Hi Bangalore

Complimentary Offer

  • Pay via readwhere wallet and get upto 40% extra credits on wallet recharge.
Hi Bangalore

Hi Bangalore

This is an e-magazine. Download App & Read offline on any device.

ಸೃಷ್ಟಿ 1039: ಸಂಪುಟ 20, ಸಂಚಿಕೆ 51, ಸೆಪ್ಟಂಬರ್ 17, 2015 ಖಾಸ್‌ಬಾತ್ ಬರಲಿದ್ದಾಳೆ ಸೌಭಾಗ್ಯವತಿ ಇನೋವಾ ಎಂಬ ಗೆಳತಿಯ ನಿರೀಕ್ಷೆಯಲ್ಲಿ ನಾನು! ಇನ್ನೇನು, ಅದು ಬಂದಂತೆಯೇ. ಮೊಟ್ಟ ಮೊದಲ ಬಾರಿಗೆ ಅದನ್ನು ನೋಡಿದಾಗ “ಬೇಡ, ಈ ಗಾಡಿಗೆ ground clearence ಸರಿಯಾಗಿಲ್ಲ. ಬೇರೆ ಗಾಡಿ ನೋಡಿ" ಅಂದಿದ್ದೆ: ಅನೇಕ ವರ್ಷಗಳ ಹಿಂದೆ. ಕಡೆಗೆ ಅದೇ ಗಾಡಿಗೆ ಗಂಟು ಬಿದ್ದಿದ್ದೇನೆ. ಅದರ ಹೆಸರು ಇನೋವಾ. ನಿಮಗದು ಗೊತ್ತು. ನನಗೆ ಕಾರುಗಳ fancy ಇಲ್ಲ. ಲಗೇಜ್ ಗಾಡಿಯಲ್ಲಿ ಬೇಕಾದರೂ ಕೂತು ಹೋಗಬಲ್ಲೆ. ನನಗದು ಸಂಕೋಚದ ಸಂಗತಿಯೇ ಅಲ್ಲ. ನೋಡಿ, ಆಗ ಕೆಲವು ದಿನ ನಮ್ಮ ಆಫೀಸು ಟೀಚರ‍್ಸ್ ಕಾಲೋನಿಯಲ್ಲಿತ್ತು. Actually ಅದೊಂದು ಮನೆ. ನಾವು ಬಾಡಿಗೆಗಿದ್ದೆವು. ಸದರಿ ಆಫೀಸಿಂದ ಕೆಲವೇ ಹೆಜ್ಜೆಗಳ ದೂರದಲ್ಲಿ ಸೀನನ ಕೊಲೆಯಾಗಿತ್ತು. ಅವನು ಡ್ರೈವ್ ಮಾಡುತ್ತಿದ್ದ ಮಾರುತಿ ಎಸ್ಟೀಮ್ ಕಾರು ಟೀಚರ‍್ಸ್ ಕಾಲೋನಿ ಹತ್ತಿರದ ಕ್ರಾಸ್‌ನಲ್ಲಿ attack ಆಗಿ, ಅವನನ್ನು ಶ್ರೀಧರ್ ಅಂತ ಭಾವಿಸಿ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಅವತ್ತು ಶ್ರೀಧರ್ ತುಂಬ disturb ಆಗಿದ್ದ. ಸೀನನನ್ನು ಕೊಂದದ್ದು, ಈಗ ಮೊರೊಕ್ಕೋ ದೇಶದಿಂದ ಡಿಪೋರ್ಟ್ ಆಗಿ ಪೊಲೀಸರ ಕೈಗೆ ಸಿಕ್ಕಿರುವ ಇದೇ ಬನ್ನಂಜೆ ರಾಜ. ಕೊಲೆಯಾಗಿ, ಕೆಲವು ದಿನಗಳ ತನಕ ಪೊಲೀಸರ ಕಸ್ಟಡಿಯಲ್ಲಿದ್ದ ಎಸ್ಟೀಮ್ ಕಾರು ಆ ನಂತರ ರಿಪೇರಿಗೆ ಹೋಗಿತ್ತು. ಕಾರಿನ ತುಂಬ ರಕ್ತವಿತ್ತು. ಮಾಂಸದ ತುಣುಕುಗಳಿದ್ದವು. ಬುಲೆಟ್‌ನಲ್ಲಿರುವಂತಹ ಚರ್ರೆಗಳು ಬಿದ್ದಿದ್ದವು. ಅದನ್ನು ರಿಪೇರಿ ಮಾಡಿಸಿ, ಚೆನ್ನಾಗಿ wash ಮಾಡಿಸಿ ಹುಡುಗರ‍್ಯಾರೋ ತಂದು ಶ್ರೀಧರನ ಮನೆಯೆದುರು ನಿಲ್ಲಿಸಿದ್ದರು. ಅದೇ ಕಾರಿನಲ್ಲಿ ನಾನು ಸಾಕಷ್ಟು ಸಲ ಕುಳಿತಿದ್ದೆ. ಅದನ್ನು ಬಚ್ಚನ್ ತುಂಬ ಚೆನ್ನಾಗಿ ನೋಡಿಕೊಂಡಿದ್ದ. ಕೊಲೆಯಾದ ಸೀನ ಸರಿಯಾಗಿ ಹಲ್ಲು ಉಜ್ಜುತ್ತಿದ್ದನೋ ಇಲ್ಲವೋ? ಕಾರನ್ನು ಮಾತ್ರ ಸದಾ ಫಳಫಳಿಸುವಂತೆ ಮಾಡಿಟ್ಟುಕೊಂಡಿದ್ದ. ಆದರೆ ರಿಪೇರಿಯಾಗಿ, ರೆಡಿಯಾಗಿ ಬಂದ ಕಾರನ್ನು ಬಚ್ಚನ್ ಸುಮ್ಮನೆ ದೂರದಿಂದ ಒಮ್ಮೆ ನೋಡಿ ಸುಮ್ಮನಾಗಿದ್ದ. ಶ್ರೀಧರ್, “ಆ ಕಾರಿನಲ್ಲಿ ನಾನು ಕಾಲು ಕೂಡ ಇಡೋದಿಲ್ಲ" ಅಂದಿದ್ದ. ಸರಿ, ನಾನು ಎರಡು ಲಕ್ಷ ರುಪಾಯಿ ಕೊಟ್ಟು ಖರೀದಿಸಿದ್ದೆ. “ ಈ ಕಾರು ಯಾಕೆ ತಗೊಂಡೆ?" ಅಂತ ಅನೇಕರು ಅಂದರು. ರವಿ ಬೆಳಗೆರೆ ಸಾಫ್ಟ್‌ಕಾರ್ನರ್ ಸದ್ಯಕ್ಕೀಗ ಅವರು ಅಧಿಕಾರದಲ್ಲಿ ಇಲ್ಲವಲ್ಲ? ಅವರೊಂದಿಗಿನ ನನ್ನ ಸ್ನೇಹ ಸುಮಾರು ಇಪ್ಪತ್ತು ವರ್ಷಗಳದು. ಅವರು ಎಚ್.ವಿಶ್ವನಾಥ್. ವಿಪರೀತ ನಗೆ, ಸಾಹಿತ್ಯ, ಸಂಗೀತ ಇತ್ಯಾದಿಗಳ ಮನುಷ್ಯ ಅವರು. ಕೆಲವೊಮ್ಮೆ ಕಡ್ಡಿ ಮುರಿದಂತೆ ನಿಷ್ಠುರದ ಮಾತು ಆಡಿ ಬಿಡುತ್ತಾರೆ. ಅವರು ಕಾಂಗ್ರೆಸ್‌ನಲ್ಲಿರೋದು ನಿಜ. ಆದರೆ ತಮ್ಮದೇ ಪಕ್ಷದ ಅನೇಕರನ್ನು ಟೀಕಿಸಿಬಿಡುತ್ತಾರೆ. ಕಲಿತರೆ ಗೇಲಿ ಮಾಡುವುದನ್ನು ಅವರಿಂದಲೇ ಕಲಿಯಬೇಕು. ಅವರು ತಮ್ಮನ್ನೂ ಕೆಲವೊಮ್ಮೆ ಗೇಲಿ ಮಾಡಿಕೊಳ್ಳುವುದುಂಟು. ಎಲ್ಲವನ್ನೂ ಮೀರಿದುದು, ಅವರ ಕಾಳಜಿ. ಅದರಲ್ಲೂ ಕೆಳವರ್ಗದವರೆಡೆಗೆ ವಿಶ್ವನಾಥ್‌ಗೆ ಅಪಾರವಾದ ಮತ್ತು ನಿಜವಾದ ಕಾಳಜಿ ಇದೆ. ಅದು ಸಹಜ. ವಿಶ್ವನಾಥ್ ದೇವರಾಜ ಅರಸು ಅವರ ಗರಡಿಯಲ್ಲಿ ಬೆಳೆದವರು. ನಾನು ಆಗಷ್ಟೆ ‘ಪತ್ರಿಕೆ’ ಆರಂಭಿಸಿದ್ದೆ. ಆಗಿನ್ನೂ ಮೊಬೈಲ್‌ಗಳಿರಲಿಲ್ಲ. ಬದಲಿಗೆ ಪೇಜರ್‌ಗಳಿದ್ದವು. ಅದರ ಮೂಲಕವೇ ನಾನು-ವಿಶ್ವನಾಥ್ ಮಾತಾಡಿಕೊಳ್ಳುತ್ತಿದ್ದೆವು. ಒಮ್ಮೆ ವಿಶ್ವನಾಥ್ ಪದ್ಮನಾಭನಗರಕ್ಕೆ ಬಂದವರು “ನಿಮ್ಮ ಮನೆಗೆ ಬರಬೇಕು. ಹೇಗೆ?" ಅಂದರು. ನಾನು ಬೈಕ್ ಹತ್ತಿ ಅವರಿದ್ದಲ್ಲಿಗೇ ಹೋದೆ. ಅವರೇನೂ ಸುಮ್ಮನೆ ಅಲ್ಲ: ಅವತ್ತಿಗಾಗಲೇ ಮಂತ್ರಿಯಾಗಿ, ಮಾಜಿಯಾಗಿದ್ದವರು. ಒಂದು ಪ್ರಶ್ನೆ ಕೂಡ ಕೇಳದೆ ನನ್ನ ಬೈಕ್‌ನಲ್ಲಿ ಹಿಂದಿನ ಸೀಟು ಹತ್ತಿ ಕುಳಿತರು. ನಾನು ಎರಡು ಅಂಗೈಯಗಲದ ಬಾಡಿಗೆ ಮನೆಯಲ್ಲಿದ್ದೆ. ಅವರಿಗೆ ‘ಪತ್ರಿಕೆ’ ತುಂಬ ಇಷ್ಟವಾಗಿಬಿಟ್ಟಿತ್ತು. ರವಿ ಬೆಳಗೆರೆ ಬಾಟಮ್ ಐಟಮ್ ನಿಮ್ಮ ಅಮೂಲ್ಯ ಮತಗಳು ರೆಸಾರ್ಟು ಪಾಲಾಗಿವೆ ‘ಯೇಯ್ ಅಯೋಗ್ಯ.... ಯೇ ಅವಿವೇಕಿ.... ಏ ನಾಚಿಕೆಯಿಲ್ಲದವನೇ.... ನೀನೊಬ್ಬ ನಾಲಾಯಕ್.... ರಣಹೇಡಿ....’ ಯಾವುದೋ ಬಾರ್ ಮುಂದೆ ಕುಡುಕನೊಬ್ಬ ಹೀಗೆ ಹುಚ್ಚುಚ್ಚಾಗಿ ಬೈದಾಡಿದರೆ ಯಾರಿಗೇನೂ ಅನಿಸುತ್ತಿರಲಿಲ್ಲ. ಯಾಕೆಂದರೆ ಅದು ಅವನ ತಪ್ಪಲ್ಲ, ಹೊಟ್ಟೆಯಲ್ಲಿರುವ ಪರಮಾತ್ಮನ ಮಹಿಮೆ ಎಂದು ಜನರು ಸುಮ್ಮನಾಗುತ್ತಿದ್ದರು. ಪುಡಿ ರೌಡಿಯೊಬ್ಬ ಬೀದಿಯಲ್ಲಿ ನಿಂತು ಇಂಥಾದ್ದೇ ಚಿಲ್ಲರೆ ಬೈಗಳನ್ನು ಎಸೆಯುತ್ತಾ ಎದುರಾಳಿಯನ್ನು ಹೊಡೆದಾಟಕ್ಕೆ ಆಹ್ವಾನಿಸಿದರೆ ಯಾರಿಗೂ ಆಶ್ಚರ್ಯವಾಗುತ್ತಿರಲಿಲ್ಲ, ಅದು ಅವನ ಹುಟ್ಟುಗುಣ ಎಂದು ಸುಮ್ಮನಾಗುತ್ತಿದ್ದರು. ಆದರೆ ಈ ಮಾತುಗಳು ಹೊರಬಂದಿದ್ದು ಒಬ್ಬ ಅನುಭವಿ ಶಾಸಕನ ಬಾಯಿಂದ. ಅದರಲ್ಲೂ ಬೆಂಗಳೂರಿನ ಆನಂದರಾವ್ ಸರ್ಕಲ್‌ನಲ್ಲಿರುವ ಗಾಂಧಿ ಪ್ರತಿಮೆಯ ಮುಂದೆ ನಿಂತು ಇಂಥಾ ಮಾತಾಡುತ್ತಾನೆಂದರೆ ಆತ ಎಂಥ ಲಜ್ಜೆಗೇಡಿ ಆಗಿರಬೇಕು ಲೆಕ್ಕ ಹಾಕ್ಕೊಳ್ಳಿ. ಈ ವ್ಯಕ್ತಿ ಗಾಂಧಿಯನ್ನು ಗುತ್ತಿಗೆಗೆ ತೆಗೆದುಕೊಂಡಂತೆ ಆಡುವ ಕಾಂಗ್ರೆಸ್ ಪಕ್ಷಕ್ಕೆ ಸೇರಿದಾತ ಅನ್ನುವುದು ಇನ್ನೊಂದು ದುರಂತ. ರವಿ ಬೆಳಗೆರೆ ಹಲೋ ಉರಿಯುವ ಮನೆಯಲ್ಲಿ ಗಳ ಹಿರಿಯುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ ರಾಜ್ಯಾದ್ಯಂತ ಬರಗಾಲದ ಛಾಯೆ ಆವರಿಸಿದೆ. ಎಲ್ಲೆಲ್ಲೂ ದುಗುಡದ ವಾತಾವರಣ. ಜನಜಂಗುಳಿಯಿಂದ ಕಿಕ್ಕಿರಿಯುತ್ತಿದ್ದ ಮಾಲ್‌ಗಳಿಂದ ಹಿಡಿದು, ಆಯಾ ಪ್ರದೇಶದ ಮಾರುಕಟ್ಟೆಗಳು ಬಿಕೋ ಎನ್ನತೊಡಗಿವೆ. ಅರ್ಥವ್ಯವಸ್ಥೆಯಲ್ಲಿ ಇವೆಲ್ಲ ಸಹಜ. ಜಗತ್ತಿನ ಇತಿಹಾಸ ಕಂಡ ಮಹಾನ್ ಆರ್ಥಿಕ ಹಿಂಜರಿತ ಎಂದರೆ 1929ರ ಸುಮಾರಿಗೆ ಅಮೆರಿಕದ ಮಾರುಕಟ್ಟೆ ನೆಲಕಚ್ಚಿ ಹೋಗಿದ್ದು. ಎಲ್ಲಿ ನೋಡಿದರಲ್ಲಿ ನಿರುದ್ಯೋಗ, ಬಡತನ, ಬದುಕಲೂ ಕಷ್ಟಪಡುವ ಸ್ಥಿತಿ. ಆದರೆ ಈಗ ಪರಿಸ್ಥಿತಿ ಅಷ್ಟು ಕಠೋರವಾಗಿಲ್ಲವಾದರೂ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆ ಮಳೆ ಬಂದರೆ, ನೆರೆಯ ತಮಿಳುನಾಡಿಗೆ ಕೊಡಲು ನೀರಿಲ್ಲದಿದ್ದರೆ, ಇಲ್ಲಿರುವವರಿಗೆ ಕುಡಿಯುವ ನೀರಿಗೆ ಸಂಕಷ್ಟ ಎದುರಾಗುತ್ತದೆ ಎಂದರೆ, ಕೃಷಿ ವ್ಯವಸ್ಥೆ ನೆಲ ಕಚ್ಚಿ ಹೋದರೆ ಸಹಜವಾಗಿಯೇ ಒಂದು ಹಾಹಾಕಾರ ಸೃಷ್ಟಿಯಾಗುತ್ತದೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅಂತೂ, ಸಕಾಲಕ್ಕೆ ಮಳೆ ಬರದಿದ್ದರೆ ಕರೆಂಟಿನ ವಿಷಯದಲ್ಲಿ ದೇವರೇ ದಿಕ್ಕು ಎಂದು ಕೈ ಎತ್ತಿ ಬಿಟ್ಟಿದ್ದಾರೆ. ಆದರೆ ರಾಜ್ಯದ ಈಗಿನ ವಿದ್ಯುತ್ ಬೇಡಿಕೆ ಪ್ರಮಾಣ ಒಂಬತ್ತು ಸಾವಿರ ಮೆಗಾವ್ಯಾಟ್, ಪೂರೈಕೆ ಪ್ರಮಾಣ ಐದು ಸಾವಿರದ ಆರು ನೂರು ಮೆಗಾವ್ಯಾಟ್. ಅಂದರೆ ಮೂರು ಸಾವಿರದ ನಾಲ್ಕು ನೂರು ಮೆಗಾವ್ಯಾಟ್‌ಗಳಷ್ಟು ವಿದ್ಯುತ್ ಕೊರತೆ. ಹೀಗೆ ಕೊರತೆಯಾಗಿರುವ ವಿದ್ಯುತ್ ಅನ್ನಾದರೂ ಎಲ್ಲಿಂದ ತರಬೇಕು? ಖರೀದಿ ಮಾಡಿ ತರಲು ಸಿದ್ಧ ಎಂದರೂ ಅದನ್ನು ತರಲು ಅಗತ್ಯವಾದ ಕಾರಿಡಾರುಗಳಿಲ್ಲ. ಈ ಮಧ್ಯೆ ಸಂದರ್ಭದ ಕಾಠಿಣ್ಯವನ್ನೇ ಉಪಯೋಗಿಸಿಕೊಂಡು ರಾಜ್ಯದ ಬಿಜೆಪಿ ನಾಯಕರು ಜನರನ್ನು ದಂಗೆ ಏಳಿಸಲು ಹೊರಟಿದ್ದಾರೆ. ರವಿ ಬೆಳಗೆರೆ ಮುಖಪುಟ ವರದಿ ಪರಮ ಪಾತಕಿ ದಿವಾನ್ ಅಲಿ ತಮ್ಮನ ಭೀಕರ ಮರ್ಡರ್! ನಯಾಜ್, ಬನಶಂಕರಿಯ ಯಾರಬ್ ನಗರ ಸೇರಿದಂತೆ ಸುತ್ತ-ಮುತ್ತಲಿನ ಏರಿಯಾಗಳಲ್ಲಿ ತನ್ನ ಅಣ್ಣ ಕಾರ್ಪೊರೇಟರ್ ದಿವಾನ್ ಆಲಿಯ ದೌಲತ್ತಿನಿಂದ ಮೆರೆಯುತ್ತಿದ್ದ. ಅದೇ ಗುಂಗಿನಲ್ಲಿ ಹೊಡೆದಾಟ, ಬಡಿದಾಟಗಳಲ್ಲೂ ಪಾಲುದಾರನಾಗಿದ್ದ. ನಯಾಜ್‌ನ ಪುಂಡಾಟಿಕೆ ಗುರುತಿಸಿದ್ದ ಬನಶಂಕರಿ ಠಾಣೆಯ ಪೊಲೀಸರು ಈತನ ವಿರುದ್ಧ ರೌಡಿಶೀಟ್ ಕೂಡ ತೆರೆದಿದ್ದರು. ಆದರೆ 2011ರ ಜನವರಿ 16ರಂದು ತನ್ನ ಅಣ್ಣ ಕಾರ್ಪೊರೇಟರ್ ದಿವಾನ್ ಆಲಿಯ ಮರ್ಡರ್ ಆಯಿತೋ ಭಯಬಿದ್ದ ನಯಾಜ್, ಯಾರಬ್ ನಗರದಿಂದ ಕಾಲ್ಕಿತ್ತವನೇ ನೇರವಾಗಿ ಕನಕಪುರದ ತನ್ನ ಸ್ವಗ್ರಾಮ ಸೇರಿದ. ಅಲ್ಲಿಂದಲೇ ರಿಯಲ್ ಎಸ್ಟೇಟ್, ಮರಳು ದಂಧೆ ಮಾಡುತ್ತಿದ್ದ. ಸ್ವಂತಕ್ಕೆ ಎರಡು ಲಾರಿ ಹೊಂದಿದ್ದ.ಕನಕಪುರ ಸುತ್ತಲಿನ ಮರಳನ್ನು ಲಾರಿಯಲ್ಲಿ ತಂದು ಕದಿರೇನಹಳ್ಳಿ ಕ್ರಾಸಿನಲ್ಲಿ ಮಾರುತ್ತಿದ್ದ. ಆದರೂ ಈತನ ವಿರೋಧಿ ಗ್ಯಾಂಗು ಹಲ್ಲು ಮಸೆಯುತ್ತಲೇ ಇತ್ತು. ಇದಕ್ಕೆ ಕಾರಣವಾದದ್ದು ಈತನ ಅಣ್ಣ ದಿವಾನ್ ಆಲಿಯ ಮರ್ಡರಸ್ ರಾಜಕಾರಣ. ಲೋಕೇಶ್ ಕೊಪ್ಪದ್ ರಾಜಕೀಯ ಸಿದ್ದು ಬಯಕೆಯಂತೆ ಸಂಪುಟ ವಿಸ್ತರಣೆಯೋ? ಸೋನಿಯಾ ಬಯಕೆಯಂತೆ ಪುನರ್ರಚನೆಯೋ? ಕನಿಷ್ಟ ಪಕ್ಷ ಅರ್ಧ ಡಜನ್ ಮಂತ್ರಿಗಳನ್ನು ಕಿತ್ತು ಹಾಕಿ ಹೊಸಬರಿಗೆ ಅವಕಾಶ ಕೊಡಿ. ಈ ಸರ್ಕಾರದ ಇಮೇಜು ಹೆಚ್ಚುವಂತೆ ನೋಡಿಕೊಳ್ಳಿ ಎಂದು ಸಿದ್ದರಾಮಯ್ಯನವರಿಗೆ ಹೇಳಿದ್ದಾರೆ. ಈ ಹಿಂದೆ ನೀವೇ ಕವರಿಂಗ್ ಲೆಟರ್‌ನಲ್ಲಿ ಹನ್ನೆರಡು ಮಂದಿಯ ಹೆಸರು ಕೊಟ್ಟು, ಇವರನ್ನೆಲ್ಲ ತೆಗೆದು ಹಾಕಿ, ಹೊಸಬರನ್ನು ತೆಗೆದುಕೊಳ್ಳಲು ಅವಕಾಶ ನೀಡಿ ಎಂದು ಕೇಳಿದ್ದಿರಿ. ಆದರೆ ಇದೀಗ ನೀವೇ ಹಿಂಜರಿಯುವುದು ಯಾಕೆ ಎಂಬುದು ಹೈಕಮಾಂಡ್ ನಾಯಕರ ಪ್ರಶ್ನೆ. ಅರ್ಥಾತ್, ಈಗ ಸಂಪುಟ ವಿಸ್ತರಣೆ ಮಾಡಬೇಕೋ? ಪುನರ್ರಚನೆಗೇ ರೆಡಿ ಆಗಬೇಕೋ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತಲೆನೋವು. ಅವರಿಗೇನೋ ಸದ್ಯಕ್ಕೆ ಎದುರಾಗಿರುವ ಒತ್ತಡವನ್ನು ನಿವಾರಿಸಿಕೊಳ್ಳುವ ಬಯಕೆ ಮಾತ್ರ ಇದೆ. ಹೀಗಾಗಿ ಕಳೆದ ಎರಡೂಕಾಲು ವರ್ಷಗಳಿಂದ ತಮಗೆ ಮಗ್ಗುಲ ಮುಳ್ಳಾಗಿದ್ದ ಪರಮೇಶ್ವರ್ ಅವರಿಗೆ ಹೈಕಮಾಂಡ್ ಮೂಲಕ ಹೇಳಿಸಿ, ಮಂತ್ರಿಯಾಗಲು ಒಪ್ಪಿಸಿದ್ದಾರೆ. ಆರ್.ಟಿ.ವಿಠ್ಠಲಮೂರ್ತಿ ವರದಿ ಸ್ಮಾರ್ಟ್‌ಸಿಟಿ ಶಿವಮೊಗ್ಗ ಈಗ ಭೂಗಳ್ಳರ ಸ್ವರ್ಗ! ಶಿವಮೊಗ್ಗ ನಗರ ಮಲೆನಾಡಿನ ಹೆಬ್ಬಾಗಿಲು. ಮಲೆನಾಡಿನ ಸಂಸ್ಕೃತಿಯಿಂದ ಈ ನಗರ ದೂರವಾಗುತ್ತಿದೆ. ಸ್ಮಾರ್ಟ್ ಸಿಟಿಯಿಂದಾಗಿ ಅದು ವೇಗ ಪಡೆದುಕೊಳ್ಳಲಿದೆಯೇ ವಿನಾ ಮತ್ತೇನೂ ಸಂಭವಿಸುವುದಿಲ್ಲ. ಈಗ ಸ್ಮಾರ್ಟ್ ಸಿಟಿ ಘೋಷಣೆಯಾಗುತ್ತಿದ್ದಂತೆಯೇ ಶಿವಮೊಗ್ಗದಲ್ಲಿ ರಿಯಲ್ ಎಸ್ಟೇಟ್ ಬೆಲೆ ಪಡೆದುಕೊಳ್ಳುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಸಪ್ಪೆಯಾಗಿದ್ದ ರಿಯಲ್ ಎಸ್ಟೇಟ್ ವ್ಯವಹಾರ ಈಗ ದಿಢೀರ್ ಹೆಚ್ಚಳಗೊಂಡಿದೆ. 20 ಲಕ್ಷದ ಸೈಟು ಈಗ 40 ಲಕ್ಷಕ್ಕೆ ಏರಿದೆ. ಬರಲಿರುವ ದಿನಗಳಲ್ಲಿ ಹೊರಗಿನಿಂದ ರಿಯಲ್ ಎಸ್ಟೇಟ್ ದಂಧೆಯವರು ಶಿವಮೊಗ್ಗಕ್ಕೆ ಕಾಲಿಟ್ಟರೆ ಅಲ್ಲಿಗೆ ಶಿವಮೊಗ್ಗ ಮತ್ತಷ್ಟು ದುಬಾರಿಯಾಗಲಿದೆ. ವರದಿಗಾರ ವರದಿ ಪ್ರಗತಿ ಕೃಷ್ಣ ಬ್ಯಾಂಕ್ ಮ್ಯಾನೇಜರ್ ಚಿನ್ನದ ಕಳ್ಳ! ಚಿನ್ನ ಅಡವಿಟ್ಟು ಸಾಲ ಪಡೆದು ಹೋದವರು ಎಷ್ಟು ದಿನವಾದರೂ ಬ್ಯಾಂಕ್ ಕಡೆಗೆ ಮುಖ ಮಾಡದೆ ಇದ್ದದ್ದು ಬ್ಯಾಂಕ್ ಸಿಬ್ಬಂದಿಗೆ ಅನುಮಾನ ಮೂಡಿಸಿದೆ. ಕಳಿಸಿದ ನೋಟಿಸ್‌ಗಳೆಲ್ಲಾ ವಾಪಸ್ ಬರತೊಡಗಿವೆ. ಬೇರೆ ಸಮಯದಲ್ಲಿ ಇಲ್ಲದಿದ್ದರೂ ಕಡೆ ಪಕ್ಷ ಹಬ್ಬದ ಟೈಮಿಗಾದರೂ ಬಿಡಿಸಿಕೊಳ್ಳಬೇಕಿತ್ತಲ್ಲ ಅಂತ ಮ್ಯಾನೇಜರ್‌ಗೂ ಅನುಮಾನ ಶುರುವಾಗಿದೆ. ತಕ್ಷಣ ಚಳ್ಳಕೆರೆಯಿಂದ ಲಿಂಗಾಚಾರ್ ಎಂಬ ಮತ್ತೊಬ್ಬ ಬಂಗಾರ ಪರೀಕ್ಷಕನನ್ನ ಕರೆಸಿ ಅಡವಿರಿಸಿದ್ದ ಚಿನ್ನವನ್ನ ಪರೀಕ್ಷಿಸಿದಾಗ ಅಸಲೀಯತ್ತು ಬಯಲಾಗಿದೆ. ಕಳ್ಳನಿಗೆ ಮನೆಯ ಕೀಲಿ ಕೈ ಕೊಟ್ಟಂತಾಯಿತಲ್ಲ ಅಂತ ಮ್ಯಾನೇಜರ್ ತಲೆ ಮೇಲೆ ಕೈಯಿಟ್ಟುಕೊಂಡು ಕುಳಿತಿದ್ದಾರೆ. ಕಾಂತರಾಜ್ ಅರಸ್ ವರದಿ ಎಂಎಲ್ಸಿ ಆಗಲಿಕ್ಕೆ ಕರಾವಳಿಯಲ್ಲಿ ಸಾಲು ಸಾಲು ಜನ! ಹಿಂದೆ ಅವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದ್ದಾಗ ಭಾಜಪದಿಂದ ಮಂಗಳೂರಿನ ಮೋನಪ್ಪ ಭಂಡಾರಿಯನ್ನ, ಬ್ಲೇಸಿಯಸ್ ಡಿಸೋಜಾರ ವಿರುದ್ಧ ಕಣಕ್ಕಿಳಿಸಲಾಗಿತ್ತು. ಮೋನಪ್ಪ ಭಂಡಾರಿ ಪರಾಭವಗೊಂಡು ಬ್ಲೇಸಿಯಸ್ ಸದಸ್ಯರಾದರು. ಉಡುಪಿಯಲ್ಲಿ ಪ್ರತಾಪ್ ಚಂದ್ರ ಶೆಟ್ಟರದ್ದು ಅವಿರೋಧ ಆಯ್ಕೆಯಾಯಿತು. ಆ ಅವಧಿ ಮುಗಿಯಲು ಆರು ತಿಂಗಳು ಇದ್ದಾಗಲೇ ಬ್ಲೇಸಿಯಸ್ ನಿಧನರಾದಾಗ ಮತ್ತೆ ಆ ತೆರವುಗೊಂಡ ಕ್ಷೇತ್ರಕ್ಕೆ ಮೋನಪ್ಪ ಭಂಡಾರಿ ಹೆಸರು ಸಾಮಾನ್ಯವಾಗಿಯೇ ಪ್ರಬಲವಾಗಿ ಕೇಳಿ ಬಂದಿತ್ತು. ಭಾಜಪದ ಅಭ್ಯರ್ಥಿಯ ಆಯ್ಕೆ ಮಾಡುವುದು ಸಂಘದವರ ಕೆಲಸ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರ ಮಾತು ಮೀರುವಂತಿಲ್ಲ. ಕಲ್ಲಡ್ಕ ಮುಂದೆ ಬೈಠಕ್ ಕುಂತು ಹೇಳಿದ್ದಕ್ಕೆಲ್ಲ ತಲೆ ಆಡಿಸಿದರೆ ಮಾತ್ರವೇ ಟಿಕೆಟ್ ಎಂಬ ವಾತಾವರಣ. ಹಾಗಾಗಿ ಮುನ್ನೂರು ಚಿಲ್ಲರೆ ಮತಗಳ ಅಂತರದಿಂದ ಸೋತಿದ್ದ ಮೋನಪ್ಪ ಭಂಡಾರಿಯನ್ನೇ ಕಣಕ್ಕಿಳಿಸಿ, ಅನುಕಂಪದ ಆಧಾರದಲ್ಲಿ ಮತಗಳನ್ನು ಗೆಲ್ಲಬಹುದು ಎಂಬುದು ಒಂದು ಲೆಕ್ಕಾಚಾರವಾಗಿತ್ತು. ವಸಂತ್ ಗಿಳಿಯಾರ್ ವರದಿ ಮೂಡಬಿದ್ರಿ: ಕಾಲೇಜ್ ಹುಡುಗಿ ರಕ್ಷಿತಾ ಸಾವಿನ ಹಿಂದೆ! ಆಕೆ ರಕ್ಷಿತಾ. ಅರಳುವ ಮೊದಲೇ ಕಮರಿ, ಬೂದಿಯಾಗಿ ಹೋದ ಹುಡುಗಿ ರಕ್ಷಿತಾ ಬೆಂಗಳೂರಿನವಳು. ಜಯನಗರದ ಆನಂದ್ ಎಂಬುವವರ ಮಗಳಾದ ಈಕೆ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಬಿ.ಕಾಂ. ಓದುತ್ತಿದ್ದಳು. ಮೊನ್ನೆ ಶನಿವಾರ ರಾತ್ರಿ ಕಾಲೇಜಿನ ವಾರ್ಡನ್ ಜೊತೆ ಜಗಳವಾಡಿಕೊಂಡಿದ್ದಾಳೆ. ಮರುದಿನ ಹಾಸ್ಟೇಲಿನಲ್ಲಿ ಕಾಣ ಸಿಗಲೇ ಇಲ್ಲ. ಹುಡುಕಿ ನೋಡಿದರೆ ವೈರ್‌ನಿಂದ ಬಾತ್‌ರೂಮಿನ ಹ್ಯಾಂಗರ್‌ಗೆ ನೇಣು ಹಾಕಿಕೊಂಡು ಬದುಕಿಗೆ ಗುಡ್‌ಬೈ ಹೇಳಿದ್ದಾಳೆ. ಅದೇ ಬಾತ್‌ರೂಮಿನ ಗೋಡೆಯ ಮೇಲೆ ಕೆಂಪು ಇಂಕಿನಲ್ಲಿ ಅಪ್ಪ-ಅಮ್ಮನಲ್ಲಿ ಕ್ಷಮೆ ಕೇಳಿದ ಬರಹವಿದೆ. ಆಕೆಯ ಸಾವಿಗೆ ಇದ್ದ ಕಾರಣ ಅತ್ಯಂತ ಸಣ್ಣದಾಗಿತ್ತು. ವಸಂತ್ ಗಿಳಿಯಾರ್ ನೇವಿ ಕಾಲಂ ಅವರ ಸಾಲಲ್ಲಿ ನಿಮ್ಮ ಸರತಿ, ತಿರುಗಿ ನೋಡಿ ಒಂದು ಸರತಿ ನೀವು ಬೆಂಗಳೂರಿನಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರದ ಹೊತ್ತು ಯಾವುದೇ ಬೀದಿಗಳಿಗೆ ಹೋಗಿ, ಅಲ್ಲಿ ನೀವು ಒಂದು ವಿಚಿತ್ರ ದಟ್ಟಣೆಗೆ ಪಕ್ಕಾಗಿಬಿಡುವ ಅನಿವಾರ್ಯತೆ ಇರುತ್ತದೆ. ಪಾರ್ಕಿಂಗ್‌ಗೆ ಜಾಗ ಇಲ್ಲ, ನಡೆದಾಡುವುದಕ್ಕೆ ಜಾಗ ಸಾಲದು, ಮಕ್ಕಳನ್ನು ಪಾರ್ಕಿನ ಒಂದೊಂದು ತೊಟ್ಟಿಲು, ಜೋಕಾಲಿಗೆ ಹತ್ತಿಸಬೇಕಾದರೂ ಹರಸಾಹಸ ಪಡಬೇಕು. ಅನಂತರ ಹೊಟೇಲ್‌ನಲ್ಲಿ ಜಾಗ ಸಿಗಲು, ಜಾಗ ಸಿಕ್ಕ ಮೇಲೆ ನಿಮ್ಮ ಆರ್ಡರ್ ತೆಗೆದುಕೊಳ್ಳಲು, ಆರ್ಡರ್ ತೆಗೆದುಕೊಂಡ ಮೇಲೆ ಅದು ನಿಮ್ಮ ಟೇಬಲ್‌ಗೆ ಬರಲು, ಬಂದ ಮೇಲೆ ಬೇಗ ಬೇಗ ತಿನ್ನಲು, ತಿಂದ ಮೇಲೆ ಕೈ ತೊಳೆಯಲು ಬೆಸಿನ್ ಖಾಲಿ ಆಗಲು-ಹೀಗೆ ನಿಮ್ಮ ಕಾಯುವಿಕೆ ನಿಮ್ಮ ಎರಡು ಕೈ, ಕಾಲು, ಕಿವಿ, ಮೂಗುಗಳಂತೆ ನಿಮ್ಮ ದೇಹದ ಒಂದು ಭಾಗ ಆಗಿಹೋಗಿಬಿಡುತ್ತದೆ. ನೇವಿ ಜಾನಕಿ ಕಾಲಂ ಆಸ್ಕ್ ಮಿಸ್ಟರ್ ವೈಯನ್ಕೆ ವೈಯನ್ಕೆ ಮಹಾ ಪಂಡಿತರು. ಅನೇಕ ಪತ್ರಕರ್ತರ ಪಾಲಿಗೆ ಗುರು. ಅವರ ಸ್ಫೂರ್ತಿಯಿಂದ ಹೊರಹೊಮ್ಮಿದ ಒಂದು ನಾಟಕದ ಆಯ್ದ ಭಾಗ ಇಲ್ಲಿದೆ. ಇದರ ಪ್ರದರ್ಶನ ಸದ್ಯದಲ್ಲೇ ಬೆಂಗಳೂರಲ್ಲಿ ನಡೆಯಲಿದೆ. ನಾಟಕದ ಹೆಸರು ಆಸ್ಕ್ ಮಿಸ್ಟರ್ ವೈಯನ್ಕೆ. ಪ್ರಸಂಗ ಪೀಠಿಕೆ ರಂಗದ ಮೇಲೆ ಕತ್ತಲು. ಒಂದು ಏಣಿಯಲ್ಲಿ ಅರ್ಧ ಹತ್ತಿ ಕೂತಿರುವ ಸುಮಾರು ನಲವತ್ತು ವರುಷದ ಗಂಡಸು. ಕೊಂಚ ವಿಲಕ್ಷಣವಾಗಿದ್ದಾನೆ. ಗಾಂಭೀರ್ಯ ಮತ್ತು ಹಾಸ್ಯ ಎರಡರಲ್ಲೂ ಪಳಗಿದವನಂತೆ ಕಾಣುತ್ತಾನೆ. ಅರ್ಧ ಏಣಿ ಹತ್ತಿ ಕೂತವನು ತಲೆಯೆತ್ತಿ ಒಮ್ಮೆ ಸುತ್ತಲೂ ನೋಡುತ್ತಾನೆ. ಅವನಿಗೆ ಹೆಸರಿಲ್ಲ. ಅವನನ್ನು ಏನು ಬೇಕಾದರೂ ಕರೆಯಬಹುದು. ಅವನ ಮುಂದೆ ಒಂದು ಪೆಗ್ಗು ಇದೆ. ಅದರಲ್ಲಿ ಅರ್ಧ ಹಳದಿ ಬಣ್ಣದ ದ್ರವ ಇದೆ. ಜಾನಕಿ ವರದಿ ನಾಡು ನುಡಿಯ ಹೋರಾಟಕ್ಕೆ ಸಿನೆಮಾ ನಾಯಕರ ಕಿಚ್ಚು! ಅಂದು ಗೋಕಾಕ್ ವರದಿ ಅನುಷ್ಠಾನಕ್ಕಾಗಿ ರಾಜಣ್ಣ; ಇಂದು ಕಳಸಾ-ಬಂಡೂರಿ ಯೋಜನೆಯ ಸಾಕಾರಕ್ಕಾಗಿ ಶಿವಣ್ಣ. ಕನ್ನಡ ಚಿತ್ರರಂಗ ಇವತ್ತಿಗೂ ಸಾಮಾಜಿಕ ನೆಲಗಟ್ಟನ್ನು ಕಾಪಾಡಿಕೊಂಡು ಬಂದಿದೆ ಎಂಬುದಕ್ಕೆ ಇವೆರಡು ಪ್ರಮುಖ ನಿದರ್ಶನಗಳು. ಉತ್ತರ ಕರ್ನಾಟಕ ಹೊತ್ತಿ ಉರಿಯುತ್ತಿದೆ. ಅಲ್ಲಿನ ಜನಕ್ಕೆ ಕುಡಿಯಲು ನೀರಿಲ್ಲ. ರೈತರ ಹೊಲ-ಗದ್ದೆಗಳಲ್ಲೂ ನೀರಿಗೆ ತತ್ವಾರ. ಕಳಸಾ-ಬಂಡೂರಿ ನಾಲಾ ಯೋಜನೆಯು ಸಾಕಾರವಾದರೆ ನಾಲ್ಕು ಜಿಲ್ಲೆಗಳ ಸುಮಾರು ಹದಿನೈದು ತಾಲೂಕಿನ ಜನಕ್ಕೆ ಅಮೃತವೇ ಸಿಕ್ಕಂತಾಗುತ್ತದೆ. ರಾಜ್ಯದ ರಾಜಕಾರಣಿಗಳ ನಿರ್ಲಕ್ಷ್ಯ ಧೋರಣೆಯಿಂದ ಪಕ್ಕದ ರಾಜ್ಯಗಳು ಕುಣಿಯುತ್ತಿವೆ. ಕೇಂದ್ರವೂ ಅದಕ್ಕೆ ಮಣಿಯುತ್ತಿದೆ. ಹಾಗಾಗಿ ಸರ್ಕಾರದ ವಿರುದ್ಧ ರೈತರ ಆಕ್ರೋಶ ಮುಗಿಲುಮುಟ್ಟಿದೆ. ಸುಮಾರು ಅರವತ್ತು ದಿನಗಳಿಂದಲೂ ಹುಬ್ಬಳ್ಳಿ-ನರಗುಂದ-ನವಲಗುಂದ ಭಾಗಗಳಲ್ಲಿ ರೈತರ ನಿರಂತರ ಹೋರಾಟ ನಡೆಯುತ್ತಿದೆ. ಪ್ರತಿಭಟನೆಗಳಾಗುತ್ತಿವೆ. ‘ಬಂದ್’ ಆಚರಿಸಲಾಗುತ್ತಿದೆ. ‘ರಸ್ತೆ ತಡೆ’ ಮಾಡಿದ್ದಾಯ್ತು. ಕೊನೆಗೆ ಆಕ್ರೋಶಗೊಂಡ ರೈತರು ಸಾರ್ವಜನಿಕ ಆಸ್ತಿ-ಪಾಸ್ತಿಗೂ ಹಾನಿಮಾಡಿ ಸಂಕಟ ಹೊರ ಹಾಕಿದರು. ಇವ್ಯಾವುದಕ್ಕೂ ಸರ್ಕಾರ ಕಿವಿಗೊಡಲಿಲ್ಲ. ಆಗಲೇ ಸ್ಯಾಂಡಲ್‌ವುಡ್‌ನ ಸಾರ್ವಭೌಮ ಶಿವರಾಜ್‌ಕುಮಾರ್ ಹೋರಾಟಕ್ಕಿಳಿಯಲು ಪಟತೊಟ್ಟರು. ಸತೀಶ್ ಬಿಲ್ಲಾಡಿ ಅಂಕಣ : ಆಕಾಶಬುಟ್ಟಿ ಅಮ್ಮನಿಗೂ ಅಫೇರ್ ಆಗುತ್ತದಾ..... ಒಂದು ಅಫೇರ್ ನೀಡಬಲ್ಲ ಉತ್ಕಟತೆಯನ್ನು ಕಾಣಬೇಕೆಂದರೆ ನೀವು ಅಫೇರ್‌ನಲ್ಲಿರುವವರನ್ನೇ ನೋಡಬೇಕು. ಅವರು ನಶೆಯಲ್ಲಿದ್ದಂತಿರುತ್ತಾರೆ. ಮೆ ಹೂಂ ಹಿ ನಹೀ ಇಸ್ ದುನಿಯಾ ಕಿ ಅಂತ ಇಬ್ಬರು ಹಾಡಲು ಸಾಧ್ಯ. ಲವ್ವಲ್ಲಿ ಬಿದ್ದವರು. ಮತ್ತೊಬ್ಬರು ಅಫೇರ್‌ನಲ್ಲಿ ಸಿಕ್ಕಿಹಾಕಿಕೊಂಡವರು. ನನಗೆ ಈ ಪ್ರಪಂಚದ ಹಂಗಿಲ್ಲ ಅನ್ನುವ ಅಹಂಕಾರ ಒಂದು ಅಫೇರ್‌ನಿಂದ ಸಿದ್ಧಿಸುತ್ತದೆ ಅಂದರೆ... ಒಮ್ಮೆ ಬಿದ್ದು ನೋಡಲೇ... ಎನ್ನುವ ಆಶೆ ಹುಟ್ಟಿಸುವಷ್ಟು ಹಿತವಾದ ನೋವಿನಿಂದ ನರಳುತ್ತಿರುತ್ತಾರೆ. ಒಂದು ಅಫೇರಿನ ನಶೆ, ಕಿಕ್, ಸಮ್ಮೋಹನ ಕವಿಸಮಯವನ್ನು ನಮ್ಮ ನಿತ್ಯದ ಕಸ, ನೆಲ, ಪಾತ್ರೆ, ಬಟ್ಟೆ ಅನ್ನುವ ಬೋರಿಂಗ್ ಕೆಲಸಗಳಿಂದಲೇ ಪಡೆಯುವ ಟಾನಿಕ್ ಒಂದನ್ನು ವಿಜ್ಞಾನಿಗಳು ಕಂಡು ಹಿಡಿಯಬಾರದೇ... ಕನಿಷ್ಟ ಮನೆಗಳು ಮುರಿದು ಬೀಳುವುದಾದರೂ ನಿಲ್ಲುತ್ತದೆ. ಎಚ್.ಡಿ. ಸುನೀತಾ ಅಂಕಣ : ನೂರು ಮುಖ ಸಾವಿರ ದನಿ ವಿಶ್ವಕ್ಕೊಬ್ಬನೇ ಆದ ಬ್ರೂಸ್‌ಲೀ ಕೇವಲ ಮಾರ್ಷಲ್ ಆರ್ಟ್ಸ್ ಪಟುವಲ್ಲ 1975ನೇ ಇಸವಿಯಲ್ಲಿ ನಾನು ದಾವಣಗೆರೆಯಲ್ಲಿದ್ದೆ. ಆಗ ‘ಎಂಟರ್ ದಿ ಡ್ರ್ಯಾಗನ್’ ಎಂಬ ಇಂಗ್ಲಿಷ್ ಚಿತ್ರ ಹುಬ್ಬಳ್ಳಿಯಲ್ಲಿ ಪ್ರದರ್ಶಿತವಾಗುತ್ತಿತ್ತು. ವಿಷಯ ಇದಿಷ್ಟೇ ಆಗಿದ್ದರೆ ಅದು ಮುಖ್ಯವಾಗುತ್ತಿರಲಿಲ್ಲ. ಆದರೆ ಈ ಚಿತ್ರ ಅನೇಕ ವಾರಗಳು ‘ಹೌಸ್‌ಫುಲ್’ ಆಗಿ ಓಡುತ್ತಿತ್ತು. ಅದಕ್ಕಿಂತ ಮುಖ್ಯ ವಿಚಾರ ಅಂದರೆ ಈ ಚಿತ್ರಕ್ಕೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಕಡೆಗಳಿಂದ ಪ್ರೇಕ್ಷಕರು ಕಾರುಗಳಲ್ಲಿ ಹುಬ್ಬಳ್ಳಿಗೆ ಹೋಗಿ ಈ ಚಿತ್ರ ನೋಡಿಕೊಂಡು ಬರುತ್ತಿದ್ದರು. ಚಿತ್ರದ ಬಗ್ಗೆ ತುಂಬಾ ಮೆಚ್ಚುಗೆ ಹೇಳುತ್ತಿದ್ದರು. ಹಾಲಿ ಇರುವ ‘ಅರುಣ’ ಚಿತ್ರಮಂದಿರ ಆ ಕಾಲಕ್ಕೆ ಹೊಸದಾಗಿ ನಿರ್ಮಾಣವಾಗಿತ್ತು. ನಂತರ ಈ ‘ಎಂಟರ್ ದಿ ಡ್ರ್ಯಾಗನ್’ ಚಿತ್ರದ ಪ್ರದರ್ಶನ ಅದೇ ‘ಅರುಣ’ ಚಿತ್ರಮಂದಿರದಲ್ಲಿ ಆರಂಭವಾಯಿತು. ಹೊಸ ಥೇಟರು. ಹೊಸ ಯಶಸ್ವಿ ಹಾಲಿವುಡ್, ಹೊಸ ರೀತಿಯ ಆಕ್ಷನ್ ಚಿತ್ರ. ಟಿಕೆಟ್‌ಗಾಗಿ ಥೇಟರಿಗೆ ಹೋದರೆ ಹೆಜ್ಜೆ ಇಡಲೂ ಜಾಗ ಸಿಗುತ್ತಿಲ್ಲ. ಅಂತಹ ಪರಿಸ್ಥಿತಿ. ಎಂ.ವಿ. ರೇವಣಸಿದ್ದಯ್ಯ

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.