Hi Bangalore
Hi Bangalore

Hi Bangalore

This is an e-magazine. Download App & Read offline on any device.

ಸೃಷ್ಟಿ 1034 : ಸಂಪುಟ 20, ಸಂಚಿಕೆ 46, ಆಗಸ್ಟ್ 13, 2015 ಖಾಸ್‌ಬಾತ್ ಆಕೆಗೆ ಮೂವತ್ತೈದು ವರ್ಷ ಹಿಡಿದವು: ನಾವೂ ಆಕೆಗಾಗಿ ಅಷ್ಟೇ ವರ್ಷ ಕಾದೆವು! “ಆಜ್ ಜಾನೇಕಿ ಜಿದ್ ನಾ ಕರೋ..." ಎಂಬ ಗಝಲ್, ಎಷ್ಟು ದಶಕಗಳಾದವೋ? ಮೊಟ್ಟ ಮೊದಲು ಯಾರು ಹಾಡಿದರೋ? ಈಗಿನ ಹುಡುಗಿಯರಿಗೆ ಯಾರು ಕಲಿಸಿದರೋ? ದೇವರಿಗೆ ಗೊತ್ತು. ನಾನು ಕೇಳ್ತಾನೇ ಇದೀನಿ. ಬಲು ಮಧುರ ಗಝಲು ಅದು. ಮನಸು ನೊಂದಾಗ, ತುಂಬ ಒಬ್ಬಂಟಿ ಅನ್ನಿಸಿದಾಗ, ನನ್ನ ನಿಸ್ಸಹಾಯಕ ಏಕಾಂತದಲ್ಲಿ ಇದನ್ನು ಕೇಳಿಸಿಕೊಳ್ತೀನಿ. I just love it. ಮೊನ್ನೆ ಅದೊಂದು clipping ನೋಡ್ತಿದ್ದೆ. ಸ್ವಾತಂತ್ರ್ಯ ಘೋಷಣೆಯಾದಾಗ ಪಾಕಿಸ್ತಾನವನ್ನು ಆಯ್ದುಕೊಂಡ ಆಕೆ, ಅಲ್ಲೇ ಸ್ಥಿರವಾದರು. ನಾನು ತುಂಬ ಪ್ರೀತಿಸಿದ ಗಾಯಕಿ ಆಕೆ. ಅವರು 1982ರಲ್ಲಿ ಬಹುಶಃ ಭಾರತಕ್ಕೆ, ಮುಂಬಯಿಗೆ ಬಂದಿದ್ದರು. ತನ್ನ ಕಾಲದ ಅದ್ಭುತ ಗಾಯಕಿ. ಈಗೇನಿದೆ, ಬಹುಶಃ ದನಿ ಮುದುರಿ ಹೋಗಿರಬೇಕು. ವಯಸ್ಸು ಧ್ವನಿಯ ಲಾಲಿತ್ಯವನ್ನು ನುಂಗಿ ಬಿಡುತ್ತದೆ. ನೀವೇ ನೋಡಿ: ಈಗ ಲತಾ ಮಂಗೇಶ್ಕರ್ ಹಾಡಿದರೆ ಕೂತು ಕೇಳಿಸಿಕೊಳ್ಳಲಾಗುತ್ತದಾ? ಸಾಧ್ಯವಿಲ್ಲ. ಪಾಕಿಸ್ತಾನದಿಂದ ಬಂದ ಈಕೆಯದೂ ಧ್ವನಿ ಹೋಗಿ ಬಿಟ್ಟಿರಬೇಕು ಅಂದುಕೊಂಡೆ. I was wrong. ಅದ್ಭುತವಾಗಿ ಹಾಡಿದರಾಕೆ. ರವಿ ಬೆಳಗೆರೆ ಸಾಫ್ಟ್‌ಕಾರ್ನರ್ ಒಂದು ಮೋಸ ನಾವೂ ಮಾಡಿರ‍್ತೇವೆ: ಅಲ್ವಾ? ಅದು dependantನ ಕುರಿತಾದ ಸಂಗತಿ. ಅಸಲಿಗೆ ಯಾವುದಕ್ಕೂ, ಯಾರ ಮೇಲೂ depend ಆಗಬಾರದು ಅಂತಲೇ ಎಲ್ಲರೂ ಅಂದುಕೊಳ್ಳುತ್ತೇವೆ. ಅದು ಸಾಧ್ಯವಾಗುತ್ತಾ? Not easy. ಕೆಲವರನ್ನು ಅಪರೂಪಕ್ಕೆ ನೋಡಿದ್ದೇನೆ. ವೆರಿ ವೆರಿ ಇಂಡಿಪೆಂಡೆಂಟ್. ಅವರ ಉಡುಪು ಅವರೇ ಒಗೆದುಕೊಳ್ಳುತ್ತಾರೆ ಎಂಬುದರಿಂದ ಹಿಡಿದು, ಸತ್ತ ಮೇಲೆ ತಮ್ಮನ್ನು ಎಲ್ಲಿ ಹುಗಿಯಬೇಕು ಎಂಬುದನ್ನೂ ತಾವೇ ನಿರ್ಧರಿಸುವವರಿರುತ್ತಾರೆ-ಎಂಬುದರ ತನಕ! ಅಂಥವರನ್ನು ನೋಡಿದ್ದೇನೆ. ಅವರಿಗೆ ಅದು ಗೊತ್ತಾಗುತ್ತದೋ ಇಲ್ಲವೋ? ಕಾಣೆ. ನಾನು ತುಂಬ ಅಬ್ಸರ್ವ್ ಮಾಡುತ್ತಿರುತ್ತೇನೆ ಅವರನ್ನ. ಆ ಥರದ ಜನ ಇದ್ದೇ ಇರುತ್ತಾರೆ. ಬರೀ ಶುಚಿಯ ಹುಚ್ಚರು ಅಂತ ಅಲ್ಲ. ನಾನಾ ವೆರೈಟಿಯ ಹುಚ್ಚರಿರುತ್ತಾರೆ. ನನ್ನ ಪಾಲಿಗೆ ಅವರೆಲ್ಲರೂ ಅಬ್ಸರ್ವೇಷನ್‌ಗೆ ಅರ್ಹರೇ. ನಾನು ತಕ್ಷಣ react ಮಾಡಲ್ಲ. ಅಬ್ಸರ್ವ್ ಮಾಡ್ತಿದಾನೆ ಅಂತ ಅವರಿಗೆ ಗೊತ್ತು ಮಾಡಿಕೊಡುವುದೂ ಇಲ್ಲ. ರವಿ ಬೆಳಗೆರೆ ಬಾಟಮ್ ಐಟಮ್ ಪರಮಪದ ಸಂಪಾದನೆಗೆ ಫೇಸ್‌ಬುಕ್ ಸೋಪಾನವಾದೀತಾ? ನಾನೊಂದು ಹೊಸ ಕಾರು ತೆಗೊಂಡೆ, ನಮ್ಮನೆ ಬೆಕ್ಕು ಮರಿ ಹಾಕಿದೆ, ನಿನ್ನೆಯಷ್ಟೇ ಹೇರ್ ಕಟ್ ಮಾಡಿಸಿಕೊಂಡೆ, ಇದು ನನ್ನ ಹೊಸ ಹೇರ್ ಸ್ಟೈಲ್, ನನ್ನ ಹಿಂಭಾಗದಲ್ಲಿ ಆಗಿದ್ದ ಕುರು ನಿಮ್ಮೆಲ್ಲರ ಹಾರೈಕೆಯಿಂದ ಮಾಗುತ್ತಿದೆ, ನನ್ನ ಮಗ ಇವತ್ತು ಸ್ಕೂಲಿಗೆ ಹೋಗಿಲ್ಲ. ಹೀಗೆಲ್ಲಾ ತಮ್ಮ ‘ಆತ್ಮಕಥನ’ಗಳನ್ನು ಸ್ಟೇಟಸ್ಸಲ್ಲಿ ಹಾಕಿಕೊಂಡು ಲೈಕ್‌ಗೋಸ್ಕರ ಕಾಯುವ ಫೇಸ್‌ಬುಕ್ ಸದಸ್ಯರ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಏನಾದರೂ ಬರೆಯಬೇಕು ಎಂಬ ಹಟಕ್ಕೆ ತಮ್ಮ ದೈನಂದಿನ ಚಟುವಟಿಕೆಗಳನ್ನೆಲ್ಲಾ ಫೇಸ್‌ಬುಕ್ಕಲ್ಲಿ ದಾಖಲಿಸುತ್ತಾ ಹೋಗುವ ಈ ಅಗೋಚರ ಶತ್ರುಗಳ ಕಾಟದಿಂದ ಪಾರಾಗುವುದಕ್ಕೆ ಅಂಥವರನ್ನು ಅನ್ ಫ್ರೆಂಡ್ ಮಾಡಿದ್ದೂ ಉಂಟು. ಹೊಸ ತಂತ್ರಜ್ಞಾನ ಅಥವಾ ಮಾಧ್ಯಮವೊಂದು ಕೈಗೆ ಸಿಕ್ಕಾಗ ಅದನ್ನು ಹೇಗೆ ಬಳಸಿಕೊಳ್ಳಬೇಕು ಅನ್ನುವುದರ ಬಗ್ಗೆ ನಮಗೆ ಗೊಂದಲ ಉಂಟಾಗುವುದು ಸಹಜ. ಆದರೆ ಫೇಸ್‌ಬುಕ್ ಈಗ ಹೊಸ ಮಾಧ್ಯಮವಾಗಿ ಉಳಿದಿಲ್ಲ, ಅದು ನಮ್ಮ ದೈನಿಕದ ಒಂದು ಭಾಗವಾಗಿ ಕೆಲವು ವರ್ಷಗಳೇ ಕಳೆದಿವೆ. ರವಿ ಬೆಳಗೆರೆ ಹಲೋ ಜನರಿಗಾಗಿ ಸಿದ್ದರಾಮಯ್ಯ ಮುನ್ನುಗ್ಗಲಿ; ಇಲ್ಲದಿದ್ದರೆ ಮತ್ತೊಬ್ಬ ಗುಂಡೂರಾವ್ ಆಗುತ್ತಾರೆ! ಮುಖ್ಯಮಂತ್ರಿ ಸಿದ್ದರಾಮಯ್ಯ ತಾವಾಗಿಯೇ ಪ್ರತಿಪಕ್ಷಗಳು ತೋಡಿದ ಖೆಡ್ಡಾದೊಳಗೆ ಬೀಳುವ ಲಕ್ಷಣಗಳು ಕಾಣುತ್ತಿವೆ. ಅಂದ ಹಾಗೆ ಈ ಬೆಳವಣಿಗೆ ಮೂವತ್ತೈದು ವರ್ಷಗಳ ಹಿಂದೆ ಗುಂಡೂರಾಯರು ಪ್ರತಿಪಕ್ಷಗಳ ಖೆಡ್ಡಾದೊಳಗೆ ವ್ಯವಸ್ಥಿತವಾಗಿ ಆನೆಯಂತೆ ಉರುಳಿಕೊಂಡಿದ್ದನ್ನು ನೆನಪಿಸುತ್ತದೆ. ಮೊದಲನೆಯದಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಶೋಷಿತ ವರ್ಗಗಳ ಕುರಿತು ಕಾಳಜಿ ಇದ್ದರೆ ಅವರ ಕುರಿತು ಕೆಲಸ ಮಾಡಿ ತೋರಿಸಬೇಕೇ ಹೊರತು, ಬಹಿರಂಗವಾಗಿ ನನ್ನದು ಅಹಿಂದ ಸರ್ಕಾರ ಅನ್ನಬಾರದು. ಯಾಕೆಂದರೆ ಶೋಷಿತರು ಎಲ್ಲ ವರ್ಗಗಳಲ್ಲೂ ಇರುತ್ತಾರೆ. ಅದೇ ರೀತಿ ಎಲ್ಲ ವರ್ಗಗಳವರೂ ಅವರ ಪಕ್ಷಕ್ಕೆ ಮತ ಕೊಟ್ಟಿರುತ್ತಾರೆ. ಕೆಲ ಸಮುದಾಯದವರು ಕೆಲ ಪಕ್ಷಗಳಿಗೆ ಹೆಚ್ಚು ಮತ ಕೊಟ್ಟಿರಬಹುದು. ಆದರೆ ಅದನ್ನು ಚುನಾವಣೆ ನಡೆಯುವವರೆಗೆ ಮಾತ್ರ ಗಮನಿಸಬೇಕೇ ಹೊರತು, ಒಂದು ಸರ್ಕಾರ ರಚಿಸಿದ ಮೇಲೆ ಗಮನಿಸಬಾರದು. ಹೀಗಾಗಿ ಇದು ಆರೂವರೆ ಕೋಟಿ ಜನರ ಸರ್ಕಾರವೇ ಹೊರತು ಅಹಿಂದ ಸರ್ಕಾರವಲ್ಲ. ರವಿ ಬೆಳಗೆರೆ ಮುಖಪುಟ ವರದಿ ಬಚಖಾನ ಬಂಟ ತನ್ವೀರ್ ನೆಂಟ ರೌಡಿ ಆಜಂ ಹೊಂಟ! ರೌಡಿಯಾಗಲೆಂದೇ ಫೀಲ್ಡಿಗೆ ಬಂದವನು ಬ್ರಿಗೇಡ್ ಆಜಂ. ತಂದೆ ಮೊಹಮ್ಮದ್ ಅನ್ಸರ್. ಆ ಕಾಲಕ್ಕೆ ಶಿವಾಜಿನಗರ ಇಸ್ಲಾಂ ‘ಏ’ ಮದರಸಿಯಾದ ಅಧ್ಯಕ್ಷರಾಗಿದ್ದರು. ಪ್ರತಿಷ್ಠಿತ ಎಂಎಂ ರಸ್ತೆಯಲ್ಲಿ ‘ತವಾ’ ಎಂಬ ಹೊಟೇಲ್ ಇಟ್ಟಿದ್ದರು. ಶಿವಾಜಿನಗರದ ಮುಸ್ಲಿಂ ಸಮುದಾಯದಲ್ಲಿ ಅವರಿಗೆ ಗೌರವವಿತ್ತು. ಎಂಟು ಜನ ಮಕ್ಕಳ ಪೈಕಿ ಐದು ಗಂಡು, ಮೂರು ಹೆಣ್ಣು. ಆ ಪೈಕಿ ಆಜಂ ಹಿರಿಯವನು. ಫ್ರೇಜರ್‌ಟೌನ್‌ನ ಅಬ್ದುಲ್ ಬ್ಯಾರಿಸ್ ಹೈಸ್ಕೂಲಿನಲ್ಲಿ ಎಸೆಸ್ಸೆಲ್ಸಿ ಮುಗಿಸಿ ಹಲಸೂರಿನ ಆರ್‌ಬಿಎನ್‌ಎಂಎಸ್ ಕಾಲೇಜಿನಲ್ಲಿ ಶಿಸ್ತಾಗಿಯೇ ಪಿಯುಸಿ ಮುಗಿಸಿದ್ದ. ಭಾರತಿನಗರ ಜೈನ್ ಟೆಂಪಲ್ ರಸ್ತೆಯಲ್ಲಿ ತಂದೆ ಮಗನಿಗೆಂದೇ ರೆಡಿಮೇಡ್ ಬಟ್ಟೆ ಅಂಗಡಿ ಮಾಡಿಕೊಟ್ಟಿದ್ದರು. ಜೈನ್ ಟೆಂಪಲ್ ರಸ್ತೆಯಲ್ಲಿ ವ್ಯಾಪಾರ ಕಮ್ಮಿಯೆಂದು ‘ಬ್ರಿಗೇಡ್’ ರಸ್ತೆಯ ಒಪೇರಾ ಥೇಟರ್ ಆವರಣದಲ್ಲೊಂದು ಬಟ್ಟೆ ಅಂಗಡಿಯನ್ನು ತೆರೆದಿದ್ದ. ಆದರೆ ರೌಡಿಯೊಬ್ಬನಿಗೆ ದಕ್ಕುವ ಕುಖ್ಯಾತಿ ಮತ್ತು ಆ ಕಾರಣಕ್ಕೆ ಜನ ಪಡುವ ಭೀತಿ ಇತ್ತಲ್ಲಾ? ಅದನ್ನು ಪಡೆದೇ ತೀರಬೇಕೆಂಬ ಹುಚ್ಚು ಹಂಬಲ. ಈತನಿಗೆ ಇಂಥದೊಂದು ಭ್ರಮೆಯನ್ನು ಆಜಂ ತನ್ನೊಳಗೆ ತುಂಬಿಕೊಂಡಿದ್ದೇ ಶಿವಾಜಿನಗರದ ಡಾನ್ ತನ್ವೀರ್‌ನಿಂದ. ವಿನಯ್ ರಾಜಕೀಯ ಸಿದ್ದು ಕೆಳಗಿಳಿಸಲು ಅಖಾಡ ರೆಡಿಯಾಯಿತೇ? ತೀರಾ ಇತ್ತೀಚೆಗಂತೂ ಓರ್ವ ಸಾಹಿತಿ ತಾನು ಕಟ್ಟುವ ಮನೆಗೆ ಪೊಲೀಸರ ರಕ್ಷಣೆಯಲ್ಲಿಯೇ ಕಳ್ಳತನದಿಂದ ಮರಳು ಹೊಡೆಸಿಕೊಂಡಿದ್ದು ಅಸೆಂಬ್ಲಿಯ ಮೊಗಸಾಲೆಗಳಲ್ಲಿ ಚರ್ಚೆಗೀಡಾಯಿತು. ಬರೋಬ್ಬರಿ ಐವತ್ತು ಎಕರೆಗಿಂತ ಹೆಚ್ಚಿನ ಭೂಮಿ ಹೊಂದಿರುವ, ಮಾತೆತ್ತಿದರೆ ಮಹಾತ್ಮ ಗಾಂಧಿಯ ಪೋಸು ಕೊಡುವ ಈ ಸಾಹಿತಿಗೆ ಈ ಮಟ್ಟಿನ ಮರ್ಯಾದೆ ಸಿಗುತ್ತಿದೆ ಎಂಬುದರ ಅರ್ಥ ಏನು? ಇವರೆಲ್ಲ ಮೂಗರ್ಜಿ ವೀರರು ಅಂತಲ್ಲವೇ? ಅದೇನೇ ಇರಲಿ, ಒಟ್ಟಿನಲ್ಲಿ ಹೀಗೆ ಮೂಗರ್ಜಿಗಳ ಹೊಡೆತದಿಂದ ಆಕ್ರೋಶಗೊಂಡಿರುವ ಬಿಜೆಪಿ ನಾಯಕರು ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ನಾಯಕರನ್ನು ಸೆಟ್ ಮಾಡಿಕೊಂಡು ಚುನಾವಣೆಗೆ ಸಜ್ಜಾಗಿದ್ದಾರೆ. ಆರ್.ಟಿ.ವಿಠ್ಠಲಮೂರ್ತಿ ವರದಿ ಹರ್ಷಿತಾ ಎಂಬ ಡೇಂಜರಸ್ ಹನಿಟ್ರ್ಯಾಪ್ ಹುಡುಗಿ ಹರ್ಷಿತಾ ಎಂಬ ಈ ತಲೆ ಮಾಸಿದ ಮಾಡಲಿಂಗು ಐಟಮ್ಮಿಗೆ ಸಖತ್ ಶೋಕಿ ಇತ್ತು. ಇನ್ನೂ ಹೆಸರಿಡದ ಕನ್ನಡ ಚಿತ್ರವೊಂದರ ಹೀರೋಯಿನ್ ಎಂದೇ ಅವರಿವರ ಮುಂದೆ ಬಿಲ್ಡಪ್ ಕೊಡುತ್ತಿದ್ದಳು. ಬಳಸುತ್ತಿದ್ದ ಮೇಕಪ್ ಸಾಮಾಗ್ರಿಗಳು, ಹಾಕುತ್ತಿದ್ದ ಬಟ್ಟೆ, ಚಪ್ಪಲಿ ಎಲ್ಲವೂ ಕಣ್ಣು ಕುಕ್ಕುವಂತಿದ್ದವು. ಇದರ ಜೊತೆ-ಜೊತೆಗೆ ಆಕೆಗೆ ಪ್ರತಿನಿತ್ಯ ಗುಂಡು-ತುಂಡು ಬೇಕೇ ಬೇಕಿತ್ತು. ಚಂದನೆಯ ಡ್ರೆಸ್ ಮಾಡಿಕೊಂಡು ಫೇಸ್‌ಬುಕ್‌ಗೆ ತನ್ನ ಆಕರಾಳ-ವಿಕಾರಾಳ ಭಾವ-ಭಂಗಿಯ photoಗಳನ್ನು ಅಪ್‌ಲೋಡ್ ಮಾಡುತ್ತಿದ್ದ ಹರ್ಷಿತಾ, ಮಿಕಗಳನ್ನು ಬಲೆಗೆ ಕೆಡವಿಕೊಳ್ಳುತ್ತಿದ್ದಳು. ಅತ್ತ ಈಕೆಯ ಮೂವರು ತಲೆಹಿಡುಕ ಗೆಳೆಯರು ಸುಲಿಗೆಗೆ ನಿಲ್ಲುತ್ತಿದ್ದರು; ರಾಸಲೀಲೆಯ ವೀಡಿಯೋ ಮಾಡುವ ಮೂಲಕ. ಹಾಗೇ ಇವರ ಖೆಡ್ಡಕ್ಕೆ ಬಿದ್ದವನೇ ವಿನೋದ್ ಕುಮಾರ್! ಅಶ್ವಿನ್ ಕುಮಾರ್ ವರದಿ ರಮಾನಾಥ್ ರೈ ಸಭೆಯಲ್ಲಿ ಮಿಂಚಿದ ರಾಕೇಶ್ ಮಲ್ಲಿ! ಇಡೀ ಮಂಗಳೂರಿಗೆ ಮಂಗಳೂರೇ ಮತ್ತೊಮ್ಮೆ ಕನಲಿ ಹೋಗಿದೆ. ಸಿಸಿಬಿ ಇನ್ಸ್‌ಪೆಕ್ಟರ್ ವ್ಯಾಲೈಂಟೆನ್ ಡಿಸೋಜಾ ಆರೋಪಿಗಳಿಬ್ಬರ ಹೆಡೆಮುರಿಗೆ ಕಟ್ಟದೇ ಹೋಗಿದ್ದರೆ ಅವರ ಕೈನಲ್ಲಿದ್ದ ರಿವಾಲ್ವರ್‌ನಲ್ಲಿ ಬೆಚ್ಚಗೆ ಮಲಗಿದ್ದ ಬುಲೆಟ್ಸ್ ತುಂಬೆ ಪ್ರಕಾಶ್ ಶೆಟ್ಟಿಯ ನೆತ್ತರು ಕಕ್ಕುತ್ತಿದ್ದವಾ? ಗೊತ್ತಿಲ್ಲ. ಅಷ್ಟಕ್ಕೂ ಈ ತುಂಬೆ ಪ್ರಕಾಶ್ ಶೆಟ್ಟಿ ಮಂತ್ರಿ ರಮಾನಾಥ ರೈ ಶಿಷ್ಯ. ಒಂದಾನೊಂದು ಕಾಲದಲ್ಲಿ ಭೂಗತ ಜಗತ್ತಿನಲ್ಲಿ ಅಬ್ಬರದ ತಾಳ ಹಾಕಿದ್ದ ರಾಕೇಶ್ ಮಲ್ಲಿಗೂ ಮತ್ತು ತುಂಬೆ ಪ್ರಕಾಶ್ ಶೆಟ್ಟಿಗೂ ಪುರಾತನ ವೈರತ್ವವಿತ್ತು. ಯಾವಾಗ ರಮಾನಾಥ ರೈ, ತುಂಬೆ ಪ್ರಕಾಶ್ ಶೆಟ್ಟಿಯನ್ನು ಬಲ ಭಾಗದಲ್ಲಿ ನಿಲ್ಲಿಸಿಕೊಂಡು ಪೊರೆಯಲು ನಿಂತರೋ ಅದು ರಾಕೇಶ್ ಮಲ್ಲಿಯ ಕಣ್ಣನ್ನು ಕೆಂಪಾಗಿಸಿದ್ದು ಸುಳ್ಳಲ್ಲ. ವಸಂತ್ ಗಿಳಿಯಾರ್ ವರದಿ ಸೆಕ್ಸಿ ಚಂದ್ರಾಚಾರೀನ ಪೂನಾದಲ್ಲಿ ಗುಂಡಿಕ್ಕಿ ಕೊಂದರು! ಚಂದ್ರಶೇಖರ ಆಚಾರಿ! ಬೆಂಗಳೂರಿನ ಪಾತಕಲೋಕದ ಕರ್ಮಭೂಮಿಯಲ್ಲಿ ಒಂದಾದ ಭಕ್ಷಿಗಾರ್ಡನ್ನಿನ ರಾಜಾ ಮತ್ತು ಕುಟ್ಟಿ ಎಂಬ ಪಳಗಿದ ಪಾತಕಿಗಳ ಸಿಂಡಿಕೇಟ್‌ನಲ್ಲಿ ಗುರುತಿಸಿಕೊಂಡಿದ್ದ. ಎರಡು ಮರ್ಡರ್ ಕೇಸುಗಳು ಸೇರಿದಂತೆ ಹಲವು ಕೇಸುಗಳನ್ನು ಮೈಮೇಲೆ ಹೆಟ್ಟಿಸಿಕೊಂಡು ತಿರುಗುತ್ತಿದ್ದ ಈ ಆಚಾರಿ, ಮೊನ್ನೆ ಜುಲೈ 24ರಂದು ದೂರದ ಪೂನಾದಲ್ಲಿ ಬರ್ಭರವಾಗಿ ಕೊಲೆಯಾಗಿ ಹೋದ. ಬಿಬಿಎಂಪಿಯ ಗುತ್ತಿಗೆದಾರ ಎಂದೇಳಿಕೊಂಡು ತಿರುಗುತ್ತಿದ್ದ ಆಚಾರಿ ಸದ್ಯದಲ್ಲೇ ನಡೆಯಲಿರುವ ಬಿಬಿಎಂಪಿ ಎಲೆಕ್ಷನ್ನಿಗೂ ನಿಂತು ಕಾರ್ಪೊರೇಟರ್ ಆಗುವ ಬಯಕೆಯನ್ನು ಹೊಂದಿದ್ದ. ಆದರೆ ಆತನಿಗಿದ್ದ ಹೆಂಗಸರ ಚಾಳಿಯೇ ಅವನ ಅಂತ್ಯಕ್ಕೂ ಕಾರಣವಾದದ್ದು ಶುದ್ಧ ಸತ್ಯ. ವರದಿಗಾರ ವರದಿ ಬೆಳ್ತಂಗಡಿ: ರೌಡಿ ಗೋಪಾಲಕೃಷ್ಣ ಗೌಡ ಮಲೆಕುಡಿಯನ ಬೆರಳು ಕಡಿದ! ಇಂತಹುದೊಂದು ದೌರ್ಜನ್ಯದ ಘಟನೆ ಯಾವ ಟೀವಿಯಲ್ಲೂ ವರದಿಯಾಗಲಿಲ್ಲ. ಯಾವ ಪತ್ರಿಕೆಗಳಲ್ಲೂ ರಾಜ್ಯ ಮಟ್ಟದ ಸುದ್ದಿಯಾಗಲಿಲ್ಲ. ಆದರೆ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಮುನಿರ್‌ಕಾಟಿಪಳ್ಳ ಈ ಘಟನೆಯನ್ನು ಚರ್ಚೆಗೆ ತಂದದ್ದು, ರಾಜ್ಯಮಟ್ಟದಲ್ಲಿ ದೊಡ್ಡ ಸುದ್ದಿಯಾಗುವಂತಾಯಿತು. 'ಮನುಜಮತ' ವಾಟ್ಸಾಪ್ ಗ್ರೂಪ್‌ನಲ್ಲಿ ಚರ್ಚೆಯಾದ ಈ ಘಟನೆ ನಂತರ ಬೆಂಗಳೂರಿನಲ್ಲಿ ಪ್ರತಿಭಟನೆಗೆ ದಾರಿ ಮಾಡಿಕೊಟ್ಟು ಫೇಸ್‌ಬುಕ್‌ನಲ್ಲೂ ದೊಡ್ಡ ಮಟ್ಟದ ಚರ್ಚೆಗೆ, ಖಂಡನೆಗೆ ಕಾರಣವಾಯಿತು. ಇದರಿಂದಾಗಿ ಮಂಗಳೂರು ಜಿಲ್ಲಾಡಳಿತ ಎಚ್ಚೆತ್ತುಕೊಂಡಿತು. ಸುಂದರ ಮಲೆಕುಡಿಯರಿಗೆ ಉತ್ತಮ ಚಿಕಿತ್ಸೆಯ ಭರವಸೆ ದೊರೆಯಿತು. ಬೆರಳು ಕತ್ತರಿಸಿಯೂ ರಾಜಾರೋಷವಾಗಿ ಓಡಾಡಿಕೊಂಡಿದ್ದ ಭೂಮಾಲೀಕ ಗೋಪಾಲಕೃಷ್ಣಗೌಡ ಬಂಧನಕ್ಕೀಡಾಗಲಿಲ್ಲವಾದರೂ ತಲೆ ತಪ್ಪಿಸಿಕೊಳ್ಳುವಂತಾಯಿತು. ಶೃಂಗೇಶ್ ನೇವಿ ಕಾಲಂ ನಾವು ಬೇಡುವ ರಾಮರಾಜ್ಯ ಸ್ವತಃ ನಮಗೂ ಬೇಡ ಸುಖಕ್ಕೆ ಮಕ್ಕಳನ್ನು ಹುಟ್ಟಿಸಲು ಮಾತ್ರ ಶಕ್ತಿ ಇದೆ; ಕಷ್ಟಕ್ಕೆ ಹಾಗಲ್ಲ, ಅದರಪ್ಪನನ್ನು ಸೃಷ್ಟಿಸುವ ಶಕ್ತಿ ಇದೆ. ಹೀಗೇ ನೋಡಿ, ಜಗತ್ತು ರೂಪುಗೊಂಡಿದ್ದೇ ಕಷ್ಟಗಳಲ್ಲಿ, ವಿಷಾದಗಳಲ್ಲಿ, ವಿರಹ, ಅಗಲಿಕೆಗಳಲ್ಲಿ. ಪುರಾಣವನ್ನು ತೆಗೆದುಕೊಳ್ಳಿ. ಕ್ರೌಂಚ ಪಕ್ಷಿಗಳ ಮಿಥುನಕ್ರಿಯೆಯನ್ನು ಬೇಡನೊಬ್ಬ ಮುರಿದು, ಸಂಗಾತಿಯನ್ನು ದೂರ ಮಾಡಿದ ಬೇಸರಕ್ಕೆ ವ್ಯಾಸರ ‘ರಾಮಾಯಣ’ ಹುಟ್ಟಿಕೊಳ್ಳುತ್ತದೆ. ತನ್ನವರ ಜೊತೆ ಕಾದಾಡಬೇಕೇ ಎನ್ನುವ ಅರ್ಜುನನ ವಿಷಾದಕ್ಕೆ ಗೀತೋಪದೇಶ ನಡೆದು ಭಗವದ್ಗೀತೆ ಜಗದ ಗೀತೆಯಾಗುತ್ತದೆ. ಸೀತೆಯನ್ನು ಹೊತ್ತೊಯ್ದ ಆಕ್ರೋಶಕ್ಕೆ ಕದನ, ದಾಯಾದಿಗಳ ಆಸ್ತಿ ಪರಭಾರೆಯ ಅಸಮಾಧಾನಕ್ಕೆ ಕುರುಕ್ಷೇತ್ರ, ಪರೀಕ್ಷಿತ ರಾಜ ಶಾಪಕ್ಕೊಳಗಾಗಿ ಇನ್ನೇನು ವಾರಕ್ಕೆ ಸಾಯುತ್ತಾನೆ ಅಂತ ಗೊತ್ತಾದಾಗ ಭಾಗವತ. ನೇವಿ ಜಾನಕಿ ಕಾಲಂ ಒಂದು ಪ್ರಸಂಗ ಮತ್ತು ಪರಿಣಾಮ ಮಳೆಗಾಲ ಶುರುವಿಟ್ಟಿದೆ. ಶಿರಾಡಿ ಘಾಟಿ ರಿಪೇರಿಯಾಗಿದೆ. ಈ ಎರಡು ಸಂಭ್ರಮದ ನಡುವೆ ನೀವೊಂದು ಕತೆಯನ್ನೇಕೆ ಓದಬಾರದು. ಈ ಕತೆಯನ್ನೂ ಮೂರು ಭಾಗಗಳಲ್ಲಿ ಓದಿ: -೧- ಆವತ್ತು ಅಚಾನಕ ಮಳೆಯಾಯಿತು. ಮಾರ್ಚು ತಿಂಗಳ ಕೊನೆಯ ದಿನಗಳವು. ಕೆರೆ ಏರಿಯ ಮೇಲೆ ನಡಕೊಂಡು, ಗೇರು ಗುಡ್ಡೆ ಹತ್ತಿ, ಗಣಪಣ್ಣನ ಸೋಡಾ ಶರಬತ್ತು ಅಂಗಡಿಯನ್ನು ಬಳಸಿಕೊಂಡು ಬರುವ ಹೊತ್ತಿಗೆ ಮೊದಲ ಹನಿ ಬಿತ್ತು. ಥಟ್ಟನೆ ಮುಂಗೈಗೇ ಬಿದ್ದ ಹನಿಯನ್ನು ಅದು ಮಳೆ ಹನಿ ಆಗಿರಲಿಕ್ಕೆ ಸಾಧ್ಯವೇ ಇಲ್ಲ ಎಂದು ನಿರಾಕರಿಸುತ್ತಾ ದತ್ತಣ್ಣ ಆಕಾಶ ನೋಡಿದರು. ಮೋಡದ ಕುರುಹು ಕೂಡ ಇರಲಿಲ್ಲ. ಮಧುರವಾದ ದಾಂಪತ್ಯ ಅಳಿದುಹೋದ ವಿಧುರ ಒಂಟಿ ಬಾಳಿನಂತೆ ಆಕಾಶ ನೀಲಿ ನೀಲಿಯಾಗಿ ಹಬ್ಬಿಕೊಂಡಿತ್ತು. ಒಂದೆಳೆ ಬಿಳಿ ಮೋಡ ಕೂಡ ದತ್ತಣ್ಣನ ಕಣ್ಣಿಗೆ ಬೀಳಲಿಲ್ಲ. ಯಾವುದೋ ಹಕ್ಕಿ ಉಚ್ಚೆ ಹೊಯ್ದಿರಬೇಕು ಅಂದುಕೊಂಡು ಮುಂಗೈಯನ್ನು ಮೂಗಿನ ಸಮೀಪ ತಂದು ಮೂಸಿ ನೋಡಿದರು. ಮುಂಜಾನೆ ನೋಯುತ್ತಿರುವ ಕೈಗೆ ಹಚ್ಚಿಕೊಂಡ ತ್ಯಾಂಪಣ್ಣ ಭಂಡಾರಿ ನೋವಿನೆಣ್ಣೆಯ ವಾಸನೆ ಮಾತ್ರ ಮೂಗಿಗೆ ಬಡಿಯಿತು. ದತ್ತಣ್ಣ ಮತ್ತೊಮ್ಮೆ ಗುಮಾನಿಯಿಂದ ಆಕಾಶ ನೋಡಿದರು. ಜಾನಕಿ ಅಂಕಣ : ಆಕಾಶಬುಟ್ಟಿ ಅಮ್ಮಾ ನಂಗೆ ಹೊಡೆಯದ ಬೈಯ್ಯದ ಸ್ಕೂಲಿಗೆ ಸೇರಿಸು ಬೆಳಿಗ್ಗೆ ಎದ್ದವನೇ ಮಗ ಏನೋ ದೃಢವಾಗಿ ನಿರ್ಧರಿಸಿದಂತೆ ಸೆಟೆದು ಹೇಳಿದ. ಅಮ್ಮಾ, ನಾನು ಸ್ಕೂಲಿಗೆ ಫೈವ್ ಡೇಸ್ ರಜಾ ಕಳಿಸಿದ್ದೀನಿ. ಮೂರೂವರೆ ವರ್ಷದ ಅವನಿಗೆ ಗೊತ್ತಿರುವ ದೊಡ್ದ ನಂಬರ್ ಅಂದ್ರೆ ಐದು. ಅವನ ಪ್ರಕಾರ ಫೈವ್ ಡೇಸ್ ರಜಾ ಅಂದ್ರೆ ತುಂಬಾ ದಿನ ಅಂತ. ಯಾಕೋ ಫೈವ್ ಡೇಸ್ ರಜಾ ಹಾಕ್ದೆ? ನಾನೂ ಕೇಳಿದೆ ಮುಗ್ಧತೆ ನಟಿಸಿ. ಇನ್ನೂ ಕಟು ನಿರ್ಧಾರ ತೆಗೆದುಕೊಂಡವನಂತೆ ಹೇಳಿದ. ಫೈವ್ ಡೇಸ್ ಆದ್ಮೇಲೆ ಮತ್ತೆ ಹಂಡ್ರೆಡ್ ಡೇಸ್ ರಜಾ ಕಳಿಸ್ತೀನಿ ಅಂದ ಹತ್ತು ಬೆರಳುಗಳನ್ನೇ ಹಂಡ್ರೆಡ್ ಎಂಬಂತೆ ಎತ್ತಿ ತೋರಿಸಿ. ಅವನ ಡಿಕ್ಷನರಿಯಲ್ಲಿ ಹಂಡ್ರೆಡ್ ಅತಿ ದೊಡ್ಡ ಸಂಖ್ಯೆ. ನೂರರ ಆಚೆಗೆ ಬೇರೆ ಸಂಖ್ಯೆಗಳೇ ಇಲ್ಲ ಎಂಬ ದೃಢ ನಂಬಿಕೆ ಅವನದು. ಎಚ್.ಡಿ. ಸುನೀತಾ ಅಂಕಣ : ನೂರು ಮುಖ ಸಾವಿರ ದನಿ ಅವರಿಬ್ಬರೂ ಮುಸ್ಲಿಮರೇ... ಆದರೆ ವ್ಯತ್ಯಾಸ ಗೊತ್ತೇ? ಕಾಕತಾಳೀಯವಾಗಿ ತನ್ನ ಜನ್ಮದಿನ ಜುಲೈ ಮೂವತ್ತರಂದೇ ಗಲ್ಲಿಗೇರಿಸಲ್ಪಟ್ಟ ಯಾಕೂಬ್ ಅಬ್ದುಲ್ ರಜಾಕ್ ಮೆಮೊನ್ ಭಾರತೀಯ ಮುಸ್ಲಿಮನೆಂಬುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಈತ ಪಾಕಿಸ್ತಾನದ ಭಯೋತ್ಪಾದಕನೆಂದೇ ಬಹಳ ಜನ ತಿಳಿದಿದ್ದರು. ಆದರೆ ಈತ ಜನಿಸಿದ್ದು ಮುಂಬೈ ಎಂಬ ಮಹಾನಗರಿ, ಅಲ್ಲಲ್ಲ ಮಾಯಾನಗರಿಯಲ್ಲಿ. ಅನೇಕ ಕ್ರಿಮಿನಲ್ ಅಥವಾ ಭಯೋತ್ಪಾದಕರಂತೆ ಈತ ಅವಿದ್ಯಾವಂತನಲ್ಲ. ಈತ ಚಾರ್ಟರ್ಡ್ ಅಕೌಂಟೆಂಟ್. ತನ್ನ ಜೀವಿತಾವಧಿಯಲ್ಲಿ ಇನ್ನೂರಾ ಐವತ್ತೇಳು ಜನ ಮುಗ್ಧರ ಹತ್ಯೆ ಮತ್ತು ಏಳು ನೂರಾ ಹದಿಮೂರು ಅಮಾಯಕರನ್ನು ತೀವ್ರ ಗಾಯಕ್ಕೊಳಪಡಿಸಿರುವುದು ಈತನ ಸಾಧನೆ. 1993ರ ಮುಂಬೈ ಸರಣಿ ಬಾಂಬ್ ಬ್ಲಾಸ್ಟ್‌ನಲ್ಲಿ ಈತನ ಪಾತ್ರ ಬಲುಮುಖ್ಯ. ಎಂ.ವಿ. ರೇವಣಸಿದ್ದಯ್ಯ

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.