Hi Bangalore

Complimentary Offer

  • Pay via readwhere wallet and get upto 40% extra credits on wallet recharge.
Hi Bangalore

Hi Bangalore

This is an e-magazine. Download App & Read offline on any device.

ಸೃಷ್ಟಿ 1031 : ಸಂಪುಟ 20, ಸಂಚಿಕೆ 43, ಜುಲೈ 23, 2015 ಖಾಸ್‌ಬಾತ್ ಯಾವ ಗೋರಿಯ ಆಳದಲ್ಲಿ ಯಾವ ಡ್ರೈವರನ ಆತ್ಮ ಮಗ್ಗಲು ಬದಲಿಸಿತೋ? “ಸಾರ್ ನಿದ್ದೆ ಬರ‍್ತಿಲ್ಲವಾ?" ಅಂದ. “ಬರುತ್ತೆ, ನೀನು ಮಲಗು" ಅಂದೆ. “ಅಲ್ಲಾ, ರೂಮ್‌ನಲ್ಲಿ ಇಬ್ರೇ ಇದೀವಿ. ನಾನಿದೀನಿ ಅನ್ನೋ ಕಾರಣಕ್ಕೆ ಹೆದ್ರಿಕೆಯಾಗಿ ನಿಮಗೇ ನಿದ್ರೆ ಬರ‍್ತಿಲ್ಲವಾ ಅಂದೆ..." ಅವನ ದನಿಯಲ್ಲಿ ಸಣ್ಣ ವ್ಯಂಗ್ಯವಿತ್ತು. Stupid fellow. “ಏಯ್ ತಮ್ಮಾ, ಜಗತ್ತಿನಲ್ಲಿ ಇರೋರ್‌ನೆಲ್ಲಾ ಕೊಂದು ಹಾಕೋಕೆ ನಿನಗೆ ಕಾಂಟ್ರಾಕ್ಟ್ ಕೊಟ್ಟಿದಾನೆ ದೇವರು ಅಂದುಕೊಂಡ್ಯಾ? ತೆಪ್ಪಗೆ ಮಲಗು. ಸರಿಯಾಗಿ ಪ್ರಿಪೇರ್ ಆಗದೆ ನಾನು ಮನೆಯಿಂದ ಹೊರಡೋದಿಲ್ಲ. ನನಗಿಂತ ಚಿಕ್ಕೋನು ನೀನು. ಯಾರಿಗ್ಗೊತ್ತು? ನಿನ್ನ ಸಾವು ನನ್ನ ಕೈಲೇ ಆಗುತ್ತೋ ಏನೋ? ಇಲ್ಲದ್ದು ಮಾಡೋಕೆ ಹೋದ್ರೆ, ನಾನೇ ಕಳಿಸಿಬಿಡ್ತೀನಿ ಮೇಲಕ್ಕೆ!" ಅಂದೆ. ಅವನು ಹಂತಕ ರವೀಂದ್ರ ಪ್ರಸಾದ್. ರವಿ ಬೆಳಗೆರೆ ಸಾಫ್ಟ್‌ಕಾರ್ನರ್ ಬಂದು ಹೋದ ಮೇಲೆ ಗೊತ್ತಾದರೆ ಏನುಪಯೋಗ? ಆತ ಬಂದಿದ್ದನಂತೆ. ನಿಮಗೂ ಗೊತ್ತಿರಬಹುದು, ಆತನ ಹೆಸರು ಬ್ರಹ್ಮಾನಂದಮ್! ತೆಲುಗು ಸಿನೆಮಾಗಳ ಪರಿಚಯ ಇದ್ದವರಿಗೆ ಸುಮ್ಮನೆ ಆತನ ಹೆಸರು ಕೇಳಿದರೆ ಸಾಕು: ನಗು ಬರುತ್ತದೆ. ಅಂಥ wonderful comedian ಆತ. ನಾನು ತೆಲುಗು ಸಿನೆಮಾಗಳಿರಲಿ ನಾನೇ ನಟಿಸಿದ ಸಿನೆಮಾಗಳನ್ನೂ ನೋಡಿಲ್ಲ. ಥಿಯೇಟರಿಗೆ ಹೋಗಿ ತಾಸುಗಟ್ಟಲೆ ಕುಳಿತು ಸಿನೆಮಾ ನೋಡುವ ಸಹನೆ ನನ್ನಲ್ಲಿ ಉಳಿದಿಲ್ಲ. ಬೇಕೆನ್ನಿಸಿದರೆ ನನ್ನ ಇಷ್ಟದ ಸಿನೆಮಾಗಳನ್ನು ಇಂಟರ್‌ನೆಟ್ ಬಳಸಿ, on line ನೋಡುತ್ತೇನೆ. ಆದರೆ ಬ್ರಹ್ಮಾನಂದಮ್‌ನ ಮುಖ ನೋಡಿದರೆ ಸಾಕು: ಎಕ್ಸೈಟ್ ಆಗುತ್ತೇನೆ. ಆತನದು ಚೆಂದನೆಯ, ಸಹನೀಯ ಹಾಸ್ಯ. ಅದು ಅಪಹಾಸ್ಯವಲ್ಲ. ತುಂಬ ಹಿಂದೆ ನಾನು ಆಸ್ಪತ್ರೆಯಲ್ಲಿದ್ದಾಗ ಆತ ನಟಿಸಿದ ‘ಜಫ಼ಾ’ ಎಂಬ ಸಿನೆಮಾ ನೋಡಿದ್ದೆ. ಆತನದು ನಿಜಕ್ಕೂ ಹಿಲೇರಿಯಸ್ ಹಾಸ್ಯ. ರವಿ ಬೆಳಗೆರೆ ಬಾಟಮ್ ಐಟಮ್ ಸೋತವನಿಗೆ ಬೇರಿನ ಸೆಳೆತ, ಗೆದ್ದವನಿಗೆ ಇಲ್ಲೇ ಬೇರೂರುವ ತವಕ ಹುಟ್ಟೂರು ತೊರೆದು ಬೆಂಗಳೂರಲ್ಲಿ ಬದುಕು ಕಟ್ಟಿಕೊಂಡವರಿಗೆ ಇಲ್ಲೊಂದಿಷ್ಟು ಪ್ರಶ್ನೆಗಳಿವೆ. ಇದು ನಿಮ್ಮನ್ನು ನೀವೇ ಕೇಳಿಕೊಳ್ಳಬೇಕಾದ ಪ್ರಶ್ನೆಗಳು. ನೀವು ನಿಮ್ಮೂರಿಗೆ ಕೊನೆಯ ಬಾರಿ ಹೋಗಿದ್ದು ಯಾವಾಗ? ಯಾಕಾಗಿ ಹೋಗಿದ್ರಿ? ನಿಮ್ಮ ಅಣ್ಣನ ಮಗಳ ಮದುವೆ ಕಾರ್ಯಕ್ರಮ ಇದ್ದಿರಬೇಕು ಅಥವಾ ಇನ್ಯಾವುದೋ ನಿಮ್ಮ ಹಾಜರಿಯನ್ನು ಬೇಡುವ ವ್ಯವಹಾರವಿದ್ದಿರಬೇಕು ಅಲ್ವಾ? ಪ್ರೈಮರಿ ಶಾಲೆಯಲ್ಲಿ ನಿಮ್ಮ ಜೊತೆ ಓದಿದ ಗೆಳೆಯರ ಹೆಸರುಗಳು ನಿಮಗೆ ನೆನಪಿದ್ಯಾ? ಅವರಲ್ಲಿ ಯಾರ ಜೊತೆಗಾದರೂ ಸಂಪರ್ಕದಲ್ಲಿದ್ದೀರಾ? ಬಾಲ್ಯದಲ್ಲಿ ನಿಮಗೆ ಬಹಳ ಪ್ರಿಯವಾಗಿದ್ದ ಒಂದು ಜಾಗಕ್ಕೆ ನೀವು ಯಾವತ್ತಾದರೂ ಮರುಭೇಟಿ ನೀಡಿದ್ದುಂಟಾ? ನಿಮಗೆ ಪಾಠ ಮಾಡಿದ ನಿಮ್ಮ ಮೆಚ್ಚಿನ ಮೇಷ್ಟ್ರು ಈಗ ಹೇಗಿದ್ದಾರೆ? ವಾರಕ್ಕೊಮ್ಮೆಯಾದರೂ ನಿಮ್ಮ ಅಮ್ಮನ ಜೊತೆ ಫೋನಲ್ಲಿ ಮಾತಾಡುತ್ತೀರಾ? ರವಿ ಬೆಳಗೆರೆ ಹಲೋ ಮೋದಿಜೀಗೆ ಒಳ್ಳೆಯ ದಿನಗಳು ಬರಲು ಜಸ್ಟ್ ಇಪ್ಪತ್ತೈದು ವರ್ಷ ಸಾಕಂತೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಕೊಂಡಾಡಲು ಈ ದೇಶಕ್ಕೆ ಮಾತುಗಳೇ ಸಿಗುತ್ತಿಲ್ಲ. ಅವರ ಪ್ರಕಾರ, ದೇಶಕ್ಕೆ ಅಚ್ಚೇ ದಿನ್ ಬರಲು ಇಪ್ಪತ್ತೈದು ವರ್ಷ ಬಿಜೆಪಿ ಅಧಿಕಾರದಲ್ಲಿ ಇರಬೇಕಂತೆ. ಅವರು ಮಾತನಾಡಿದ ಕೂಡಲೇ ಅದಕ್ಕೊಂದು ಸಮಜಾಯಿಷಿ ನೀಡಲಾಯಿತು. ಛೇ, ಛೇ ವಾಸ್ತವವಾಗಿ ಅವರು ಹೇಳಿದ್ದು ಹಾಗಲ್ಲ. ದೇಶಕ್ಕೆ ಅಚ್ಚೇ ದಿನ್ ಬರಬೇಕು ಎಂದರೆ ಇಪ್ಪತ್ತೈದು ವರ್ಷ ಬಿಜೆಪಿ ಅಧಿಕಾರದಲ್ಲಿರಬೇಕು ಎಂದಷ್ಟೇ ಅವರು ಹೇಳಿದ್ದು ಅನ್ನಲಾಯಿತು. ಅರೇಸ್ಕೀ. ಶ್ರೀರಾಮಚಂದ್ರನ ಹೆಂಡತಿಯ ಹೆಸರು ಸೀತೆ ಎಂದರೇನು? ಸೀತೆಯ ಗಂಡ ರಾಮ ಎಂದರೇನು? ಅರ್ಥದಲ್ಲಿ ಎರಡೂ ಒಂದೇ ಅಲ್ಲವೇ? ಹೀಗಾಗಿ ಅಮಿತ್ ಷಾ ಅವರ ಮಾತು ಸ್ಪಷ್ಟ. ರವಿ ಬೆಳಗೆರೆ ಮುಖಪುಟ ವರದಿ ಬಾಹುಬಲಿ ಕೈತುಂಬ ಬಂಗಾರ ದೋಚಿದ ನೋಡಿ! ‘ಬಾಹುಬಲಿ’ ಚಿತ್ರ ರಾಜ ಮನೆತನಕ್ಕೆ ಸಂಬಂಧಿಸಿದ್ದು. ಒಂದು ರಾಜ ಸಂಸ್ಥಾನವನ್ನು ಸೋಲಿಸಿ ಮತ್ತೊಂದು ಸಾಮ್ರಾಜ್ಯ ಕಟ್ಟುವ ಕಥೆ. ಮಹಿಷ್ಮತಿ ಎನ್ನುವ ಸಾಮ್ರಾಜ್ಯದ ರಾಜ ಅಮರೇಂದ್ರ ಬಾಹುಬಲಿ ಮತ್ತು ಶಿವುಡು ಪಾತ್ರದಲ್ಲಿ ತೆಲುಗು ಚಿತ್ರರಂಗದ ಮೋಹಕ ನಟ, ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅದ್ಭುತವಾಗಿ ನಟಿಸಿದ್ದಾರೆ. ಈತನಿಗೆ ನಾಯಕಿಯಾಗಿ ತಮನ್ನಾ ಭಾಟಿಯಾ ನಟಿಸಿದ್ದರೆ, ರಾಣಾ ದಗ್ಗು ಬಾಟಿ, ಪ್ರಭಾಸ್ ವಿರುದ್ಧ ಅಮೋಘ ಅಭಿನಯ ನೀಡಿದ್ದಾರೆ. ಇದೆಲ್ಲದರ ಮಧ್ಯೆ ಕನ್ನಡದ ಕಿಚ್ಚ ಸುದೀಪ್ ಅಸ್ಲಾಂಖಾನ್ ಪಾತ್ರದಲ್ಲಿ ಒಂದೈದು ನಿಮಿಷ ಬಂದು ಹೋಗುತ್ತಾರಾದರೂ ಅವರ ಅಭಿನಯ ನಿಜಕ್ಕೂ ಖುಷಿ ನೀಡಿದೆ. ಸುದೀಪ್ ಅಭಿನಯಿಸಿರುವ ಆ ಐದು ನಿಮಿಷಗಳ ಚಿತ್ರೀಕರಣವನ್ನು ಹೈದರಾಬಾದ್‌ನ ಗೋಲ್ಕೊಂಡ ಪೋರ್ಟ್‌ನಲ್ಲಿ ಸತತ ಏಳು ದಿನಗಳ ಕಾಲ ಚಿತ್ರೀಕರಿಸಿದ್ದಾರೆಂದರೇ ನಿರ್ದೇಶಕ ರಾಜಮೌಳಿಯವರ ಕ್ರಿಯೇಟಿವಿಟಿ ಆದರೂ ಎಂತಹದ್ದು ಅಂತಾ ವಿವರಿಸಬೇಕಿಲ್ಲ. ಲೋಕೇಶ್ ಕೊಪ್ಪದ್ ರಾಜಕೀಯ ಸಿಎಂ ಪಟ್ಟಕ್ಕಾಗಿ ಸಿದ್ದು ಹಾಕಿದರು ತಂತ್ರ ಅದಕ್ಕೇ ಎಪ್ಪತ್ತೈದು ಶಾಸಕರಿಗೆ ಲಡ್ಡು ಮಂತ್ರ ಮಂಡ್ಯ ಜಿಲ್ಲೆಯ ಮಟ್ಟಿಗೆ ಒಬ್ಬ ಅಂಬರೀಷ್ ಅವರನ್ನು ತಡವಿಕೊಳ್ಳುವುದೇ ಕಷ್ಟವಾಗಿರುವಾಗ, ದಾವಣಗೆರೆ ಜಿಲ್ಲೆಯಲ್ಲಿ ಶಾಮನೂರು ಶಿವಶಂಕರಪ್ಪನವರನ್ನು, ಗುಲ್ಬರ್ಗ ಜಿಲ್ಲೆಯಲ್ಲಿ ಖಮರುಲ್ ಇಸ್ಲಾಂ ಅವರನ್ನು ಹೀಗೆ ತಾವು ಯಾರ‍್ಯಾರನ್ನು ತೆಗೆಯಬೇಕು ಎಂದಿದ್ದಾರೋ? ಅವರೆಲ್ಲ ಒಂದೊಂದು ಲೆವೆಲ್ಲಿನಲ್ಲಿ ಹೀಗೆ ಪವರ್‌ಫುಲ್ಲುಗಳಾಗಿರುವುದು ಸಿದ್ದರಾಮಯ್ಯನವರಿಗೆ ಗೊತ್ತಾಗಿದೆ. ಅಂಬರೀಷ್ ಒಬ್ಬರೇ ಈ ಲೆವೆಲ್ಲಿನಲ್ಲಿ ಗುಡ್‌ದಾ, ಬೋಟಿ, ಲಿವರ್ರು, ಕಲೀಜಾ ಅಲುಗಾಡಿಸಿರುವಾಗ ಉಳಿದವರೆಲ್ಲ ಸೇರಿದರೆ ತಮ್ಮ ನೆಮ್ಮದಿಯನ್ನೇ ಹಾಳು ಮಾಡುತ್ತಾರೆ ಎಂಬುದು ಅವರಿಗೆ ಅರ್ಥವಾಗಿದೆ. ಆರ್.ಟಿ.ವಿಠ್ಠಲಮೂರ್ತಿ ವರದಿ ಶುದ್ಧ ಪಿಂಪ್ ಅನಿಲ್ ಲಾಡ್ ಬಂಧನ! ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್‌ನ ಸಿಬಿಐ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇದು ಬಳ್ಳಾರಿ ಕಾಂಗ್ರೆಸ್ ವಲಯದಲ್ಲಿ ತಲ್ಲಣ ಮೂಡಿಸಿದರೆ, ಆಡಳಿತಾರೂಢ ಕಾಂಗ್ರೆಸ್‌ಗೆ ಮುಜುಗರ ಉಂಟುಮಾಡಿದೆ. ಈ ಮಧ್ಯೆ ಬಳ್ಳಾರಿಯ ಕೆಲ ಕಾಂಗ್ರೆಸ್ಸಿಗರು ಮಾತ್ರ ಒಳಗೊಳಗೆ ಖುಷಿ ಪಟ್ಟಿದ್ದಾರೆ. ಅಸಲಿಗೆ ಶಾಸಕ ಅನಿಲ್ ಲಾಡ್ ಮೊದಲೇ ಅರೆಸ್ಟ್ ಆಗಬೇಕಿತ್ತು ಎಂಬ ಮಾತುಗಳು ಕೇಳಿಬರುತ್ತಿದೆ. ಈ ಮೊದಲು ಬೇಲೇಕೇರಿ ಅಕ್ರಮ ಅದಿರು ರಫ್ತು ಪ್ರಕರಣದಲ್ಲಿ ಶಾಸಕರಾದ ಆನಂದ್ ಸಿಂಗ್, ಸುರೇಶ್ ಬಾಬು, ನಾಗೇಂದ್ರ, ಸತೀಶ್ ಸೈಲ್ ಹಾಗೂ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ ಸಹೋದರ ಲಿಂಗರಾಜುವನ್ನ ಬಂಧಿಸಲಾಗಿತ್ತು. ಮಲ್ಲಪ್ಪ ಬಣಕಾರ ವರದಿ ಕಿಮ್ಸ್ ಪೂತನಿಯರ ಕೈಲಿ ಶಿಶು ಹತ್ಯೆ! ಕಿಮ್ಸ್ ಆಸ್ಪತ್ರೆ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲೊಂದಾದ ಕಿಮ್ಸ್‌ನಲ್ಲಿ ಕಳೆದ ವಾರ ಒಂದರ ಹಿಂದೆ ಮತ್ತೊಂದು ಎಂಬಂತೇ ಸರದಿ ಪ್ರಕಾರ ನಾಲ್ಕು ನವಜಾತ ಶಿಶುಗಳು ಸಾವನ್ನಪ್ಪಿದವು. ಮಗುವನ್ನು ಕಳೆದುಕೊಂಡ ಪೋಷಕರ ಆರ್ತನಾದ ಮುಗಿಲು ಮುಟ್ಟುವಂತಾಗಿದೆ. ಅವಿವೇಕಿ ವೈದ್ಯರು ಹಾಗೂ ಸಂಘದ ಕೆಲ ಅವಿವೇಕಿಗಳು ತೇಪೆ ಹಚ್ಚುವ ಕಾಯಕದಲ್ಲಿ ನಿರತರಾದದ್ದು ನಾಚಿಕೆಗೇಡಿನ ಸಂಗತಿಯೇ ಸರಿ. ಇಷ್ಟಕ್ಕೂ ಆ ಮಕ್ಕಳು ಸತ್ತದ್ದಾದರೂ ಯಾಕೆ? ಆಸ್ಪತ್ರೆಯ ಕರ್ಮಕಾಂಡವಾದರೂ ಎಂಥದ್ದು? ಈ ಕುರಿತ ಡೀಟೆಲ್ಸ್ ಇಲ್ಲಿದೆ. ಅಶ್ವಿನ್ ಕುಮಾರ್ ವರದಿ ದಾವಣಗೆರೆ: ಆರ್‌ಟಿಐ ಮಣಿಕಂಠನ ಜೇಬಲ್ಲೇಕೆ ಗನ್ನು? ಮಣಿಕಂಠ ಅಲಿಯಾಸ್ ಮಣಿ ಸರ್ಕಾರ್! ಈ ಹೆಸರು ಕೇಳಿದರೆ ಸಾಕು ದಾವಣಗೆರೆಯ ಸರ್ಕಾರಿ ಅಧಿಕಾರಿಗಳು, ಭ್ರಷ್ಟ ನೌಕರರು ಬೆಚ್ಚಿ ಬೀಳತೊಡಗಿದ್ದಾರೆ. ಶುದ್ಧ ದಾದಾಗಿರಿ, ರೋಲ್‌ಕಾಲ್, ದಗಲ್ಬಾಜಿ ಜೊತೆಗೆ ಶ್ರೀರಾಮ ಸೇನೆ ಎಂಬ ಅಸ್ತ್ರವನ್ನ ಉಪಯೋಗಿಸಿಕೊಂಡು ಮಣಿಕಂಠ ದಾವಣಗೆರೆ ಮಂದಿಗೆ ಕಡಿಮೆ ಕಾಟ ನೀಡಿದ್ದಾನಾ? ಬರೆಯಲು ಕುಳಿತರೆ ಅದು ಒಂದು ಪಟ್ಟಿಗೆ ಮುಗಿಯುವಂಥದ್ದಲ್ಲ ಬಿಡಿ! ಇನ್ನಾದರೂ ದಾವಣಗೆರೆಯ ದಿಟ್ಟ ಹಾಗೂ ದಕ್ಷ ಎಸ್ಪಿ ಡಾ.ಬೋರಲಿಂಗಯ್ಯನವರು ಈ ವಂಚಕನನ್ನು ಊರು ಬಿಡಿಸದಿದ್ದರೆ ಅದೆಷ್ಟು ಕುಟುಂಬಗಳು ಬೀದಿ ಪಾಲಾಗಲಿವೆಯೊ? ವರದಿಗಾರ ವರದಿ ಮೂಡಬಿದ್ರಿ: ಪಟ್ಲ ಸತೀಶನ ಹೆಸರಲ್ಲಿ ಭಟ್ಟ! ಇವನು ದೇವಾನಂದ. ಪೂರ್ತಿ ಹೆಸರು ದೇವಾನಂದ ಭಟ್ಟ. ಮಾತಿಗೆ ನಿಂತರೆ ಶುದ್ಧ ವಿವೇಕಾನಂದ; ಗುಣವೆಲ್ಲವೂ ಬಿಡದಿಯ ನಿತ್ಯಾನಂದ! ಮೂಗು ಬೊಟ್ಟೆಂದರೆ ಇವನಿಗೆ ಪರಮಾನಂದ. ಇಂತಹ ದೇವಾನಂದ ಭಟ್ಟ ಯಕ್ಷಗಾನದ ಹೆಸರಲ್ಲಿ ಜೋಳಿಗೆ ಒಡ್ಡುತ್ತಲೇ ಭರ್ಜರಿಯಾಗಿ ಗಂಟು ಕಟ್ಟಿಕೊಳ್ಳುತ್ತಿದ್ದಾನೆ. ಅದರಲ್ಲೂ ಪಟ್ಲ ಸತೀಶ್ ಶೆಟ್ಟರಂತಹ ಸಜ್ಜನರ ಹೆಸರನ್ನು ಬಳಸಿಕೊಂಡೇ ಲಕ್ಷಾಂತರ ರುಪಾಯಿ ಹಣವನ್ನು ಜೋಳಿಗೆ ತುಂಬಿಸಿಕೊಂಡು ಹೆಂಡತಿಯನ್ನ ಕಟ್ಟಿಕೊಂಡು ದುಬೈ ಯಾತ್ರೆ ಹೊರಡುತ್ತಾನೆ. ಈತನ ಅಸಲೀ ಇತಿಹಾಸವನ್ನ ಕೇಳಿದರೆ ನೀವು ಕುಂತಲ್ಲೇ ಕನಲಿ ಹೋಗುವುದಂತೂ ಖರೆ. ಅಸಲಿಗೆ ಇವನಿಗೆ ಶುದ್ಧವಾದ ಇತಿಹಾಸವೇ ಇದ್ದಂತೆ ಕಾಣಿಸುತ್ತಿಲ್ಲ. ತಾನು ಕಾಲಿಟ್ಟಲ್ಲೆಲ್ಲಾ ಒಂದಿಲ್ಲೊಂದು ಭಾನಗಡಿ ಮಾಡಿಕೊಂಡೇ ಬೆಳೆದು ಬಂದ ಭಟ್ಟನಿಗೆ ಆಗಾಗ ಧರ್ಮದೇಟುಗಳು ಬಿದ್ದು ಬಿದ್ದೇ ಮೈ ಚರ್ಮ ದಪ್ಪಗಾಗಿ ಹೋಗಿದೆ. ವಸಂತ್ ಗಿಳಿಯಾರ್ ನೇವಿ ಕಾಲಂ ಒಂದಕ್ಕೊಂದು ಸಂಬಂಧಪಟ್ಟಲ್ಲಿ ಕಾಕತಾಳೀಯ ಮಾತ್ರ ಒಂದಕ್ಕೊಂದು ಸಂಬಂಧ ಪಡದ ಕೆಲವು ವಿಚಾರಗಳನ್ನು ಈ ಸಲ ಬರೆಯಬೇಕಾಗಿದೆ. ಒಂದು, ಮೊನ್ನೆ ಮೊನ್ನೆ ‘ಅನ್ನಭಾಗ್ಯ’ವನ್ನು ಎಸ್.ಎಲ್. ಭೈರಪ್ಪ ಅವರು ವಿರೋಧಿಸಿದ ನಂತರ ಸಾಮಾಜಿಕವಾಗಿ ಎದ್ದ ವಿರೋಧಗಳು, ಅದಕ್ಕೋಸ್ಕರ ಬಂದ ಕಾಮೆಂಟುಗಳು, ಭೈರಪ್ಪ ಅವರಿಗೆ ಬಾಲ್ಯದಲ್ಲಿ ಯಾರೋ ವಾರಾನ್ನ ಕಲ್ಪಿಸದೇ ಹೋಗಿರುತ್ತಿದ್ದರೆ ಅವರು ಹೇಗೆ ಸಾಹಿತಿಗಳಾಗುತ್ತಿದ್ದರು ಎಂಬ ಬಗ್ಗೆ. ಬಹಳ ವಿಚಿತ್ರವಾಗಿ ಕಂಡಿದ್ದು ಅನ್ನಭಾಗ್ಯವನ್ನು ಒಪ್ಪಿಕೊಳ್ಳುವುದು ದಲಿತಪರವೂ, ವಿರೋಧಿಸುವುದು ದಲಿತ ವಿರೋಧಿಯೂ ಆಗಿ ಕಂಡಿದ್ದು. ಸ್ವತಃ ದಲಿತಪರ ಲೇಖಕರಾದ ಕುಂವೀ ಅವರು ‘ಅನ್ನಭಾಗ್ಯ’ವನ್ನು ವಿರೋಧಿಸಿದಾಗಲೂ ಅವರ ಬೆಂಬಲಿಗರೇ ಅವರನ್ನು ವಿರೋಧಿಸಿದರು. ಸ್ವತಃ ಅವರ ಪುತ್ರ ಈ ಬಗ್ಗೆ ಆಡಿದ ಆಕ್ಷೇಪಕ್ಕೆ ಕುಂವೀ ಉತ್ತರವನ್ನೂ ಕೊಟ್ಟರು. ನೇವಿ ಜಾನಕಿ ಕಾಲಂ ಪೆಟ್ರೋಮ್ಯಾಕ್ಸ್ ರಾಮಣ್ಣನ ಜುಗಾರಿ ಕ್ರಾಸ್ ತನ್ನ ಪಾಡಿಗೆ ತಾನು ನೆಮ್ಮದಿಯಾಗಿರೋದಕ್ಕೆ ಏನ್ರೀ ರೋಗ ಎಂದು ಸುಮ್ಮನೆ ತರಲೆ ಮಾಡುವವರನ್ನು ನಮ್ಮೂರಲ್ಲಿ ಬೈಯುತ್ತಿರುತ್ತಾರೆ. ನಮ್ಮೂರಿನ ಮಂದಿಯೂ ಅಷ್ಟೇ, ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದಲ್ಲ ಒಂದು ತರಲೆಗಳಲ್ಲಿ ಸಿಕ್ಕಿಹಾಕಿಕೊಂಡು, ಅದರಿಂದ ಹೊರಬರಲಾರದೇ ಒದ್ದಾಡುತ್ತಿರುತ್ತಾರೆ. ಹೀಗೆ ಯಾವುದಾದರೂ ತಾಪತ್ರಯಗಳಲ್ಲಿ ಸಿಕ್ಕಿಹಾಕಿಕೊಂಡವರು, ಒಮ್ಮೆ ಅದರಿಂದ ಹೊರಬಂದರೆ ಸಾಕು ಎಂದು ಚಡಪಡಿಸುತ್ತಿರುತ್ತಾರೆ. ಅದರಿಂದ ಹೊರಬಂದು ನಿರಾಳವಾದ ನಂತರ ಅವರು ಸುಮ್ಮನಿರುತ್ತಾರೆ ಎಂದು ನೀವು ಭಾವಿಸಿದ್ದರೆ, ಅದಕ್ಕಿಂತ ಮೂಢನಂಬಿಕೆ ಮತ್ತೊಂದಿಲ್ಲ. ಒಂದು ಬಿಕ್ಕಟ್ಟಿನಿಂದ ಆಚೆ ಬಂದು ಕೆಲವೇ ದಿನಕ್ಕೆ ಅವರಿಗೆ ಕೈ ಕೆರೆಯಲು ಆರಂಭವಾಗುತ್ತದೆ. ಜಾನಕಿ ಅಂಕಣ : ಒಲಿದಂತೆ ಹಾಡುವೆ ಲಖನೌದಲ್ಲಿ ಒಂದು ಸಣ್ಣ ಅನಾಹುತ “ನಿಮ್ಮದು ಒಂದು ಸುಂದರ ಮನಸ್ಸು. ನೀವು ಬಾಹ್ಯ ಸೌಂದರ್ಯದ ಬಗ್ಗೆ ಚಿಂತಿಸುವುದಿಲ್ಲ, ಅಲ್ಲವೇ-Yours is a Beautiful mind. You dont bother about your external Beauty right"- ಒಂದು ವಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಒಂದು ಪ್ರಮಾಣಪತ್ರ ಕೊಡುತ್ತಾ ಬರ್ಡ್‌ನ ನಿರ್ದೇಶಕರು ಹೇಳಿದರು. ಅವರು ಯಾಕೆ ಹಾಗೆ ಹೇಳಿದರು ಎಂಬುದು ಆ ಕ್ಷಣದಲ್ಲಿ ಅರ್ಥವಾಗದಿದ್ದರೂ ಸುಮ್ಮನೆ ಮುಗುಳ್ನಕ್ಕೆ. ಹೊರಬಂದ ತಕ್ಷಣ ಒಂದು selfie ತೆಗೆದುಕೊಂಡು ನನ್ನ ಮುಖವನ್ನ ನಾನೇ ನೋಡಿಕೊಂಡೆ. ವಿಕಾರವಾಗಿ ಕಾಣುತ್ತಿತ್ತು. ಇನ್ನೆಂದೂ ಇದನ್ನು ಸರಿಪಡಿಸಲು ಸಾಧ್ಯವಿಲ್ಲವೇನೋ ಎಂಬಷ್ಟು Disfigure ಆಗಿತ್ತು. ಮುಖದ ಬಲಭಾಗ ಮಾಮೂಲಿನಂತಿದ್ದರೆ ಎಡಭಾಗ ಕಣ್ಣಿನ ಕೆಳಗೆ ಕಪ್ಪುಗಟ್ಟಿ ಕಪೋಲ ಊದಿಕೊಂಡಿತ್ತು. ಎಲ್ಲರೂ ನನ್ನೆಡೆಗೆ ಮರುಕದ ನೋಟ ಬೀರುತ್ತಿರುವಾಗಲೇ ಅಲ್ಲಿಂದ ಜಾರಿಕೊಂಡು ರೂಮು ಸೇರಿದೆ. ಚಂದ್ರಶೇಖರ ಆಲೂರು ಅಂಕಣ : ಆಕಾಶಬುಟ್ಟಿ ಹೆಂಗಸರಿಗೆ ಮುವ್ವತ್ತೈದಾದ ನಂತರ ಏನಾಗುತ್ತದೆ? ನಾನು ಏನಾದರೂ ಸಹಿಸಬಲ್ಲೆ. ಹೆಂಗಸರಿಗೆ ವಯಸ್ಸಾಗುವುದನ್ನು ಮಾತ್ರ ಸಹಿಸಲಾರೆ! ಇದೆಂತಹ ಪ್ರಶ್ನೆ ಅಂತ ಕೆಲವರು ಅನ್ನಬಹುದು. ಲೆಕ್ಕ ಗೊತ್ತಿರುವವರು ಮುವ್ವತ್ತಾರು ಅನ್ನಬಹುದು. ಮುವ್ವತ್ತೈದರ ಹೊಸ್ತಿಲು ದಾಟಲು ಒದ್ದಾಡುವ ಮುವ್ವತ್ತೆಂಟಾದರೂ ಮುವ್ವತ್ತೈದು ಅಂತ ತೇಲಿಸುವ ಹೆಂಗಸರು ಕಣ್ಣರಳಿಸಬಹುದು. ಆದರೆ ಬರ್ತಡೇಗಳು ನಮ್ಮ ಪರ್ಮೀಷನ್ ಕೇಳುವುದಿಲ್ಲ. ಅವು ಬರುತ್ತವೆ, ಹೋಗುತ್ತವೆ. ಮುವ್ವತ್ತೈದರ ನಂತರದ ಬದುಕನ್ನು ನಾನು ಊಹಿಸಿರಲಿಲ್ಲ. ಇನ್ ಫ್ಯಾಕ್ಟ್ ನನಗೂ ವಯಸ್ಸಾಗಬಹುದು ಅಂತ ನಾನು ಎಣಿಸಿರಲಿಲ್ಲ. ಈಗ ಮುವ್ವತ್ತೈದು ದಾಟಿರುವುದರಿಂದ ಹೇಳುತ್ತಿದ್ದೇನೆ. ಅದು ಮುವ್ವತ್ನಾಲ್ಕಕ್ಕಿಂತ ಅಥವಾ ಮುವ್ವತ್ತಾರಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಎಚ್.ಡಿ. ಸುನೀತಾ ಅಂಕಣ : ನೂರು ಮುಖ ಸಾವಿರ ದನಿ ಕರಿಬಸವೇಶ್ವರ ಗದ್ದಿಗೆ/ಸ್ವಾಮಿ ಠಿಕಾಣಿ ಉಳಿಸಿದ್ದು ಹೆಚ್ಚುಕಡಿಮೆ ಮೂವತ್ತೈದು-ಮೂವತ್ತಾರು ವರ್ಷಗಳ ಹಿಂದೆ ನಾನು ವಕೀಲನಾಗಿ ಒಂದು ಅಥವಾ ಎರಡು ವರ್ಷ ಆಗಿರಬಹುದು. ಮೈಲಿ ಮುಖದ ಮಳಲ್ಕೆರೆ ಕೊಟ್ರಪ್ಪ, ಹಳವುದಾರದ ಶಂಕ್ರಪ್ಪ ಮತ್ತು ಕೆ.ಪಿ. ಸಿದ್ದನಗೌಡ ಎಂಬುವರನ್ನು ಕರೆತಂದಿದ್ದರು. “ಸ್ವಾಮಿ, ಇದೇ ದಾವಣಗೆರೆ ಪಿ.ಜೆ. ಬಡಾವಣೆ ವಿಶ್ವೇಶ್ವರಯ್ಯ ಪಾರ್ಕ್ ಹಿಂಭಾಗದ ದೊಡ್ಡ ಜಾಗ ಈ ಶಂಕ್ರಪ್ಪರದು. ಅದ್ರಾಗೆ ಈವಯ್ಯ ಒಂದು ಗುಡಿಸ್ಲು ಆಕ್ಯಂಡು ಅದ್ರಾಗೆ ಉಕ್ಕಡಗಾತ್ರಿ ಕರಬಸಜ್ಜನ (ದೆವ್ವನನ್ನು ಬಿಡಿಸುವ ಖ್ಯಾತಿಯ) ಫೊಟೋ ಇಟ್ಕಂಡು ಪೂಜೆ ಮಾಡ್ತಾರೆ. ಭಕ್ತರೂ ಬರ‍್ತಾರೆ. ಈವಯ್ಯ, ಅವ್ನೇಂಡ್ತಿ, ನಾಕ್ ಸಣ್ ಮಕ್ಳು ಎಲ್ಲಾ ಅದ್ರಾಗೇ ಅದಾರೆ. ಹೆಂಗೋ ಜೀವ್ನ ನಡೀತಾ ಐತೆ. ಆದ್ರೆ ಅದ್ಯಾರೋ ಒಬ್ ಡಾಕ್ಟ್ರು ಇನ್ನೊಬ್ಬ ಸೇರಿ “ಈ ಜಾಗ ನಮ್ದು ನಾವ್ ತಗಂಡಿದೀವಿ, ಗುಡುಸ್ಲು ಕಿತ್ಕಂಡು ಖಾಲಿ ಮಾಡ್ರಿ" ಅಂತ ಧಮಕಿ ಹಾಕಿದಾರೆ ಅವ್ರಿಗೆ ಕೋರ್ಟಿನಿಂದ ಇಂಜಕ್ಷನ್ನು ಪಂಜಕ್ಷನ್ನು ಎಂತದಾರ ಆಡ್ರು ಕೊಡಿಸಿ ಉಪಕಾರ ಮಾಡ್ರಿ, ಇದ್ದಂತರಲ್ಲ ಒಂದೀಟು ಫೀಜು ಕೊಡ್ತಾರೆ" ಅಂತ ಒಂದೇ ಉಸಿರಿಗೆ ಹೇಳಿ ಮುಗಿಸಿದ. ಎಂ.ವಿ. ರೇವಣಸಿದ್ದಯ್ಯ

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.