Hi Bangalore
Hi Bangalore

Hi Bangalore

This is an e-magazine. Download App & Read offline on any device.

ಸೃಷ್ಟಿ 1037 : ಪುಟ 20, ಸಂಚಿಕೆ 49, ಸೆಪ್ಟಂಬರ್ 03, 2015 ಖಾಸ್‌ಬಾತ್ ಅದು ಒಬ್ಬನಾದ ಮೇಲೊಬ್ಬನು ನೀಡಿದ ಕಾರ್ಕೋಟಕ ಗರಳ : ಕುಡಿದೂ ಬದುಕಿದ್ದೇನೆ ಅವನನ್ನ ಮುಗಿಸ್ತೀನಿ! ಹಾಗಂತ ಆಣೆ ಮಾಡಿ ಮನೆಯಿಂದ ಹೊರಬಿದ್ದಿರಬೇಕು ವಿಶ್ವೇಶ್ವರ ಭಟ್ಟರು. ಅದು 2012ರ ಮಾತು. ನನ್ನ ಮತ್ತು ಚಿತ್ರರಂಗದ ಕೆಲವರ ನಡುವೆ ‘ಭೀಮಾತೀರ’ದ ತಗಾದೆ ಆರಂಭವಾಗಿತ್ತು. ಅವನು ಓಂಪ್ರಕಾಶ್ ರಾವ್, ಅವನು ಅಸಲಿ ಕಳ್ಳ. ಚರ್ಚೆಗೇ ಬರಲಿಲ್ಲ. ಬಂದದ್ದು ನಿರ್ಮಾಪಕ ಅಣಜಿ ನಾಗರಾಜ್. ಜೊತೆಯಲ್ಲಿ ವಿಜಿಯೂ ಬಂದ. ಚರ್ಚೆ, ಗೇಲಿ, ಬೈಗುಳ-ಎಲ್ಲವೂ ಆದವು. ಅಷ್ಟೆ ಆದದ್ದು. ಆದರೆ ಅದರ ಒಂದೇ ಒಂದು ಎಳೆಯನ್ನಿಟ್ಟುಕೊಂಡು ವಿಶ್ವೇಶ್ವರ ಭಟ್ಟ ನೇಣು ಕುಣಿಕೆಯ ಹಗ್ಗ ಪೇಡಲು ಕುಳಿತುಕೊಂಡ. ಅದಕ್ಕಾಗಿ ಫಂಗು ಫಂಗನೆ ಕುಣಿಯುತ್ತ ಬಂದದ್ದು ಸಿಮ್ಮ. ಅಫಘನಿಸ್ತಾನಕ್ಕೆ ರವಿ ಬೆಳಗೆರೆ ಹೋಗಿದ್ದೇ ಸುಳ್ಳು ಅಂದ. ಒಂದೋ, ಅಫಘನಿಸ್ತಾನಕ್ಕೆ ಪಾಕೀಸ್ತಾನ ದಾಟಿ ಹೋಗಬೇಕು. ಅದು ಬಿಟ್ಟರೆ ಇರಾನ್ ಮುಖಾಂತರ ಹೋಗಬೇಕು. ಪಾಕಿಸ್ತಾನವಂತೂ ವೀಸಾ ಕೊಡುವುದಿಲ್ಲ. ವಯಾ ಇರಾನ್ ಪ್ರಯಾಣ ಮಾಡುವುದು ಸಾಧ್ಯವೇ ಇಲ್ಲ. ಹಾಗಾದರೆ ರವಿ ಬೆಳಗೆರೆ ಅಫಘಾನಕ್ಕೆ ಹೋದದ್ದೇ ಸುಳ್ಳು ಅಂದ! I was surprised. ಈತನಿಗೆ ಭೂಗೋಳವೇ ಗೊತ್ತಿಲ್ಲವಾ ಅಂದುಕೊಂಡೆ. ಏಕೆಂದರೆ ಅಫಘಾನಕ್ಕೆ ಮತ್ತೊಂದು ರೋಮಾಂಚಕಾರಿ ನೆರೆಹೊರೆ ಇದೆ. ಅದು ರಷಿಯಾ. ಈಗ ರಷಿಯಾ ಇಲ್ಲ. ಅದರ ವಿಭಜಿತ ದೇಶಗಳು ಆರಾಮಾಗಿ ಇವೆ. ಮೊದಲು ಇಲ್ಲಿಂದ ದಿಲ್ಲಿಗೆ ಹೋಗಬೇಕು. ಅಲ್ಲಿಂದ ವಿಮಾನ ಬದಲಿಸಿ ಉಜ್ಜೆಕಿಸ್ತಾನಕ್ಕೆ ಹೋಗಬೇಕು. ಅದು ನಮ್ಮ ಲಾಲ ಬಹದ್ದೂರ್ ಶಾಸ್ತ್ರಿಯವರು ಕೊನೆಯುಸಿರೆಳೆದ ದೇಶ. ಅದರ ರಾಜಧಾನಿಯಾದ ತಾಷ್ಕೆಂಟ್‌ನಲ್ಲಿ ಅವರು ತೀರಿಕೊಂಡರು. ಅಲ್ಲಿಂದ ನೀವು ತಝಿಕಿಸ್ತಾನಕ್ಕೆ ಹೋಗಬೇಕು. ಅದರ ರಾಜಧಾನಿ ದುಷಾನ್ಯೆ. ಅಲ್ಲಿ ನಾನು ತಿರುಗಿದ್ದೇನೆ, stay ಮಾಡಿದ್ದೇನೆ. ಅಲ್ಲಿಂದಲೇ ಅಮು ದರಿಯಾ ಎಂಬ ನದಿ ದಾಟಿ ಅಫಘನಿಸ್ತಾನಕ್ಕೆ ಆರಾಮ್ ಸೇ ಹೋಗಬಹುದು. ಭೂಗೋಳ ಗೊತ್ತಿಲ್ಲದವನಿಗೆ ಏನು ಹೇಳೋದು? ಮುಂದೆ TV 9ನಲ್ಲಿ ನಾನು ಪಾಸ್‌ಪೋರ್ಟ್ ತೋರಿಸಿದೆ. ಅದರಲ್ಲಿ ಅಫಘಾನದ ಸಿಕ್ಕಾ ಕೂಡ ಇತ್ತು. ರವಿ ಬೆಳಗೆರೆ ಸಾಫ್ಟ್‌ಕಾರ್ನರ್ ಅದು ಪಾಪಿಗಳ ಲೋಕವಾದರೆ ಇದು ಕಾವಿಗಳ ಕೂಪ! ಅದಕ್ಕೆ ಯಾಕೆ ನಾನು ಹಾಗೆ ಹೆಸರಿಟ್ಟೆನೋ ಗೊತ್ತಿಲ್ಲ. ಆಗಿನ್ನೂ ‘ಹಾಯ್ ಬೆಂಗಳೂರ್!’ ರೂಪು ತಳೆದಿರಲಿಲ್ಲ. ‘ಕರ್ಮವೀರ’ದಲ್ಲಿ ಇದ್ದೆ. ಮೊಟ್ಟ ಮೊದಲ ಸಂದರ್ಶನ ಬರೆಯುವ ಘಳಿಗೆಯಲ್ಲಿ, ಇದು ಎಲ್ಲೆಲ್ಲಿ ತಿರುಗಿ ಏನೇನು ರೂಪು ಪಡೆಯುತ್ತದೆಯೋ? ಗೊತ್ತಿರಲಿಲ್ಲ. ಒಂದು ಸಣ್ಣ ಮಳೆಯ ಇಳಿ ಸಂಜೆ ಶಿವಾಜಿನಗರದ ಕೋಳಿ ಅಂಗಡಿಯಲ್ಲಿ ನಾನು ಕೋಳಿ ಫಯಾಜ್‌ನನ್ನು ಭೇಟಿ ಮಾಡಿದ್ದೆ. ಕರೆದೊಯ್ದು ಪರಿಚಯಿಸಿದ್ದು ಗೆಳೆಯ ಸಿದ್ದೀಕ್ ಆಲ್ದೂರಿ. ಆತನಿಗಾದರೂ ಅಷ್ಟೆ. ಮುಂದೆ ಇದು ಯಾವ ರೂಪು ಪಡೆಯಲಿದೆ ಎಂಬ ಅಂದಾಜಿರಲಿಲ್ಲ. ಆಲ್ದೂರಿ ಆಗ ‘ಡೈಲಿ ಸಾಲಾರ್’ ನಲ್ಲಿ ವರದಿಗಾರನಾಗಿದ್ದ. ತುಂಬ ಸಜ್ಜನ ಆತ. ಕೋಳಿ ಫಯಾಜ್ ಕೂಡ ನನ್ನೊಂದಿಗೆ ಸಜ್ಜನನಾಗೇ ನಡೆದುಕೊಂಡ. ಫಯಾಜ್‌ನ ನಂತರ ನಾನು ಯಾರ‍್ಯಾರನ್ನು ಭೇಟಿ ಮಾಡಿದೆ, ಎಲ್ಲೆಲ್ಲಿ ಅಲೆದೆ ಎಂಬುದೆಲ್ಲ ಈಗ ಇತಿಹಾಸ. ನಾನು ‘ಕರ್ಮವೀರ’ದಿಂದ ಹೊರ ಬೀಳುವ ಹೊತ್ತಿಗೆ ಶ್ರೀರಾಂಪುರ ಕಿಟ್ಟಿ, ಕಾಲಾಪತ್ಥರ್, ಬಲರಾಮ, ಬೆಕ್ಕಣ್ಣು ರಾಜೇಂದ್ರ, ಜೇಡರಹಳ್ಳಿ ಕೃಷ್ಣಪ್ಪ- ಹೀಗೆ ಅನೇಕರನ್ನು ಭೇಟಿಯಾಗಿದ್ದೆ. ಕೆಲವರು ‘ಕರ್ಮವೀರ’ ಆಫೀಸಿಗೂ ಬಂದು ಹೋದರು. ಈ ಸಂದರ್ಶನದ ಸರಮಾಲೆಗೆ ‘ಪಾಪಿಗಳ ಲೋಕದಲ್ಲಿ’ ಅಂತ ಹೆಸರಿಟ್ಟೆ. ಹಾಗೇಕೆ ಇಟ್ಟೆನೋ? ಗೊತ್ತಿಲ್ಲ. ರವಿ ಬೆಳಗೆರೆ ಬಾಟಮ್ ಐಟಮ್ ಒಳ್ಳೆಯವರನ್ನು ಹುಡುಕುವುದು ಒಳ್ಳೆಯ ಕೆಲಸ ಅಲ್ವಾ? ಇತ್ತೀಚೆಗೆ ಹಿರಿಯ ಪತ್ರಕರ್ತರೊಬ್ಬರು ತೀರಿಕೊಂಡರು. ಒಬ್ಬ ಪತ್ರಕರ್ತನ angleನಿಂದ ಯೋಚನೆ ಮಾಡಿದರೆ ಅವರನ್ನು ನೆನೆಸಿಕೊಳ್ಳುವುದಕ್ಕೆ ಅಂಥಾ ಪ್ರಬಲ ಕಾರಣವೇನೂ ಇಲ್ಲ. ಆದರೆ ಒಬ್ಬ ಮನುಷ್ಯನಾಗಿ ಯೋಚಿಸಿದರೆ ಕಾರಣಗಳು ಉಂಟು. ಅವರನ್ನು ನಾನು ಹಲವಾರು ವರ್ಷದಿಂದ ಬಲ್ಲೆ. ಹಾಗಂತ ಅವರು ನನ್ನ ಹಿತೈಷಿಯೇನೂ ಅಲ್ಲ, ಸ್ನೇಹಿತರೂ ಅಲ್ಲ, ಅಷ್ಟಕ್ಕೂ ಅವರು ‘ಕಾರ್ಯನಿರತ’ ಪತ್ರಕರ್ತರೇ ಅಲ್ಲ, ಅವರು ಬರೆದ ಒಂದಕ್ಷರವನ್ನೂ ನಾನು ಇಲ್ಲಿತನಕ ನೋಡಿಲ್ಲ. ಆದರೂ ಆಗಾಗ ಅವರ ಮುಖದರ್ಶನವಾಗುತ್ತಿತ್ತು. ಪರಭಾಷಾ ಸ್ಟಾರುಗಳು, ರಾಷ್ಟ್ರಮಟ್ಟದ ರಾಜಕಾರಣಿಗಳು ಬೆಂಗಳೂರಿಗೆ ಬಂದಾಗ ಈ ಹಿರಿಯರು ತಪ್ಪದೇ ಅಲ್ಲಿ ಹಾಜರಿರುತ್ತಿದ್ದರು. ಅದನ್ನು ಶೋಕಿಯೆಂದು ಕರೆದರೆ ತಪ್ಪಾದೀತು, ಖಾಯಿಶ್ ಅನ್ನಬಹುದೇನೋ (ಖ್ಯಾತರ ಜೊತೆ ಕಾಣಿಸಿಕೊಳ್ಳುವ ವಿಚಾರ ಬಂದಾಗ ಅಭಿಮಾನಿಗಳಿಗೂ ಪತ್ರಕರ್ತರಿಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ). ಅವರ ಹಿರಿತನ, ಸಣಬು ನಾರಿನ ಹಗ್ಗದಂಥ ದಪ್ಪಮೀಸೆ, ಎತ್ತರದ ಆಳ್ತನದಿಂದಾಗಿ ಅವರು ಪತ್ರಕರ್ತರ ಗುಂಪಲ್ಲಿ ಎದ್ದು ಕಾಣುತ್ತಿದ್ದರು. ಆ ಕಾರಣಕ್ಕೆ ಅತಿಥಿಯಾಗಿ ಬಂದ ದೊಡ್ಡ ಮನುಷ್ಯರು ಈ ಮನುಷ್ಯನನ್ನು ಲೋಕಲ್ ಪತ್ರಕರ್ತರ ಗುಂಪಿನ ನಾಯಕನೆಂದೇ ಭಾವಿಸುವ ಎಲ್ಲಾ ಅಪಾಯಗಳೂ ಇದ್ದವು. ಈ ಹಿರಿಯರು ತಮ್ಮನ್ನು ತಾವು ಪರಿಚಯಿಸಿಕೊಳ್ಳುವ ಶೈಲಿಯೂ ಹಾಗೇ ಇತ್ತು. ನಮ್ಮೆಲ್ಲರಿಗಿಂತ ಮೊದಲು ಅವರೇ ಹಲೋ ಅನ್ನುತ್ತಾ ಕೈಚಾಚುತ್ತಿದ್ದರು, ಅದರ ಬೆನ್ನಿಗೇ ‘ಐಯಾಮ್ ಸೋ ಅಂಡ್ ಸೋ ಫ್ರಮ್’ ಅನ್ನುತ್ತಾ ಎರಡು ಆಂಗ್ಲ ಪತ್ರಿಕೆಗಳ ಹೆಸರು ಹೇಳುತ್ತಿದ್ದರು. ವಾಸ್ತವದಲ್ಲಿ ಅವರೆಡು ಪತ್ರಿಕೆಗಳೂ ಆಸ್ತಿತ್ವದಲ್ಲೇ ಇರಲಿಲ್ಲ ಅನ್ನುವುದು ನಮ್ಮೆಲ್ಲರಿಗೂ ಗೊತ್ತಿತ್ತು. ರವಿ ಬೆಳಗೆರೆ ಹಲೋ ರಾಜಕಾರಣದಲ್ಲಿ ಲಕ್ಕು ಎಂಬುದು ಹೇಗೆ ಕುದುರುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಒಬ್ಬರ ರಾಜಕೀಯ ನಿರ್ಗಮನ ಮತ್ತೊಬ್ಬರ ರಾಜಕೀಯ ಬದುಕನ್ನು ಉತ್ತುಂಗಕ್ಕೇರಿಸಬಹುದು. ಇವತ್ತು ಬಿಬಿಎಂಪಿ ಚುನಾವಣೆಯ ಫಲಿತಾಂಶ ಅಂತಹ ಸಾಧ್ಯತೆಗಳನ್ನು ಎತ್ತಿ ತೋರಿಸುತ್ತಿದೆ. ಅಂದ ಹಾಗೆ ಇವತ್ತು ರಾಜಕೀಯವಾಗಿ ನಿರ್ಗಮನದ ಹಾದಿಯಲ್ಲಿರುವವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಅದೇ ರೀತಿ ಇದ್ದಕ್ಕಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಒಬ್ಬ ವಿಶಿಷ್ಟ ನಾಯಕನಾಗಿ ಹೊರಹೊಮ್ಮಿದವರು ವಕ್ಕಲಿಗ ನಾಯಕ ಆರ್.ಅಶೋಕ್. ಇಬ್ಬರ ಜಗಳ, ಮೂರನೆಯವರಿಗೆ ಲಾಭ ಅನ್ನುತ್ತಾರಲ್ಲ? ಹಾಗೆ. ಇನ್ನೇನು ಸ್ವಲ್ಪ ದಿನಗಳಲ್ಲಿ ಬಿಜೆಪಿಯ ಹಾಲಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಖಾಲಿ ಮಾಡುವ ಸ್ಥಾನಕ್ಕೆ ಬರುವ ಆಸೆ ಯಡಿಯೂರಪ್ಪನವರಲ್ಲಿತ್ತು. ಅದೇ ರೀತಿ ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಅವರಿಗೂ ಇತ್ತು. ಇತ್ತೇನು? ಈಗಲೂ ಇದೆ. ರವಿ ಬೆಳಗೆರೆ ಮುಖಪುಟ ವರದಿ ರಂಗಿತರಂಗ ಬೆಚ್ಚಿ ಬಿತ್ತು ಚಿತ್ರರಂಗ! ಈ ಚಿತ್ರ ಹಿಟ್ ಆಗೋಕೆ ಮುಖ್ಯ ಕಾರಣ ಪ್ರೇಕ್ಷಕರೇ ಹೊರತು, ಚಿತ್ರತಂಡವಲ್ಲ. ಚಿತ್ರತಂಡದವರು ಪ್ರಚಾರಕ್ಕೆಂದು ಮಾಡಿದ ಖರ್ಚು ಕಡಿಮೆಯೇ. ಮಿಕ್ಕಂತೆ ಬಾಯಿಂದ ಬಾಯಿಗೆ ಒಳ್ಳೆಯ ಮಾತುಗಳು ಹರಡಿ ಚಿತ್ರ ಯಶಸ್ವಿಯಾಗಿದೆ. ಇನ್ನು ಈ ಚಿತ್ರ ದೊಡ್ಡ ಯಶಸ್ಸು ಕಾಣುವುದಕ್ಕೆ ಸೋಷಿಯಲ್ ಮೀಡಿಯಾದ ಮತ್ತು ಮಲ್ಟಿಪ್ಲೆಕ್ಸ್‌ಗಳ ಪಾತ್ರ ದೊಡ್ಡದಿದೆ. ಚಿತ್ರ ನೋಡಿದವರೆಲ್ಲರೂ ಫೇಸ್‌ಬುಕ್, ಟ್ವಿಟರ್ ಮೂಲಕ ಚಿತ್ರದ ಬಗ್ಗೆ ಪ್ರಚಾರ ಮಾಡಿದರು. ಇನ್ನು ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರದ ಪ್ರಚಾರವನ್ನು ಸರಿಯಾಗಿ ಮಾಡುತ್ತಿಲ್ಲ, ಕನ್ನಡ ಚಿತ್ರಗಳನ್ನು ಪಕ್ಕಕ್ಕಿಟ್ಟು ಪರಭಾಷಾ ಚಿತ್ರಗಳನ್ನು ಎತ್ತಿಹಿಡಿಯುತ್ತಿವೆ ಎಂದು ಚಿತ್ರತಂಡದವರು ಅದೆಷ್ಟೇ ಬೇಸರಗೊಂಡರೂ, ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು ಅದೇ ಮಲ್ಟಿಪ್ಲೆಕ್ಸ್‌ಗಳಲ್ಲಿ ಎಂದರೆ ತಪ್ಪಿಲ್ಲ. ಚೇತೋಹಾರಿ ರಾಜಕೀಯ ಚುನಾವಣೆಯಲ್ಲಿ ಬಕ್ಕಾಬೋರಲಾಗಿದ್ದೇ ತಡ ಸಿದ್ದುಗೆ ಪತನ ಯೋಗ ಶುರುವಾಯಿತು ಬಿಬಿಎಂಪಿ ಚುನಾವಣೆಯ ವಿಷಯ ಬಂದಾಗ ಸಿದ್ದರಾಮಯ್ಯ ಏಕಾಂಗಿಯಾದರು. ಅವರ ಗ್ಯಾಂಗಿನಲ್ಲಿರುವವರು ಐನಾತಿ ಐಡಿಯಾಗಳನ್ನು ಕೊಡುವವರೇ ಹೊರತು, ಜನ ನಾಯಕರಲ್ಲದೇ ಇರುವುದರಿಂದ ಚುನಾವಣೆಯಲ್ಲಿ ಸಖತ್ತಾಗಿಯೇ ಗುನ್ನ ಬಿತ್ತು. ಅಷ್ಟೇ ಅಲ್ಲ, ಆಡಳಿತದಲ್ಲಿದ್ದರೂ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಶಪಡಿಸಿಕೊಳ್ಳಲಾಗದ ಸಿದ್ದರಾಮಯ್ಯನವರನ್ನು ಇನ್ನು ಸಿಎಂ ಆಗಿಟ್ಟುಕೊಂಡರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲು ನಿಶ್ಚಿತ ಎಂಬ ಅಭಿಪ್ರಾಯ ಈಗ ವ್ಯಾಪಕವಾಗತೊಡಗಿದೆ. ಸಿದ್ದರಾಮಯ್ಯನವರನ್ನು ಕೆಳಗಿಳಿಸಿ ಬೇರೆಯವರನ್ನು ಆ ಜಾಗಕ್ಕೆ ತರಬೇಕು ಎಂಬ ಭಾವನೆ ದಟ್ಟವಾಗತೊಡಗಿದೆ. ಹೀಗಾಗಿ ಈ ಕ್ಷಣದಲ್ಲಿ ಇದ್ದಕ್ಕಿದ್ದಂತೆ ಖರ್ಗೆ ಹಾಗೂ ಕೃಷ್ಣ ಅವರಿಗೆ ಬೇಡಿಕೆ ಶುರುವಾಗಿದೆ. ಉಭಯ ನಾಯಕರ ಮಧ್ಯೆ ಸಹಮತ ಸಾಧಿಸಿದರೆ ಅಲ್ಲಿಗೆ ಕ್ಲೋಸ್ ಕರ್ನಾಟಕ ಹೊಸ ಸಿಎಂ ಅನ್ನು ನೋಡುವ ಕಾಲ ದೂರವೇನಿಲ್ಲ. ಆರ್.ಟಿ.ವಿಠ್ಠಲಮೂರ್ತಿ ವರದಿ ಕಲ್ಲಡ್ಕ ಭಟ್ಟನ ವಿಕಾರಿ ಸಂತತಿಗೆ ಕೊನೆ ಎಂದು? ಪಾಂಡೇಶ್ವರ ಠಾಣೆಯಲ್ಲಿ ಕೇಸು ದಾಖಲಾಗಿ ಭಜರಂಗಿಗಳು ಮಾಡಿದ ಹಲ್ಕಾ ಕೆಲಸ ಊರೆಲ್ಲ ಸುದ್ದಿಯಾಗುತ್ತಿದ್ದಂತೆಯೇ ಅವತ್ತೇ ರಾತ್ರಿ ಪ್ರಕರಣಕ್ಕೆ ಹೊಸ ರೂಪ ಕೊಡಲಾಗಿದೆ. ತಂದೆಯಿಲ್ಲದ, ಸಂಬಂಧಿಕರ ಮನೆಯಲ್ಲಿದ್ದು ಕೆಲಸಕ್ಕೆ ಸೇರಿಕೊಂಡಿದ್ದ ಕೋಮಲಳಿಗೆ ಯಾವ ಪರಿ ಬೆದರಿಕೆಯೊಡ್ಡಲಾಯಿತೆಂದರೆ ಪಾಂಡೇಶ್ವರ ಠಾಣೆಯಲ್ಲಿ ಭಜರಂಗಿಗಳ ವಿರುದ್ಧ ಹೇಳಿಕೆ ನೀಡಿ ಠಾಣೆಯಿಂದ ಹೊರ ಬಂದಿದ್ದ ಕೋಮಲಳನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದು ಶಾಕೀರ್ ವಿರುದ್ಧವೇ ಲೈಂಗಿಕ ಕಿರುಕುಳದ ದೂರು ನೀಡಲಾಗಿದೆ. ವರದಿಗಾರ ವರದಿ ಎಂಎಲ್ಸಿ ಎಲೆಕ್ಷನ್ನು ಯಡ್ಡಿ ಫುಲ್ ಟೆನ್‌ಷನ್ನು! ಕಾಂಗ್ರೆಸ್‌ನಲ್ಲಿಯೂ ಅರ್ಧ ಡಜನ್ ನಾಯಕರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮುಖ್ಯವಾಗಿ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಪಡೆಯುವುದಕ್ಕಿಂತ ಬೇರೆಯವರಿಗೆ ಟಿಕೆಟ್ ತಪ್ಪಿಸುವುದರಲ್ಲಿ, ಚುನಾವಣೆಯಲ್ಲಿ ಸೋಲಿಸುವುದರಲ್ಲೇ ಆಸಕ್ತಿ ಕಂಡು ಬರುವುದು ಕಾಂಗ್ರೆಸ್‌ನ ಜಾಯಮಾನ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್‌ಗೆ ಕಾಂಗ್ರೆಸ್ ಟಿಕೆಟ್ ನೀಡಬೇಕಿರುವುದು ನ್ಯಾಯ. ಈಗಾಗಲೇ ಎಂಎಲ್‌ಎ ಟಿಕೆಟ್‌ಗೆ ಲಾಭಿ ಮಾಡಿ ತಪ್ಪಿ ಹೋಗಿದೆ. ಪಕ್ಷ ಅಧಿಕಾರಕ್ಕೆ ಬಂದರೂ ಯಾವ ಅಧಿಕಾರವೂ ದಕ್ಕಿಲ್ಲ. ಮಂಜುನಾಥ ಭಂಡಾರಿ ಜೊತೆ ಸೇರಿಕೊಂಡು ಜಿಲ್ಲಾ ಕಾಂಗ್ರೆಸ್‌ಗೊಂದು ಕಚೇರಿ ನಿರ್ಮಿಸುವಲ್ಲಿ ಪ್ರಸನ್ನಕುಮಾರ್ ಬಹಳ ಕೆಲಸ ಮಾಡಿದ್ದಾರೆ. ವರದಿಗಾರ ವರದಿ ಬೃಹತ್ ಪಾಲಿಕೆಗೆ ಈಗ ಸಾಮ್ರಾಟ್ ಅಶೋಕ! ಪಾಲಿಕೆ ಚುನಾವಣೆಯ ಫಲಿತಾಂಶ ಬಿಜೆಪಿಯ ದಿಕ್ಕನ್ನೇ ಬದಲಿಸಿದೆ. ಲಿಂಗಾಯತ ವಿರೋಧಿ ಎಂಬ ಹಣೆಪಟ್ಟಿ ಹೊತ್ತಿದ್ದ ವಕ್ಕಲಿಗ ಜನಾಂಗದ ನಾಯಕ ಆರ್.ಅಶೋಕ್ ತಾನು ಏನು? ತನ್ನ ಸಾಮರ್ಥ್ಯವೇನು? ಎಂಬುದನ್ನ ಈ ಚುನಾವಣೇಲೂ ತೋರಿಸಿ, ಹೌದ್ದಲೇ... ಅನ್ನಿಸಿಕೊಂಡಿದ್ದಾರೆ. ಅಶೋಕ್‌ರವರ ಸಮಯ ಪ್ರಜ್ಞೆ, ಜಾಣ್ಮೆ, ದಿಟ್ಟ ನಿರ್ಧಾರದಿಂದಲೇ ಈ ಬಾರಿಯ ಚುನಾವಣೇಲಿ ಅತೀ ಹೆಚ್ಚಿನ ಬಿಜೆಪಿ ಅಭ್ಯರ್ಥಿಗಳು ಪಾಲಿಕೆಗೆ ಆಯ್ಕೆಯಾದರು. ಈ ಎಲ್ಲಾ ಕಾರಣಗಳಿಂದ ಬಿಜೆಪಿಯಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿ ಹೊರ ಹೊಮ್ಮಿರುವ ಅಶೋಕ್, ಭವಿಷ್ಯದ ಮುಖ್ಯಮಂತ್ರಿ ಪಟ್ಟಕ್ಕೂ ಚಾಪೆ ಹಾಸಿದ್ದಾರೆ. ಆ ಮೂಲಕ ತಮ್ಮ ವಿರೋಧಿಗಳ ಬಾಯಿ ಮತ್ತೊಂದನ್ನು ಮುಚ್ಚಿಸಿದ್ದಾರೆ. ಲೋಕೇಶ್ ಕೊಪ್ಪದ್ ವರದಿ ಹೊಸದುರ್ಗ: ಶನಿದೇವರ ಪೂಜಾರಿ ವಿಷವಿಕ್ಕಿ ಕೊಂದೇ ಬಿಟ್ಟ! ಇದೊಂದು ತಣ್ಣನೆಯ ಕ್ರೌರ್ಯದ ಕತೆ! ಒಡಹುಟ್ಟಿದ ಅಕ್ಕನಿಗೆ ವಿಷವಿಟ್ಟು ಸಾಯಿಸಿದ ದಾರುಣ ಕತೆ! ಹೊಸದುರ್ಗದ ಹೊನ್ನೆನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ನಡೆದಿರುವ ಈ ಘಟನೆ ಮನುಷ್ಯ ಸಂಬಂಧಗಳನ್ನೇ ಅನುಮಾನಿಸುವಂತೆ ಮಾಡಿರುವುದು ಸುಳ್ಳಲ್ಲ. ಕೊಲೆಗಡುಕ ಅರ್ಚಕ ಜೈಲು ಸೇರುವುದು ಖಾತ್ರಿಯಾದರೂ ಸತ್ತು ಹೋದವರ ಕುಟುಂಬದ ಗತಿಯೇನು? ಕಾಂತರಾಜ್ ಅರಸ್ ನೇವಿ ಕಾಲಂ ಕತೆಗಳಿಗೂ ಮರುಜನ್ಮ ಇದೆ, ಹುಟ್ಟುತ್ತವೆ ಮತ್ತೆ ಮತ್ತೆ! ಒಂದೂರಲ್ಲಿ ಒಬ್ಬ ಸುಂದರವಾದ ಹುಡುಗಿ ಇದ್ದಳು. ಅವಳು ದಿನಾ ಕಾಡಿಗೆ ಹೋಗಿ ಕಟ್ಟಿಗೆಯನ್ನು ಆರಿಸಿಕೊಂಡು ಬಂದು ಅದನ್ನು ಸಂತೆಯಲ್ಲಿ ಮಾರಿ ಅಷ್ಟೋ ಇಷ್ಟೋ ಹಣ ಸಂಪಾದಿಸಿ ಅದರ ಖಾಯಿಲೆ ಬಿದ್ದಿರುವ ಅಮ್ಮನಿಗೆ ಔಷಧಿಯನ್ನೂ, ತಮ್ಮಿಬ್ಬರಿಗೆ ಎರಡು ಹೊತ್ತಿನ ಊಟವನ್ನೂ ಹುಟ್ಟಿಸಿಕೊಳ್ಳುತ್ತಿದ್ದಳು. ತುಂಬ ಚುರುಕಿನ ಹುಡುಗಿಯ ಶ್ರಮ ಮತ್ತು ಚಾಕಚಕ್ಯತೆಯಿಂದ ಅವಳ ಬದುಕು ತಕ್ಕಮಟ್ಟಿಗೆ ಸಂತೋಷವಾಗಿ ಸಾಗಿತ್ತು. ಒಮ್ಮೆ ಅವಳು ಹೀಗೇ ಕಾಡಿಗೆ ಕಟ್ಟಿಗೆ ಆಯ್ದುಕೊಂಡು ಬರುವುದಕ್ಕೆ ಹೋದಾಗ ಅವಳನ್ನು ಒಂದು ಹುಲಿ ನೋಡಿಬಿಟ್ಟಿತು. ಅವಳು ಹುಲಿಯ ಕಣ್ಣಿಗೆ ಎಷ್ಟು ಸುಂದರವಾಗಿ ಕಂಡಳೆಂದರೆ ಆ ಹುಲಿ ಆ ಕ್ಷಣಕ್ಕೆ ತಾನು ಮದುವೆ ಆಗುವುದಾದರೆ ಇವಳನ್ನೇ ಅಂತ ನಿರ್ಧರಿಸಿಬಿಟ್ಟಿತು. ಅಂಥ ಶಕ್ತಿಶಾಲಿ ಹುಲಿಗೆ ಮದುವೆಯಾಗುವ ಅಪಾಯಕಾರಿ ಆಲೋಚನೆ ಯಾಕೆ ಬಂತು ಅಂತ ಗತ್ತಿಲ್ಲ. ಎದುರಿಗೆ ಧುತ್ತೆಂದು ಬಂದು ನಿಂತು ಹುಲಿ ತನ್ನನ್ನು ಮದುವೆ ಆಗುವಂತೆ ಕೋರಿಕೊಂಡಾಗ ಹುಡುಗಿ ಆ ಕ್ಷಣಕ್ಕೆ ಇಲ್ಲ ಅಂತ ಹೇಳುವುದಕ್ಕೆ ಸಾಧ್ಯವೇ ಇರಲಿಲ್ಲ, ಹೌದು ಅನ್ನುವುದಕ್ಕೂ ಸಾಧ್ಯವಿರಲಿಲ್ಲ. ಹುಲಿಯ ಕೋರಿಕೆಗೆ ಒಪ್ಪಿದರೆ ಅದರ ಬದುಕಿಗೆ ಆಹಾರವಾಗಬೇಕು, ಇಲ್ಲ ಅಂದರೆ ಅದರ ಬಾಯಿಗೆ ಆಹಾರವಾಗಬೇಕು. ನೇವಿ ಜಾನಕಿ ಕಾಲಂ ಪೇಜಾವರ ‘ಸದಾಶಿವ ತುಂಬ ಒಳ್ಳೆಯ ಬರಹಗಾರ. ಇವತ್ತಿಗೂ ಅವನನ್ನು ನಾನು ನೆನಪಿಸ್ಕೋತೇನೆ’ ಅಂತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅನಂತಮೂರ್ತಿಯವರು ಹೇಳಿದ್ದು ಮಾರನೆಯ ದಿನ ಪತ್ರಿಕೆಗಳಲ್ಲೂ ವರದಿಯಾಯಿತು. ಅವರು ಹೇಳಿದ ಸದಾಶಿವ ಯಾರು ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳುವ ಆಸಕ್ತಿ ಇಂಗ್ಲಿಷ್ ಪತ್ರಿಕೆಯ ವರದಿಗಾರರಿಗೆ ಇರಲಿಲ್ಲ. ಕನ್ನಡ ಪತ್ರಿಕೆಗಳ ವರದಿಗಾರರು ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಿಲ್ಲ. ಅಷ್ಟಕ್ಕೂ ಅವರಲ್ಲಿ ಅನೇಕರಿಗೆ ಇಬ್ಬರೂ ಸದಾಶಿವರಿರುವ ವಿಚಾರವೇ ಗೊತ್ತಿರಲಿಲ್ಲ. ಆ ಸುದ್ದಿ ಪತ್ರಿಕೆಯಲ್ಲಿ ಬಂದ ದಿನವೇ, ಪೇಪರ್ ಓದುತ್ತಾ ರಸ್ತೆ ದಾಟುತ್ತಿದ್ದ ಸಾಹಿತ್ಯಾಸಕ್ತನೊಬ್ಬನ್ನು ಅಪರಿಚಿತ ವಾಹನವೊಂದು ತಡವಿಕೊಂಡು ಹೋಯಿತು. ಕೈಯಲ್ಲಿ ಪೇಪರ್ ಹಿಡಿದುಕೊಂಡೇ ಅವನು ಪ್ರಾಣಬಿಟ್ಟಿದ್ದ. ಪತ್ರಿಕೆ ಓದುತ್ತಾ ಕನ್ನಡ ಸರಸ್ವತಿಯ ಸೇವೆ ಮಾಡುತ್ತಾ ಪ್ರಾಣ ಬಿಟ್ಟದ್ದರಿಂದ ಅವನಿಗೆ ತಕ್ಷಣವೇ ಸ್ವರ್ಗಕ್ಕೆ ಪ್ರವೇಶ ಸಿಕ್ಕಿತು. ಪತ್ರಿಕೆ ಕಂಕುಳಲ್ಲಿಟ್ಟುಕೊಂಡೇ ಆ ಸಾಹಿತ್ಯಾಸಕ್ತ ಸ್ವರ್ಗಕ್ಕೆ ಕಾಲಿಟ್ಟ. ಅಲ್ಲಿನ ಸೊಬಗನ್ನು ನೋಡಿ ಬೆರಗಾಗುತ್ತಾ, ಪತ್ರಿಕೆಯನ್ನು ಅಲ್ಲಿದ್ದ ಅಮೃತಶಿಲೆಯ ಹಾಸಿನ ಮೇಲಿಟ್ಟು ಸ್ವರ್ಗದಲ್ಲೊಂದು ಸುತ್ತು ಹಾಕಲು ಹೊರಟ. ಜಾನಕಿ ವರದಿ ಭೂಗತ ಪಾತಕಿ ದಾವೂದ್ ಅಡಗುತಾಣ ಪತ್ತೆಯಾಯಿತೇ? ದಾವೂದ್ ಇಬ್ರಾಹಿಂ! ತನ್ನ ನೆಲದಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿರಲು ಆತನಿಗೆ ಸಂಪೂರ್ಣ ಸ್ವಾತಂತ್ರ ನೀಡಿರುವ ಪಾಕಿಸ್ತಾನ ಆತನ ಸಮಸ್ತ ಪಾತಕಕ್ಕೆ, ದಂಧೆಗೆ, ಮಾಫಿಯಾಗೆ ಬೆನ್ನೆಲುಬಾಗಿ ನಿಂತಿದೆ. 1993ರಲ್ಲಿ ಮುಂಬೈನ ಬೀದಿ ಬೀದಿಗಳಲ್ಲಿ ಬಾಂಬ್ ಉಡಾಯಿಸಿ ನೂರಾರು ಅಮಾಯಕರ ರಕ್ತದ ಕೋಡಿ ಹರಿಸಿ ಹೇಡಿಯಂತೆ ಪಾಕಿಸ್ತಾನದಲ್ಲಿ ಮುಖ ಬದಲಾಯಿಸಿಕೊಂಡು ಕುಳಿತಿರುವ ದಾವೂದ್ ಇಬ್ರಾಹಿಂನನ್ನ ಪಾಕಿಸ್ತಾನ ಎಂದೆಂದಿಗೂ ಭಾರತಕ್ಕೆ ಹಸ್ತಾಂತರಿಸುವುದಿಲ್ಲ. ಹಸ್ತಾಂತರಿಸುವುದಿರಲಿ, ಅಸಲಿಗೆ ಆತನ ಕೈಗೆ ಒಂದು ಕೋಳ ಕೂಡ ತೊಡಿಸುವುದಿಲ್ಲ. ಕಾರಣ ಸರಳ ಹಾಗೂ ಸ್ಪಷ್ಟ... ಭಾರತಕ್ಕೆ ನಿರಂತರವಾಗಿ ಕಾಟ ಕೊಡಲು, ಉಗ್ರರನ್ನ ಬಿಟ್ಟು ಬಾಂಬ್ ಉಡಾಯಿಸಲು, ಖೋಟಾ ನೋಟುಗಳನ್ನ ಚಲಾವಣೆ ಮಾಡುವ ಮೂಲಕ ಆರ್ಥಿಕ ಭಯೋತ್ಪಾದನೆ ಹೆಚ್ಚಿಸಲು, ಡ್ರಗ್ಸ್‌ಗಳನ್ನ ಪೂರೈಸಲು ಪಾಕಿಸ್ತಾನಕ್ಕೆ ದಾವೂದ್ ಬೇಕೆ ಬೇಕು. ಗ್ರೀಷ್ಮ ಎಂ.ನಾಯ್ಡು ಅಂಕಣ : ಆಕಾಶಬುಟ್ಟಿ ಒಂದು ಅಸಂಗತ ಕತೆ ಅವತ್ತು ಕತೆ ಬರೆಯಲೆಂದು ಕಾಲೇಜಿಗೆ ರಜಾ ಹಾಕಿ ಕೂತಿದ್ದೆ. ಏನು ತಿಣುಕಿದರೂ ಕತೆ ಹೊರಗೆ ಬರುತ್ತಲೇ ಇಲ್ಲ. ಚಾ ಏಳೆಂಟು ಕಪ್ಪುಗಳಾಗಿ ತಲೆ ಹಿಡಿದುಕೊಂಡಂತಾಗಿತ್ತು. ಹಾಳೆಯ ಮೇಲೆ ಪೆನ್ನಿಟ್ಟರೆ ಪೂರ್ತಿ ಒಣ ಒಣ. ಏನು ಬರೆಯೋದು? ಹೇಗೆ ಬರೆಯೋದು? ಕತೆಯೊಂದು ತೀವ್ರವಾಗಿ ಕಾಡಿತ್ತು. ಕೈ ಹಿಡಿದು ಕರೆದಿತ್ತು. ನೀನು ಬರಿ. ನಿನ್ನ ಪೆನ್ನಿನಲ್ಲಿ ನಾನು ಮೂಡುತ್ತೇನೆ ಅಂತ ಭರವಸೆ ನೀಡಿತ್ತು. ಈಗ ಬರೆಯಲು ಕೂತರೆ ಕೈಗೇ ಸಿಗುತ್ತಿಲ್ಲ. ವಿನಾಕಾರಣ ಒಂದು ರಜೆ ಹಾಳು ಮಾಡಿಕೊಂಡ ನನ್ನ ಬಗ್ಗೆಯೇ ನನಗೆ ಕೋಪ ಬಂತು. ಕೋಪಕ್ಕೋ ನನ್ನ ಪ್ರತಾಪಕ್ಕೋ..... ಯಾವುದೋ ಸಾಲು ಕೈ ಹಿಡಿದು ಜಗ್ಗಿದಂತಾಯಿತು. ಈಗೋ ಬರೆದೆ ಅನ್ನುವಷ್ಟರಲ್ಲಿ.. ಬಾಗಿಲು ಬೆಲ್ಲಾಯಿತು. ತೆಗೆದರೆ ನಮ್ಮ ಹಳೇ ಕೆಲಸದವಳು. ಎಚ್.ಡಿ. ಸುನೀತಾ ಅಂಕಣ : ನೂರು ಮುಖ ಸಾವಿರ ದನಿ ಗುಬ್ಬಿ ವೀರಣ್ಣ ಚಲನಚಿತ್ರ ಬ್ರಹ್ಮರೂ ಹೌದು ಗುಬ್ಬಿ ವೀರಣ್ಣನವರ ಚಿತ್ರರಂಗದ ವೈವಿಧ್ಯಮಯ ಸಾಧನೆಗಳು ಮತ್ತು ಕೊಡುಗೆಗಳನ್ನು ಅವಲೋಕಿಸುವ ಮುನ್ನ ರಂಗಭೂಮಿಯ ಒಂದೆರಡು ಚಿಕ್ಕ ಸಂಗತಿಗಳನ್ನು ನೋಡೋಣ. ಒಮ್ಮೆ ಹೀಗಾಯಿತು- ಅವರ ನಾಲ್ವರು ಪತ್ನಿಯರಲ್ಲೊಬ್ಬರಾದ ರಂಗನಟಿ ಸುಂದರಮ್ಮ ನಾಟಕವೊಂದರಲ್ಲಿ ಅಭಿನಯಿಸುವಾಗ ನಾಟಕದ ನಡುವೆ ರಂಗದ ಮೇಲೆಯೇ ತೀರಿಕೊಳ್ಳುತ್ತಾರೆ. ಅದೇ ನಾಟಕದಲ್ಲಿ ಗುಬ್ಬಿ ವೀರಣ್ಣ ಮತ್ತು ಮಕ್ಕಳೂ ಅಭಿನಯಿಸುತ್ತಿರುತ್ತಾರೆ. ಆದರೆ ವೀರಣ್ಣ ನಾಟಕವನ್ನು ಅಲ್ಲಿಗೇ ನಿಲ್ಲಿಸುವುದಿಲ್ಲ. ಏನೂ ಆಗಿಲ್ಲವೇನೋ ಎಂಬಂತೆ ನಾಟಕ ಪ್ರದರ್ಶನ ಮುಗಿಸಿದ ನಂತರವೇ ತೀರಿಕೊಂಡ ಸುಂದರಮ್ಮನವರ ಉತ್ತರಕ್ರಿಯೆಗಳ ಕಡೆ ಗಮನಹರಿಸಿದರು. ಈ ಘಟನೆ ವೀರಣ್ಣನವರ ಸ್ಥಿತಪ್ರಜ್ಞತೆ ಮತ್ತು ಪತ್ನಿಯ ಸಾವಿನ ದುಃಖ ಎದೆಯೊಳಗಿಟ್ಟುಕೊಂಡು, ಅಭಿನಯಿಸಿ ನಾಟಕ ಪೂರ್ಣಗೊಳಿಸುವುದು ಚಿಕ್ಕ ಸಂಗತಿಯೇನಲ್ಲ. ಎಂ.ವಿ. ರೇವಣಸಿದ್ದಯ್ಯ

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.