Hi Bangalore
Hi Bangalore

Hi Bangalore

This is an e-magazine. Download App & Read offline on any device.

ಸೃಷ್ಟಿ 1038 : ಸಂಪುಟ 20, ಸಂಚಿಕೆ 50, ಸೆಪ್ಟಂಬರ್ 10, 2015 ಖಾಸ್‌ಬಾತ್ ಕೊಂದು ಹೋದ ಆಗುಂತುಕನಲ್ಲಿ ಅಸಲು ಲಾಜಿಕ್ ಎಂಬುದಿರುವುದಿಲ್ಲ! ತುಂಬ ಕಸಿವಿಸಿ. ನಾನು ವಿಪರೀತ disturb ಆಗಿದ್ದೇನೆ. ಸುದ್ದಿ ಕೇಳಿದ ತಕ್ಷಣ ಧಾರವಾಡಕ್ಕೆ ಹೊರಡಲು ಸಿದ್ಧನಾದೆ. ಫೋನ್ ಮಾಡಿದರೆ ಅಶೋಕ ಶೆಟ್ಟರ್ ರಿಸೀವ್ ಮಾಡಲಿಲ್ಲ. ಅವನಷ್ಟೇ ಅಲ್ಲ: ಧಾರವಾಡದ ನನ್ನ ಅನೇಕ ಗೆಳೆಯರ ಮನಸ್ಥಿತಿ ಏನಾಗಿರಬಹುದು ಎಂಬುದು ನನ್ನ ಅಂದಾಜಿಗಿದೆ. It is a nasty thing. ಸತ್ತು ಹೋಗಿರುವುದು, ನಮ್ಮ ಪಾಲಿಗೆ ಗುರುವೂ, ಮಿತ್ರರೂ, ಆತ್ಮೀಯರೂ ಆದ ಎಂ.ಎಂ.ಕಲಬುರ್ಗಿಯವರು. ಬೇಸರವಾಗಲಿಕ್ಕೆ ಬೇರೆ ಇನ್ನೇನು ಬೇಕು? ಅದಾದರೂ ಮತ್ತೆಲ್ಲೋ ಆದ ಹತ್ಯೆಯಲ್ಲ. ಅತ್ಯಂತ ನೆಮ್ಮದಿಯಾದ, ನಿವೃತ್ತ ಪ್ರೊಫೆಸರುಗಳಿಗೆ ಹೇಳಿ ಮಾಡಿಸಿದಂತಿರುವ ಕಲ್ಯಾಣನಗರದಲ್ಲಿ. ನಾನು ಅನೇಕ ಸಲ ಒಂದು ಮಾತು ಅನ್ನುತ್ತಿರುತ್ತೇನೆ. “ಬ್ಯಾರೆ ಊರು ಕೆಟ್ಟ ಹಾಗೆ ಈ ಧಾರವಾಡ ಕೆಟ್ಟಿಲ್ಲ. ಇವತ್ತಿಗೂ ಅದು calm and quiet" ಅಂತ. ನನಗೆ ಆ ರಸ್ತೆ, ಕಲಬುರ್ಗಿಯವರ ಮನೆ-ಎಲ್ಲವೂ ಕಣ್ಣಿಗೆ ಕಟ್ಟಿದಂತೆ ನೆನಪಿವೆ. ಕಲಬುರ್ಗಿಯವರು ತರಗತಿಯಲ್ಲಿ ನಿಂತು ಪಾಠ ಮಾಡಿದವರಲ್ಲ ನನಗೆ. ಆದರೆ ಅತ್ಯಂತ ಅಕ್ಕರೆಯ ಮನುಷ್ಯ. ನಮ್ಮ ಚಂಪಾ, ಗಿರಡ್ಡಿ ಗೋವಿಂದರಾಜ, ಸಿದ್ದಲಿಂಗ ಪಟ್ಟಣಶೆಟ್ಟಿ, ತೋಂಟದಾರ್ಯ, ಇಮ್ರಾಪುರ ಮುಂತಾದವರೆಲ್ಲ ಪ್ರೊ.ಕಲಬುರ್ಗಿಯವರಿಗೆ ಹಿಂಚುಮುಂಚು ಓರಗೆಯವರು. ಆ ಸಾಲಿಗೆ ನಮ್ಮ ಚನ್ನವೀರ ಕಣವಿಯವರೂ ಸೇರುತ್ತಾರೆ. ಇವರು ನನ್ನಂಥ ಕಿರಿಯರಿಗೆ ಪ್ರಾತಃಸ್ಮರಣೀಯರು. ‘ಎಪ್ಪತ್ತು ದಾಟಿವೆ: ಎಂಬತ್ತಕ್ಕೆ ತಲುಪಿಲ್ಲ’ ಅನ್ನಬಹುದಾದ age groupನವರಿವರು. ನಾವು ನಿಜಕ್ಕೂ ಗೌರವಿಸುವ, ಆತ್ಮೀಯರಾದ, ಮನಬಿಚ್ಚಿ ಮಾತನಾಡಬಲ್ಲಂತಹ ಮನೆ ಹಿರಿಯರು. ಈಗೊಂದು ವರ್ಷದ ಹಿಂದೆ ಕಲಬುರ್ಗಿಯವರಿಗೆ ನಾನೇ ಫೋನ್ ಮಾಡಿದ್ದೆ. ಯಾವುದೋ ಜಿಜ್ಞಾಸೆ. ಧರ್ಮಕ್ಕೆ ಸಂಬಂಧಿಸಿದ ವಿಷಯ. ಅವರಾದರೂ ಬಿಡುವಾಗಿದ್ದಿರಬೇಕು. ಸಾಕಷ್ಟು ಹೊತ್ತು ಹರಟಿದರು. ರವಿ ಬೆಳಗೆರೆ ಸಾಫ್ಟ್‌ಕಾರ್ನರ್ ನಾವು ಅದೆಷ್ಟು ದಿಕ್ಕುಗಳಿಂದ ಎಚ್ಚರವಾಗಿರಬೇಕು? ಯಾವುದಕ್ಕೆ ತೆತ್ತ ಕಂದಾಯ? ಜಾತಿಗಾ? ಮಾತಿಗಾ? ಅಷ್ಟು ದೊಡ್ಡ ಸಾಧಕರು ಅವರು. ಇನ್ನೇನು ಎಂಬತ್ತಕ್ಕೆ ಹತ್ತಿರವಿದ್ದವರು. ಅವರಿಗೆ ನಾನೆಂದರೆ ಪ್ರೀತಿ. ಒಂದು ಸಲುಗೆ. ಅವರದು ಅಧ್ಯಯನಶೀಲ ಮನಸ್ಸು. ದೈಹಿಕವಾಗಿ ಸಾಕಷ್ಟು ಸ್ಥಿರವಾಗಿದ್ದರು. “ಏ ರವೀ, ಬಾರೋ. ಅದೇನೋ ಜೋಕ್ ಹೇಳ್ತೀಯಂತಲ್ಲ? ಕೂಡು ಇಲ್ಲಿ" ಅನ್ನುತ್ತಿದ್ದರು. ಮನೆಗೆ ಹೋದರೆ ಅವಲಕ್ಕಿ, ಚಹ. ಅವರು ಅದೆಲ್ಲೋ ಮೂಲೆಯಲ್ಲಿ ಕುಳಿತು ಕತೆ-ಕಾದಂಬರಿ ಬರೆದವರಲ್ಲ. ಏನು ಬರೆದರೂ ಅದೊಂದು ರಿಸರ್ಚ್. ಅಪಾರವಾದ ಪಾಂಡಿತ್ಯ. ಅಂಥದ್ದು ಎಂಥ ದುರ್ಮರಣ ಕಂಡು ಬಿಟ್ಟರಲ್ಲ? I am depressed. ನಾನು ಅನೇಕ ವರ್ಷಗಳ ಹಿಂದೆಯೇ ನಿರ್ಧರಿಸಿದೆ. ‘ಉಹುಂ, ಇದರ ಬಗ್ಗೆ ಬರೆಯಬಾರದು’ ಅಂತ. ನೀವೇ ಗಮನಿಸಿ. ನಾನು ಜಾತಿಗಳ ಬಗ್ಗೆ ಬರೆಯುವುದಿಲ್ಲ. ಮತಗಳ ಕುರಿತು ಬರೆಯಲ್ಲ. ಇನ್ನೊಬ್ಬರ ಊಟ-ಆಹಾರಗಳ ಬಗ್ಗೆ ಬರೆಯುವುದಿಲ್ಲ. ಯಾರದೇ ಧರ್ಮಾಚರಣೆಯ ಕುರಿತು ಬರೆಯುವುದಿಲ್ಲ. ಮೂವತ್ತು ವರ್ಷಗಳಿಂದ ಪತ್ರಿಕೋದ್ಯಮವನ್ನೇ ಅಲ್ವಾ ಮಾಡುತ್ತ ಬಂದಿರುವುದು? ಅನೇಕರನ್ನು ಬೈದಿದ್ದೇನೆ. ಅದು ಕೇವಲ individual ಲೆಕ್ಕದಲ್ಲಿ. ರವಿ ಬೆಳಗೆರೆ ಬಾಟಮ್ ಐಟಮ್ ದೋರಗಾಯಿ ಪ್ರೇಮಿಗಳೇಕೆ ದೂರವಾಗಿ ಬಿಡುತ್ತಾರೆ? ಕ್ಲಾಸಿನಲ್ಲಿರೋದೇ ಮೂರೂ ಮುಕ್ಕಾಲು ಜನ. ಅವರ ಪೈಕಿಯೇ ಒಬ್ಬನನ್ನು ಪ್ರೀತಿಸಿಬಿಡಬೇಕು. ಪ್ರೀತಿಸಲೇಬೇಕು. ಏಕೆಂದರೆ, ಉಳಿದ ಎರಡೂ ಮುಕ್ಕಾಲು ಜನಕ್ಕಾಗಲೇ ಗೆಳೆಯ ಗೆಳತಿಯರಿದ್ದಾರೆ. ತೀರ ಒಬ್ಬ ಬಾಯ್ ಫ್ರೆಂಡೂ ಇಲ್ಲದ ಮೇಲೆ ಅದೂ ಒಂದು ಬದುಕೇನಾ? ಹೈಸ್ಕೂಲಿನ ಕೊನೆಯಲ್ಲಿ, ಪಿಯು ಕಾಲೇಜಿನ ಹೊಸ್ತಿಲಲ್ಲಿ ‘ಟೀನ್ ಲವ್’ ತರಹದ್ದೊಂದು ಆರಂಭವಾಗುವುದೇ ಹಾಗೆ. ಈಗೊಂದು ವರ್ಷದ ಹಿಂದೆ ನನ್ನನ್ನು ಕಾಣಲು ಇಬ್ಬರು ಹುಡುಗರು ಬಂದಿದ್ದರು. ಇಬ್ಬರಿಗೂ ಹೆಚ್ಚೆಂದರೆ ಹದಿನೇಳು ವರ್ಷ ವಯಸ್ಸು. ನೌಕರಿಯಿಲ್ಲ. ಆ ಇಬ್ಬರ ಪೈಕಿ ಒಬ್ಬನು ಅಮರ ಪ್ರೇಮಿ. ಹುಡುಗಿಯ ತಂದೆ ತಾಯಿ ಶತಾಯಗತಾಯ ಒಪ್ಪುತ್ತಿಲ್ಲವಾದ್ದರಿಂದ, ನೀವೇ ನಮಗೆ ಸಹಾಯ ಮಾಡಿ ನನ್ನ ಮದುವೆ ಮಾಡಬೇಕು ಅಂತ ವಿನಂತಿಸಿದ. ಕಣ್ಣೀರಿಟ್ಟುಕೊಂಡ. ಅವಳಿಲ್ಲದೆ ಅಸಲು ನಾನು ಬದುಕಿಯೇ ಇರಲಾರೆ ಅಂದ. ‘ಅದಿರಲಿ ಕಣಯ್ಯಾ, ನಿನ್ನ ಹುಡುಗಿ ಎಲ್ಲಿ?’ ಅಂತ ಕೇಳಿದುದಕ್ಕೆ, “ಹೊರಗಡೆ ನಿಮ್ಮಾಫೀಸಿನ ವಿಸಿಟರ್ಸ್ ರೂಮಿನಲ್ಲಿ ಕೂತಿದ್ದಾಳೆ" ಅಂದ. ಎದ್ದು ಹೋಗಿ ನೋಡಿದೆ. ಎದೆ ಒಡೆಯುವಂಥ ದೃಶ್ಯ ಕಾದಿತ್ತು. ರವಿ ಬೆಳಗೆರೆ ಹಲೋ ಅಧಿಕಾರಕ್ಕಾಗಿ ಎಂತಹ ಹೊಂದಾಣಿಕೆಗೂ ಈ ಬದ್ಧ ವಿರೋಧಿಗಳು ರೆಡಿ ರಾಜಧಾನಿ ಬೆಂಗಳೂರಿನ ಆಡಳಿತವನ್ನು ನಡೆಸಲು ಬಿಜೆಪಿ ಪರವಾದ ಜನಾದೇಶವಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ನಡೆದುಕೊಳ್ಳುತ್ತಿರುವ ರೀತಿ ಡೆಮಾಕ್ರಸಿಯನ್ನೇ ಅಣಕಿಸುವಂತಿದೆ. ಅಂದ ಹಾಗೆ ನೂರಾ ತೊಂಬತ್ತೆಂಟು ಸದಸ್ಯ ಬಲದ ಬೆಂಗಳೂರು ಮಹಾನಗರ ಪಾಲಿಕೆಗೆ ಮೊನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅನಾಮತ್ತಾಗಿ ನೂರು ಸೀಟುಗಳನ್ನು ಪಡೆಯಿತು. ಇದೇ ಕಾಲಕ್ಕೆ ಆಡಳಿತಾರೂಢ ಕಾಂಗ್ರೆಸ್‌ಗೆ ಎಪ್ಪತ್ತಾರು ಸೀಟುಗಳು ಮಾತ್ರ ಲಭ್ಯವಾದವು. ಯಾವ ದೃಷ್ಟಿಯಿಂದ ನೋಡಿದರೂ ಬಿಬಿಎಂಪಿ ಚುನಾವಣೆಯಲ್ಲಿ ಜನ ಬಿಜೆಪಿ ಪರವಾಗಿ ಆದೇಶ ನೀಡಿದ್ದರೇ ಹೊರತು ಕಾಂಗ್ರೆಸ್ ಪರವಾಗಿ ಅಲ್ಲ. ಆದರೆ ಕುತೂಹಲ ನೋಡಿ. ಈ ದೇಶದ ಸಂಸತ್ತಿಗಾಗಲೀ, ವಿಧಾನಸಭೆಗಾಗಲೀ ಜನಪ್ರತಿನಿಧಿಗಳು ಆಯ್ಕೆಯಾದಾಗ ಮತ್ತು ಅಧಿಕಾರ ಹಿಡಿಯುವ ಪ್ರಶ್ನೆ ಬಂದಾಗ ಅದರ ಮೂಲಬಲವನ್ನು ಮಾತ್ರ ಪರಿಗಣಿಸುತ್ತಾರೆ. ಆದರೆ ಸ್ಥಳೀಯ ಸಂಸ್ಥೆಗಳ ವಿಷಯ ಬಂದಾಗ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಕಾನೂನುಗಳನ್ನು ಅಳವಡಿಸಿಕೊಳ್ಳುತ್ತಾರೆ. ರವಿ ಬೆಳಗೆರೆ ಮುಖಪುಟ ವರದಿ ಠಣಂಗ್ ಅಂದ ಸ್ವಾಮಿಯ ಪಲ್ಲಂಗ ಪಲ್ಲವೀ ರಾಗ! ಮಠದಲ್ಲೇ ಇರುತ್ತಿದ್ದ ಅನುಪಲ್ಲವಿ ಮಠಕ್ಕೆ ಬರುತ್ತಿದ್ದ ಕಿರುತೆರೆ ಧಾರಾವಾಹಿ ನಿರ್ಮಾಪಕರ ಸಂಪರ್ಕ ಸಾಧಿಸಿ ನಾಲ್ಕಾರು ಧಾರಾವಾಹಿಗಳಲ್ಲೂ ನಟಿಸಿದ್ದಳು. ಶಾಲಾ ದಿನಗಳಲ್ಲಿ ಯಕ್ಷಗಾನಗಳಲ್ಲಿ ಪಾತ್ರ ಮಾಡುತ್ತಿದ್ದದ್ದು ಇದಕ್ಕೆ ಅನುಕೂಲವಾಗಿದೆ. ಆಕೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದದ್ದು ಈ ಸ್ವಾಮಿಯ ಆಸೆ ಕೆರಳುವಂತೆ ಮಾಡಿದ್ದು ಬೆಂಗಳೂರಿನಲ್ಲಿದ್ದಾಗ ಆಕೆಯನ್ನು ಬಲವಂತವಾಗಿ ಕರೆಸಿಕೊಳ್ಳುತ್ತಿದ್ದುದರ ಬಗ್ಗೆ ಆಕೆ ಪೊಲೀಸರಿಗೆ ತಿಳಿಸಿದ್ದಾಳೆನ್ನಲಾಗಿದೆ. ಮುಖ್ಯವಾಗಿ ಗಂಡನಿಗೆ ಒತ್ತಾಯಿಸಿ ಹೆಂಡತಿಯನ್ನು ಮಠಕ್ಕೆ ಕರೆಸಿಕೊಳ್ಳುತ್ತಿದ್ದ ಸ್ವಾಮಿ ಇಬ್ಬರನ್ನು ಬೇರೆ ಬೇರೆ ಮಾಡಿ ಉದ್ದೇಶ ಸಾಧನೆ ಮಾಡಿಕೊಂಡ ಎಂಬುದು ಮಠದ ಸಮೀಪವರ್ತಿಗಳ ವಿವರಣೆ. ಈಕೆ ಕೂಡ ಕಳೆದ ವರ್ಷ ಪ್ರೇಮಲತಾ ಪೊಲೀಸರಿಗೆ ದೂರು ಕೊಟ್ಟಾಗಲೇ ತಾನೂ ದೂರು ಕೊಡುವ ಪ್ರಯತ್ನದಲ್ಲಿದ್ದಳಾದರೂ ನ್ಯಾಯಾಲಯಗಳಲ್ಲಿ ಪ್ರೇಮಲತಾಳಿಗಾದ ಅವಮಾನ, ನಂತರ ಪೊಲೀಸರು ಆಡಿದ ಆಟ, ಸಾಮಾಜಿಕ ಜಾಲ ತಾಣಗಳಲ್ಲಿ ಪ್ರೇಮಲತಾ ಕುಟುಂಬವನ್ನು ಮಠದ ಮಾಣಿಗಳು ಹೀನಾಯವಾಗಿ ತೆಗಳುತ್ತಾ ಹೋದದ್ದು ಇವೆಲ್ಲವುಗಳಿಂದಾಗಿ ದೂರು ಕೊಡಲು ಹಿಂದೇಟು ಹಾಕಿದಳೆನ್ನಲಾಗಿದ್ದು ಈಕೆ ದೂರು ಕೊಟ್ಟಾಳು ಎಂಬ ಕಾರಣಕ್ಕೆ ಬೆನ್ನು ಬಿದ್ದು ಬೆದರಿಸುವ ಕೆಲಸ ವರ್ಷವಿಡೀ ನಡೆದಿದೆಯಂತೆ. ವರದಿಗಾರ ರಾಜಕೀಯ ಗದ್ದುಗೆ ಕಳೆದುಕೊಳ್ಳುವ ಭೀತಿಯಿಂದ ಸಿದ್ದು ದೇವು ಫ್ಯಾಮಿಲಿ ಜೊತೆ ಮತ್ತೆ ಒಂದಾದರು! ಬಿಬಿಎಂಪಿ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ತಮ್ಮ ಪದಚ್ಯುತಿಗೆ ನಡೆಯುತ್ತಿರುವ ಯತ್ನಗಳು ತೀವ್ರವಾಗುತ್ತವೆ ಎಂಬುದು ಅವರಿಗೆ ಅರ್ಥವಾಯಿತು. ಹಾಗಂತಲೇ ಜೆಡಿಎಸ್‌ನ ಜಮೀರ್, ಗೋಪಾಲಯ್ಯ, ಅಖಂಡ ಶ್ರೀನಿವಾಸ ಮೂರ್ತಿ ಅವರಂತಹವರು ತಂದ ಮೈತ್ರಿ ಪ್ರಪೋಸಲ್ಲನ್ನು ಒಪ್ಪಿಕೊಂಡ ಸಿದ್ದರಾಮಯ್ಯ, ನೇರವಾಗಿ ಕುಮಾರಸ್ವಾಮಿ ಜೊತೆ ಮಾತನಾಡಿದರು. ಆನಂತರ ದೇವೆಗೌಡರ ಬಳಿಯೂ ಮಾತನಾಡಿದರು. ಅಲ್ಲಿಗೆ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಪಕ್ಷೇತರರು ಹಾಗೂ ಇತರ ವೋಟರುಗಳ ಬೆಂಬಲ ಪಡೆದರು. ಆ ಮೂಲಕ ಜನತಾ ಪರಿವಾರದ ಜೊತೆ ವಿಧ್ಯುಕ್ತವಾಗಿ ಮತ್ತೊಮ್ಮೆ ಕೈ ಜೋಡಿಸಿದರು. ಅಲ್ಲಿಗೆ ದಶಕಕ್ಕೂ ಹೆಚ್ಚು ಕಾಲದ ವೈರತ್ವವೊಂದು ತಾತ್ಕಾಲಿಕವಾಗಿ ದೂರವಾಯಿತು. ಬಿಬಿಎಂಪಿಯ ಅಧಿಕಾರ ಗದ್ದುಗೆಯನ್ನು ಹಿಡಿಯುವ ಬಿಜೆಪಿಯ ಕನಸು ಭಗ್ನವಾಯಿತು. ಆರ್.ಟಿ.ವಿಠ್ಠಲಮೂರ್ತಿ ವರದಿ ಹರಿಹರದ ಸುನಾಮಿ ರಮೇಶನಿಗೆ ಬಲಿಯಾದಳು! ಆಕೆ ಶುಭಾ ದೀಕ್ಷಿತ್. ದಾವಣಗೆರೆ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಪ್ರಥಮ ದರ್ಜೆ ಗುಮಾಸ್ತೆಯಾಗಿದ್ದಳು. ಗಂಡ ರಾಘವೇಂದ್ರ ದೀಕ್ಷಿತ್ ಹರಿಹರದ ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಸೂಪರ್ ವೈಸರ್ ಆಗಿದ್ದರು. ಗಂಡ ಹೆಂಡತಿಯರಿಬ್ಬರಿಗೂ ನೌಕರಿಯಿತ್ತಾದ್ದರಿಂದ ಸಂಸಾರದಲ್ಲಿ ಯಾವುದೂ ಕೊರತೆ ಇರಲಿಲ್ಲ. ಸಾಲದ್ದಕ್ಕೆ ಮುದ್ದಾದ ಇಬ್ಬರು ಮಕ್ಕಳು. ಎಲ್ಲವೂ ಚೆನ್ನಾಗಿತ್ತು ಅಂದುಕೊಂಡಾಗಲೆ ಈ ಸಂಸಾರದೊಳಗೆ ಸುನಾಮಿಯಂತೆ ಎಂಟ್ರಿ ಕೊಟ್ಟವನು ಹರಿಹರದ ಸುನಾಮಿ ರಮೇಶ. ಪುಂಡ ರಮೇಶನ ಬ್ಲಾಕ್ ಮೇಲ್ ತಂತ್ರಕ್ಕೆ ಒಳಗಾದ ಗೃಹಿಣಿ ಶುಭಾ ದೀಕ್ಷಿತ್ ಮೊನ್ನೆ ಭಾನುವಾರದಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಆತ್ಮಹತ್ಯಾ ಹಿನ್ನೆಲೆ ಹುಡುಕುತ್ತಾ ಹೋದರೆ ಹರಿಹರದ ಬ್ಲಾಕ್ ಮೇಲರ್ ಸುನಾಮಿ ರಮೇಶ ಅಂಡ್ ಗ್ಯಾಂಗ್‌ನ ಕರಾಳ ಮುಖ ಬಯಲಾಗುತ್ತಿದೆ. ಕಾಂತರಾಜ್ ಅರಸ್ ವರದಿ ಚಾಮರಾಜಪೇಟೆ ಜ್ಯೋತಿಯನ್ನ ಗಂಡನೇ ಕೊಂದ! ಇದೊಂದು ದಾರುಣ ಘಟನೆ. ಸುಸಂಸ್ಕೃತರಿರುವ ಬಸವನಗುಡಿಯಲ್ಲಿ, ಅದರಲ್ಲೂ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಕೃಷ್ಣರಾವ್ ಪಾರ್ಕ್ ಪಕ್ಕದಲ್ಲಿ ನಡೆದ ಆತಂಕಕಾರಿ ಘಟನೆ. ಅದೆಲ್ಲಕ್ಕಿಂತ ಹೆಚ್ಚಾಗಿ ಒಂದು ಸಂಸಾರ ಒಡೆದು ಛಿದ್ರ ಛಿದ್ರವಾಗಿ ಹೋದ ಕರುಣಾಜನಕ ಘಟನೆ. ಅವತ್ತು ಆಗಸ್ಟ್ 27, 2015. ಸಂಜೆ ಸುಮಾರು ಏಳೂವರೆ ಸಮಯ. ರಿಚ್‌ಮಂಡ್ ಸರ್ಕಲ್ ಬಳಿಯ ರೀನಿಯಸ್ ಸ್ಟ್ರೀಟ್‌ನಲ್ಲಿರುವ ಟೀವಿ 9 ವಾಹಿನಿಗೆ ನಾಗರಾಜ ಎಂಬ ವ್ಯಕ್ತಿ ದಿಢೀರ್ ಅಂತ ಬಂದಿದ್ದಾನೆ. ಆತನ ಮುಖದಲ್ಲಿ ಆತಂಕವಿತ್ತು. ಹಾಕಿದ್ದ ಶರ್ಟ್ ಮೇಲೆ ರಕ್ತದ ಕಲೆಯಿತ್ತು. ರಿಸೆಪ್ಷನಿಸ್ಟ್ ಬಳಿ ಹೋದವನೇ, “ನನ್ನ ಹೆಂಡತೀನಾ ಕೊಲೆ ಮಾಡಿ ಬಂದಿದ್ದೇನೆ, ಅದರ ಬಗ್ಗೆ ನಿಮ್ಮ ಟೀವಿಯಲ್ಲಿ ಕುಳಿತು ಮಾತನಾಡಬೇಕು" ಅಂದಿದ್ದಾನೆ. ಅಲ್ಲಿದ್ದವರು ಒಂದು ಕ್ಷಣ ಗಾಬರಿಯಾಗಿದ್ದಾರೆ. ಈತನ ವರ್ತನೆ ಕಂಡು ಕೂಡಲೇ ಅಶೋಕ್‌ನಗರ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಶೋಕ್‌ನಗರ ಪೊಲೀಸರು ಹಂತಕ ನಾಗರಾಜನನ್ನ ವಶಕ್ಕೆ ಪಡೆದು ಬಸವನಗುಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಹಾಗಾದರೆ ನಾಗರಾಜ ಯಾರು? ಆತ ಮಾಡಿದ ತಪ್ಪಾದರೂ ಏನು? ಕೊಲೆಯ ನಂತರ ಆತ ಟೀವಿ ವಾಹಿನಿಗೆ ತೆರಳಿದ್ದದ್ದಾರೂ ಯಾಕೆ? ಈ ವರದಿ ಓದಿ. ಅಶ್ವಿನ್ ಕುಮಾರ್ ವರದಿ ಗಂಗಾವತಿಯ ಬದ್ಮಾಷ್ ಬಾಷಾ ಎಂಬ ಪಾತಕಿ ಅದೊಂದು ಭಯಾನಕ ಕೊಲೆ. ದ್ವೇಷದ ದಳ್ಳುರಿಗೆ ನಡೆದ ಭೀಕರ ಹತ್ಯೆ. ಮೊನ್ನೆ ಆಗಸ್ಟ್ 30ರ ಭಾನುವಾರ ಕೊಪ್ಪಳದ ಗಂಗಾವತಿ ನಗರದ ಮಹಾವೀರ್ ಸರ್ಕಲ್‌ನ ನಟ್ಟ ನಡುರಸ್ತೆಯಲ್ಲಿ ಸ್ವಂತ ಅತ್ತಿಗೆಯ ಅಣ್ಣನನ್ನ ಕುರಿಯಂತೆ ಕೊಚ್ಚಿ ಹಾಕಿದವನು ಹುಸೇನ್ ಬಾಷಾ. ಆತನಿನ್ನೂ ಇಪ್ಪತ್ತೈದು ವರ್ಷದ ಹುಡುಗ. ಮಾರುದ್ದದ ತಲವಾರಿನಲ್ಲಿ ಹೊಡೆದ ಒಂದೇ ಹೊಡೆತಕ್ಕೆ ಪ್ರಾಣ ಹೋಗಿದ್ದರೂ ಆತ ಕೊಚ್ಚುತ್ತಲೇ ಇದ್ದ. ಅದರ ವಿಡಿಯೋ ತುಣುಕುಗಳು ಈಗ ವಾಟ್ಸಾಪ್‌ನಲ್ಲಿ ಎಲ್ಲೆಡೆ ಹರಿದಾಡುತ್ತಿವೆ. ಸಮಾಧಾನವಾಗುವ ತನಕ ಕೊಚ್ಚಿ ನಂತರ ಓಡಿಹೋಗಲು ಪ್ರಯತ್ನಿಸಿದ್ದ ಬಾಷ. ಅವತ್ತೇನಾದರೂ ಪೊಲೀಸರು ರಕ್ಷಿಸದಿದ್ದರೇ ಸಾರ್ವಜನಿಕರೇ ಹಂತಕ ಬಾಷಾನನ್ನು ಕೊಂದು ಹಾಕುತ್ತಿದ್ದರು. ಅಷ್ಟಕ್ಕೂ ಈ ಭಯಾನಕ ಕೊಲೆಯ ಹಿಂದಿರುವ ಉದ್ದೇಶವಾದರೂ ಏನು ಅಂತ ಹುಡುಕುತ್ತಾ ಹೋದಾಗ ತೆರೆದುಕೊಂಡ ಒಂದೊಂದೇ ವಿಚಾರಗಳು ಬೆಚ್ಚಿ ಬೀಳಿಸಿದವು. ಶಿರಸಂಗಿ ವರದಿ ಶ್ರೀರಾಮುಲು ಕೈಲಿ ಪಿಸ್ತೂಲ್ ಕೊಟ್ಟನಾ ನಾಯ್ಡು? ಅಕ್ರಮ ಗಣಿಗಾರಿಕೆಯಿಂದಾಗಿ ದೇಶದ ಗಮನ ಸೆಳೆದಿದ್ದ ಬಳ್ಳಾರಿ ಈಗ, ಅಕ್ರಮ ಮಾರಕಾಸ್ತ್ರ ಸಂಗ್ರಹದ ಹಬ್ ಆಗುತ್ತಿದೆಯಾ? ಗೊತ್ತಿಲ್ಲ. ಬಳ್ಳಾರಿನಗರದಲ್ಲಿ ಜರುಗಿದ ಇತ್ತೀಚಿನ ಕೆಲವು ಘಟನೆಗಳು ಇಂತಹ ಅನುಮಾನಗಳಿಗೆ, ಚರ್ಚೆಗಳಿಗೆ ಆಸ್ಪದ ನೀಡಿರುವುದು ಮಾತ್ರ ಸುಳ್ಳಲ್ಲ. ಹಾಗೆ ನೋಡಿದರೆ ಇಲ್ಲಿನ ನಗರ ವಾಸಿಗಳಿಗೆ ಇವೇನೂ ಹೊಸತಲ್ಲ. ಬಳ್ಳಾರಿಯ ಮೌನವೆಂದರೆ ಯಾವುದೋ ಸಮರ ತಯಾರಿಯ ಸಿದ್ಧತೆಯೊಂದಿಗಿನ ವಿರಾಮವೋ ಏನೋ!. ಇದ್ದಕ್ಕಿದ್ದ ಹಾಗೆ ಸುದ್ದಿಯಾಗಿ ಬಿಡುತ್ತದೆ. ಹಾಗೆಯೇ ಮೌನದ ಮಹಾಮನೆ ಹೊಕ್ಕಂತೆ ತಣ್ಣಗಿದ್ದೂ ಬಿಡುತ್ತದೆ. ಇಲ್ಲಿ ಮೌನ ಅಲ್ಪಾಯುಷಿಯಷ್ಟೇ! ವರದಿಗಾರ ನೇವಿ ಕಾಲಂ ನಾವೆಲ್ಲಾ ಸೇರಿ ಕಲ್ಬುರ್ಗಿಯನ್ನು ಕೊಂದೆವು! ಮತ್ತೆ, ಹಾಗೆಲ್ಲಾ ಹೇಳಿದರೆ ಇನ್ನೇನಾಗುತ್ತದೆ? ಡಾ. ಎಂ.ಎಂ. ಕಲ್ಬುರ್ಗಿ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಸುದ್ದಿ ಬಿತ್ತರವಾಗುತ್ತಲೇ ಹೆಚ್ಚಿನವರ ಬಾಯಿಂದ ಬಂದ ಮೊದಲ ಹೇಳಿಕೆ ಇದು. ಅಲ್ಲಿಗೆ ಕೊಲೆಗಾರ ಇರುವುದು ಯಾರದೋ ಗುಂಡಲ್ಲಲ್ಲ, ಆ ಗುಂಡು ಹೊಡೆಯಲು ಬಂದವನ ಗುಂಡಿಗೆಯದ್ದೂ ಅಲ್ಲ. ಮೇಲಾಗಿ ನಮ್ಮ ರಕ್ತದಲ್ಲಿ ಯಾಕೋ ಇತ್ತೀಚೆಗೆ ಸೇರಿ ಹೋಗುತ್ತಿರುವ ತಣ್ಣನೆಯ ಕ್ರೌರ್ಯದಲ್ಲಿ. ಕಲ್ಬುರ್ಗಿ ಅವರನ್ನು ಕೊಂದ ಕೊಲೆಗಾರನನ್ನು ನಾವು ಖಂಡಿತ ಇಂದಲ್ಲ ನಾಳೆ ಹಿಡಿದು ಬೇಕಾದ ಶಿಕ್ಷೆ ಕೊಡಬಹುದು, ಆದರೆ ಮನಸ್ಸಲ್ಲೇ ನಾವೆಲ್ಲಾ ಕೊಲೆಗಾರರಾಗಿದ್ದೇವಲ್ಲ, ಈ ಕೊಲೆಗಾರನನ್ನು ಶಿಕ್ಷಿಸಲಾದೀತೇ, ಅವರೊಳಗಿನ ಕೊಲೆಗಡುಕನನ್ನು ಕೊಲ್ಲಲಾದೀತೇ? ಕಲ್ಬುರ್ಗಿ ಅವರ ಹತ್ಯೆಯಾಗುತ್ತಲೇ ಅದು ವೈಯಕ್ತಿಕ ಕಾರಣಕ್ಕೆ ಆಗಿರಬಹುದಾದ ಕೊಲೆ ಅನ್ನುವ ಅನುಮಾನ ಹುಟ್ಟುವುದಕ್ಕಿಂತ ಹೆಚ್ಚಿನ ಅನುಮಾನ ಹುಟ್ಟಿದ್ದು, ಅವರ ನಿಲುವಿನ ವಿರೋಧಿಗಳು ಮಾಡಿರಬಹುದಾದ ಕೊಲೆ ಎಂದು. ಎಂಬಲ್ಲಿಗೆ ಹಲವು ವಿಚಾರಗಳು ಸ್ಪಷ್ಟವಾಗಿವೆ. ನೇವಿ ಜಾನಕಿ ಕಾಲಂ ಎರಡು ಸಿನಿಮಾಗಳ ಕುರಿತು ಅವನನ್ನು ಅವಳು ಮುದ್ದಿಸುವುದನ್ನು ಕದ್ದು ನೋಡುತ್ತಾಳೆ ಪುಟ್ಟ ಹುಡುಗಿ. ಆ ಹುಡುಗಿಗೆ ತಾನೇನು ನೋಡಿದ್ದೇನೆ ಅನ್ನುವುದೂ ಗೊತ್ತಿಲ್ಲ. ಅವಳೆಲ್ಲಿ ಎಲ್ಲವನ್ನೂ ಹೇಳಿಬಿಡುತ್ತಾಳೋ ಎಂದು ಆತಂಕದಲ್ಲಿರುವಾಗಲೇ ಅವನ ಕೋಣೆಯಲ್ಲಿ ಅವಳ ಬಟ್ಟೆಗಳು ಆ ಹುಡುಗಿಯ ಅಮ್ಮನಿಗೆ ಸಿಕ್ಕಿ ಎಲ್ಲವೂ ಬಯಲಾಗುತ್ತದೆ. ಅದಕ್ಕೂ ಮುಂಚೆ ಅವರು ಇನ್ನಿಲ್ಲದಂತೆ ಪ್ರೀತಿಸುತ್ತಾರೆ. ಇನ್ನೇನು ಐದಾರು ತಿಂಗಳಿಗೆಲ್ಲ ಸತ್ತೇ ಹೋಗುತ್ತೇವೇನೋ ಎಂಬಂತೆ ಮುದ್ದಾಡುತ್ತಾರೆ. ವೈದ್ಯರು ಬದುಕಿನ ಗಡಿಯನ್ನು ನಿಗದಿ ಮಾಡಿದ ರೋಗಿಯಂತೆ ಅವರಿಬ್ಬರ ಪ್ರೇಮ ಎನ್ನುವುದು ಅವರಿಬ್ಬರಿಗೂ ಗೊತ್ತಿದೆ. ಅವಳು ಮೊದಲೇ ನನಗೆ ಮದುವೆ ಇಷ್ಟವಿಲ್ಲ. ಆ ಬಂಧನದಲ್ಲಿ ನಾನು ಸಿಕ್ಕಿ ಹಾಕಿಕೊಳ್ಳೋದಿಲ್ಲ. ಮದುವೆಯ ಹೆಸರಲ್ಲಿ ಅವನು ಹೋದಲ್ಲೆಲ್ಲ ಹೋಗುವುದು, ನನ್ನ ಬದುಕಿನ ಗುರಿಯನ್ನು ಅವನಿಗೋಸ್ಕರ ಬದಲಾಯಿಸಬೇಕಾಗಿ ಬರುವುದು, ಅವನ ನೆರಳಿನಂತೆ ಬಾಳುವುದು ತನ್ನಿಂದಾಗದು ಅಂತ ಖಡಾಖಂಡಿತವಾಗಿ ಹೇಳಿ ಅವನಿಗೆ ಮನದಟ್ಟು ಮಾಡಿಸಿರುತ್ತಾಳೆ. ಅವನೂ ಅಷ್ಟೇ, ತಮ್ಮ ಸಾಂಗತ್ಯ ಅಲ್ಪಾಯುಷಿ ಎಂದು ಗೊತ್ತಿರುವವನ ಹಾಗೇ ಬದುಕುತ್ತಿರುತ್ತಾನೆ. ಜಾನಕಿ ವರದಿ ಶೀನಾಬೋರಾ ಕೊಲೆ ಹಿಂದಿನ ರಹಸ್ಯವೇನು? ಶೀನಾಬೋರಾ! ಸದ್ಯದ ಸ್ಥಿತಿಯಲ್ಲಿ ದೇಶಾದ್ಯಂತ ಮಾದ್ಯಮಗಳಲ್ಲಿ ದೊಡ್ಡ ಚರ್ಚೆಯಾಗುತ್ತಿರುವ ಹೆಸರಿದು. ನಿಜಕ್ಕೂ ಈಕೆಯದು ಕೊಲೆಯಾಗಿದೆಯಾ? ಬದುಕಿದ್ದಾಳಾ? ಈ ಅನುಮಾನ ದಿನ ದಿನಕ್ಕೂ ಕಾಡುತ್ತಿದೆ. ಯಾಕೆಂದರೆ ಈಕೆಯ ತಾಯಿ ಇಂದ್ರಾಣಿ ಮುಖರ್ಜಿಯ ಕ್ಷಣ ಕ್ಷಣದ ಹೇಳಿಕೆಗಳು ಮುಂಬೈ ಪೊಲೀಸರ ತನಿಖೆಯ ದಿಕ್ಕನ್ನೇ ಬದಲಿಸತೊಡಗಿವೆ. ಶೀನಾಬೋರಾ ತನ್ನ ಮಗಳು ಎನ್ನುವ ಇಂದ್ರಾಣಿ ಮರುಗಳಿಗೆಯಲ್ಲೇ ನೋ..ನೋ.. ಆಕೆ ನನ್ನ ತಂಗಿ ಎಂಬ ಹೇಳಿಕೆಗಳನ್ನು ನೀಡತೊಡಗಿದ್ದಾಳೆ. ನಿನ್ನೆ ಮೊನ್ನೆವರೆಗೂ ಶೀನಾಬೋರಾಳದು ಕೊಲೆ ಎಂದೇ ದೇಶಾದ್ಯಂತ ಇರುವ ಮಾದ್ಯಮಗಳು ಸುದ್ದಿ ಬಿತ್ತರಿಸಿದ್ದವು. ಆದರೆ ಇವತ್ತಾಗಲೇ ಆಕೆ ಅಮೆರಿಕಾದಲ್ಲಿದ್ದಾಳಂತೆ ಎಂಬ ಸುದ್ದಿ ಹರಿದಾಡುತ್ತಿದೆ. ‘ಪತ್ರಿಕೆ’ ಅಚ್ಚಿಗೆ ಹೋಗುತ್ತಿರುವ ಕಡೇ ಗಳಿಗೇಲಿ ಆಕೇನಾ ನಾನೇ ಕೊಲೆ ಮಾಡಿದ್ದು ಅಂತಾ ಇಂದ್ರಾಣಿ ಹೇಳಿಕೆ ನೀಡಿದ್ದಾಳೆ. ಹಾಗಾದರೆ ಇಡೀ ಕತೆಯ ರಹಸ್ಯವೇನು? ಇಷ್ಟಕ್ಕೂ ಇಂದ್ರಾಣಿ ಮುಖರ್ಜಿ ಈ ರೀತಿ ದಿಕ್ಕು ತಪ್ಪಿಸುತ್ತಿರುವ ಹೇಳಿಕೆಗಳ ಹಿಂದೆ ನಡೆದಿರುವ ಸತ್ಯ ಘಟನೆಯಾದರೂ ಏನು? ಇದೆಲ್ಲದರ ಕುರಿತು ಈ ವರದಿ. ಗ್ರೀಷ್ಮ ಎಂ.ನಾಯ್ಡು ಅಂಕಣ : ಆಕಾಶಬುಟ್ಟಿ ಅಮ್ಮನಿಗೂ ಅಫೇರ್ ಆಗುತ್ತದಾ..... ಜಗತ್ತಿನ ಅತ್ಯಂತ ಯಾತನೆಯ ಪ್ರಶ್ನೆ ಬಹುಶಃ ಇದೇ ಇರಬಹುದು. ಈ ಪ್ರಶ್ನೆಯನ್ನು ನಾನು ಖ್ಯಾತ ಬರಹಗಾರರೊಬ್ಬರಿಗೆ ಕೇಳಿದ್ದೆ. ಅದಕ್ಕವರು ಅದೇನು ವಿಷ್ಯ ಅಂತ ಕೇಳ್ತೀಯಮ್ಮ. ಖಂಡಿತವಾಗ್ಯೂ ಆಗುತ್ತೆ. ಇಲ್ಲಾ ಅಂದ್ರೆ ನಾವು ಇಷ್ಟೊಂದು ‘ಹುಲ್ಲು ಮೇಯಲು’ ಹೇಗೆ ಸಾಧ್ಯವಾಗುತ್ತಿತ್ತು. ಹಾಗೆಂದು ತಮ್ಮ ಎರಡರ್ಥದ ಜೋಕಿಗೆ ತಾವೇ ನಕ್ಕಿದ್ದರು. ಅಫ್ ಕೋರ್ಸ್, ನನಗೆ ನಗು ಬರಲಿಲ್ಲ. ಮತ್ತು ಅವರ ಉತ್ತರ ಹೊಸದೂ ಅಲ್ಲ. ನನ್ನ ಪ್ರಾಥಮಿಕದ ಗೆಳತಿ ವಾಣಿ. ಬೆಂಗಳೂರಿಗೆ ಬಂದಾಗಲೆಲ್ಲಾ ನಮ್ಮ ಮನೆಯಲ್ಲಿ ಉಳಿದುಕೊಳ್ಳುತ್ತಾಳೆ. ಈ ಸಾರಿಯ ಬೇಸಿಗೆ ರಜೆಯಲ್ಲಿ ಅವಳು ಅವಳ ಮಕ್ಕಳು ನಮ್ಮ ಮನೆಗೆ ಬಂದು ಉಳಿದುಕೊಂಡಿದ್ದರು. ಅವಳ ಜೊತೆಗಿದ್ದ ಎರಡೇ ದಿನದಲ್ಲಿ ಗೊತ್ತಾಗಿ ಹೋಯಿತು. ವಾಣಿಗೆ ಅಫೇರ್ ಇದೆ ಅಂತ. ಎಚ್.ಡಿ. ಸುನೀತಾ ಅಂಕಣ : ನೂರು ಮುಖ ಸಾವಿರ ದನಿ ಅಂತಹ ಗಂಡನನ್ನು ಕಟ್ಟಿಕೊಂಡು ಆಕೆ ಪಟ್ಟ ಪಾಡು ಗೊತ್ತೆ? “ನಮಸ್ತೆ ಸಾರ್, ರೇವಣಸಿದ್ದಯ್ನೋರಾ?" ಎಂಬ ಮೊಬೈಲ್ ಮೂಲದ ಪ್ರಶ್ನೆಗೆ “ಹೌದು" ಎಂದೆ. “ಸಾರ್ ನಿಮ್ಮನ್ನು ಭೇಟಿ ಮಾಡ್ಬೇಕು. ನಾನು ಬೆಂಗಳೂರಿನ ದೂರದ ಬಡಾವಣೆಯೊಂದರ ನಿವಾಸಿ. ಗೃಹಿಣಿ. ನನ್ನ ಮಗಳ ವೈವಾಹಿಕ ಸಮಸ್ಯೆ ಇದೆ. ಆ ಬಗ್ಗೆ ನಿಮ್ಮನ್ನು ಭೇಟಿ ಆಗ್ಬೇಕು. ತುಂಬಾ ಅರ್ಜೆಂಟ್" ಅದೇ ಮಹಿಳೆಯ ಧ್ವನಿ. ನಾನು ಆಯಿತು ಬನ್ನಿ ಅಂದೆ. ಭಾನುವಾರ ರಜೆ ಕಾರಣ ಉಳಿದ ದಿನಗಳಲ್ಲಿ ಸಂಜೆ ಐದರಿಂದ ಏಳು ಗಂಟೆಯವರೆಗೆ ನಾನು ಬೆಂಗಳೂರಿನ ನನ್ನ ವಿ.ವಿ. ಪುರಂನ ವಕೀಲ ವೃತ್ತಿ ಕಚೇರಿಯಲ್ಲಿ ಇರುತ್ತೇನೆ. ಬನ್ನಿ ಅಂದೆ. ವಿಳಾಸ ಸಹ ಮೆಸೇಜ್ ಕಳಿಸಿದೆ. ಸಂಜೆ ಆರು ಗಂಟೆಗೆ ಒಬ್ಬ ಮಹಿಳೆ ಮತ್ತು ಇಪ್ಪತ್ತೆರಡರೊಳಗಿನ ಒಬ್ಬ ಯುವತಿ ನನ್ನ ಛೇಂಬರಿನೊಳಗೆ ಬಂದು “ನಮಸ್ಕಾರ ಸಾರ್" ಎಂದು ಕೈ ಮುಗಿದರು. ಏನೋ ಬರೆಯುತ್ತಿದ್ದ ನಾನು, ತಲೆ ಎತ್ತಿ ನೋಡಿ ಕೂರಲು ಸಂಜ್ಞೆ ಮಾಡಿ ನಂತರ ಅವರತ್ತ ತಿರುಗಿ ಏನು ವಿಷಯ ಅಂತ ಕೇಳಿದೆ. ಹುಡುಗಿ ಅಳುತ್ತ, ಬಿಕ್ಕುತ್ತ, ನಡುವೆ ಕೆನ್ನೆಯ ಮೇಲೆ ಇಳಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತ, ತನ್ನ ಕತೆ ಹೇಳಿದಳು. ಅವರಮ್ಮ ಅದಕ್ಕೆ ಸಾಕ್ಷಿಯಾದಳು. ಜೊತೆಗೆ ತಾನೂ ಒಂದಷ್ಟು ಹೇಳಿದಳು. ಎಂ.ವಿ. ರೇವಣಸಿದ್ದಯ್ಯ

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.