Hi Bangalore

Complimentary Offer

  • Pay via readwhere wallet and get upto 40% extra credits on wallet recharge.
Hi Bangalore

Hi Bangalore

This is an e-magazine. Download App & Read offline on any device.

ಸೃಷ್ಟಿ 1047 : ಸಂಪುಟ 21, ಸಂಚಿಕೆ 7, ನವೆಂಬರ್ 12, 2015 ಖಾಸ್‌ಬಾತ್ ಅದೇ ಮಹಾನ್ ಯೋಧ ಅದೊಂದು ಮಧ್ಯಾಹ್ನ ನನ್ನಲ್ಲಿಗೆ ನಡೆದು ಬಂದಿದ್ದ ಕುಳಿತು ಲೆಕ್ಕ ಹಾಕುತ್ತಿದ್ದೇನೆ: ಅದು ಯಾವಾಗ ಬರುತ್ತೆ? ಅದು ತುಂಬ ಹತ್ತಿರದಲ್ಲಿರುವ ಶನಿವಾರ: seventh of November. ಅವತ್ತು ಗೆಳೆಯನ ಪುಸ್ತಕ ಬಿಡುಗಡೆ. ಮಂಜುನಾಥ್ ಚಾಂದ್ ಅಂತ ಅವನ ಹೆಸರು. ನನಗಿಂತ ವಯಸ್ಸಿನಲ್ಲಿ ಚಿಕ್ಕವನಾದರೂ ಅವನೊಂದಿಗೆ ನನ್ನದು ಬಹಳ ಅಕ್ಕರೆಯ ಒಡನಾಟ. ಅದೊಂದು ಪುಟ್ಟ gang ಇತ್ತು. ಪ್ರಕಾಶ್, ಶಾಂತಲಾ, ನಿವಿ, ಚಾಂದ್, ಜಗ್ಗ-ಹೀಗೆ. ಎಲ್ಲರೂ ಸಂಯುಕ್ತ ಕರ್ನಾಟಕದ ಚಿಲ್ಟುಗಳೇ. ಆವತ್ತಿಗಾಗಲೇ ನಾನು ಸಂ.ಕಕ್ಕೆ ಹಳಬ. ಐದು ವರ್ಷ ದಾಟಿತ್ತು ಅಲ್ಲಿನ ನನ್ನ ಸರ್ವೀಸು. ಇವರೆಲ್ಲ ಇನ್ನೂ ಆಗಷ್ಟೆ ಸೇರಿಕೊಂಡು ಕಸುಬು ಕಲಿಯುತ್ತಿದ್ದ ಅಪ್ರೆಂಟಿಸ್‌ಗಳು. “ಏನ್ರೋ, ಶಾಮರಾಯರ ಪೌಲ್ಟ್ರಿಯ ಬಿಳೀ ಕೋಳಿಮರಿಗಳೇ...?" ಅಂತ ರೇಗಿಸುತ್ತಿದ್ದೆ. ಅಲ್ಲೊಂದು ಕ್ಯಾಂಟೀನ್ ಇತ್ತು. ಅದರಲ್ಲಿ ಕೆಲಸ ಮಾಡೋ ಹುಡುಗರೊಂದಿಗೂ ನನ್ನದು ಸ್ನೇಹವೇ. ಅವರೆಲ್ಲ ಉಡುಪಿ-ಕುಂದಾಪುರದವರು. ಅವರೂ ಬೆಳ್ಳಗೇ ಇರುತ್ತಿದ್ದರು. ಆ ಕ್ಯಾಂಟೀನು ತಿನ್ನಲಿಕ್ಕೆ ಅಂಥ ಪ್ರಶಸ್ತವಾದುದಲ್ಲ. ಸಂಯುಕ್ತ ಕರ್ನಾಟಕದ ಹಿಂಬದಿಯಲ್ಲೇ ಒಂದು ಚಿಕ್ಕ ಹೊಟೇಲಿತ್ತು: ಚೀನಾದವನದು. ಅದರ ಹೆಸರು Rice Bowl ಅಂತ. ಅವನು ನೂಡಲ್ಸ್ ಚೆನ್ನಾಗಿ ಮಾಡುತ್ತಿದ್ದ. ರವಿ ಬೆಳಗೆರೆ ಸಾಫ್ಟ್‌ಕಾರ್ನರ್ ಅಕ್ಕರೆಯಿಂದ ಕರೆಯುವವಳ ಮನೆಗೆ ಹೋಗುವ ತವಕ ಮಾತಿಗೇನಂತೆ? ನಾನಾ ಥರದ ಮಾತು ಹುಟ್ಟುತ್ತವೆ. ಮೊನ್ನೆ ಲಲಿತಳಿಗೆ ಫೋನ್ ಮಾಡಿದ್ದೆ: “ಆಹಾ... ಮೇರಿ ಮೀನಾಕುಮಾರಿ: ನಿನಗಿನ್ನೂ ಇಪ್ಪತ್ತೆರಡು ವರ್ಷ ಮುಗಿದಿಲ್ಲ ಅಂದ್ಕೊಂಡಿದೀಯಾ?" ಅನ್ನುತ್ತಿದ್ದಂತೆಯೇ ಅತ್ತಲಿಂದ ಬುಗ್ಗೆ ಬುಗ್ಗೆ ನಗು. “ಗೊತ್ತಾಗ್ಲಿಲ್ಲ ಕಣ್ರೀ..." ಅಂದಳು. ಅವಳಿಗೆ ಫೋನ್ ಮಾಡಲಿಕ್ಕೂ ಮುಂಚೆ ನನ್ನ ಸ್ನೇಹಿತರೇ ಆಗಿರುವ, ಮೂಳೆ ತಜ್ಞ ಡಾ.ನಟರಾಜ್‌ರವರಿಗೆ ಫೋನ್ ಮಾಡಿದ್ದೆ. “ಮಣಿಕಟ್ಟಿನ ಮೂಳೆ ಮುರಿದಿದೆ. Simple fracture. ಆದರೆ ಒಳಗೇನೇ ರಕ್ತ ಹರಿದಿದೆ. ನಾವು internal bleeding ಅಂತೀವಿ. ಅದರಿಂದಾಗಿಯೇ ಮಣಿಕಟ್ಟಿನಲ್ಲಿ ಊತ ಕಾಣಿಸಿಕೊಂಡಿದೆ. ಅದೇನಂಥ ಸಮಸ್ಯೆಯಲ್ಲ. ಎರಡೇ ದಿನ. ಒಮ್ಮೆ ಹರಿದಿರೋ ರಕ್ತ ಸರಿ ಹೋದರೆ ಪ್ಲಾಸ್ಟರ್ ಹಾಕಿ ಬಿಡ್ತೀನಿ. ಯೋಚನೆ ಮಾಡಬೇಡಿ" ಅಂದಿದ್ದರು ಡಾ.ನಟರಾಜ್. ರವಿ ಬೆಳಗೆರೆ ಬಾಟಮ್ ಐಟಮ್ ಈ ಜಗತ್ತಿನಲ್ಲಿ ಎಲ್ಲರೂ ಸಮಾನರಲ್ಲ ನಿಜ, ಆದರೆ... ಎಲ್ಲರೂ ಸಮಾನರು. ಅದು, ಸುಮಾರು ಇಪ್ಪತ್ತು ವರ್ಷ ನಾನು ನಂಬಿಕೊಂಡಿದ್ದ ಸಿದ್ಧಾಂತ. ಅದೊಂದು ಸುಂದರ ಕಲ್ಪನೆ. ನಾವೆಲ್ಲರೂ ಮನುಷ್ಯರೇ. ನಮ್ಮೆಲ್ಲರಲ್ಲೂ ಹರಿಯುತ್ತಿರುವುದು ಅದೇ ಕೆಂಪು ನೆತ್ತರು. ಒಂದು ವರ್ಗ ಯಾರದೋ ಸುಖಕ್ಕಾಗಿ ದುಡಿಯುತ್ತಿರುತ್ತದೆ. ಇನ್ನೊಂದು ವರ್ಗದಲ್ಲಿ ಕೆಲವೇ ಜನ ಇರುತ್ತಾರೆ. ಆದರೆ ಉಳಿದವರು ದುಡಿದ ದುಡಿಮೆಯ ಫಲವನ್ನು ಕೂತು ಉಣ್ಣುತ್ತಿರುತ್ತಾರೆ. ಅವರೇ ಶೋಷಕರು. ಅಂಥ ಶೋಷಕರಿಂದ ಮುಕ್ತವಾದ ಸಮಸಮಾಜದ ನಿರ್ಮಾಣವಾಗಬೇಕು. ಹಾಗಂತ ನಾನೂ ಕನಸು ಕಂಡಿದ್ದೆ. ಕಮ್ಯುನಿಸಂ ನನ್ನ ಬದುಕಿನ ಉಸಿರಾಗಿತ್ತು. ತುಂಬ ಗಂಭೀರವಾಗಿ ಕಮ್ಯುನಿಸ್ಟ್ ಸಿದ್ಧಾಂತವನ್ನು ಓದಿಕೊಂಡೆ. ಅದರ ಟಿಸಿಲಿನಂತಹ ಮಾರ್ಕ್ಸಿಸಂ-ಲೆನಿನಿಸಂ ಓದಿಕೊಂಡೆ. ಒಂದು ಪ್ರಾಂಜಲ ಮನಸ್ಸಿಟ್ಟುಕೊಂಡು, ದೊಡ್ಡ ಕನಸಿನೊಂದಿಗೆ ನಕ್ಸಲೀಯ ಹೋರಾಟಗಳಲ್ಲಿ ಪಾಲ್ಗೊಂಡೆ. ರವಿ ಬೆಳಗೆರೆ ಹಲೋ ಮನುಷ್ಯನನ್ನು ಭಕ್ಷಣೆ ಮಾಡುವ ಜನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಾಗ.... ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಕ್ಕಿದ್ದಂತೆ ಆಹಾರ ಪದ್ಧತಿಯ ಕುರಿತು ಮಾತನಾಡುತ್ತಾ ಅರೇ, ಯಾರು ಯಾವ ಆಹಾರ ತಿನ್ನಬೇಕು ಅಂತ ನಿರ್ಧರಿಸಲು ಇವರ‍್ಯಾರು? ನನಗೆ ಗೋಮಾಂಸ ತಿನ್ನಬೇಕು ಅನ್ನಿಸಿದರೆ ತಿನ್ನುತ್ತೇನೆ ಎಂದಿದ್ದನ್ನು ಬಿಜೆಪಿಯ ನಾಯಕರು ಅದೇನೋ ಬ್ರಹ್ಮಹತ್ಯಾ ದೋಷದಂತೆ ನೋಡತೊಡಗಿದ್ದಾರೆ. ಸಾಲದು ಎಂಬಂತೆ ಪೇಜಾವರ ಶ್ರೀಗಳೂ, ದನದ ಮಾಂಸ ಅಲ್ಲ, ಹಂದಿ ಮಾಂಸ ತಿನ್ನುತ್ತೇವೆ ಎಂದು ಹೇಳಲಿ ಎಂದು ಅಸಡ್ಡಾಳ ಹೇಳಿಕೆ ನೀಡಿದ್ದಾರೆ. ಅಲ್ರೀ, ಹಂದಿ ಮಾಂಸವನ್ನು ಮುಸ್ಲಿಮರು ತಿನ್ನುವುದಿಲ್ಲ. ಹಾಗಂತ ನೀವೇನೂ ತಿನ್ನಬೇಡಿ ಎಂದು ಅವರ‍್ಯಾರಿಗಾದರೂ ಹೇಳಿದ್ದಾರೆಯೇ? ನನಗೆ ಗೊತ್ತಿರುವ ಅನೇಕ ಸ್ನೇಹಿತರು, ಅವರು ಕ್ರಿಶ್ಚಿಯನ್ನರಿರಬಹುದು, ಹಿಂದೂಗಳಿರಬಹುದು. ಹಂದಿ ಮಾಂಸ ತಿನ್ನುತ್ತಾರೆ. ಪೇಜಾವರ ಶ್ರೀಗಳಿಗೆ ಅದು ಅಭ್ಯಾಸವಿಲ್ಲ, ತಿನ್ನುವುದಿಲ್ಲ. ಇಟ್ಸ್ ರೈಟ್. ನೀವು ತಿನ್ನುವುದಿಲ್ಲ ಎಂದ ಮೇಲೆ ಮುಗಿಯಿತು. ರವಿ ಬೆಳಗೆರೆ ಮುಖಪುಟ ವರದಿ ಡಾನ್ ವಿಕ್ಕಿ ಶಿಷ್ಯರು ದಾವೂದ್ ಕುನ್ನಿಗಳ ಹೆಣ ಕೆಡವಿದ್ದು! ಮಾಡೂರು ಇಸುಬುವನ್ನು ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಕೊಂದರು ಎಂದಾಗ ಬಳಸಿದ ವೆಪನ್ ಯಾವುದು ಎಂಬುದೂ ಮುಖ್ಯ. ಜೈಲಿನೊಳಕ್ಕೆ ಮಾರಕಾಯುಧಗಳು ತಲುಪುವುದಾದರೂ ಹೇಗೆ ಎಂಬುದರ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಈಗ್ಗೆ ಕೆಲ ವರ್ಷದ ಹಿಂದೆ ಹಿರಿಯಡ್ಕ ಜೈಲಿನಲ್ಲಿ ವಿನೋದ್ ಶೆಟ್ಟಿಗಾರ್ ಕೂಡ ಜೈಲಿನೊಳಗೇ ಕೊಲೆಯಾಗಿದ್ದ. ಆಗ ಚೂರಿಯಿಂದ ಇರಿದು ಕೊಲ್ಲಲಾಗಿತ್ತು. ಜೈಲಿನೊಳಕ್ಕೆ ಚೂರಿ ಹೇಗೆ ಹೋಯಿತೆಂದರೆ ಬರ್ತ್‌ಡೇ ಹೆಸರಲ್ಲಿ ಕೇಕ್ ಒಂದನ್ನು ಜೈಲಿನೊಳಗೆ ರವಾನಿಸಲಾಗಿತ್ತು. ಆ ಕೇಕಿನ ಒಳಗೆ ಹರಿತವಾದ ಚೂರಿಯನ್ನು ಇಡಲಾಗಿತ್ತು. ಇಸುಬುವಿನ ಮೇಲೆ ಮುಗಿಬಿದ್ದವರ ಕೈನಲ್ಲಿ ಕೋಳಿ ಬಾಳುಗಳಿದ್ದವು (ಸಣ್ಣಕತ್ತಿ). ಕರಾವಳಿಯಲ್ಲಿ ಕೋಳಿ ಕಾಳಗದ ಸಮಯದಲ್ಲಿ ಕೋಳಿಯ ಕಾಲಿಗೆ ಕಟ್ಟುತ್ತಿದ್ದ ಅತ್ಯಂತ ಹರಿತವಾದ ಆಯುಧವದು. ಕೆಲವೇ ಇಂಚುಗಳಷ್ಟಿರುವ ಕೋಳಿ ಬಾಳಿನಲ್ಲಿ ಗೀರಿದರೂ ಹೊಟ್ಟೆ ಸೀಳುವಷ್ಟು ಹರಿತವಾಗಿರುತ್ತದೆ. ಕಲ್ಲಂಗಡಿ ಹಣ್ಣಿನೊಳಗೆ ಅದನ್ನು ಇರಿಸಿ ಜೈಲಿನೊಳಗೆ ಕಳುಹಿಸಲಾಗಿತ್ತು ಎನ್ನುವ ಸುದ್ದಿ ಇದೆ. ವಸಂತ್ ಗಿಳಿಯಾರ್ ರಾಜಕೀಯ ನಂಬಿ ಕೆಟ್ಟ ಪಮ್ಮಿ ಕಡೆಗೆ ಗೃಹ ಖಾತೆಗೆ ತೃಪ್ತಿ ಕಣಮ್ಮಿ... ಯಾವಾಗ ದಿಗ್ವಿಜಯ್‌ಸಿಂಗ್ ಕೂಡ ತಮಗೆ ಕೈ ಕೊಟ್ಟರೋ? ಆಗ ತಕ್ಷಣವೇ ಪರಮೇಶ್ವರ್ ಎಚ್ಚೆತ್ತುಕೊಂಡು ಬಿಡಬೇಕಿತ್ತು. ಆದರೆ ಎಸ್ಸೆಂ ಕೃಷ್ಣ ಅವರ ಮಾತು ಕೇಳಿದ ಪರಮೇಶ್ವರ್ ಡಿಸಿಎಂ ಹುದ್ದೆ ಕೊಡುವುದಾದರೆ ಕೊಡಿ. ಇಲ್ಲವಾದರೆ ಕೆಪಿಸಿಸಿ ಅಧ್ಯಕ್ಷರಾಗಿಯೇ ಮುಂದುವರಿಯುವುದು ತಮ್ಮ ಬಯಕೆ ಎಂದು ಬಿಟ್ಟರು. ಹಾಗೆ ಮಾಡುವ ಬದಲು ಸಾಧ್ಯವಾದಷ್ಟು ಬೇಗ ಸಿದ್ದರಾಮಯ್ಯನವರ ಸಂಪುಟಕ್ಕೆ ಸೇರಿಕೊಂಡು, ಪ್ರಭಾವಿ ಖಾತೆಯನ್ನು ಪಡೆದುಕೊಂಡಿದ್ದರೆ ಇಷ್ಟೊತ್ತಿಗಾಗಲೇ ಪಕ್ಷದಲ್ಲಿ ಪರಮೇಶ್ವರ್ ಅವರದು ಒಂದು ಗ್ಯಾಂಗು ಅಂತ ಸೃಷ್ಟಿ ಆಗುತ್ತಿತ್ತು. ಆದರೆ ಪರಮೇಶ್ವರ್ ಅಕ್ಕಪಕ್ಕದಲ್ಲಿರುವ ಕುಳಗಳೆಲ್ಲ ಎಂತಹ ನಫ್ತಟಾಲ್‌ಗಳೆಂದರೆ ಏನೇ ಬೆಳವಣಿಗೆ ನಡೆದರೂ ಎಸ್ಸೆಂ ಕೃಷ್ಣ ಅವರಿಗೆ ವಿವರಿಸುವುದು ಮತ್ತು ತಿಪ್ಪರಲಾಗ ಹಾಕಿದರೂ ಡಿಸಿಎಂ ಹುದ್ದೆ ಬಿಟ್ಟು ಬೇರೆ ಹುದ್ದೆ ಬೇಡ ಅಂತ ಹೇಳಿಸುವುದು ಮಾಡುತ್ತಲೇ ಹೋದರು. ಆರ್.ಟಿ.ವಿಠ್ಠಲಮೂರ್ತಿ ವರದಿ ಮಾಜಿ ಉಪಮೇಯರ್ ಶಿಷ್ಯನೇ ಡಕಾಯಿತ! ಆಗಾಗ್ಗೆ ಮಂಗಲ್ ದಾಸ್‌ಗೆ ಹರೀಶ ಫೋನ್ ಮಾಡುತ್ತಿದ್ದ. ಅಲ್ಲಿ ಸೈಟ್ ಇದೆ, ಇಲ್ಲಿ ಮನೆ ಇದೆ. ಕಡಿಮೆ ರೇಟು, ತುಂಬಾ ಚೆನ್ನಾಗಿದೆ, ಮಾಡಿಕೊಳ್ಳಿ ಅಂತ ಪುಸಲಾಯಿಸುತ್ತಿದ್ದ. ಇವನ ಮಾತನ್ನು ನಂಬಿಕೊಂಡು ಮಂಗಲ್ ದಾಸ್ ಪ್ರಾಪರ್ಟಿ ನೋಡಿಕೊಂಡು ಬರುತ್ತಿದ್ದರು. ಹೀಗೆ ಕಳೆದ ಒಂದು ವರ್ಷದಿಂದಲೂ ಇದು ನಡೆಯುತ್ತಿತ್ತು. ಅಸಲಿಗೆ ಖದೀಮ ಹರೀಶ ಯಾವ ರೀತಿ ಸ್ಕೆಚ್ ಹಾಕುತ್ತಿದ್ದಾನೆ ಎಂಬ ಸಣ್ಣ ಕುರುಹು ಕೂಡ ಮಂಗಲ್ ದಾಸ್‌ಗೆ ಇರಲಿಲ್ಲ. ಈಗ್ಗೆ ಎರಡು ತಿಂಗಳ ಹಿಂದೆ ನಾಗರಬಾವಿಯಲ್ಲಿ ಹೌಸಿಂಗ್ ಬೋರ್ಡ್‌ನವರದ್ದು ೩೦/೪೦ ಸೈಟ್ ಇದೆ. ಹತ್ತು ಲಕ್ಷ ಕೊಡಿ ಸಾಕು ಅಂತ ಕೇಳಿದ್ದ. ಅಶ್ವಿನ್‌ ಕುಮಾರ್ ವರದಿ ಆಕೆ ಸುಂದರಿಯಾದದ್ದೇ ಕೊಲೆಗೆ ಕಾರಣವಾಯ್ತು! ಕಟ್ಟಿಕೊಂಡ ಗಂಡನ ಅನುಮಾನಕ್ಕೆ ಬಲಿಯಾದ ಚೆಲುವೆಯ ಹೆಸರು ದಿವ್ಯಾ. ಈಕೆಯ ಸ್ವಂತ ಊರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಎನ್.ಜಿ.ಹಳ್ಳಿ. ಗಂಗಾಧರಪ್ಪ, ಅನ್ನಪೂರ್ಣಮ್ಮ ದಂಪತಿಯ ಮೊದಲ ಮಗಳು. ಓದಿನಲ್ಲೂ ಮುಂದಿದ್ದ ದಿವ್ಯ ಹೊಳಲ್ಕೆರೆಯಲ್ಲಿ ಬಿಬಿಎಂ ಪದವಿ ಮುಗಿಸಿದ್ದಳು. ಅದೇ ಕಾಲೇಜಿನಲ್ಲಿ ಓದುತ್ತಿದ್ದ ದೂರದ ಸಂಬಂಧಿ ರಂಗಸ್ವಾಮಿ ಜೊತೆ ಈಕೆಗೆ ಲವ್ ಆಗಿತ್ತು. ಮಲ್ಲಾಡಿಹಳ್ಳಿ, ರಾಮಗಿರಿ ಬೆಟ್ಟ, ಚಿಕ್ಕಜಾಜೂರು ರೈಲ್ವೆ ಸ್ಟೇಷನ್ ಅಂತ ಪರಸ್ಪರರಿಬ್ಬರು ಕಂಡ ಕಂಡ ಕಡೆ ಅಡ್ಡಾಡಿದ್ದಾರೆ. ಒಮ್ಮೆ ಹೊಳಲ್ಕೆರೆಯ ಅಂದಿನ ಪಿಎಸ್ಸೈ ಎಸ್.ಟಿ.ಒಡೆಯರ್ ಇವರಿಗೆ ಬುದ್ಧಿವಾದ ಕೂಡ ಹೇಳಿದ್ದರು. ಆದರೂ ಇವರು ಅದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಕಾಂತರಾಜ್ ಅರಸ್ ವರದಿ ಗೋಪಿ ಸರ್ಕಲ್ಲಿಗೆ ಹೋದ್ರೆ ರುಂಡ ಕಡಿತೀನೆಂದ ಚೆನ್ನಿ? ಪಾಕಿಸ್ತಾನದ ಮುಸ್ಲಿಮರಿಗಿಂತ ಭಾರತದ ಮುಸ್ಲಿಮರು ಈಗಲೂ ಸುರಕ್ಷಿತವಾಗಿದ್ದಾರೆ. ಆದರೆ ಈ ದೇಶದ ದಲಿತರಲ್ಲಿ ಅಭದ್ರತೆ ಕಾಡುವಂತಹ, ಕೆಳಜಾತಿಗಳ ಜನ ಭಯದಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣವಾಗತೊಡಗಿರುವುದು ಗಮನಿಸಬೇಕಾದ ಸಂಗತಿ. ಮೇಲ್ಜಾತಿಯವರ ಅಟ್ಟಹಾಸ ಹರಿಯಾಣದಲ್ಲಿ ಭುಗಿಲೆದ್ದಿದೆ. ಇದು ದೇಶವನ್ನೇ ವ್ಯಾಪಿಸುವ ದಿನವೂ ದೂರವಿಲ್ಲ. ಗೋಮಾಂಸ ತಿನ್ನುವುದು ಅಪರಾಧ ಎನ್ನುತ್ತಾ ಮುಸ್ಲಿಮರನ್ನೂ ಟಾರ್ಗೆಟ್ ಮಾಡಲಾಗುತ್ತಿದೆಯಾದರೂ ಮಾಂಸಾಹಾರಿಗಳನ್ನೇ ಎರಡನೇ ದರ್ಜೆಯ ಪೌರರಂತೆ ಕಾಣುವ ಮನೋಭಾವ ಇದರ ಹಿಂದಿರುವುದು ಸ್ಪಷ್ಟವಾಗುತ್ತಿದೆ. ಮೀಸಲಾತಿ ಕುರಿತಾದ ಆಕ್ಷೇಪಗಳ ಹಿಂದಿರುವ ಧ್ವನಿಯೂ ಇದೇನೇ. ವರದಿಗಾರ ವರದಿ ರಂಗನಾಥ್ ಭಾರದ್ವಾಜ್ ಎಂಬ ಹುಳಾ ಪಾರ್ಟಿ ಏನ್ ಮಾಡ್ದ? ಈಟಿವಿಯ ರಂಗನಾಥ್ ಭಾರದ್ವಾಜ್ ಎಂಬ ಈ ಗೋಸುಂಬೆ ಪತ್ರಕರ್ತ ಮೊನ್ನೆ ಅಕ್ಟೋಬರ್ 28ರ ಮಧ್ಯಾಹ್ನದಂದು ನಡೆಸಿಕೊಟ್ಟ ‘ಭಗವಾನ್ ಉವಾಚ’ ಎಂಬ ಲಡಾಸು ಕಾರ್ಯಕ್ರಮವನ್ನು ಅಪ್ಪಿತಪ್ಪಿ ನೀವೇನಾದರೂ ನೋಡಿದ್ದರೆ ನಿಜಕ್ಕೂ ಈ ರಂಗನನ್ನು ಮತ್ತಾತನ ಮೇಷ್ಟ್ರಾದ ಭಗವಾನ್ ಎಂಬ ಅರೆ ಹುಚ್ಚನನ್ನು ಹುಡುಕಿಕೊಂಡು ಹೋಗಿ ಒದೆಯುತ್ತಿದ್ದಿರೇನೋ? ಏಕೆಂದರೆ ಒಂದು ಗಂಟೆ ಮೂವತ್ಮೂರು ನಿಮಿಷ ಐವತ್ತಾರು ಸೆಕೆಂಡುಗಳ ಭಗವಾನನ ಆ ಉವಾಚ ಕಾರ್ಯಕ್ರಮದಲ್ಲಿ ಭಗವಾನ್ ಒಬ್ಬ ಕಳ್ಳನಂತೆ ವರ್ತಿಸುತ್ತಾನೆ. ಆತನನ್ನು ಸಂದರ್ಶಿಸುವ ಈ ರಂಗನಾಥ ಭಾರದ್ವಾಜ ಮತ್ತೊಬ್ಬ ಕಳ್ಳ. ನಾಗೇಂದ್ರಾಚಾರ್ಯ, ಚಕ್ರವರ್ತಿ ಸೂಲಿಬೆಲೆ, ಸೆಲ್ವಪಿಳ್ಳೆ ಅಯ್ಯಂಗಾರ್‌ರವರು ಅದೆಷ್ಟು ಕರಾರುವಾಕ್ಕಾಗಿ ಧರ್ಮ ಹಾಗೂ ಭಗವದ್ಗೀತೆ ಕುರಿತು ಮಾತನಾಡಿದರೆಂದರೆ ನಿಜಕ್ಕೂ ಗ್ರೇಟ್. ಆದರೆ ಅದ್ಯಾವುದಕ್ಕೂ ಉತ್ತರ ಕೊಡದ ಭಗವಾನ ಪದೇಪದೆ ಎದ್ಹೋಗುವ ಮಾತನಾಡುತ್ತಿದ್ದ. ಜೇಬಿನಿಂದ ಮೊಬೈಲ್ ತೆಗೆದು ಹ್ಯಾಪನಂತೆ ಹಲ್ಕಿರಿಯುತ್ತಿದ್ದ. ಇಷ್ಟಕ್ಕೂ ಭಗವದ್ಗೀತೆಯ ಒಂಬತ್ತನೆಯ ಅಧ್ಯಾಯದ ಮೂವತ್ತೆರಡನೇ ಶ್ಲೋಕದಲ್ಲಿ ಏನಿದೆ ಅಂತ ಈ ಭಗವಾನನನ್ನು ಕೇಳಿ ನೋಡಿ? ಅರ್ಜೆಂಟ್ ಉಚ್ಚೆ ಹುಯ್ದು ಬರ್ತೀನಿ ಅಂತ ಎದ್ದೋಡುತ್ತಾನೆ... ವರದಿಗಾರ ನೇವಿ ಕಾಲಂ ಆಂಡವನ ಕನಸಿಗೆ ಬಲಗಾಲಿಟ್ಟಳು ಫಿಲೋಮಿನಾ ಕತೆ- ಭಾಗ ೨ ಆಂಡವನಿಗೆ ಅದೇನೋ ಗೊತ್ತಿಲ್ಲ, ಹೆಂಡತಿ ಅಮ್ಮಾಳ್ ಹೋದಂದಿನಿಂದ ಒಂಟಿಯಾಗಿದ್ದ. ಅಮ್ಮಾಳ್ ಇರುವಾಗಲೂ ಅವನ ಒಂಟಿತನ ನೀಗುತ್ತಿತ್ತು, ಪ್ರೀತಿಯ ಆಶ್ರಯ ದೊರೆಯುತ್ತಿತ್ತು ಅಂತೇನೂ ಅಲ್ಲ. ಆದರೆ ಕಡೇಪಕ್ಷ ಅವನು ಒಂದು ಹೆಣ್ಣಿನ ದೈಹಿಕ ಸಾಮೀಪ್ಯವನ್ನು ಪಡೆಯುತ್ತಿದ್ದ. ರಾತ್ರಿ ಕುಡಿದು ಹೋದಾಗ ಹತ್ತಿರವೂ ಸೇರಿಸಿಕೊಳ್ಳದ ಅಮ್ಮಾಳ್ ಮಧ್ಯರಾತ್ರಿ ಎಲ್ಲೋ ಅವನ ಬೆವರು ಮತ್ತು ಶರಾಬಿನ ವಾಸನೆಯನ್ನು ಮೂಗಿನ ಹೊರತಾಗಿ ಮಿಕ್ಕುಳಿದ ಇಂದ್ರಿಯಗಳಿಂದ ಬಿಟ್ಟುಕೊಳ್ಳುತ್ತಿದ್ದಳು. ಆದರೆ ಅವಳು ಅವನನ್ನು ಬಿಟ್ಟು ಹೋಗುತ್ತಲೇ ಆಂಡವ ಒಂದು ಸಾಮೀಪ್ಯ ಮತ್ತು ಪ್ರೀತಿಯನ್ನು ಆ ವಯಸ್ಸಿನಲ್ಲಿ ನಿರೀಕ್ಷಿಸುತ್ತಿದ್ದ. ಮದುವೆಯಾಗದೇ ಉಳಿದೇ ಹೋಗಿದ್ದ ಫಿಲೋಮಿನಾ ಕೊಂಚ ಕಪ್ಪಗಿದ್ದರೂ ತೆಳ್ಳಗೆ ಆಕರ್ಷಕವಾಗಿ ಇದ್ದಳು. ಅವಳು ಬೇರೆ ಕೊಂಚ ಶಿಸ್ತಿನ, ಒಳ್ಳೆಯ ರೀತಿಯಲ್ಲಿ ಉಡುವ, ಉಣ್ಣುವ ವರ್ಗದವಳಂತೆ ಕಾಣುತ್ತಿದ್ದರಿಂದ ಆಂಡವನಿಗೆ ಹಿಂದೆಂದೂ ಯಾರೂ ಪ್ರಲೋಭಿಸಿರದ ಆಕರ್ಷಣೆಯಂತೆ ಅವಳನ್ನು ನೋಡತೊಡಗಿದ. ನೇವಿ ಜಾನಕಿ ಕಾಲಂ ಒಂದು ಪುರಾಣದ ಕಥೆಯೊಂದಿಗೆ ಆರಂಭಿಸೋಣ ದುಷ್ಯಂತ ಕಾಡಿಗೆ ಬೇಟೆಗೆಂದು ಹೋಗುತ್ತಾನೆ. ಅಲ್ಲಿ ಶಕುಂತಲೆಯನ್ನು ಭೇಟಿಯಾಗುತ್ತಾನೆ. ಅವಳನ್ನು ಮೋಹಿಸುತ್ತಾನೆ. ಅವಳನ್ನು ಕೂಡುತ್ತಾನೆ. ಗಾಂಧರ್ವ ವಿವಾಹ ಆಗುತ್ತಾನೆ. ರಾಜಧಾನಿಗೆ ಮರಳುತ್ತಾನೆ. ಆಮೇಲೆ ಅವಳನ್ನು ಕರೆಸಿಕೊಳ್ಳುವುದಾಗಿ ಹೇಳುತ್ತಾನೆ. ಒಂದು ಪ್ರೇಮದ ಅಧ್ಯಾಯ ಅಲ್ಲಿಗೆ ಮುಗಿಯುತ್ತದೆ. ಅದಾದ ನಂತರ ನಡೆಯುವುದು ಬೇರೆಯೇ ಕತೆ. ಅವನ ಧ್ಯಾನದಲ್ಲಿ ಕುಳಿತವಳು ದೂರ್ವಾಸರನ್ನು ಅಲಕ್ಷಿಸುತ್ತಾಳೆ. ದೂರ್ವಾಸರು ನೀನು ಯಾರ ಧ್ಯಾನದಲ್ಲಿದ್ದು ನನ್ನನ್ನು ಕಡೆಗಣಿಸಿದೆಯೋ ಅವನು ನಿನ್ನನ್ನು ಮರೆತುಬಿಡಲಿ ಎಂದ ಶಾಪ ಕೊಡುತ್ತಾನೆ. ಅವಳ ಸಖಿಯರು ದೂರ್ವಾಸರನ್ನು ಕಾಡಿಬೇಡಿ ಪ್ರತಿಶಾಪ ಕೊಡುವಂತೆ ಕೇಳಿಕೊಳ್ಳುತ್ತಾರೆ. ಅಭಿಜ್ಞಾನಾಭರಣ ದರ್ಶನದಿಂದ ಅವನಿಗೆ ಮರೆವೆಯಿಂದ ಮುಕ್ತಿ ಸಿಗಲಿ ಎಂದು ಉಃಶಾಪವನ್ನೂ ಕರುಣಿಸುತ್ತಾರೆ. ಅಭಿಜ್ಞಾನಾಭರಣ ಅಂದರೆ ಗೊತ್ತಿರುವ ಆಭರಣ. ಜಾನಕಿ ವರದಿ ಸಚಿವ ತಂಗಡಗಿ ಸಂಧ್ಯಾ ಮೇಡಮ್ ಕೈ ಹಿಡಿದು ಜಗ್ಗಿದ್ದು ನಿಜವೇ? ಕೊಪ್ಪಳದಲ್ಲಿ ಇಂತಹದ್ದೊಂದು ಘಟನೆ ಹಾಗೂ ಅದರ ಬೆಳವಣಿಗೆ ನಿರೀಕ್ಷಿತವೇ ಆಗಿತ್ತು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿಯವರ ಹೆಸರಿಗೆ ಕಳಂಕ ತರುವ ಕಾರ್ಯಾಚರಣೆ ನಡೆಯುವುದು ನಿಕ್ಕಿಯಾಗಿತ್ತು. ದಲಿತನೊಬ್ಬ ಸಚಿವನಾದುದನ್ನು ಇಷ್ಟಪಡದ ಜನರಿಂದ ಹಿಡಿದು ತಮಗೆ ಅಧಿಕಾರ ಸಿಗಲಿಲ್ಲವೆಂಬ ಸ್ವಪಕ್ಷದ ಜನರವರೆಗೂ ಎಲ್ಲರ ದ್ವೇಷವನ್ನು ಅನಿವಾರ‍್ಯವಾಗಿ ತಂಗಡಗಿ ಕಟ್ಟಿಕೊಳ್ಳಬೇಕಾಯಿತು. ಇನ್ನು ವಿರೋಧಪಕ್ಷದ ಜನ ಬಿಡುತ್ತಾರೆಯೇ? ದಲಿತರ ಮನೆಗಳಿಗೆ ಬೆಂಕಿ ಬಿದ್ದ ಮರಕುಂಬಿ ಪ್ರಕರಣ, ಹನುಮೇಶನಾಯಕನ ಮಗನ ಅಡಾವುಡಿತನಗಳಿಂದ ಹಿಡಿದು ಯಾವ ಪ್ರಕರಣ ಸಿಕ್ಕರೂ ತಂಗಡಗಿಯವರ ಮೇಲೆ ಹೊರಿಸಿ ಸಂಕಷ್ಟಕ್ಕೆ ಸಿಲುಕಿಸುವ ಯತ್ನ ನಡೆಯುತ್ತಲೇ ಇದೆ. ಸತೀಶ್ ಬಿಲ್ಲಾಡಿ ಅಂಕಣ : ಆಕಾಶಬುಟ್ಟಿ ಅಮ್ಮ ದೊಡ್ಡವಳಾದ ಮೇಲೆ ನಾನು ಮದುವೆಯಾಗಬೇಕಾ? “ವಾಸ್ಕೋಡಿಗಾಮ" ಸಿನಿಮಾ ಶುರುವಾದಾಗಿಂದ ನಾನು ಸ್ವಾರ್ಥಿಯಾಗಿದ್ದೇನೆ ಅನ್ನಿಸುತ್ತಿದೆ. ಮಕ್ಕಳು, ಅಡುಗೆ, ಮನೆ ಫುಲ್ ನೆಗ್ಲೆಕ್ಟ್. ಈ ಮುಂಚೆ ಎಂಜಾಯ್ ಮಾಡುತ್ತಿದ್ದ ಮಕ್ಕಳ ತರಲೆ ನನಗೆ ರೇಜಿಗೆ ಹುಟ್ಟಿಸುತ್ತದೆ. ಕಾರಣ, ನಾನು ಫೇಸ್‌ಬುಕ್‌ನಲ್ಲಿ ‘ವಾಸ್ಕೋಡಿಗಾಮ’ದ ಚರ್ಚೆ ಮಾಡುವಲ್ಲಿ ಬ್ಯುಸಿ ಆಗಿರುತ್ತೇನೆ. ಟುವ್ವಿ ಹೇಳುತ್ತಾಳೆ, ನೀನು ಒಳ್ಳೆ ಅಡುಗೆ ಮಾಡಿ ಒನ್ ಮಂಥ್ ಆಯ್ತು. ನಾನು ಈ ಕ್ಷಣದಲ್ಲಿ ಅಮ್ಮನ ರೋಲ್‌ನಲ್ಲಿ ಇಲ್ಲವೇ ಇಲ್ಲ ಟುವ್ವಿ. ಈ ದಿನಗಳ ನನ್ನ ಜಗತ್ತಿನಲ್ಲಿ ನಿಮಗೆ ಸ್ಥಾನವೇ ಇಲ್ಲ. ನನ್ನ ಕ್ಷಣ, ದಿನ, ಗಂಟೆಗಳನ್ನೆಲ್ಲ ನಮ್ಮ ‘ವಾಸ್ಕೋಡಿಗಾಮ’ ಆವರಿಸಿದೆ. ಸೇಮ್ ಲವ್ವಲ್ಲಿ ಬಿದ್ದಂತೆ ಫೀಲು. ನನ್ನಲಿ ನಾನಿಲ್ಲ. ಏನು ಮಾಡಲಿ ವಿಪ್ಪಿ, ಟುವ್ವಿ. ವಿಪ್ಪಿ, ಟುವ್ವಿ ಪಿಳಿ ಪಿಳಿ ಕಣ್ಣು ಬಿಟ್ಟು ನನ್ನನ್ನೇ ನೋಡುತ್ತಿದ್ದರು. ನಮ್ಮಮ್ಮಂಗೆ ಏನಾಯ್ತು ಅಂತ. ಅಪ್ಪ ಸಿನಿಮಾ ಮಾಡ್ಕೋತಾರೆ ಬಿಡಮ್ಮ. ‘ನೀನು ನಮ್ಮನ್ನು ನೋಡ್ಕೋ ಅಂದಳು’ ಟುವ್ವಿ. ಅದು ಸಾಧ್ಯವಿಲ್ಲ ಅಂದೆ. ಯಾಕೆ ಅಂದಳು. ಎಚ್.ಡಿ. ಸುನೀತಾ ಅಂಕಣ : ನೂರು ಮುಖ ಸಾವಿರ ದನಿ ಪ್ರಕರಣಗಳ ಶೀಘ್ರ ಖಾಯಂ ಮುಕ್ತಿಗೆ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ ಈಗಿರುವ ಕಾಯಿದೆಗಳು, ಕಾನೂನುಗಳು, ಪ್ರಕ್ರಿಯೆ ನಿಯಮಾವಳಿಗಳು, ಸಾಕ್ಷ ಸಂಹಿತೆ ಹಾಗೂ ಭಾರತದ ನ್ಯಾಯಾಲಯಗಳಲ್ಲಿ ವಿಲೇಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ, ಅದಕ್ಕೆ ನಿತ್ಯ ಸೇರ್ಪಡೆಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ಇವುಗಳ ವಿಲೇಗೆ ಈಗಿರುವ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ ಅವುಗಳ ಶೀಘ್ರ ವಿಲೇಗೆ ಅವಶ್ಯವಾದ ಸಂಖ್ಯೆಗಳ ನ್ಯಾಯಾಧೀಶರುಗಳು ಮತ್ತು ನ್ಯಾಯಾಲಯಗಳು ಇಲ್ಲದಿರುವುದು. ಈ ಎಲ್ಲ ಕಾರಣಗಳಿಂದಾಗಿ ನ್ಯಾಯದಾನದ ಪ್ರಮಾಣ ಪ್ರಕರಣವಾರು ಮತ್ತು ಶೇಕಡಾವಾರು ತುಂಬಾ ಕಡಿಮೆ ಇದೆ. ಕಾಯಿದೆಗಳು ಮತ್ತು ಪ್ರಕ್ರಿಯೆಗಳ, ಇನ್ನೂ ಹೆಚ್ಚಿನ ತಿದ್ದುಪಡಿ ಮಾರ್ಪಾಡು, ನ್ಯಾಯಾಲಯಗಳು ಹಾಗೂ ನ್ಯಾಯಾಧೀಶರ ಸಂಖ್ಯೆಯ ಹೆಚ್ಚಳ ಇನ್ನೂ ಆಗಬೇಕಿದೆ. ಎಂ.ವಿ. ರೇವಣಸಿದ್ದಯ್ಯ

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.