Hi Bangalore
Hi Bangalore

Hi Bangalore

This is an e-magazine. Download App & Read offline on any device.

ಸೃಷ್ಟಿ 1041 : ಸಂಪುಟ 21, ಸಂಚಿಕೆ 1, ಅಕ್ಟೋಬರ್ 1, 2015 ಖಾಸ್‌ಬಾತ್ ನಾವು ಏನೇ ನಖರೆ ಮಾಡಿದರೂ ಅವನ ಮನೆ ಬಾಗಿಲಿಗೆ ಹೋಗಬೇಕಾಗುತ್ತೆ! ಇತ್ತೀಚೆಗೊಂದು ಮಧ್ಯಾಹ್ನ ದಾವಣಗೆರೆಯಿಂದ ರವೀಂದ್ರನಾಥ್ ಬಂದಿದ್ದ. ಬಾಲ್ಯದ ಗೆಳೆಯ. ಬಳ್ಳಾರಿಯಲ್ಲಿದ್ದವನು. ನಮ್ಮೆಲ್ಲರಿಗಿಂತ ಮುಂಚಿತವಾಗಿಯೇ ಅವನಿಗೆ ಮೀಸೆ ಬಂದಿದ್ದವು. ಅವನ ತಮ್ಮ ಶಶಿಗೆ ಪ್ರಿಡಾಮಿನೆಂಟ್ ಆಗಿ ಕಾಣುತ್ತಿದ್ದುದೊಂದು ಮಚ್ಚೆ ಇತ್ತು. ಅವರಿಬ್ಬರೂ ಈಗ ದಾವಣಗೆರೆಯಲ್ಲಿ ಸ್ಥಿರವಾಗಿದ್ದಾರೆ. ರವೀಂದ್ರ ಎಣ್ಣೆ ವ್ಯಾಪಾರ ಮಾಡುತ್ತಾನೆ. ಶಶಿಗೆ ಎಲ್.ಐ.ಸಿ.ಯ ವ್ಯಾಪಾರ. ಸುಮಾರು ಮೂವತ್ತು ವರ್ಷಗಳ ಹಿಂದಿನ ಗೆಳೆಯರು. ಮಾತಾಡುತ್ತ ಕುಳಿತಾಗ ಯಾವ್ಯಾವುದೋ ನೆನಪುಗಳ ಕದಲಿಕೆ. ಕಾಲದ ತಿರುಗಣಿಗೆ ಬಿದ್ದು ಮರೆತೇ ಹೋದ ಗೆಳೆಯರನೇಕರು ನೆನಪಿನ ದೋಣಿ ಹತ್ತಿ ತೇಲಿ ಬಂದಿದ್ದರು. ಅವರೆಲ್ಲರ ಬಗ್ಗೆ ಅಲ್ಲದಿದ್ದರೂ, ಅವರಲ್ಲಿ ಕೆಲವರ ಬಗ್ಗೆಯಾದರೂ ನಿಮಗೆ ಹೇಳಬೇಕು. ಹೇಳೇಳುತ್ತಲೇ ನಿಮಗೆ ನನ್ನ ಪರಿಚಯವಾಗಬೇಕು. ‘ನಿನ್ನ ಗೆಳೆಯರ‍್ಯಾರು ಎಂಬುದನ್ನು ಹೇಳು. ನೀನು ಎಂಥವನು ಅಂತ ಹೇಳ್ತೀನಿ!’ ಎಂಬುದೊಂದು ಇಂಗ್ಲಿಷ್ ಗಾದೆಯಂತೆ. ಗೊತ್ತಿಲ್ಲ. ಗಾದೆಗಳನ್ನು ಯಾರು ಸೃಷ್ಟಿ ಮಾಡುತ್ತಾರೋ ಸರಿಯಾಗಿ ಗೊತ್ತಿಲ್ಲ. ಸೃಷ್ಟಿಯಾದ ಗಾದೆಗಳೆಲ್ಲ ಸರಿಯಾದಂಥವಲ್ಲ ಅಂತ ಮಾತ್ರ ಖಂಡಿತ ಹೇಳಬಲ್ಲೆ! ನಿಮಗೆ ಬೇಸರವಾಗಬಹುದೇನೋ; ನನ್ನ ಗೆಳೆಯರನ್ನು ನೋಡಿ. ನಾನೆಂಥವನು ಅಂತ ಮಾತ್ರ ನೀವು ಖಂಡಿತ ಹೇಳಲಾರಿರಿ. ರವಿ ಬೆಳಗೆರೆ ಸಾಫ್ಟ್‌ಕಾರ್ನರ್ ಈ ಮನಸ್ಥಿತಿಯಲ್ಲಿ ಹಬ್ಬ ಮಾಡಲಾರೆ ನೆಮ್ಮದಿ ಇಲ್ಲದ ಮನಸು ಹೊತ್ತು ಏನನ್ನು ಮಾಡಲು ಹೊರಟರೂ ಅದು ಹಾಳು. ಕಣ್ಣೆದುರಿಗೆ ವಿಪರೀತ ಕೆಲಸ ಬಿದ್ದಿದೆ. ನಾನು ಕೆಲಸಕ್ಕೆ ಹೆದರುವವನಲ್ಲ. ಆ ವಿಚಾರದಲ್ಲಿ ಕಳ್ಳ ಬೀಳುವವನೂ ಅಲ್ಲ. ಅವನು ಉದಯ, ಇಡೀ ‘ಓ ಮನಸೇ...’ ಸಂಚಿಕೆ ಮುಗಿಸಿ, “ನೀನು ಬರೆಯೋದಷ್ಟೆ ಬಾಕಿ" ಅಂತ ಹೇಳಿ ಹೋಗಿದ್ದಾನೆ. ಅದು ಕಷ್ಟದ ಕೆಲಸವಲ್ಲ. ನನ್ನ ಮಟ್ಟಿಗೆ ಬರೀ ಮುಕ್ಕಾಲು ರಾತ್ರಿಯ ಕೆಲಸ. ಬೆಳಗಿನ ಜಾವದ ಹೊತ್ತಿಗೆ ಮುಗಿಸಿ ಎದ್ದು ಬಿಡಬಲ್ಲೆ. ಆದರೆ ನನ್ನಿಂದ ಅದು ಸಾಧ್ಯವಾಗುತ್ತಿಲ್ಲ. Not only that. ಪುಸ್ತಕಗಳ ಕೆಲಸ ಚೂರೇ ಚೂರು ಉಳಿದುಕೊಂಡಿದೆ. ಎಲ್ಲವೂ final touches ಕೊಟ್ಟರೆ ಮುಗಿದು ಹೋಗುತ್ತವೆ. But I am lost. ನನಗೆ ಕೈ ನಿಲುಕಿನಲ್ಲೇ ಇರುವ ಕೆಲವು ಪುಸ್ತಕಗಳನ್ನು ಓದಿದರೆ ಮನಸ್ಸು ಸರಿ ಹೋಗುತ್ತದೆ. ಆದರೆ book rack ತನಕ ಹೋಗಿ ಹಿಂತಿರುಗಿ ಬಿಡುತ್ತಿದ್ದೇನೆ. ಪುಸ್ತಕ ಮುಟ್ಟಲಿಕ್ಕೂ ಮನಸಿಲ್ಲ. ಆಫೀಸಿನ ಹುಡುಗರೊಂದಿಗೆ ಸದಾ ತಮಾಷೆಯಾಗಿ ಮಾತಾಡುತ್ತಾ ಓಡಾಡುವವನು ನಾನು. ಆದರೆ ಛೇಂಬರ್ ದಾಟಿ ಅವರಲ್ಲಿಗೆ ಹೋಗಿ ದಿನಗಳೇ ಆದವು. ಕೆಲವರನ್ನಂತೂ ಕಣ್ಣಾರೆ ನೋಡಿಯೂ ಇಲ್ಲ. ರವಿ ಬೆಳಗೆರೆ ಬಾಟಮ್ ಐಟಮ್ ಪತ್ರ ಬರೀತಾ ಬರೀತಾ ಪತ್ರಕರ್ತರಾದೋರು! ದೊಡ್ಡ ದೊಡ್ಡ ಸಂಗೀತಗಾರರಿದ್ದಾರಲ್ಲ? ಅವರೆಲ್ಲ ಹೇಗೆ ಸಂಗೀತಗಾರರಾದರು? ಚಿತ್ರನಟರು ಅದ್ಹೇಗೆ ಚಿತ್ರನಟರಾದರು? ರಘುರಾಯ್‌ನಂಥವರು ಹೇಗೆ ಜಗತ್ತಿನ ಸರ್ವಶ್ರೇಷ್ಠ ಫೊಟೋಗ್ರಾಫರ್ ಆದರು? ಹಾಗೇನೇ ನನ್ನ ತಲೆಮಾರಿನ ನೂರಾರು ಜನ, ನಾವು ಹೇಗೆ ಪತ್ರಕರ್ತರಾದೆವು? ಇವತ್ತು ಬಿಡಿ, ರಾಜ್ಯದ ಅನೇಕ ಕಾಲೇಜುಗಳಲ್ಲಿ ಪತ್ರಿಕೋದ್ಯಮವನ್ನು ಡಿಗ್ರಿಯ ಒಂದು ಸಬ್ಜೆಕ್ಟನ್ನಾಗಿ ಬೋಧಿಸುತ್ತಾರೆ. ಎಲ್ಲ ಯೂನಿವರ್ಸಿಟಿಗಳಲ್ಲೂ ಪತ್ರಿಕೋದ್ಯಮದ ಡಿಪಾರ್ಟ್‌ಮೆಂಟುಗಳಿವೆ. ದೇಶವಿದೇಶದ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಹೇಳಿಕೊಡುವ ಸಿಂಬಯಾಸಿಸ್, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಂಥ ಬೃಹತ್ ಸಂಸ್ಥೆಗಳಿವೆ. ಇದೆಲ್ಲ ಇವತ್ತಿನ ಮಾತು. ರವಿ ಬೆಳಗೆರೆ ಹಲೋ ಕರ್ನಾಟಕದಲ್ಲಿ ಕನ್ನಡಿಗರು ಪರಕೀಯರಾಗಿ; ಪರಕೀಯರೇ ಕನ್ನಡಿಗರಾಗಬಹುದು ಮೊನ್ನೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚಿನ ದಿನಗಳಲ್ಲೇ ಅತ್ಯಪರೂಪದ ಹಗರಣವೊಂದನ್ನು ಬಯಲಿಗೆಳೆದಿದ್ದಾರೆ. ಇವತ್ತು ಒಂದು ಚದರಡಿಗೆ ಇಪ್ಪತ್ತೆರಡು ಸಾವಿರ ರುಪಾಯಿ ಮೌಲ್ಯವಿರುವ ಜಕ್ಕೂರು-ಅಳ್ಳಾಲಸಂದ್ರ ವ್ಯಾಪ್ತಿಯಲ್ಲಿರುವ ಹದಿನಾಲ್ಕು ಸಾವಿರ ಕೋಟಿ ರುಪಾಯಿ ಮೌಲ್ಯದ ನೂರಾ ಎಪ್ಪತ್ತೇಳು ಎಕರೆ ಅರಣ್ಯ ಪ್ರದೇಶವನ್ನು ಪ್ರಭಾವಿಗಳು ಹೇಗೆ ಹೊಡೆದು ತಿಂದಿದ್ದಾರೆ ಎಂಬುದು ಅವರ ಆರೋಪದ ವಿವರ. ಅವರ ಪ್ರಕಾರ, ಮೈಸೂರು ಅರಸರ ಕಾಲದಲ್ಲಿ ಅರಣ್ಯ ಪ್ರದೇಶವೆಂದು ಘೋಷಿತವಾಗಿದ್ದ ಈ ಪ್ರದೇಶ ಇವತ್ತು ಅರಣ್ಯ ಪ್ರದೇಶವಾಗಿ ಉಳಿದಿಲ್ಲ. ಬದಲಿಗೆ ದೊಡ್ಡ ದೊಡ್ಡ ಪ್ರಭಾವಿಗಳ, ಡೆವಲಪರ‍್ಸ್‌ಗಳ ಕೈ ಸೇರಿದೆ. ನೀವೊಂದು ಸಲ ಬೆಂಗಳೂರಿನ ಹೊರವರ್ತುಲವನ್ನು ನೋಡಬೇಕು. ಅದರಲ್ಲೂ ಬೆಂಗಳೂರು ಉತ್ತರ ಭಾಗದಲ್ಲಿ ಬೆಳೆಯುತ್ತಿರುವ ಫ್ಲ್ಯಾಟುಗಳು, ಬಂದು ನೆಲೆಸುತ್ತಿರುವ ಪರಭಾಷಿಕರು, ಈ ಪರಭಾಷಿಕ ರಿಯಲ್ ಎಸ್ಟೇಟ್ ಮಾಫಿಯಾವೇ ಕರ್ನಾಟಕದ ಅರಣ್ಯ ಭೂಮಿಯನ್ನು ಕಬಳಿಸಿ, ಮತ್ತದರಲ್ಲಿ ದಂಡಿಯಾಗಿ ಕಟ್ಟಡಗಳನ್ನು ಎಬ್ಬಿಸಿ ಮಾರಾಟ ಮಾಡಿದೆ. ಇವತ್ತು ಅಲ್ಲಿ ಹೋಗಿ ನೋಡಿದರೆ ಲಕ್ಷಾಂತರ ಜನ ನೆಲೆಸಿದ್ದಾರೆ. ಅಂತಸ್ತುಗಳ ಮೇಲೆ ಅಂತಸ್ತುಗಳು, ವಿಲ್ಲಾಗಳು ಎದ್ದು ನಿಂತಿವೆ. ರವಿ ಬೆಳಗೆರೆ ಮುಖಪುಟ ವರದಿ ಡಾನ್ ವಿಕ್ಕಿ ಶಿಷ್ಯ ಪೂಜಾರಿ ಬಂಟ ಮೆಂಡನ್‌ಗೆ ಫೀಲ್ಡಿಂಗ್! ಮಂಗಳೂರಿನ ಪಾಪಿಗಳ ಲೋಕದಲ್ಲಿ ನೆತ್ತರ ನಾದ ಮತ್ತೆ ಮೊಳಗುವ ಸ್ಪಷ್ಟವಾದದ್ದೊಂದು ಸೂಚನೆ ಕಂಡುಬರುತ್ತಿದೆ. ಪಾಂಡು ಪೈ ಹತ್ಯೆಗೆ ಪ್ರತೀಕಾರವಾಗಿ ಬಿಜೈ ರಾಜಾ ಕೊಲೆಯಾದನಲ್ಲಾ? ಬಿಜೈ ರಾಜಾನ ಹತ್ಯೆಗೆ ಪ್ರತೀಕಾರವಾಗಿ ವಿಕ್ಕಿ ಶೆಟ್ಟಿ ಹುಡುಗರು ಕೊಂದು ಮುಗಿಸಿದ್ದು ಪಚ್ಚು ಅಲಿಯಾಸ್ ಪ್ರಶಾಂತನನ್ನು. ಅಸಲಿಗೆ ಈ ಪಚ್ಚು ರೌಡಿಯಾಗಿರಲಿಲ್ಲ. ಈತನ ಮೇಲೆ ಕೇಸುಗಳೂ ಇರಲಿಲ್ಲ. ಬಿಜೈ ರಾಜಾನ ಕೊಲೆಗೆ ಕಾರಣರಾದವರ ಜೊತೆಗೆ ಪಚ್ಚು ಕೂಡ ಇದ್ದಿದ್ದ ಎಂಬ ಮ್ಯಾಟರ್ರೇ ಸಾಕಿತ್ತು ವಿಕ್ಕಿ ಶೆಟ್ಟಿಯ ಕಣ್ಣು ಕೆಂಪಾಗಲಿಕ್ಕೆ. ಇದೇ ಕಾರಣದಿಂದ ಪಚ್ಚು ಈಗ್ಗೆ ಎರಡು ವರ್ಷದ ಹಿಂದೆ ವೆಲೆನ್ಸಿಯಾದ ಮಂಗಳಾ ಬಾರ್ ಬಳಿ ಗುಂಡು ಮತ್ತು ತಲವಾರ್ ದಾಳಿಯಿಂದ ಹತನಾದ. ವಸಂತ್ ಗಿಳಿಯಾರ್ ರಾಜಕೀಯ ಸಂಪುಟ ಪುನರ್ರಚನೆಗೆ ಸಿದ್ದು ಕೈ ಹಾಕಿದ್ದು ಯಾಕೆ ಗೊತ್ತೆ? ಅಂದ ಹಾಗೆ ಸಿದ್ದರಾಮಯ್ಯನವರನ್ನು ಕೆಳಗಿಳಿಸಿ, ಆ ಜಾಗಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ತಂದು ಕೂರಿಸುವ ಇರಾದೆ ಹೈಕಮಾಂಡ್‌ನ ಕೆಲವು ನಾಯಕರಲ್ಲಿತ್ತಾದರೂ, ಸದ್ಯಕ್ಕೆ ಏನೇ ಮಾಡಲು ಹೋದರೂ ಜನತಾ ಪರಿವಾರವೇ ಒಗ್ಗೂಡಲು ಅವಕಾಶ ಮಾಡಿಕೊಟ್ಟಂತಾಗಬಹುದು ಎಂಬ ಆತಂಕ ಹೈಕಮಾಂಡ್ ವರಿಷ್ಠರನ್ನೂ ಕಾಡುತ್ತಿದೆ. ಹೀಗಾಗಿ ವಸತಿ ಸಚಿವ ಅಂಬರೀಶ್, ಜವಳಿ ಸಚಿವ ಬಾಬುರಾವ್ ಚಿಂಚನಸೂರ್, ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವು ಮಂದಿ ಸಚಿವ ಸಂಪುಟದಿಂದ ಔಟ್ ಆಗುವುದು ಬಹುತೇಕ ನಿಶ್ಚಿತವಾಗಿದೆ. ಅಷ್ಟೇ ಅಲ್ಲ, ಹೀಗೆ ಔಟ್ ಆಗುವವರ ಜಾಗಕ್ಕೆ ಕಾಗೋಡು ತಿಮ್ಮಪ್ಪ, ಪರಮೇಶ್ವರ್, ಎಚ್.ವೈ. ಮೇಟಿ, ವಿನಯ್ ಕುಲಕರ್ಣಿ, ಮಾಲೀಕಯ್ಯ ಗುತ್ತೇದಾರ್, ಕೆ.ಬಿ. ಕೋಳಿವಾಡ್ ಸೇರಿದಂತೆ ಹಲವು ಮಂದಿಗೆ ಅವಕಾಶ ದಕ್ಕುವ ಲಕ್ಷಣಗಳು ಕಾಣುತ್ತಿವೆ. ಆರ್.ಟಿ.ವಿಠ್ಠಲಮೂರ್ತಿ ವರದಿ ಕಿಮ್ಮನೆ ಸೀಟು ನಿಕಾಲಿಯಾದರೆ ಕಿಂಗ್ ಕಾಗೋಡು ಎಂಟ್ರಿ! ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡುವುದು ಕಿಮ್ಮನೆಯವರಿಂದ ಸಾಧ್ಯವಾಗಲಿಲ್ಲ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಆಯಕಟ್ಟಿನ ಜಾಗದಲ್ಲಿ ಯಡಿಯೂರಪ್ಪ-ಈಶ್ವರಪ್ಪ ತಮಗೆ ಬೇಕಾದವರನ್ನು ತಂದು ಕೂರಿಸಿಕೊಂಡಿದ್ದಾರೆ. ಯಾವುದೇ ಫೈಲು ಅತ್ತಿಂದಿತ್ತ ಸರಿದರೂ ಬಿಜೆಪಿ ಮುಖಂಡರಿಗೆ ಗೊತ್ತಾಗುತ್ತೆ. ಮುಂದಿನ ವಾರ ಆರಂಭವಾಗುವ ಕಾಮಗಾರಿ ಬಗ್ಗೆಯೋ, ಇನ್ಯಾವುದರ ಬಗ್ಗೆಯೋ ಮಾಹಿತಿ ಪಡೆದು ಅದೇ ಬೇಡಿಕೆ ಇಟ್ಟುಕೊಂಡು ಬಿಜೆಪಿ ಹೋರಾಟಕ್ಕಿಳಿಯುತ್ತದೆ. ಕಾಮಗಾರಿ ಆರಂಭವಾಗುತ್ತಲೇ ತಮ್ಮಿಂದಲೇ ಕಾಮಗಾರಿ ಆರಂಭವಾಯಿತು ಎಂದು ಕೇಕೆ ಹಾಕುತ್ತಾರೆ ಸ್ಥಳೀಯ ಬಿಜೆಪಿಗರು. ವರದಿಗಾರ ವರದಿ ಬಿಜಾಪುರದ ತುಂಬ ಖೊಟ್ಟಿ ಗೊಬ್ಬರ! ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದಲ್ಲಿ ರೈತರ ಬಾಯಿಗೆ ಮಣ್ಣು ಬೀಳುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಮಳೆಯಿಲ್ಲದೆ ತಲೆ ಮೇಲೆ ಕೈಹೊತ್ತುಕೊಂಡು ಕುಳಿತಿದ್ದ ರೈತರಿಗೆ ಕಲಬೆರಕೆ ರಸಗೊಬ್ಬರ ತಯಾರಿಕೆ ವಿಚಾರ ಕಿವಿಗೆ ಬೀಳುತ್ತಿದ್ದಂತೆ ಕಾದ ಸೀಸ ಸುರಿದಂತಾಗಿದೆ. ಇದರ ದೊಡ್ಡ ಜಾಲವನ್ನು ಖುದ್ದು ರೈತ ಮುಖಂಡರೇ ಪತ್ತೆ ಹಚ್ಚಿ ಪೊಲೀಸರಿಗೆ, ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ವರದಿಗಾರ ವರದಿ ಬೆಂಗಳೂರು ವಿ.ವಿ. ಕ್ಯಾಂಪಸ್ ಸುತ್ತ ಕತ್ತಲಾದರೆ ಸಾಕು! ಬೆಂಗಳೂರು ಜ್ಞಾನಭಾರತಿಯ ಯೂನಿವರ್ಸಿಟಿ ಬೆನ್ನ ಹಿಂದೆ ಇರುವ ಏರಿಯಾಗಳಲ್ಲಿ ಮಾಂಸದ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಆ ಪೈಕಿ ಮರಿಯಪ್ಪನ ಪಾಳ್ಯ, ಕೆಂಚನಪುರ ಕ್ರಾಸ್, ಜಗಜ್ಯೋತಿ ಲೇಔಟ್, ದೊಡ್ಡಬಸ್ತಿ ರಸ್ತೆ ಅಕ್ಕಪಕ್ಕ, ನಾಗದೇವನಹಳ್ಳಿ, ಜ್ಞಾನಗಂಗಾನಗರ, ಕಲ್ಯಾಣ್ ಲೇಔಟ್‌ನಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಹುಡುಗಿಯರನ್ನು ಸಪ್ಲೈ ಮಾಡುವ ಮನೆಗಳಿವೆ. ದುರ್ದೈವದ ಸಂಗತಿಯೆಂದರೆ ಖುದ್ದು ಪೊಲೀಸರೇ ಕಾವಲು ನಿಂತಿರುವುದು. ಅಕಸ್ಮಾತ್ ಈ ಬಗ್ಗೆ ಯಾರಾದರೂ ತುಟಿ ಪಿಟಿಕ್ ಅಂದರೆ ಕೇಸ್ ಜಡಿದು ಒಳಗೆ ಗದುಮುತ್ತೀವಿ ಅಂತ ಬೆದರಿಸುವ ಮಹಾನುಭಾವರೂ ಇಲ್ಲಿದ್ದಾರೆ. ಇನ್ನೂ ಮಾಂಸದ ದಂಧೆ ಎಗ್ಗಿಲ್ಲದೇ ನಡೆಯದೇ ಇನ್ನೇನು? ಇನ್ನಾದರೂ ಬೆಂಗಳೂರಿನ ದಕ್ಷ ಪೊಲೀಸ್ ಕಮೀಷನರ್ ಎನ್.ಎಸ್.ಮೆಘರಿಕ್ ಸಾಹೇಬರು ಇತ್ತ ಗಮನ ಹರಿಸದಿದ್ದಲ್ಲಿ ಪೊಲೀಸ್ ಇಲಾಖೆಗೆ ಸಾರ್ವಜನಿಕರ ಶಾಪ ಗ್ಯಾರಂಟಿ. ಅಶ್ವಿನ್ ಕುಮಾರ್ ವರದಿ ಕೆಎಲ್‌ಇ ಸ್ಟೂಡೆಂಟ್ಸ್ ತಮ್ಮ ಪ್ರಿನ್ಸಿಗೇ ಫುಲ್ ಒದ್ದರು! ಹುಬ್ಬಳ್ಳಿಯ ಹೆಸರಾಂತ ಸಂಸ್ಥೆ ಕೆಎಲ್‌ಇಯ ಬಿಬಿಎ ಕಾಲೇಜಿನ ಪ್ರಿನ್ಸಿಪಾಲ್ ಆನಂದ ವಡ್ಡಿನನಿಗೆ ವಿದ್ಯಾರ್ಥಿಗಳು ಮುಖ ಕಿತ್ತು ಹೋಗುವಂತೆ ಬಡಿದು ಆತನ ಹನ್ನೊಂದು ಲಕ್ಷ ಬೆಲೆ ಬಾಳುವ ಕಾರನ್ನು ಪೀಸ್ ಪೀಸ್ ಮಾಡಿದ್ದಾರೆ. ಗೋವಾಗೆ ಇಂಡಸ್ಟ್ರಿಯಲ್ ಟೂರ್‌ಗೆ ಹೋಗಿದ್ದಾಗ ವಿದ್ಯಾರ್ಥಿನಿಯರ ಬಳಿ ತನ್ನ ‘ಕೈಚಳಕ’ ತೋರಿಸಿದ ಎಂಬುದು ಪ್ರಿನ್ಸಿಪಾಲ್ ಆನಂದ್ ವಡ್ಡಿನ ಮೇಲಿರುವ ಆರೋಪ. ಅಸಲಿಗೆ ಪ್ರಿನ್ಸಿಪಾಲ್ ಆನಂದ ವಡ್ಡಿನನಿಗೆ ಅಂತಹದ್ದೊಂದು ಖಯಾಲಿ ಇತ್ತಾ? ಗೋವಾ ಟೂರ್‌ಗೆ ಹೋಗಿದ್ದಾಗ ನಡೆದದ್ದಾದರೂ ಏನು? ಅಂತ ತಿಳಿಯಲು ಹೊರಟಾಗ ಬಯಲಾದ ಸಂಗತಿಯೇ ಬೇರೆ. ವರದಿಗಾರ ನೇವಿ ಕಾಲಂ ಪಾಪ, ಪಾಪಪ್ರಜ್ಞೆಗಳನು ದಾಟಿ, ವ್ಯಭಿಚಾರಿ ಭಾವವ ಮೀಟಿ... ಒಂದು ಬರಹ, ಸಿನೆಮಾ ಅಥವಾ ಕೃತಿ ಕಟ್ಟಿಕೊಡಬೇಕಾಗಿರುವುದು ಏನನ್ನು? ಪ್ರತಿ ಸಲ ಇದನ್ನು ಕೇಳಿಕೊಳ್ಳುತ್ತೇವೆ ನಾವು, ದೊಡ್ಡದಾಗಲ್ಲ, ನಮ್ಮೊಳಗೇ. ತುಂಬ ಹಿಂದೆ ಓದಿದ ಲಂಕೇಶರ ಒಂದು ಕತೆ ಎಷ್ಟು ಬೆಚ್ಚಿ ಬೀಳಿಸಿತ್ತೆಂದರೆ ಅದು ಏನನ್ನೂ ಹೇಳದೇ ನಮ್ಮನ್ನು ಒಂದು ಬಗೆಯ ತೀವ್ರ ಆಘಾತಕ್ಕೆ ತಂದು ನಿಲ್ಲಿಸಿತ್ತು. ಆ ಕತೆ ಹೀಗಿತ್ತು: ಕತೆಯ ನಿರೂಪಕ ಲೇಖಕ, ಚಿಂತಕನೂ ಹೌದು. ಪ್ರತಿ ಸಲ ಒಬ್ಬ ವ್ಯಕ್ತಿಯ ಬಳಿ ಆತ ಕ್ಷೌರಕ್ಕೋಸ್ಕರ ಹೋಗುತ್ತಿರುತ್ತಾನೆ. ಅಷ್ಟಾಗಿ ಮಾತಾಡದ, ತನ್ನ ಪಾಡಿಗೆ ತಾನು ಕೆಲಸ ಮಾತ್ರ ಮುಗಿಸುವ, ಏನನ್ನಾದರೂ ಕೇಳಿದರೆ ಮಾತ್ರ ಉತ್ತರಿಸುವ ವ್ಯಕ್ತಿ ಆತ. ಅವನ ಮೇಲೆ ಇವನಿಗೆಷ್ಟು ಅಕಾರಣ ಮಮತೆ ಎಂದರೆ ಅಷ್ಟು ಸಲ ಹೋದರೂ, ಅವನ ಖಾಯಂ ಗಿರಾಕಿಯಾದರೂ ವಿಶೇಷ ಸ್ನೇಹಕ್ಕಾಗಿ ಕೈ ಚಾಚದ, ತನ್ನ ಖಾಯಂ ಗಿರಾಕಿ ಅನ್ನುವ ಕಾರಣಕ್ಕೆ ವಿಶೇಷ ಕಾಳಜಿಯನ್ನೂ ತೋರಿಸದ ನಿರ್ಲಿಪ್ತ ವ್ಯಕ್ತಿತ್ವವೇ ಸೆಳೆಯುವಂಥದ್ದು. ಆ ಬಗ್ಗೆ ಲೇಖಕರಿಗೆ ಬಹಳ ಗೌರವ, ಆದರಗಳು ಹುಟ್ಟಿಕೊಳ್ಳುತ್ತವೆ. ನೇವಿ ಜಾನಕಿ ಕಾಲಂ ತಣ್ಣಗೆ ಉರಿದವಳು ಎಷ್ಟೋ ಸಲ ನಾನು ನೆನಪಿಸಿಕೊಳ್ಳುತ್ತಿದ್ದೇನಾ ಕಲ್ಪಿಸಿಕೊಳ್ಳುತ್ತಿದ್ದೇನಾ ಅನ್ನುವ ಅನುಮಾನ. ನೆನಪು ಮತ್ತು ಆಶೆಗಳು ಬೆರೆತರೆ ಮನುಷ್ಯನನ್ನು ವಿಚಿತ್ರವಾದ ಸುಖವೊಂದು ಆವರಿಸಿಕೊಳ್ಳುತ್ತದೆ. ಆ ಸುಖದಲ್ಲಿ ಮತ್ತೆ ಮತ್ತೆ ಮುಳುಗಿ ಏಳಲು ಮನಸ್ಸು ಹವಣಿಸುತ್ತದೆ. ಒಂದೊಂದೇ ನೆನಪಿನ ಚಿತ್ರವನ್ನು ಮನಸ್ಸು ಕಲ್ಪಿಸಿಕೊಂಡು ಸುಖಿಸತೊಡಗುತ್ತದೆ. ಎಷ್ಟೋ ಸಲ ಅದು ನೆನಪು ಕೂಡ ಆಗಿರುವುದಿಲ್ಲ. ವಂದನಾ ನನ್ನ ನೆನಪೋ ಆಶೆಯೋ ಕಲ್ಪನೆಯೋ ಸ್ಪಷ್ಟವಿಲ್ಲ. ಅವಳಿಲ್ಲದೇ ಹೋಗಿದ್ದರೆ ನಾನು ವಿಶ್ವಾಸ ಕಾರಂತನನ್ನು ಅಷ್ಟಾಗಿ ಹಚ್ಚಿಕೊಳ್ಳುತ್ತಿದ್ದೇನೋ ಇಲ್ಲವೋ ಗೊತ್ತಿಲ್ಲ. ವಂದನಾ ಆವತ್ತು ರಾತ್ರಿ ನನ್ನ ಕೈ ಹಿಡಿದುಕೊಂಡು ತನ್ನ ಮಿಂಚುವ ಕಣ್ಣುಗಳಲ್ಲಿ ತುಳುಕಿದ ಕಣ್ಣೀರನ್ನು ಫಳಫಳಿಸುತ್ತಾ, “ಐ ಹೇಟ್ ಯೂ ರಾಜೀವ್" ಅಂತ ಹೇಳದೇ ಹೋಗಿದ್ದರೆ ನಾನು ಅವಳನ್ನು ಮರೆತೇಬಿಡುತ್ತಿದ್ದೆನೋ ಏನೋ? ಐ ಹೇಟ್ ಯೂ. ಜಾನಕಿ ವರದಿ ಹಂಪಿ ವಿ.ವಿ.ಯಲ್ಲಿ ಮಲ್ಲಿಕಾ ಘಂಟಿ ಹೊಸ ಬೆಳಕು ಮೂಡಿಸುವರಾ? ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲೀಗ ಹೊಸ ಸಂಚಲನ. ವಿ.ವಿ.ಗೆ ನೂತನ ಕುಲಪತಿಗಳಾಗಿ ಮಲ್ಲಿಕಾ ಘಂಟಿ ಪದಗ್ರಹಣ ಮಾಡಿದ್ದಾರೆ. ಅವರ ಆಗಮನದಿಂದ ಹಂಪಿಯ ‘ಅಕ್ಷರ ಕಾಶಿ’ಯಲ್ಲಿ ಬದಲಾವಣೆಯ ಗಾಳಿ ಬೀಸುವ ಲಕ್ಷಣಗಳಿವೆ. ಅಪ್ಪ ಕಟ್ಟಿಸಿದ ಬಾವಿ ಅಂತ ಉಪ್ಪುನೀರು ಕುಡಿಯೋ ಜಾಯಮಾನ ಘಂಟಿಯವರದ್ದಲ್ಲ. ಮನೆಯ ವ್ಯವಸ್ಥೆಯ ವಿರುದ್ಧವೇ ಮೊದಲ ಕೂಗು ಹಾಕಿದ್ದ ಮಲ್ಲಿಕಾ, ಸಾಮಾಜಿಕ ಅವ್ಯವಸ್ಥೆಯ ವಿರುದ್ಧ ಸದಾ ಗುಡುಗುತ್ತಲೇ ಬಂದವರು. ಹಾಗಾಗಿ ನಾಡಿನ ಸಾಹಿತ್ಯವಲಯವೇ ಹಂಪಿಯ ಕಡೆಗೊಮ್ಮೆ ಬೆರಗುಗಣ್ಣಿನಿಂದ ನೋಡುತ್ತಿದೆ. ರಾಜ್ಯದ ಇತರೆ ವಿ.ವಿಗಳಿಗಿಂತ ಭಿನ್ನವಾಗಿರುವ ಕನ್ನಡ ವಿ.ವಿ.ಯು ನಾಡಿನ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯದ ಜ್ಞಾನದೇಗುಲ. ಸಂಶೋಧನಾ ವಿ.ವಿ.ಯಾಗಿರುವ ಕಾರಣಕ್ಕೆ ಇಲ್ಲಿನ ಕುಲಪತಿ ನಾಡಿನ ಸಾಂಸ್ಕೃತಿಕ ರಾಯಭಾರಿಯಂತೆ ಕಾರ್ಯನಿರ್ವಹಿಸಬೇಕಾಗುತ್ತದೆ. ಹೀಗೆ ಹಲವು ವೈಶಿಷ್ಟ್ಯಗಳಿರುವ ವಿ.ವಿ.ಯ ಸಾರಥ್ಯವನ್ನು ಮೊಟ್ಟ ಮೊದಲ ಬಾರಿಗೆ ಮಹಿಳೆಯೊಬ್ಬರು ವಹಿಸಿಕೊಂಡಿದ್ದಾರೆ. ಸತೀಶ್ ಬಿಲ್ಲಾಡಿ ಅಂಕಣ : ಆಕಾಶಬುಟ್ಟಿ ನಾನೂ ಉಪವಾಸ ಮಾಡಿದೆ ಉಪವಾಸ ಮಾಡಲು ನಾನು ಬಹಳ ಪ್ರಯತ್ನ ಪಟ್ಟಿದ್ದೇನೆ. ದೇವರಿಗೆ ಏನಾದರೂ ಅಪ್ಲಿಕೇಷನ್ ಹಾಕಿಕೊಂಡಾಗ ನಿನ್ನ ಬೇಡಿಕೆ ನಡೆಸಿದರೆ ನೀನು ನನಗೇನು ಕೊಡುತ್ತೀಯ ಅಂತ ದೇವರು ಕೇಳಿದಂತೆ... ಆಗಲಿ ಊಟ ಬಿಡ್ತೀನಿ ಅಂತ ನಾನು ಅಂದಂತೆ... ಒಟ್ಟಿನಲ್ಲಿ ಊಟ ಬಿಡಲು ಭಲೇ ಕಷ್ಟ ಪಟ್ಟಿದ್ದೇನೆ.... ಐ ಮೀನ್ ಉಪವಾಸ ಇರಲು ತುಂಬ ಕಷ್ಟ ಪಟ್ಟಿದ್ದೇನೆ. ನಮ್ಮಮ್ಮ ಸಂಕಷ್ಟಿ, ಸತ್ಯನಾರಾಯಣ ವ್ರತ, ಗುರುವಾರ ರಾಘವೇಂದ್ರ ರಾಯರು ಮುಂತಾಗಿ ಇಡೀ ದಿನ ಉಪವಾಸವಿರುವುದನ್ನು ನೋಡಿದ್ದೆ. ಅವರು ಕದ್ದೇನಾದ್ರೂ ತಿನ್ನುತ್ತಾರಾ ಅಂತಲೂ ಟೆಸ್ಟ್ ಮಾಡಿದ್ದೆ. ನೋ ಚಾನ್ಸ್. ಅವರು ನೀರು, ಟೀ ಬಿಟ್ಟು ಬೇರೇನೂ ತಿನ್ನುತ್ತಿರಲಿಲ್ಲ. ಅಷ್ಟು ರುಚಿರುಚಿಯಾದ ಪಲಾವು, ಚಿತ್ರಾನ್ನ, ಪಲ್ಯಗಳನ್ನು ತಯಾರಿಸುವಾಗ ಉಪ್ಪು ಸರಿಯಿದೆಯಾ ಅಂತ ನೋಡುವ ನೆಪದಲ್ಲಾದರೂ ಸ್ವಲ್ಪ ತಿನ್ನುವ ಆಶೆಯಾಗುವುದಿಲ್ಲವೇ? ಉಪವಾಸದ ಹೆಸರಿನಲ್ಲಿ ಈ ತಿನ್ನುವ ಆಶೆಯನ್ನು ಕಂಟ್ರೋಲ್ ಮಾಡುತ್ತಾರಲ್ಲ ಹೇಗೆ? ಗರಿಗರಿಯಾದ ದೋಸೆ, ಚಟ್ನಿ, ತಟ್ಟೆ ತುಂಬಾ ಆಲೂಗಡ್ಡೆ ಪಲ್ಯ ತುಂಬಿಕೊಂಡು ಯಾರೂ ಡಿಸ್ಟರ್ಬ್ ಮಾಡದ ಒಂದು ಮೂಲೆ ಆರಿಸಿಕೊಂಡು ತಟ್ಟೆಯನ್ನೇ ನೋಡುತ್ತಾ ಹೊಟ್ಟೆ ತುಂಬಾ ತಿನ್ನುವ ಆಶೆಯನ್ನು ಸಂಯಮಿಸುವ ಸ್ವಿಚ್ ಎಲ್ಲಿದೆ? ಎಚ್.ಡಿ. ಸುನೀತಾ ಅಂಕಣ : ನೂರು ಮುಖ ಸಾವಿರ ದನಿ ಮೈ ನೇಮ್ ಇಸ್ ಜೇಮ್ಸ್ ಬಾಂಡ್! ಇದೇ ನವೆಂಬರ್‌ನಲ್ಲಿ “ಸ್ಪೆಕ್ಟರ್" ಎಂಬ ಜೇಮ್ಸ್ ಬಾಂಡ್ ಸರಣಿಯ ಹೊಸಚಿತ್ರ ಬಿಡುಗಡೆಯಾಗುತ್ತಿದೆ. ಇದು ಬಾಂಡ್ ಸರಣಿಯ ಇಪ್ಪತ್ತೈದನೇ ಚಿತ್ರ. ಬಾಂಡ್ ಸರಣಿಯ ಇಪ್ಪತ್ನಾಲ್ಕನೇ ಚಿತ್ರ “ಸ್ಕೈಫಾಲ್" (ಡೇನಿಯಲ್ ಗ್ರೇಗ್ ಬಾಂಡ್) 2012ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿತ್ತು. 1962ರಲ್ಲಿ “ಡಾ ನೋ" ಪ್ರಥಮ ಜೇಮ್ಸ್ ಬಾಂಡ್ (ಸೀನ್ ಕೊನೆರಿ) ಅಥವಾ (ಶಾನ್ ಕಾನರಿ)ಯಿಂದ ಹಿಡಿದು 2012ರ “ಸ್ಕೈಫಾಲ್"ವರೆಗೆ ಬಂದಿರುವ ಒಟ್ಟು ಬಾಂಡ್ ಚಿತ್ರಗಳ ಸಂಖ್ಯೆ ಇಪ್ಪತ್ನಾಲ್ಕು. ಅಂದರೆ ಪ್ರತಿ ಬಾಂಡ್ ಚಿತ್ರ ನಿರ್ಮಾಣ ಹಾಗೂ ಬಿಡುಗಡೆಯ ಅಂತರ ಎರಡು ವರ್ಷಕ್ಕೂ ಹೆಚ್ಚು. ಇದೇ ನವೆಂಬರ್‌ನಲ್ಲಿ ಬರಲಿರುವ ಇಪ್ಪತ್ನಾಲ್ಕನೇ ಬಾಂಡ್ ಚಿತ್ರ ಸಹ “ಸ್ಕೈಫಾಲ್" ಬಿಡುಗಡೆಯ ಮೂರು ವರ್ಷಗಳ ನಂತರ ಬರುತ್ತಿದೆ ಎಂ.ವಿ. ರೇವಣಸಿದ್ದಯ್ಯ

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.