕಾಲಂ ಕಳೆದ ಮಕ್ಕಳನ್ನು ಹುಡುಕುವುದು, ಹೂತ ನೋವುಗಳನ್ನು ಪತ್ತೆ ಮಾಡುವ ಕೆಲಸ ಪದ್ಮಾಂಬಿಕೆ ಮತ್ತು ಸುಮಂಗಲಾ ಇಬ್ಬರೂ ಸ್ಫೋಟಗೊಂಡ ರೀತಿ ನೋಡಿದರೆ ಷಣ್ಮುಖಪ್ಪ ಸಾಹೇಬರಿಗೆ ಇಡೀ ಪ್ರಕರಣ ಬೇರೆಯದೇ ಹಾದಿ ಯನ್ನು ಹಿಡಿಯುತ್ತಿದೆ ಎನ್ನುವ ನಿಗೂಢ ಸೂಚನೆಯನ್ನು ಕೊಟ್ಟಿದ್ದು ಸುಳ್ಳಲ್ಲ. ಅಲ್ಲದೇ ಹೋಗಿದ್ದರೆ ಕುಲಶೇಖರ ತನ್ನ ತಾಯಿಯ ಜೊತೆಗಿನ ಗುದ್ದಾಟದಿಂದ ಬೇಸತ್ತು ಅಥವಾ ಅಪ್ಪನ ಕಾಣೆ ಪ್ರಕರಣದಿಂದ ಪ್ರೇರೇಪಿತನಾಗಿ ಮನೆ ಬಿಟ್ಟಿದ್ದಾನೆ ಎನ್ನುವ ಸರಳ ವ್ಯಾಖ್ಯಾನಕ್ಕೂ ಮೀರಿದ ತಿರುವುಗಳನ್ನು ತೆಗೆದುಕೊ ಳ್ಳುತ್ತಾ ಹೋಗುತ್ತಿದ್ದುದು ಅರಿವಿಗೆ ಬಂದಿತ್ತು. ನೇವಿ ಜಾನಕಿ: ಕಾಲಂ ಒಲಿವ ಮುನ್ನ ನನ್ನೊಳು ನೀ ನಿನ್ನೊಳು ನಾ! ಮೊದಲನೆಯದು ಅಪ್ಪಟ ಪ್ರೀತಿಯ ಹೇಳಿಕೆ. ನಿನ್ನೊಳಿದೆ ನನ್ನ ಮನಸು ಅಂದರೆ ನಿನ್ನ ಮೇಲೆ ನನಗೆ ಮನಸ್ಸಿದೆ ಅಂತಲ್ಲ. ನಿನ್ನನ್ನು ನನ್ನ ಮನಸ್ಸು ಬಯಸುತ್ತಿದೆ ಅಂತಲೂ ಅಲ್ಲ. ಮನಸ್ಸೇ ನಿನ್ನೊಳಗಿದೆ ಅನ್ನುವುದು ಒಂದು ರೀತಿಯಲ್ಲಿ ಅದ್ವೈತ ಸ್ಥಿತಿ. ಅವಳ ಮನಸ್ಸು ಅವನೊಳಗೆ ಇದ್ದರೆ ಏನಾಗುತ್ತದೆ. ಅವನ ಮನಸ್ಸಿನಲ್ಲಿ ನಡೆಯುತ್ತಿರುವುದೆಲ್ಲ ಅವಳಿಗೆ ಗೊತ್ತಾಗುತ್ತದೆ. ಜಾನಕಿ ಮರೆತ ಭಾರತ:ಅಂಕಣ ಒಂಟಿ ಕಾಲ್ ಕೊಕ್ಕರೆ ಒಂಬೈನೂರ್ ದುಡ್ಡು! ಅಂಥ ಸಂಭ್ರಮದ ರಾತ್ರಿಗಳನ್ನು ಇಂದು ಹಳ್ಳಿಗಾಡು ಕಳೆದುಕೊಂಡಿದೆ. ಹೀಗೆ ಒಗಟು ಮತ್ತು ಕಥೆಗಳನ್ನು ಹೇಳುವಾಗ ಕೇರಿಯ ಅಕ್ಕಪಕ್ಕದ, ಎದುರು ಮನೆಗಳವರೂ ಬಂದು ಸೇರುತ್ತಿದ್ದರು. ನನಗಂತೂ ಒಗಟು ಬಿಡಿಸಲು ಸಾಕು ಸಾಕುಗುತ್ತಿತ್ತು. ಆದರೂ ಒಗಟುಗಳಲ್ಲಿರುತ್ತಿದ್ದ ಅರ್ಥ ಮೈನವಿರೇಳಿಸುವಂತೆ ಮಾಡುತ್ತಿತ್ತು. ಸಾವಿರಾರು ವರ್ಷಗಳ ತಮ್ಮ ಅನುಭವಗಳಲ್ಲಿ ಹಿರಿಯರು ಕಟ್ಟಿದ ಇಂಥ ಒಗಟುಗಳು ದೊಡ್ಡ ದೊಡ್ಡ ಧರ್ಮ ಗ್ರಂಥಗಳಿಗೆ ಸಮವೆಂದೇ ನನ್ನ ಭಾವನೆ. ಕೇಶವರೆಡ್ಡಿ ಹಂದ್ರಾಳ

About Hi Bangalore

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.