Hi Bangalore


Buy Now @ ₹ 15.00 Preview
ಸೃಷ್ಟಿ 1027 : ಸಂಪುಟ 20, ಸಂಚಿಕೆ 39, ಜೂನ್ 25, 2015 ಖಾಸ್‌ಬಾತ್ ಅವನಿಗೇನು ಬಿಡಿ : ಮಾವ ಶ್ರೀಮಂತರು ಅವನ ಅಪ್ಪನೂ ಶ್ರೀಮಂತ ಮನಸ್ಸಿಗೆ ಏನೋ ನೆಮ್ಮದಿ. ಮನೆಗೆ ಸೊಸೆ ಬಂದಳು. ನನ್ನ ಕರಿಷ್ಮಾ ಹಿಲ್ಸ್‌ನ ಮನೆ ‘ಲಲಿತೆ’ ಅವತ್ತು ತುಂಬಿ ತುಳುಕುತ್ತಿತ್ತು. ಈ ಹಿಂದೆ ನಮ್ಮ ಮನೆಯಲ್ಲಿ ಎರಡು ಮದುವೆಗಳಾಗಿವೆ. ಆಗೆಲ್ಲ ನಾನು ತುಂಬ ಚಟುವಟಿಕೆಯಿಂದ ಓಡಾಡುತ್ತಿದ್ದೆ. ನಾವು ಹೆಣ್ಣಿನ ಕಡೆಯವರು. ಬೀಗರೊಂದಿಗೆ ಅನುನಯದಿಂದ ನಡೆದುಕೊಳ್ಳಬೇಕು. ಮದುವೆ ಗಂಡು, ಆತನ ಸಮಸ್ತ ಬಂಧು ಬಳಗ-ಎಲ್ಲರನ್ನೂ ಚೆನ್ನಾಗಿ ನಡೆಸಿಕೊಳ್ಳಬೇಕು. ಅವರು ಇಚ್ಛಿಸಿದ ಸಂಪ್ರದಾಯಗಳನ್ನು ‘ಚಾಚು’ ತಪ್ಪದೆ ನೆರವೇರಿಸಬೇಕು. ಮುಖ್ಯವಾಗಿ ಮದುವೆಯುದ್ದಕ್ಕೂ ನಾವು humble ಆಗಿರಬೇಕು. “ಆಯ್ತು, ಅದೇನು ಸಂಪ್ರದಾಯವಿದೆಯೋ ಅದೇ ರೀತಿ ಮಾಡೋಣ. ಏನು ನಿರೀಕ್ಷೆ ಇದೆಯೋ ಅದನ್ನು ನೆರವೇರಿಸೋಣ ಎಂಬ ನಿರ್ಧಾರಕ್ಕೆ ಬಂದಿದ್ದೆ. ಅದು ನನ್ನ ಪಾಲಿಗೆ ಹೊಸ ಅನುಭವ. ನಾನು ಲಲಿತಳನ್ನು ಮದುವೆಯಾದೆನಲ್ಲ ಅದೇ ಕೊನೆ. ಆ ನಂತರ ನಮ್ಮ ಮನೆಯಲ್ಲಿ ಒಂದೇ ಒಂದು ಮದುವೆ ಆಗಿರಲಿಲ್ಲ. ನಮ್ಮ ಮನೆಯಲ್ಲಿ ಮೊದಲ ಹೆಣ್ಣು ಮಗು ಹುಟ್ಟಿದ್ದು, ಅದು ನನ್ನ ಪಾಲಿಗೆ ಅತಿದೊಡ್ಡ ಸಂಭ್ರಮ. ಏಕೆಂದರೆ, ಅರವತ್ತು ವರ್ಷಗಳ ನಂತರ ನಮ್ಮ ಮನೆಯಲ್ಲಿ ಹೆಣ್ಣು ಮಗು ಹುಟ್ಟಿತ್ತು. ಚೇತನಾ ಅಂತ ಅವಳಿಗೆ ಹೆಸರಿಟ್ಟೆ. ನಂತರ ಭಾವನಾ ಹುಟ್ಟಿದಳು. ಕೊನೆಯ ಬಾರಿಗೆ ಲಲಿತೆ ಆಸ್ಪತ್ರೆಯ ಹೆರಿಗೆ ಕೋಣೆಗೆ ಹೊರಟಾಗ, “ಮೂರನೇದೂ ಹೆಣ್ಣು ಮಗುವೇ ಆಗಲಿ ಅಂದಿದ್ದೆ. ಲಲಿತೆ ಕೂಡ ಗಂಡೇ ಆಗಬೇಕು ಅಂತ ಹಟ ಹಿಡಿದಿರಲಿಲ್ಲ. ಆದರೆ, ಕರ್ಣ ಹುಟ್ಟಿದ. ರವಿ ಬೆಳಗೆರೆ ಸಾಫ್ಟ್‌ಕಾರ್ನರ್ ಅವರ ಹೆಸರುಗಳನ್ನು ಒಂದರ ಕೆಳಗೊಂದರಂತೆ ಬರೀರಿ! ಅವರು ಮಹ್ಮದ್ ರಫಿ. ಅಂಥ ಮೋಹಕ, ಆತ್ಮೀಯ ಸ್ವರವನ್ನು ನಾನು ಮತ್ತೊಬ್ಬರಲ್ಲಿ ನೋಡಲಿಲ್ಲ. ಅವರೊಂದು ಭಜನ್ ಹಾಡಿದ್ದಾರೆ. ಶುದ್ಧ ಹಿಂದೂ ಸಂಸ್ಕೃತಿಯ ಭಜನ್ ಅದು. “ಮನ್ ತಡಪತ್ ಹರಿದರುಶನ್‌ಕೋ ಆಜ್... ಅಂತ ಶುರುವಾಗುವ ಹರಿಕೀರ್ತನ ಗೀತೆಯದು. ಅದರ ಸ್ವರ ಸಂಯೋಜಕರು ಹಿಂದಿ ಚಿತ್ರರಂಗದ ಸಾಮ್ರಾಟ್ ನೌಷಾದ್ ಸಾಹೇಬರು. ‘ಬೈಜೂ ಬಾವರಾ’ ಸಿನೆಮಾಕ್ಕೆ ಸಂಭಾಷಣೆ ಬರೆದವರು, ಜಿಯಾ ಸರ್‌ಹದಿ. ಹಾಡುಗಳನ್ನು ಬರೆದವರು ಶಕೀಲ್ ಬದಾಯುನಿ. ಚಿತ್ರದ ನಾಯಕಿ ಮೀನಾ ಕುಮಾರಿ. ಚಿತ್ರಕ್ಕೆ ನೌಷಾದ್ ಸಾಹೇಬರು ಸಂಗೀತ ಸಂಯೋಜಕರು ಅಂದೆನಲ್ಲ ಹಾಡಿಗೆ ಬೇಕಾದ ಆರ್ಕೆಸ್ಟ್ರಾದ ಸಂಯೋಜನೆ ಮಾಡಿದ್ದು ಇನ್ನೂ ರಫಿಯವರು. ಇಷ್ಟಕ್ಕೂ ಆ ಚಿತ್ರ ಅಕ್ಬರನ ಆಪ್ತ ಸಂಗೀರಕಾರ ತಾನ್‌ಸೇನ್ ಸುತ್ತಮುತ್ತ ಹೆಣೆದಂತಹುದು. ಮೀನಾಕುಮಾರಿ ಚಿಕ್ಕವಳಾಗಿದ್ದಾಗಿನ ಪಾತ್ರ ಒಂದಿದೆ. ಅದನ್ನು ಸಂಭಾಳಿಸಿದ್ದು ಬೇಬಿ ತಬಸ್ಸುಮ್. ನಾನು ಹೇಳಿದ ಹಾಡಿದೆಯಲ್ಲ ಅದನ್ನು ರಫಿ ಸಾಹೇಬರು ಹಾಡಿದ್ದಾರೆ. ಆ ಸಿನೆಮಾದ ಅನೇಕ ಹಾಡುಗಳಿಗೆ ದನಿ ನೀಡಿದವರು ಉಸ್ತಾದ್ ಅಮೀರ್ ಖಾನ್. ಅಂದಹಾಗೆ, ಮೀನಾಕುಮಾರಿಯ ಅಸಲು ಹೆಸರು ಮಹಜಬೀನ್ ಬಾನೂ. ರವಿ ಬೆಳಗೆರೆ ಬಾಟಮ್ ಐಟಮ್ ಜಗತ್ತು ರೂಪುಗೊಂಡಿರುವುದೇ ಒಳ್ಳೆಯ ಮತ್ತು ಕೆಟ್ಟ ನಿರ್ಧಾರಗಳಿಂದ ‘ಇರೋ ವಿಷ್ಯಾನ ಹೇಳಿದ್ದೀನಿ. ನಿರ್ಧಾರ ನಿಮಗೆ ಬಿಟ್ಟಿದ್ದು’. ಹಿರಿಯನಂತೆ ಕಾಣಿಸುವ ಪಾತ್ರಧಾರಿ ತನ್ನಷ್ಟೇ ವಯಸ್ಸಾದ ಇನ್ನೊಂದು ಪಾತ್ರಕ್ಕೆ ಹೇಳುತ್ತದೆ. ಈಗೊಂದು ಕ್ಲೋಸ್ ಅಪ್ ಶಾಟ್, ಇನ್ನೊಂದು ಪಾತ್ರಧಾರಿಯ ಮುಖವಷ್ಟೇ ತೆರೆಯ ಮೇಲೆ ಕಾಣುತ್ತದೆ, ಅಲ್ಲೇನೋ ಗೊಂದಲ, ಅನಿಶ್ಚಿತತೆ. ಆತ ಏನು ನಿರ್ಧಾರ ತೆಗೆದುಕೊಳ್ಳುತ್ತಾನೋ ಎಂದು ನೋಡುಗ ಆತಂಕಕ್ಕೀಡಾಗುತ್ತಾನೆ. ಅಷ್ಟೊತ್ತಿಗೆ ಆ ಮುಖ ಫ್ರೀಝ್ ಆಗುತ್ತದೆ. ಆವತ್ತಿನ ಎಪಿಸೋಡು ಮುಗಿದೇ ಹೋಯಿತು. ಆ ಪಾತ್ರದ ನಿರ್ಧಾರ ಏನು ಎಂದು ತಿಳಿದುಕೊಳ್ಳುವುದಕ್ಕೆ ನೀವು ನಾಳೆಯ ಎಪಿಸೋಡು ನೋಡಲೇಬೇಕು. ತಮಾಷೆಯೆಂದರೆ ಆತ ನಾಳೆಯೂ ಏನೂ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಅದನ್ನು ನಾಡಿದ್ದಿಗೆ ಮುಂದೂಡುತ್ತಾನೆ. ರವಿ ಬೆಳಗೆರೆ ಹಲೋ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟ ಐವರನ್ನೂ ಫಿನಿಷ್ ಮಾಡಿದರು ಮೋದಿ ಅವತ್ತು ಹಿರಿಯ ನಾಯಕ ರಾಮಕೃಷ್ಣ ಹೆಗಡೆ ಅವರನ್ನು ಜನತಾ ದಳದಿಂದ ಉಚ್ಚಾಟಿಸಲಾಗಿತ್ತು. ಆ ಸಂದರ್ಭದಲ್ಲಿ ಇದೇ ಬೆಂಗಳೂರಿನ ಕ್ರೆಸೆಂಟ್ ರಸ್ತೆಯ ಬಳಿ ಹೆಗಡೆ ಬೆಂಬಲಿಗರ ಸಭೆ. ಈ ಸಭೆಯಲ್ಲಿ ಭಾಗವಹಿಸಿದ್ದ ಹೆಗಡೆ ಅವರ ಆಪ್ತ ಅಬ್ದುಲ್ ಸಮದ್ ಸಿದ್ಧಿಕಿ ನೇರವಾಗಿ ಒಂದು ಮಾತು ಹೇಳಿದರು. ದೇವೆಗೌಡರು ಪ್ರಧಾನಿಯಾಗುತ್ತಿದ್ದಂತೆಯೇ ತಮ್ಮ ಶತ್ರುಗಳನ್ನು ಆರಿಸಿ, ಆರಿಸಿ ಹೊಡೆಯುತ್ತಿದ್ದಾರೆ. ಇದಕ್ಕಾಗಿ ಅವರು ತಕ್ಕ ಫಲ ಉಣ್ಣುತ್ತಾರೆ. ಮುಂದೆ ಸಿದ್ಧಿಕಿ ಅವರು ಹೇಳಿದ ಮಾತು ನಿಜವಾಯಿತು. ಜನತಾ ದಳ ಒಡೆದು ಇಬ್ಭಾಗವಾಯಿತು. ಒಂದು ಕಡೆ ಹೆಗಡೆ, ಪಟೇಲರಂತಹವರಿದ್ದ ಸಂಯುಕ್ತ ಜನತಾ ದಳ, ಮತ್ತೊಂದು ಕಡೆ ದೇವೆಗೌಡ, ಸಿದ್ದರಾಮಯ್ಯನವರಿದ್ದ ಜಾತ್ಯತೀತ ಜನತಾ ದಳ. ಆನಂತರದ್ದು ಇತಿಹಾಸ. 1994ರ ಚುನಾವಣೆಯ ನಂತರ ಜನತಾ ಪರಿವಾರ ಸ್ವತಂತ್ರವಾಗಿ ಎಂದೂ ಅಧಿಕಾರ ಹಿಡಿಯಲಿಲ್ಲ. 2004ರಲ್ಲಿ ಪರಿವಾರದ ಒಂದು ತುಂಡಾದ ಜಾತ್ಯತೀತ ಜನತಾ ದಳ ಅಧಿಕಾರದ ಚುಕ್ಕಾಣಿ ಹಿಡಿಯಿತಾದರೂ, ಕಾಂಗ್ರೆಸ್ ಜೊತೆಗೂಡಿ ಅಧಿಕಾರ ಹಿಡಿಯಿತು. ರವಿ ಬೆಳಗೆರೆ ಮುಖಪುಟ ವರದಿ ಮಾರ್ಕೆಟ್ ದೇವಿ ಎಂಬ ಶಾಸಕನ ರೌಡಿ ಪಡೆಯ ಗಾಂಚಲಿ! ಚಿಕ್ಕಪೇಟೆ ಶಾಸಕ ಆರ್.ವಿ.ದೇವರಾಜ್ ಅಲಿಯಾಸ್ ಮಾರ್ಕೆಟ್ ದೇವಿಯ ಶಿಷ್ಯ ಮಂಡಿ ದಿನೇಶ ಮೊನ್ನೆ ಮಾಡಬಾರದ ಅನಾಹುತವೊಂದನ್ನು ಮಾಡಿದ್ದಾನೆ. ಕುಡಿದ ಅಮಲಿನಲ್ಲಿ ಥೇಟ್ ಸಿನೆಮಾ ಶೈಲಿಯಲ್ಲಿ ಅಮಾಯಕ ಹೆಣ್ಣು ಮಗಳೊಬ್ಬಳ ಕುತ್ತಿಗೆಗೆ ಕೈ ಹಾಕಿ ಏಯ್! ನಿನ್ನಮ್ಮನ್! ಅನ್ನುತ್ತಿದ್ದರೆ...ಅಲ್ಲೆ ನಿಂತಿದ್ದ ಒಂದಷ್ಟು ಯುವಕರು ಹೆಣ್ಣು ಮಗಳ ಸಹಾಯಕ್ಕೆ ಧಾವಿಸಿ ಓಡೋಡಿ ಬಂದು ಮಾರ್ಕೆಟ್ ದೇವಿಯ ಶಿಷ್ಯ ಮಂಡಿ ದಿನೇಶನ ಹೆಣ ಹಾಕುವಂತೆ ಬಡಿದು ಸೆಂಟ್ರಲ್ ಪೊಲೀಸ್ ಠಾಣೆಗೆ ಗದುಮಿದ್ದಾರೆ. ಕೇಸು ಹೆಟ್ಟಿ ಜೈಲಿಗೆ ಗದುಮಬೇಕಿದ್ದ ಚಾಮರಾಜಪೇಟೆಯ ಸೆಂಟ್ರಲ್ ಠಾಣಾ ಪೊಲೀಸರು ಅದೇನು ಕಡುಬು ತಿಂದರೋ ಏನು ಕತೆಯೋ ಮಂಡಿ ದಿನೇಶನನ್ನು ಕರೆದೊಯ್ದು ಮನೆಯಲ್ಲಿ ಮಲಗಿಸೋದೆ ಕೂಡಲೇ ಬೆಂಗಳೂರು ಪೊಲೀಸ್ ಕಮೀಶನರ್ ಎಂ.ಎನ್‌.ರೆಡ್ಡಿಯವರು ಸೆಂಟ್ರಲ್ ಠಾಣೆಯ ಪೊಲೀಸರನ್ನು ಕರೆದು ಸಣ್ಣಗೆ ಗದರಿದರೂ ಸಾಕು ಮಂಡಿ ದಿನೇಶನ ರಾತ್ರಿ ರಾದ್ಧಾಂತ ಹೊರಗೆ ಬೀಳದಿದ್ದರೆ ಕೇಳಿ! ಲೋಕೇಶ್ ಕೊಪ್ಪದ್ ರಾಜಕೀಯ ಮುಖ್ಯ ಮಂತ್ರಿ ಹುದ್ದೆಗೆ ಗುನ್ನ ಸಿದ್ದು ಐಡಿಯಾ ಭಲೇ ಚೆನ್ನ! ಮಂತ್ರಿ ಮಂಡಲ ಪುನರ್ರಚನೆ ಮಾಡಿ ಬಲಿಷ್ಠರನ್ನು ಸಂಪುಟಕ್ಕೆ ಹಾಕಿಕೊಂಡರೂ ಇವರ‍್ಯಾರೂ ಟೈಮು ಉಲ್ಟಾ ಆದರೆ ನೆರವಿಗೆ ಬರಲು ಸಾಧ್ಯವಿಲ್ಲ ಎಂಬುದೂ ಅವರಿಗೆ ಗೊತ್ತಿದೆ. ಹೀಗಾಗಿ ಇವರಿಗಾಗಿ ನನ್ನ ಕುರ್ಚಿಯೇಕೆ ರಿಸ್ಕಿಗೆ ಸಿಲುಕಬೇಕು ಎಂಬ ಲೆಕ್ಕಾಚಾರಕ್ಕೆ ಬಂದಿರುವ ಸಿದ್ದರಾಮಯ್ಯ, ಮೊನ್ನೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಜತೆ ಮಾತನಾಡಿ, ಮೊದಲು ಇನ್ನೊಂದು ರೌಂಡು ನಿಗಮ ಮಂಡಳಿಗಳ ನೇಮಕಾತಿ ಪ್ರಕ್ರಿಯೆ ಮುಗಿಯಲಿ ಡಾಕ್ಟರೇ ಎಂದಿದ್ದಾರೆ. ಹೀಗಾಗಿ ಇನ್ನು ಈ ನಿಗಮ ಮಂಡಳಿಗಳ ನೇಮಕಾತಿ ಪ್ರಕ್ರಿಯೆ ಸದ್ಯಕ್ಕೆ ನಿರಂತರ. ಈ ಪಟ್ಟಿಯನ್ನು ಆಷಾಡದಲ್ಲಿ ರೆಡಿ ಮಾಡುವುದು ಬೇಡ ಎಂದು ಹಲವು ಮಂದಿ ಆಕಾಂಕ್ಷಿಗಳೇ ಹೇಳತೊಡಗಿದ್ದಾರೆ. ಆರ್.ಟಿ.ವಿಠ್ಠಲಮೂರ್ತಿ ವರದಿ ಕಾಗೋಡು ತಿಮ್ಮಪ್ಪ ಈಗ ಯಡ್ಡಿಗೆ ಕ್ಲೋಜ್ ಫ್ರೆಂಡ್! ಇಳಿ ವಯಸ್ಸಿನಲ್ಲಿ ಸಚಿವ ಸ್ಥಾನಕ್ಕಿಂತ ಸ್ಪೀಕರ್ ಹುದ್ದೆಯೇ ಕಾಗೋಡು ತಿಮ್ಮಪ್ಪನವರಿಗೆ ತಕ್ಕುದಾಗಿತ್ತು. ಆದರೆ ಅಧಿಕಾರದ ಆಸೆ ಎಲ್ಲಿ ಹೋಗಬೇಕು. ಅದು ಒಂದು ಚಟ. ಸಂಪುಟ ವಿಸ್ತರಣೆಯ ಚರ್ಚೆ ನಡೆದಾಗಲೆಲ್ಲ ಕಾಗೋಡು ತಿಮ್ಮಪ್ಪನವರ ಹೆಸರೂ ನುಸುಳಿಕೊಂಡು ಅವರಿಗೆ ಆಸೆ ಚಿಗುರುತ್ತಿತ್ತಲ್ಲ ಪರಿಣಾಮ ಸ್ಪೀಕರ್ ಸ್ಥಾನದಲ್ಲಿದ್ದೇ ಸರ್ಕಾರವನ್ನು ಟೀಕಿಸುತ್ತ ತಮಗೆ ಮಂತ್ರಿಯಾಗುವ ಆಸೆಯಿದೆ ಎಂಬುದರ ಇಂಗಿತ ವ್ಯಕ್ತಪಡಿಸುತ್ತಿದ್ದರು ಕಾಗೋಡು ತಿಮ್ಮಪ್ಪ. ಮತ್ತೆ ಸಂಪುಟ ವಿಸ್ತರಣೆಯ ಚರ್ಚೆ ಶುರುವಾಯಿತಲ್ಲ. ಮತ್ತೆ ಕಾಗೋಡು ಸರ್ಕಾರವನ್ನು ಟೀಕಿಸತೊಡಗಿದ್ದಾರೆ. ಅಷ್ಟೇ ಅಲ್ಲದೆ ಮುಂದುವರೆದು ವಿರೋಧ ಪಕ್ಷದ ಬಿ.ಎಸ್.ಯಡಿಯೂರಪ್ಪನವರನ್ನು ಯದ್ವಾತದ್ವ ಹೊಗಳತೊಡಗಿದ್ದಾರೆ. ಶೃಂಗೇಶ್ ವರದಿ ಸಿರುಗುಪ್ಪೆ ಶಾಸಕ ಒಂದೂವರೆ ಕೋಟಿ ಕಳೆದ ಕಥೆ ಈ ಹೆಸರು ಕೇಳಿದರೆ ಸಾಕು ಒಂದು ಕಾಲದಲ್ಲಿ ಸಿರಗುಪ್ಪಕ್ಕೆ ಸಿರಗುಪ್ಪವೇ ಥರಗುಡುತ್ತಿತ್ತು. ಬೊಂಬಾಯಿ ಮಾರೆಪ್ಪ ಅಲಿಯಾಸ್ ಬಾಂಬೆ ಮಾರೆಪ್ಪ 1980ರಲ್ಲಿ ಬಾಂಬೆಯಿಂದ ಸಿರಗುಪ್ಪಕ್ಕೆ ವಲಸೆ ಬಂದ ಅಂತ ಕೆಲವರು ಹೇಳಿದರೆ, ಇನ್ನೂ ಕೆಲವರು ಈತ ಸಿರಗುಪ್ಪದಿಂದ ಮುಂಬೈಗೆ ದುಡಿಯುವುದಕ್ಕೆ ಅಂತ ಹೋದ ಅಂತಾರೆ. ಇದರಿಂದಾಗಿ ಈತನ ಹೆಸರಿನ ಹಿಂದೆ ಬಾಂಬೆ ಸೇರಿಕೊಂಡಿತು. ಅದೇನೆ ಇರಲಿ, ಸದರಿ ಮಾರೆಪ್ಪ ಸಿರಗುಪ್ಪಕ್ಕೆ ಬರುವಾಗ ಕೈಯ್ಯಲ್ಲಿ ಮಟ್ಕಾ ಪಟ್ಟಿಯನ್ನ ಹಿಡಿದುಕೊಂಡೇ ಬಂದಿದ್ದ. ಮುಂಬೈನಂತಹ ಮೆಗಾಸಿಟಿಯ ಅನಿಷ್ಟಗಳನ್ನ ಜೊತೆಯಲ್ಲಿಯೇ ಹೊತ್ತು ತಂದಿದ್ದ. ಹೀಗಾಗಿ ಈತ ಮಟ್ಕಾ ಮಾರೆಪ್ಪ ಅಂತಲೂ ಫೇಮಸ್ ಆದ. ವರದಿಗಾರ ವರದಿ ಹಾವೇರಿ ಸುತ್ತಮುತ್ತಲ ಹುಡುಗೀರೇಕೆ ಓಡಿ ಹೋಗ್ತಾರೆ ಮೇ 6, 2015ನೇ ದಿವಸ. ಪರೀಕ್ಷೆಯ ಕೊನೆ ದಿನ. ಪರೀಕ್ಷೆ ಮುಗಿಸಿ ಮನೆಗೆ ಬಂದ ಪೂಜಾ, ಫ್ರೆಂಡ್ ಮನೆಗೆ ಹೋಗುತ್ತಿದ್ದೇನೆ ಅಂತ ತಮ್ಮ ಚೇತನ್‌ಗೆ ಹೇಳಿ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಹೊರಟಿದ್ದಾಳೆ. ನೋಟ್ಸ್ ಕೊಟ್ಟು ಬರುತ್ತೇನೆ ಅಂತ ಹೋದವಳು ಎಷ್ಟು ಹೊತ್ತಾದರೂ ಬಾರದೆ ಇದ್ದಾಗ ತಮ್ಮ ಚೇತನ್ ಪೂಜಾಳ ಫ್ರೆಂಡ್ಸ್ ಗೆ ಫೋನ್ ಮಾಡಿ ವಿಚಾರಿಸಿದ್ದಾನೆ. ಆದರೆ ಆಕೆ ಬಂದೇ ಇಲ್ಲ ಅಂತ ಪೂಜಾಳ ಫ್ರೆಂಡ್ ಹೇಳಿದಾಗ ಕಂಗಾಲಾಗಿ ಹೋಗಿದ್ದಾನೆ. ಕೂಡಲೇ ತಂದೆ ತಾಯಿ, ಬಾವನಿಗೆ ವಿಷಯ ಮುಟ್ಟಿಸಿದ್ದಾನೆ. ತಡಮಾಡದೆ ಶಿಗ್ಗಾಂವಿಯಿಂದ ಬಂದ ಪೂಜಾಳ ತಂದೆ, ತಾಯಿ ಮತ್ತು ಪತಿ ಎಲ್ಲ ಕಡೆ ಹುಡುಕಿದ್ದಾರೆ. ಆದರೆ ಆಕೆ ಎಲ್ಲೂ ಸಿಗದಿದ್ದಾಗ ಆರನೇ ತಾರೀಖು ಗದಗದ ಶಹರ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಎಂ.ಶಿರಸಂಗಿ ವರದಿ ಹೊಸಪೇಟೆ ಮೇಡಮ್ಮು ಕಂಡೋರಿಗೆ ಟೀಸಿ ಕೊಡ್ತಾಳೆ! ಹೆಸರು ಪದ್ಮಾವತಿ. ಶಾಲೆಗೆ ಮುಖ್ಯಶಿಕ್ಷಕಿ. ಆದರೆ ಇದೀಗ ಆಕೆಯನ್ನು ‘ನಕಲಿ ಟೀಸಿ’ ಶಿಕ್ಷಕಿ ಅಂತಲೇ ಗುರುತಿಸಬೇಕಿದೆ. ಶಾಲೆಯ ಕಡೆ ಮುಖ ಮಾಡದೇ ಇರುವವರಿಗೂ ಈಕೆ ಟಿ.ಸಿ. ಟ್ರಾನ್ಸ್‌ಫರ್ ಸರ್ಟಿಫಿಕೇಟ್ ಸಿದ್ಧಪಡಿಸಿ ಕೊಡುತ್ತಾಳೆ. ಅದಕ್ಕೆ ಪ್ರತಿಯಾಗಿ ಸಾವಿರಾರು ರುಪಾಯಿ ನುಂಗುತ್ತಾಳೆ. ಈ ಪ್ರಕರಣದ ಬಗ್ಗೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರರವರೇ ನೇರವಾಗಿ ಉತ್ತರಿಸಬೇಕಿದೆ. ಈ ‘ ನಕಲಿ ಟೀಸಿ’ ಶಿಕ್ಷಕಿಯ ವೃತ್ತಾಂತ ಅರಿತು ರಾಜ್ಯಾದ್ಯಂತ ಬೇರು ಬಿಟ್ಟಿರುವ ಇಂತಹ ನಕಲಿ ಟಿ.ಸಿ. ಜಾಲವನ್ನು ಭೇದಿಸಬೇಕಾದ ಅಗತ್ಯ ಕಿಮ್ಮನೆಯವರಿಗಿದೆ. ಸತೀಶ್ ಬಿಲ್ಲಾಡಿ ನೇವಿ ಕಾಲಂ ನಮ್ಮ ಬೆನ್ನಿಗೆ ಗೊತ್ತಿರುವ ಸತ್ಯ ಮತ್ತು ಕತೆ ನಿತ್ಯ ಅವನು ಮದುವೆಯಾದ. ಮದುವೆಗೆ ಮಕ್ಕಳಾದವು-ಒಂದು, ಎರಡು ಅಥವಾ ಮೂರು. ಅವನಿಗಿಂತ ಅವಳು ಹತ್ತು ವರ್ಷ ಚಿಕ್ಕವಳು. ಅವನ ಆಸೆಯ ಕಡಲು ಬತ್ತುವಾಗ ಅವಳು ಆಸೆಯ ಊಟೆಯಂತೆ ಪ್ರವಹಿಸುತ್ತಿದ್ದಳು. ಪ್ರೀತಿಗೆ ಮಕ್ಕಳಾದವೋ, ಕಾಮಕ್ಕೆ ಮಕ್ಕಳಾದವೋ ಅವಳು ಪ್ರತಿ ವರ್ಷ ಒಂದೊಂದು ಮಗುವನ್ನು ಮಡಿಲಲ್ಲಿ ಹೊರುತ್ತಿದ್ದಳು, ಉಳಿದ ಮಕ್ಕಳು ಆ ಹೆರಿಗೆಯನ್ನು ತಮ್ಮ ಪ್ರೀತಿಯಿಂದ, ಮಕ್ಕಳಾಟದಿಂದ, ಕಾಟದಿಂದ ಸುತ್ತುವರಿಯುತ್ತಿದ್ದವು. ಅವನು ಕೆಲಸಕ್ಕಾಗಿ ಮನೆ ಹೊರಗೇ ಇರುತ್ತಿದ್ದವನು ರಾತ್ರಿ ಎಷ್ಟು ಹೊತ್ತಿಗೋ ಬರುತ್ತಿದ್ದ, ಅದರ ಹೊರತಾಗಿ ತಾಯಿ ಮತ್ತು ತಂದೆ ಎದುರುಬದರಾದದ್ದನ್ನು ಮಕ್ಕಳಲ್ಲಾರೂ ನೋಡಿರಲಿಲ್ಲ. ನೇವಿ ಜಾನಕಿ ಕಾಲಂ ನಡುವಯಸ್ಸಿನಲ್ಲಿ ಹೀಗೆಲ್ಲ ಪ್ರೇಮ ಸುಳಿದಾಡಿದರೆ... ಭಾನುವಾರ ಆಫೀಸಿಗೆ ರಜೆ. ಎಂದಿಗಿಂತ ತಡವಾಗಿ ಏಳಬೇಕು ಅಂದುಕೊಂಡರೂ ಬೇಗ ಎಚ್ಚರಾಗಿಬಿಡುತ್ತದೆ. ಮನೆ ಹಿಂದಿನ ಸಂಪಿಗೆ ಮರಕ್ಕೆ ಅದೆಲ್ಲಿಂದಲೋ ಬಂದು ಕೂರುವ ಕೋಗಿಲೆಯೊಂದು ಒಂದೇ ಸಮನೇ ಕೂಗತೊಡಗುತ್ತದೆ. ಮನೆ ಮುಂದಿನ ಬೀದಿಯಲ್ಲಿ ಅದ್ಯಾರೋ ಚಪ್ಪಲಿ ರಿಪೇರಿ, ಕತ್ತರಿ ಸಾಣೆ, ಟೊಮ್ಯಾಟೋ ಅಂತ ಕೂಗುತ್ತಾ ಸುಮ್ಮಸುಮ್ಮನೆ ಅಡ್ಡಾಡುತ್ತಾರೆ. ಭಾನುವಾರದ ಬೆಳಗಿನ ನಿದ್ದೆ ಹೀಗೆ ಸಮಷ್ಟಿಗೆ ಬಲಿಯಾಗುತ್ತದೆ. ಆವತ್ತು ಬೆಳಗ್ಗೆಯೂ ಅದೇ ಆಯಿತು. ಕೋಗಿಲೆಯ ಕೂಗಿಗೆ ಎಚ್ಚರವಾಯಿತು. ಎದ್ದು ಹೋಗಿ ಆ ಕೋಗಿಲೆಯನ್ನು ಹೆದರಿಸಿ ಓಡಿಸುವ ಆಸೆಯಾಯಿತು. ದೀಪಾವಳಿಗೆಂದು ತಂದಿಟ್ಟ ಪಟಾಕಿ ಮನೆಯಲ್ಲಿದ್ದದ್ದರಿಂದ ಒಂದು ಪಟಾಕಿ ಸಿಡಿಸಿ, ಅದನ್ನು ಓಡಿಸಬಹುದು ಎನ್ನುವ ಕೆಟ್ಟ ಯೋಚನೆಯೂ ಬಂತು. ಅದನ್ನಿನ್ನೇನು ಕಾರ್ಯರೂಪಕ್ಕೆ ತರುವಷ್ಟರಲ್ಲಿ, ಒಂದು ವಿಕಾರವಾದ, ಅಪರಿಚಿತ ಸ್ವರ ಕಿವಿಗೆ ಬಿದ್ದು, ನಿದ್ದೆ ಮಾಡುವ ಉತ್ಸಾಹವೇ ಹೊರಟುಹೋಯಿತು. ಜಾನಕಿ ಅಂಕಣ : ಒಲಿದಂತೆ ಹಾಡುವೆ ಅವಳ ಹುಬ್ಬಿನ ಗಂಟೇ ಚೆಂದವೊ! ಯಥಾಪ್ರಕಾರ ಬಸ್ಸಲ್ಲಿ ವೈಶಾಖದ ಅಂದರೆ ಮದುವೆ ಸೀಸನ್ನಿನ ಗೌಜು ಗದ್ದಲ. ಅಲ್ಲಲ್ಲಿ ಮನೆಯ ಕಟ್ಟುಪಾಡುಗಳಿಂದ ಹೊರ ಬಂದ ಹೊಸ ಮದುಮಕ್ಕಳು. ಇಬ್ಬರ ಕಡೆಯಿಂದಲೂ ಯಾವ ಬಾಲಂಗೋಚಿಗಳಿಲ್ಲದೆ ಮೊದಲ ಬಾರಿಗೆ ಸ್ವಚ್ಛಂದ ಗಾಳಿ ಬೆಳಕನ್ನು ಅನುಭವಿಸುತ್ತಿರುವ ಜೋಡಿಗಳು. ಹೊರಗೆ ಹನಿಯುತ್ತಿರುವ ಮಳೆ. ಇಷ್ಟು ರಷ್ ಇದ್ದರೂ ಮುಂದೆಲ್ಲಾದರೂ ಸೀಟ್ ಇದ್ದರೂ ಇರಬಹುದೇನೋ ಎಂದು ಕಣ್ಣುಗಳು ಚುರುಕಾಗಿ ಅಡ್ಡಾಡುತ್ತಿದ್ದಾಗ ಹಠಾತ್ತಾಗಿ ದೃಷ್ಟಿಗೆ ಬಿದ್ದವಳು ಅವಳು. ಎಂಥ ಅಪೂರ್ವ ಚೆಲುವೆ! ಆದರೆ ಅದೇಕೆ ಹಾಗೆ ಹುಬ್ಬು ಗಂಟಿಕ್ಕಿಕೊಂಡು ಕುಳಿತಿದ್ದಾಳೆ ಹೊರಗೆ ಸುರಿಯುತ್ತಿರುವ ಮಳೆಯನ್ನು ಕಂಡಾಗಲೂ ಹುಬ್ಬು ಸಡಿಲಿಸಬಾರದೆ ಆದರೂ ಅದೇನೋ ಆಕೆಯನ್ನ ನೋಡುತ್ತಿರುವಾಗ ಗಂಟಿಕ್ಕಿದ ಹುಬ್ಬಿನಿಂದಾಗಿಯೇ ಅವಳ ಮುಖಕ್ಕೆ ವಿಚಿತ್ರ ಕಾಂತಿ ಬಂದಿದೆ ಅನ್ನಿಸಿತು. ಮತ್ತೆ ಮತ್ತೆ ನೋಡಿದೆ. ಹುಬ್ಬು ಗಂಟಿಕ್ಕಿದ್ದರೂ ಅವಳ ಮುಖದಲ್ಲಿ ಕೋಪ ತಾಪಗಳಾಗಲೀ, ಅಸಹನೆಯ ಕುದಿಯಾಗಲೀ, ವಿಷಾದದ ಛಾಯೆಯಾಗಲೀ ಇರಲಿಲ್ಲ. ಗಂಟಿಕ್ಕಿದ ಹುಬ್ಬುಗಳೇ ಆಕೆಯ ಮುಖಕ್ಕೆ, ಇಡಿಯಾಗಿ ಆಕೆಯ ವ್ಯಕ್ತಿತ್ವಕ್ಕೆ ವಿಶಿಷ್ಟ ಶೋಭೆ ನೀಡಿತ್ತು. ಚಂದ್ರಶೇಖರ ಆಲೂರು ಅಂಕಣ : ಆಕಾಶಬುಟ್ಟಿ ಹೆಂಗಸರೇ ಕಾರ್ ಡ್ರೈವ್ ಮಾಡಿ ನೋಡಿ ಮದುವೆಯಾಗಿ ಮಕ್ಕಳಾಗಿ ಮಾಡುತ್ತಿರುವ ನೌಕರಿಯಲ್ಲಿ ಒಂದಷ್ಟು ಸರ್ವೀಸ್ ಆಗಿ ವಯಸ್ಸು ಮೂವತ್ತೈದಾಗಿ ಅಡಸಾ ಬಡಸ ದಪ್ಪಗಾಗಿ, ತೂಕ ಇಳಿಸುವ ಪ್ರಯತ್ನಗಳಲ್ಲಿ ಬೆವೆಯುತ್ತಾ-ನಂದೂ ಒಂದ್ ಲೈಫಾ ಅಂತ ಆಗಾಗ ತಲೆ ಚಚ್ಚಿಕೊಳ್ಳುತ್ತಾ ಅಂತೂ ಲೈಫ್ ಒಂದು ಲೆವೆಲ್ಲಿಗೆ ಸೆಟಲ್ ಆಯಿತು. ಆಗ ಕಾಡತೊಡಗಿತು ಏಕತಾನತೆ. ಅದೇ ಕೆಲಸ. ಅದೇ ಊಟ ತಿಂಡಿ, ಮಕ್ಕಳು, ಹೋಂ ವರ್ಕು, ಬೊಜ್ಜು-ಇಷ್ಟೇನಾ ಜೀವನ. ಈ ಗಾಣದಲ್ಲಿ ದಿನನಿತ್ಯ ಸುತ್ತುವುದಕ್ಕೆ ಇಷ್ಟೊಂದು ಸ್ಪೀಡಾಗಿ ಮೂವತ್ತೈದು ವರ್ಷವಾಗಬೇಕಿತ್ತಾ ನನ್ ಮಗಂದ್! ನಾಟ್ ಮೀ. ಆಗಾಗ ಸುತ್ತಿಕೊಳ್ಳುವ ಈ ಬೇಸರ ಈ ಮೊನಾಟನಿ ನೀಗಿಕೊಳ್ಳುವ ಉಪಾಯವಾಗಿ ಕಾರು ಕಲಿತರೆ ಹೇಗೆ ಅನ್ನುವ ಐಡಿಯಾ ಬಂತು. ಬಹುತೇಕ ಹೆಂಗಸರಿಗೆ ಸ್ಟೈಲಾಗಿ ರೆಡಿಯಾಗಿ ಕಾರಿನ ಬಾಗಿಲನ್ನು ಗತ್ತಿನಿಂದ ತೆಗೆದು ಅಷ್ಟೇ ಗತ್ತಿನಿಂದ ಕಾರಿನ ಡೋರ್ ಹಾಕಿ ಗಂಡನ ಪಕ್ಕ ಕೂತು ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸುತ್ತಾ ಕೂರುವುದು ಅಭ್ಯಾಸವಾಗಿರುತ್ತದೆ. ಗಂಡ ಓಡಿಸುತ್ತಿರುವ ಅದೇ ಕಾರನ್ನು ಕೊಡಿ ನಾನು ಸ್ವಲ್ಪ ಹೊತ್ತು ಓಡಿಸುತ್ತೇನೆ ಅಂತ ಕೇಳುವ ರೂಢಿ ಹೆಂಗಸರಲ್ಲಿ ಕಡಿಮೆ. ಎಚ್.ಡಿ. ಸುನೀತಾ ಅಂಕಣ : ನೂರು ಮುಖ ಸಾವಿರ ದನಿ ವೃದ್ಧಾಶ್ರಮದಲ್ಲಿದ್ದ ತಾಯಿಯನ್ನು ಕರೆದೊಯ್ಯಲು ಒಪ್ಪಿದ ಕುಲಪುತ್ರ! ದಿನಾಂಕ 30-5-2015 ಶನಿವಾರ. ಪ್ರತಿ ರಾತ್ರಿ ಹನ್ನೆರಡರಿಂದ ನಾಲ್ಕರೊಳಗೆ ನಾನು ಮಲಗುವುದೇ ಮೂರು ತಾಸು. ಎರಡು ವಾರಗಳ ಹಿಂದೆ ರಾತ್ರಿ ಹನ್ನೆರಡಕ್ಕೆ ಯಥಾಪ್ರಕಾರ ಮಂಚದ ಮೇಲುರುಳಿದೆ. ಮಲಗಿದ ಕೂಡಲೇ ನನಗೆ ನಿದ್ದೆ ಬರುತ್ತದೆ. ಆದರೆ ಅಂದು ರಾತ್ರಿ ಎರಡು ಗಂಟೆಯಾದರೂ ನಿದ್ದೆ ಬರಲೇ ಇಲ್ಲ. ಮೊಬೈಲ್ ರಿಂಗಾಯಿತು. ನೋಡಿದೆ, ಸ್ಕ್ರೀನ್ ಮೇಲೆ ‘ಅಕ್ಕ’ ಅಂತ ಮೂಡಿ ಬಂತು. ನನಗೆ ವಿಷಯ ಏನು ಅಂತ ಖಾತ್ರಿ ಆಯಿತು. ಆನ್ ಮಾಡಿ ‘ಅಕ್ಕಾ’ ಅಂದೆ. “ರೇವಣ್ಣಾ ನಿಮ್ಮಾವ ಹೋದ್ರು ಅಂದ್ಲು ಅಕ್ಕ. “ಬರ‍್ತೀನಿ ಅಂದೆ ಅಷ್ಟೆ. ಬೆಳಿಗ್ಗೆ ಏಳೂವರೆಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟೆ. ಶಿವಮೊಗ್ಗ-ಸಾಗರ ರಸ್ತೆಯಲ್ಲಿ ಗಾಡಿಕೊಪ್ಪ ಪ್ರದೇಶದ ‘ಲಗಾನ್’ ಕಲ್ಯಾಣ ಮಂಟಪದ ಸಮೀಪ ಇರುವ ‘ಜೀವನ ಸಂಧ್ಯಾ’ ಆಶ್ರಮ ಮುಟ್ಟಿದಾಗ ಮಧ್ಯಾಹ್ನ ಹನ್ನೆರಡೂವರೆ ಆಗಿತ್ತು. ಎಂ.ವಿ. ರೇವಣಸಿದ್ದಯ್ಯ