Hi Bangalore


Buy Now @ ₹ 15.00 Preview
ಸೃಷ್ಟಿ 1046 : ಸಂಪುಟ 21, ಸಂಚಿಕೆ 6, ನವೆಂಬರ್ 5, 2015 ವರದಿ ಆಹಾ... ಶೋಕಿಲಾಲ ವೆಂಕಟೇಶನ ಮೈಸೂರು ಮ್ಯಾಟ್ನಿ ನೋಡಿ! ಇಂತಿಪ್ಪ ವೆಂಕಟೇಶನಿಗೆ ಬೆಂಗಳೂರಿನ ಗಾಂಧಿನಗರದ ಸೋಂಕು ತುಸು ಜಾಸ್ತಿನೇ ತಗಲಿಕೊಂಡಿದೆ. ಅರ್ಧಕ್ಕೆ ನಿಂತ ಚಿತ್ರಗಳಿಗೆ ಸಣ್ಣ-ಪುಟ್ಟ ಫೈನಾನ್ಸ್ ಮಾಡಿ ತಲೆಮಾಸಿದ ಎಕ್ಸ್‌ಟ್ರಾ ನಟಿಯರನ್ನು ಲಾಡ್ಜ್‌ಗಳಿಗೆ ಕರೆಸಿ ಚಕ್ಕಂದವಾಡುವುದು ಈತನ ಹಳೇ ಹಾಬಿ. ಪತ್ರಕರ್ತ ಶ್ರೀನಾಥ್ ನಿರ್ಮಿಸಲು ಹೊರಟಿದ್ದ ‘NH4’ ಸಿನೆಮಾಕ್ಕೆ ಈತನೇ ಪಾಲುದಾರನಾದ. ಅಷ್ಟಾಗಿದ್ದರೆ ಈ ವರದಿ ಬರೆಯುವ ಹರಕತ್ತು ಇರುತ್ತಿರಲಿಲ್ಲವೇನೋ ಸಿನೆಮಾಕ್ಕೆ ಮೂವತ್ತು ಲಕ್ಷ ಸುರಿದ ವೆಂಕಟೇಶ ಚಿತ್ರದಲ್ಲಿ ನಂಗೊಂದು ಪಾತ್ರ ಸೃಷ್ಟಿಸಿ ಅಂದ. ಪಾಪ! ನಿರ್ದೇಶಕ ಶ್ರೀನಾಥ್ ಚಿತ್ರದಲ್ಲಿ ಈತನಿಂದ ‘ಫೈನಾನ್ಸಿಯರ್’ ಪಾತ್ರ ಮಾಡಿಸಿದರು. ಲೋಕೇಶ್ ಕೊಪ್ಪದ್ ಸಾಫ್ಟ್‌ಕಾರ್ನರ್ ನಿಮಗೆ ಒಂದು ಅಂಥ ಚಿಕ್ಕ ಅನುಭವ ಆಗೇ ಆಗಿರುತ್ತೆ! ಉತ್ತರ ಕರ್ನಾಟಕದ ಒಂದು ಗಾದೆ ಇದೆ. “ಆಸತ್ತು ಬ್ಯಾಸತ್ತು ಅಕ್ಕನ ಮನೀಗೆ ಹೋದ್ರೆ, ಅಕ್ಕನ ಗಂಡ ಬಂದು ತೆಕ್ಕೆ ಬಡಕೊಂಡ್ನಂತೆ ಅಂತ. ಬದುಕು ಒಮ್ಮೊಮ್ಮೆ ಹಾಗನ್ನಿಸೋ ಥರಾ ಮಾಡುತ್ತೆ. ‘ಬಾಣಲೆಯಿಂದ ಬೆಂಕಿಗೆ ಬಿದ್ರು’ ಅನ್ನೋ ಮಾತೂ ಸರಿ ಹೋಗುತ್ತೆ. ನೋಡಿ, ನಂದೇ ಒಂದು ಅನುಭವ ಇದೆ. ಮೊದಲು ಚಿಕ್ಕ ನೌಕರಿಯಲ್ಲಿದ್ದೆ. I was not a proved a writer. ಆದ್ರೆ I was a good teacher. ಅದ್ಭುತವಾಗಿ ಕಾಲೇಜಿನಲ್ಲಿ ಪಾಠ ಮಾಡ್ತಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಕಳೆದುಕೊಂಡೆನಾ ಅವರು ತೆಗೆದು ಹಾಕಿದ್ರಾ ಹೇಳೋದು ಕಷ್ಟ. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಅಲ್ಲೀ ಮಟ್ಟಿಗೆ ನಿಜಕ್ಕೂ ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ‘ಪತ್ರಿಕೆ’ ಮಾಡಿದ್ದಕ್ಕಿಂತ ಲಗ್ನ ಪತ್ರಿಕೆ ಪ್ರಿಂಟ್ ಮಾಡಿದ್ದೇ ಜಾಸ್ತಿ ಆಯಿತು. ‘ಪತ್ರಿಕೆ’ ಕಡೆ ಗಮನ ಎಲ್ಲಿ ಸಾಲದೆಂಬಂತೆ, ಕುಡಿತ. ಇಷ್ಟಾದ್ರೂ things were doing well. ರವಿ ಬೆಳಗೆರೆ ಬಾಟಮ್ ಐಟಮ್ ಅವನು ಹೇಗೇ ಇರಲಿ: ನೀವೇಕೆ ಅವನನ್ನು ‘ನಾಯಿ’ ಮಾಡ್ತೀರಿ “ಹಾಗೆಲ್ಲ ಮಾತಾಡಬೇಡಿ. ನೀವು ಹಾಗೆ ಮಾತಾಡ ಕೂಡದು. ನನಗೆ ತುಂಬ ಬೇಸರವಾಗುತ್ತೆ ಅಂತ ನೇರವಾಗಿ ಬಾಯಿಬಿಟ್ಟು ಹೇಳಿ ಬಿಡುತ್ತೇನೆ. ಹಿಂದೊಮ್ಮೆ ಯಾರೋ ಅಂದಿದ್ದರು: “ಬಾಸ್, ನೀವು ಪೆಯಿಂಟ್ ಮಾಡಿಸಿ ಒಂದು ಬೋರ್ಡೇ ಹಾಕಿ ಬಿಡಿ ಅಂತ. “ನನ್ನ ಕೈಲಿ ಅದೂ ಆಗುವುದಿಲ್ಲ. ನನ್ನನ್ನು ಹಣ ಕೇಳಬೇಡಿ. ನಾನು ಯಾರಿಗೂ ಸಾಲ ಕೊಡುವುದಿಲ್ಲ. ಶಿಫಾರಸು ಮಾಡಿ ಕೊಡಿಸೋದೂ ಇಲ್ಲ. ನನ್ನ ರೂಢಿ ಏನೂಂದ್ರೆ, ನಾನು ಯಾರಿಗೂ ಶಿಫಾರಸು ಮಾಡಿ, ಸಿನೆಮಾಕ್ಕೆ ಸೇರಿಸುವುದಿಲ್ಲ... ರಾಜಕಾರಣಿಗಳಿಗೆ ರೆಕಮೆಂಡೇಶನ್ ಮಾಡುವುದಿಲ್ಲ ಇತ್ಯಾದಿಗಳ ಪಟ್ಟಿ, ಆಫೀಸಿಗೆ ಬಂದ ಕೂಡ್ಲೆ ಕಾಣುವಂತೆ ಬರೆಸಿ ಹಾಕಿ ಬಿಡಿ ಅಂದವರುಂಟು. ರವಿ ಬೆಳಗೆರೆ ಹಲೋ ಮುಖ್ಯಮಂತ್ರಿಯನ್ನು ದುರ್ಬಲಗೊಳಿಸಿ ವ್ಯವಸ್ಥೆ ಬಲಿಷ್ಠವಾಗಬೇಕು ಎಂದರೆ ಹೇಗೆ ಮೊನ್ನೆ ಸಿಎಂ ಸಿದ್ದರಾಮಯ್ಯನವರನ್ನು ಪದಚ್ಯುತಗೊಳಿಸಿ ಬೇರೊಬ್ಬ ನಾಯಕರನ್ನು ಆ ಜಾಗದಲ್ಲಿ ತಂದು ಕೂರಿಸಬೇಕು ಎಂದು ಕೆಲ ನಾಯಕರು ಹವಾ ಎಬ್ಬಿಸಿದ ರೀತಿ, ಈ ಹವಾ ಬಂದ್ ಆಗುವಂತೆ ಮಾಡಿದ ಸಿದ್ದರಾಮಯ್ಯನವರ ರೀತಿ ಒಂದು ಪ್ರಶ್ನೆಯನ್ನು ಹುಟ್ಟು ಹಾಕಿದೆ. ಅದೆಂದರೆ, ನಾವು ಒಂದು ಕಡೆಯಿಂದ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಾ, ಮತ್ತೊಂದು ಕಡೆಯಿಂದ ಈ ವ್ಯವಸ್ಥೆ ಸರಿಯಿಲ್ಲ ಎಂದು ದೂರುವುದರಲ್ಲಿ ಏನಾದರೂ ಅರ್ಥವಿದೆಯೇ ಎಂಬುದು. ನೀವು ಕರ್ನಾಟಕದ ಇತ್ತೀಚಿನ ರಾಜಕಾರಣವನ್ನು ಗಮನಿಸುತ್ತಾ ಬನ್ನಿ. ಉದ್ದಕ್ಕೂ ಇದೇ ಕೆಲಸವಾಗಿದೆ. ಜಾತಿಯ ಹೆಸರಿನಲ್ಲೋ, ದುಡ್ಡಿನ ಹೆಸರಿನಲ್ಲೋ ಅಥವಾ ಇನ್ಯಾರದೋ ಲಾಭಕ್ಕಾಗಿ ಹಲವರು ದುಡಿಯುತ್ತಾ, ದುಡಿಯುತ್ತಾ ಈ ದುಡಿಮೆಗೇ ಒಂದು ಅರ್ಥವಿಲ್ಲದಂತಾಗಿ ಹೋಗಿದೆ. ಉದಾಹರಣೆಗೆ ವೀರೇಂದ್ರ ಪಾಟೀಲರು ಸಿಎಂ ಆಗಿದ್ದ ಕಾಲದಿಂದಲೇ ಏನೇನು ಆಗುತ್ತಾ ಬಂದಿದೆ ಎಂಬುದನ್ನು ಗಮನಿಸಿ. 1989ರಲ್ಲಿ ನೂರಾ ಎಪ್ಪತ್ತೊಂಬತ್ತರಷ್ಟು ಶಾಸಕರ ದೈತ್ಯ ಬಲದೊಂದಿಗೆ ವೀರೇಂದ್ರ ಪಾಟೀಲ್ ಕರ್ನಾಟಕದ ಮುಖ್ಯಮಂತ್ರಿಯಾದರು. ರವಿ ಬೆಳಗೆರೆ ಮುಖಪುಟ ವರದಿ ಹಿಂದೂ ಡಾನ್ ಛೋಟಾ ರಾಜನ್ ಯಾಕೆ ಭಾರತಕ್ಕೆ ಬಂದಿಳಿದ Not much. ನಿರೀಕ್ಷಿಸಿದ್ದರಿಂದ ಹಾಗೆ ಅನ್ನಿಸಿತಾ ಗೊತ್ತಿಲ್ಲ. ಛೋಟಾ ರಾಜನ್ ಅರೆಸ್ಟ್ ಆದ ಎಂಬ ಸುದ್ದಿ ಬಂದಾಗ ಅಂಥ ಎಗರಿ ಬೀಳುವಂಥ thrill ಆಗಲಿಲ್ಲ. ಅದಕ್ಕೆ ಕಾರಣವೂ ಇಲ್ಲದಿಲ್ಲ. ನಾನು ‘ಡಿ ಕಂಪೆನಿ’ ಪುಸ್ತಕ ಬರೆದದ್ದು 2008ರಲ್ಲಿ. ಅದು ಕೇವಲ ದಾವೂದ್ ಇಬ್ರಾಹಿಂ ಕಸ್ಕರ್‌ನ ಕುರಿತಾದ ಪುಸ್ತಕವಲ್ಲ. ಅಂಥ ಪುಸ್ತಕ ಇನ್ನೇನು ಬರಲಿದೆ. ‘ಡಿ ಕಂಪೆನಿ’ ಬರೆಯುವುದಕ್ಕೆ ಅನೇಕ ವರ್ಷಗಳಿಗೆ ಮುಂಚೆ 1994ರಲ್ಲಿ ನಾನು ‘ಪಾಪಿಗಳ ಲೋಕದಲ್ಲಿ’ ಬರೆದೆ. ಅದರ ಆರಂಭವಾದದ್ದು ನನಗೆ ಕಣ್ಣಿಗೆ ಕಟ್ಟಿದಂತಿದೆ. ಅವತ್ತು ಬೆಂಗಳೂರಿನ ಶಿವಾಜಿನಗರದ ನೆತ್ತಿಯ ಮೇಲೆ ಸಣ್ಣಗೆ ಮಳೆ ಜಿಟಿಯುತ್ತಿತ್ತು. ನನ್ನ ಜೊತೆಗೆ ಮಿತ್ರ ಸಿದ್ದೀಕಿ ಇದ್ದ. ಮೊಬೈಕ್‌ನಲ್ಲಿ ಅವನನ್ನು ಕೂಡಿಸಿಕೊಂಡು ಅದೇ ಶಿವಾಜಿನಗರದ ಮತ್ತೊಂದು ಮೂಲೆಗೆ ಹೋದೆ. ನಾನು ಎಕ್ಸೈಟ್ ಆಗುವಂಥದ್ದೇನೂ ಇರಲಿಲ್ಲ. ಆದರೆ ಒಂದು ಬೃಹದಾಕಾರದ ವ್ಯಕ್ತಿ ಶಿವಾಜಿನಗರದ ಕೋಳಿ ಮಾರುವ ಅಂಗಡಿಯಲ್ಲಿ ಕುಳಿತಿತ್ತು. ರವಿ ಬೆಳಗೆರೆ ರಾಜಕೀಯ ಪಮ್ಮಿ ಡಿಸಿಎಂ ಆಗಲಿ ಅಂತ ಕೃಷ್ಣ ಹೇಳಿದ್ದೇ ತಡ ತಿರುಗಿ ಬಿದ್ದರು ನೋಡಿ ಪಂಚಪಾಂಡವರು ಮೊಟ್ಟ ಮೊದಲ ಬಾರಿ ಕರ್ನಾಟಕದಲ್ಲಿ ದಲಿತರು ಡಿಸಿಎಂ ಆಗುವುದನ್ನು ತಪ್ಪಿಸಿದ ಎಸ್ಸೆಂ ಕೃಷ್ಣ, 2008ರ ಚುನಾವಣೆಯ ನಂತರ ಮೊಟ್ಟ ಮೊದಲ ದಲಿತ ಸಿಎಂ ಅನ್ನು ನೋಡಲು ಕರ್ನಾಟಕ ರೆಡಿಯಾಗಿದ್ದ ಕಾಲದಲ್ಲಿ ಆ ಕನಸಿಗೇ ಕತ್ತರಿ ಹಾಕಿ ಬಿಟ್ಟರು. ಹೇಗೆಂದರೆ, 2008ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆ ಟೈಮಿನಲ್ಲಿ ಕೃಷ್ಣ ತಮ್ಮ ಪಾಡಿಗೆ ಮೌನವಾಗಿದ್ದರೆ ಸಾಕಿತ್ತು. ಆದರೆ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಏಕಾಏಕಿ ಹಳೇ ಮೈಸೂರು ಭಾಗದಲ್ಲಿ ಪ್ರಚಾರಕ್ಕೆ ಧುಮುಕಿ ಬಿಟ್ಟರು. ಹೀಗವರು ಪ್ರಚಾರಕ್ಕೆ ಧುಮುಕಿದ ವಿಧಾನದಿಂದ ದಲಿತ ಸಮುದಾಯದಲ್ಲಿ ಒಂದು ಅನುಮಾನ ಹರಡಿಕೊಂಡಿತು. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಸ್ಸೆಂ ಕೃಷ್ಣ ಸಿಎಂ ಆಗುತ್ತಾರೆಯೇ ವಿನಾ ಮಲ್ಲಿಕಾರ್ಜುನ ಖರ್ಗೆ ಅಲ್ಲ ಅನ್ನುವುದು ಈ ಅನುಮಾನ. ಆರ್.ಟಿ.ವಿಠ್ಠಲಮೂರ್ತಿ ವರದಿ ಸೆಗಣಿ ವಾಸನೆ ಸ್ವಾಮಿ ವಿರುದ್ಧ ನಿಂತ ಗೌರವಾನ್ವಿತರು ಬೇರೊಬ್ಬ ಬ್ರಾಹ್ಮಣ ಸ್ವಾಮೀಜಿಯ ಮೇಲೆ ಇಂತಹುದೇ ಅನಾಚಾರದ ಆರೋಪ ಕೇಳಿಬಂದರೆ ಇದೇ ರಾಘವೇಶ್ವರ ಸ್ವಾಮಿಗಳು ಮತ್ತವರ ಬೆಂಬಲಿಗರ ಪ್ರತಿಕ್ರಿಯೆ ಏನಾಗಿರುತ್ತಿತ್ತು ಎಂಬ ಪ್ರಶ್ನೆಗೂ ಸ್ವಾಮಿಗಳು ಉತ್ತರಿಸಬೇಕಿದೆ. ಸ್ವಾಮಿಗಳ ಮೇಲಿನ ಆಪಾದನೆ, ಅವರ ಅನಾಚಾರದಿಂದ ಹವ್ಯಕ ಸಮಾಜ ಛಿದ್ರಗೊಳ್ಳುವಂತಾಗಿದೆ. ರಾಮಚಂದ್ರಾಪುರ ಮಠದ ಸ್ವಾಮಿಗಳ ಚಾತುರ್ಮಾಸ ವ್ರತಕ್ಕೆ ಹತ್ತಾರು ಸಾವಿರ ಜನ ನಿತ್ಯವೂ ನೆರೆಯುತ್ತಿದ್ದರು. ಈ ವರ್ಷ ಬೆಂಗಳೂರಿನಲ್ಲಿ ದಿನವೂ ನೂರಿನ್ನೂರು ಜನರೂ ಇರುತ್ತಿರಲಿಲ್ಲ. ಹವ್ಯಕ ಸಮಾಜ ಮತ್ತು ಪೀಠದ ಕುರಿತಾಗಿ ಪ್ರೀತಿ, ಕಾಳಜಿ ಇದ್ದದ್ದೇ ಆದರೆ ಇದಕ್ಕೆಲ್ಲ ಕಾರಣರಾಗುತ್ತಿರುವ ರಾಘವೇಶ್ವರರು ಪೀಠ ತೊರೆಯಬೇಕಿತ್ತು. ಆದರೆ ತಮ್ಮ ವೈಯಕ್ತಿಕವಾದ ಅನಾಚಾರವನ್ನು ಮುಚ್ಚಿಹಾಕಲು ಮಠದ ಪ್ರಭಾವ ಮತ್ತು ಪೀಠದ ಶಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವರದಿಗಾರ ವರದಿ ಮಂಗಳೂರಿನಲ್ಲಿ ಕೊಲೆಯಾದವನು ರವಿ ಪೂಜಾರಿ ಶಿಷ್ಯ! ವಿಕ್ಕಿ ಬೋಳಾರ್ ಮಟಾಷ್! ಬಿಜೈ ರಾಜನ ಕೊಲೆ ಕೇಸಿನಿಂದ ಕೈ ತೊಳೆದುಕೊಂಡು ಮಗುಮ್ಮಾಗಿ ಉಳಿದಿದ್ದ ವಿಕ್ಕಿ ಮುಗಿದು ಹೋಗಿದ್ದಾನೆ. ಪಾತಕ ಲೋಕದ ನಂಟು ಮುಗಿಸಿಕೊಂಡವನಂತಿದ್ದ ವಿಕ್ಕಿಯ ಮೇಲೆ ತೂಗುಗತ್ತಿ ಮೊದಲಿನಿಂದಲೂ ತೂಗಾಡುತ್ತಿತ್ತು. ಅದರ ರಿಸಲ್ಟು ಮೊನ್ನೆ ಸೋಮವಾರದ ರಾತ್ರಿ ಖಾತ್ರಿಯಾಯಿತು. ಮೇಲ್ನೋಟಕ್ಕೆ ನೋಡಿದರೆ ಇದು ರವಿ ಪೂಜಾರಿ ಮತ್ತು ವಿಕ್ಕಿ ಶೆಟ್ಟಿ ಗ್ಯಾಂಗುಗಳ ನಡುವಿನ ರಕ್ತಚರಿತ್ರೆಯಂತೆ ಕಂಡರೂ ಇದರಲ್ಲಿ ವೈಯಕ್ತಿಕವಾದ ದುಶ್ಮನಿಯೇ ಪಾತಕಿಯೊಬ್ಬನ ಮರಣ ಮೃದಂಗ ಭಾರಿಸಿದೆ. ಇತ್ತ ವಿಕ್ರಮನನ್ನು ಕೊಂದ ಸೈಕೋ ವಿಕ್ಕಿ ಯಾನೆ ರವಿಚಂದ್ರ ಪೂಜಾರಿ ಮತ್ತಿತರ ಪಾತಕಿಗಳು ಮಂಗಳೂರು ಸಿ.ಸಿ.ಬಿ. ಪೊಲೀಸರಿಗೆ ಶರಣಾಗಿ ಸದ್ಯದ ಮಟ್ಟಿಗೆ ಸೇಫ್ ಆಗಿದ್ದಾರೆ. ವಸಂತ್ ಗಿಳಿಯಾರ್ ವರದಿ ವಿನಯಕುಮಾರ್ ಸೊರಕೆ ಕಾಟಕ್ಕೆ ಬಲಿ ಮಹಾಬಲ ಶೆಟ್ಟಿ! ತಾವು ಸಾಯುವ ಮೊದಲು ಡೆತ್ ನೋಟ್ ಬರೆದಿಟ್ಟ ಮಹಾಬಲ ಶೆಟ್ಟರು “ನನ್ನ ಸಾವಿಗೆ ವಿಶ್ವನಾಥ್ ಸನೀಲ್, ಕೃಷ್ಣಪ್ಪ ಪೂಜಾರಿ, ಸಂತೋಷ್ ಕೋಟ್ಯಾನ್, ಮಹೇಶ್ ಕೋಟ್ಯಾನ್ ಹಾಗೂ ಮಂತ್ರಿ ವಿನಯ್‌ಕುಮಾರ್ ಸೊರಕೆಯವರು ಕಾರಣ. ನನ್ನ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯವರು ದಬ್ಬಾಳಿಕೆ ನಡೆಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಗಳೂ ನನ್ನ ಮನವಿಗೆ ಸ್ಪಂದಿಸಲಿಲ್ಲ ಎಂಬುದಾಗಿ ಬರೆದಿದ್ದಾರೆ. ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ ಈ ಡೆತ್ ನೋಟ್ ಆಧಾರದಲ್ಲಿ ಮಹಾಬಲ ಶೆಟ್ಟರ ಮನೆಯವರು ಆ ನಾಲ್ವರ ಮೇಲೆ ದೂರನ್ನು ನೀಡಿದ್ದರೂ ಇದುವರೆಗೂ ಬ್ರಹ್ಮಾವರ ಪೊಲೀಸರು ಅವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿಲ್ಲ. ಮಹಾಬಲ ಶೆಟ್ಟರ ಮನೆಯವರ ಯಾವುದೇ ಮನವಿಗೂ ಪೊಲೀಸರು ಸ್ಪಂದಿಸದೆ ಏಕಮುಖವಾದ ನಿಲುವುಗಳನ್ನು ತಳೆಯುತ್ತಿದ್ದಾರೆ. ವಸಂತ್ ಗಿಳಿಯಾರ್ ವರದಿ ಗಬ್ಬು ವೆಂಕಟೇಶನನ್ನು ಭಾನುಪ್ರಿಯಾಳ ತಮ್ಮಂದಿರೇ ಕೊಂದರು! ಗಬ್ಬು ವೆಂಕಟೇಶ ಚೆನ್ನೈನಿಂದ ಬೆಂಗಳೂರಿಗೆ ಬಂದು ಹೋಗುತ್ತಾನೆ ಎಂಬ ಮಾಹಿತಿ ಆಡುಗೋಡಿ ಪೊಲೀಸರ ಕಿವಿಗೂ ಬಿದ್ದಿತ್ತು. ಆದರೆ ಮಾಹಿತಿ ಪಕ್ಕಾ ಇರಲಿಲ್ಲ. ಮೊನ್ನೆ ಗಣೇಶ ಹಬ್ಬದ ಟೈಮಲ್ಲಿ ಗಬ್ಬು ಸತ್ಯನಗರದ ಮುರುಗನ್ ಜೊತೆಗೆ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ್ದ. ಇದು ಆಡುಗೋಡಿಯ ಸ್ಲಂ ಹುಡುಗರಿಗೆ ಗೊತ್ತಾಗಿದೆ. ಕೂಡಲೇ ಭಾನುಪ್ರಿಯಾಳ ತಮ್ಮಂದಿರಾದ ಸೂರ್ಯ ಮತ್ತು ನವೀನ್ ಆಕ್ಟಿವ್ ಆಗಿದ್ದಾರೆ. ತಮ್ಮ ಒಂದಷ್ಟು ಹುಡುಗರನ್ನು ಸತ್ಯನಗರಕ್ಕೆ ಕಳಿಸಿ ಗಬ್ಬುನ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾರೆ. ಮೊನ್ನೆ ಅಕ್ಟೋಬರ್ ಇಪ್ಪತ್ತನೇ ತಾರೀಖು ಮಂಗಳವಾರ ಸತ್ಯನಗರದಿಂದ ಮುರುಗನನ್ನು ಮಾತಾಡಿಸಿಕೊಂಡು ಗಬ್ಬು ಬೈಕಲ್ಲಿ ಹೊರಟಿದ್ದಾನೆ. ಹಿಂದಿನಿಂದ ಸೂರ್ಯ, ನವೀನ್ ಮತ್ತು ಇವರ ಜೊತೆಗೆ ಕುಮರೇಶ ಮತ್ತು ಸತೀಶ ಫಾಲೋ ಮಾಡಿದ್ದಾರೆ. ಅಶ್ವಿನ್‌ಕುಮಾರ್ ನೇವಿ ಕಾಲಂ ಕತ್ತಲನ್ನು ಹಾಗೇ ಬಿಟ್ಟರೆ ನಂಜಾಗುತ್ತದೆ ಕತೆ-ಭಾಗ- ೧ ಆ ಕಟ್ಟಡದ ತುಂಬ ಬೆಳಕೇ ಇತ್ತು, ಒಂದು ಮೂಲೆಯಲ್ಲಿ ಮಾತ್ರ ಕತ್ತಲು. ನಗರವನ್ನು ಬೆಳಕು ಹೇಗೆ ನುಂಗುತ್ತಿತ್ತೆಂದರೆ ದೂರದೂರದಿಂದ ಸೊಯ್ಯನೆ ಬರುವ ಅಸಂಖ್ಯ ವಾಹನಗಳ ಬೆಳಕುಗಳೂ ಈ ಬೆಳಕಿನ ಪ್ರವಾಹದೊಳಗೆ ಒಂದಾಗಿ ಯಾವುದೋ ಬೆಳಕಿನ ಸಾಗರವನ್ನು ಸೇರುವ ತವಕದಲ್ಲಿ ಹೊರಟಂತೆ. ದಾರಿ ಮಧ್ಯದಲ್ಲಿ ಏನಾದರೂ ಕೊಂಚ ಕತ್ತಲೆ ಸಿಕ್ಕರೆ ಅದನ್ನೂ ಮುಗಿಸಿ ಕಳೆಯುವ ಹೋರಾಟದಲ್ಲಿ ಅವೆಲ್ಲಾ ತೊಡಗಿಕೊಂಡಂತಿತ್ತು. ಅಂಥ ಬೆಳಕಿನ ಮಧ್ಯೆ ಒಂದೇ ಒಂದು ಬರಡು ದ್ವೀಪದಂತೆ ಆ ದೀಪವೇ ಇಲ್ಲದ ಒಂದು ಮೂಲೆ. ಬೆಂಗಳೂರಿನ ರಿಚ್‌ಮಂಡ್ ಫ್ಲೈಓವರ್ ಇಳಿದು ಡಬಲ್ ರೋಡ್ ಬರುವಾಗ ಬಲ ಪಕ್ಕದ ಇರುವ ಸಾಕಷ್ಟು ಹಳೆಯ ಕಟ್ಟಡ ಅದು. ಆ ಕಟ್ಟಡ ಅಷ್ಟು ಹೊತ್ತಿಗೆ ಅಂದರೆ ರಾತ್ರಿ ಹನ್ನೊಂದರ ಹೊತ್ತಿಗೆ ಸಹಜವಾಗಿ ನಿರ್ಜನವಾಗಿತ್ತು. ಇರುವ ಬೆಳಕು ಸಾಲದೆಂಬಂತೆ ಆ ದಿವಸ ಬೆಳಕಿನ ಪುಟ್ಟ ಪುಟ್ಟ ಬಲ್ಬುಗಳ ದೊಡ್ಡ ಸರವನ್ನೇ ಇಡೀ ಕಟ್ಟಡಕ್ಕೆ ತೂಗು ಹಾಕಿದ್ದರು. ಆಗಷ್ಟೇ ಎಲ್ಲಾ ಸಂಭ್ರಮಗಳನ್ನೂ ಪೂರೈಸಿ, ಕೈ ತೊಳೆದೆದ್ದ ಸುಸ್ತಿನಲ್ಲೇಂಬಂತೆ ಕಟ್ಟಡ ಸುಮ್ಮನಿತ್ತು. ನೇವಿ ವರದಿ ಕೂಡ್ಲಿಗಿ ಶಾಸಕ ನಾಗೇಂದ್ರಗೆ ಶ್ರೀರಾಮುಲು ಟಾಂಗ್ ಕೊಡ್ತಾರಾ ಹಿಂದೊಮ್ಮೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಟಿಕೆಟ್ಟನ್ನು ನಾಗೇಂದ್ರರಿಗೆ ತಪ್ಪಿಸಿ ರಾಮುಲು ಪಡೆದಿದ್ದರಲ್ಲ ಅಂದಿನಿಂದ ರಾಮುಲು ಬಳಗದ ಮೇಲೆ ನಾಗೇಂದ್ರರಿಗೆ ವಿಶ್ವಾಸ ಹೊರಟು ಹೋಗಿತ್ತು. ವ್ಯವಹಾರಿಕವಾಗಿ ಹಾಗೂ ಸ್ನೇಹಪೂರಕವಾಗಿ ಮಾತ್ರ ರೆಡ್ಡಿ ಬಳಗದ ಜೊತೆ ಇರುತ್ತಿದ್ದ ನಾಗೇಂದ್ರ ರಾಜಕೀಯವಾಗಿ ವಿಭಿನ್ನ ನಿಲುವುಗಳನ್ನು ತಾಳುತ್ತಾ ನಡೆದರು. ಯಡಿಯೂರಪ್ಪಗೆ ತೊಡೆ ತಟ್ಟಿ ರಾಮುಲು ಬಿಎಸ್ಸಾರ್ ಪಕ್ಷ ಕಟ್ಟಿ ಪ್ರಚಾರ ಆರಂಭಿಸಿದ್ದರೆ ನಾಗೇಂದ್ರ ಕ್ಯಾರೇ ಮಾಡಲಿಲ್ಲ. ಬದಲಾಗಿ ತಾನೂ ಕಾಂಗ್ರೆಸ್ ಸೇರಲು ಯತ್ನಿಸುತ್ತಿದ್ದರು. ಕೊನೆಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಕಷ್ಟವೆನಿಸಿದಾಗ ಪಕ್ಷೇತರರಾಗಿ ಸ್ಪರ್ಧಿಸಿದರೇ ವಿನಃ ರಾಮುಲುರ ಬಿಎಸ್ಸಾರ್ ಪಕ್ಷ ಸೇರಲಿಲ್ಲ. ಸತೀಶ್ ಬಿಲ್ಲಾಡಿ ವರದಿ ಭೀಮಾತೀರದ ಹಂತಕ ಚಂದಪ್ಪ ಹರಿಜನನ ಕುಟುಂಬದ ಸ್ಥಿತಿ ಹೇಗಿದೆ ಗೊತ್ತೇ ಭೀಮಾತೀರದ ಹಂತಕ ಚಂದಪ್ಪ ಹರಿಜನನ ಮನೆತನ ಈಗ ಅಕ್ಷರಶ: ಸರ್ವನಾಶದ ಅಂಚಿಗೆ ಬಂದು ಕುಳಿತಿದೆ. 2007ರಲ್ಲಿ ಚಂದಪ್ಪ ಹರಿಜನನ ಅಳಿಯನಾದ, ಮುತ್ತು ಮಾಸ್ತರ್‌ನನ್ನು ಆತನ ಕಾರಿನಲ್ಲಿಯೇ ಕೊಂದುಹಾಕಿದ್ದು ಬಾಗಪ್ಪ ಹರಿಜನನ ಟೀಮು. ಈಗ್ಗೆ ಮೂರು ವರ್ಷದ ಹಿಂದೆ ಚಂದಪ್ಪನ ತಮ್ಮ ಬಸವರಾಜ ಹರಿಜನನನ್ನು ಅದೇ ಬಾಗಪ್ಪ ಕತ್ತರಿಸಿ ಹಾಕಿದ. ಅದಕ್ಕಿದ್ದ ಕಾರಣ ಆತನ ಅಳಿಯಂದಿರ ಡಬಲ್ ಮರ್ಡರ್ ಕೇಸಿಗೆ ಪ್ರತೀಕಾರ ಅನ್ನಲಾಯ್ತು. ಈಗ ಈ ಸಂಸಾರದ ಪಳೆಯುಳಿಕೆ ಅಂತ ಉಳಿದಿರುವುದು ಪುರಾತನ ಪೈಲ್ವಾನ್ ಯಲ್ಲಪ್ಪ ಹರಿಜನ ಮಾತ್ರ. ಸದ್ಯಕ್ಕೆ ಈ ಯಲ್ಲಪ್ಪನ ಬೆನ್ನಿಗೆ ಯಾರೂ ಇರದ ಕಾರಣ ತನ್ನ ಬೊಮ್ಮನಹಳ್ಳಿ ಗ್ರಾಮದ ಮನೆಯ ಮೂಲೆಯ ಪಾಲಾಗಿದ್ದಾನೆ. ವಿಪರೀತ ಸಕ್ಕರೆ ಖಾಯಿಲೆಯಿಂದ ಆತನ ಕಣ್ಣು ಸಹ ಸರಿಯಾಗಿ ಕಾಣಿಸುತ್ತಿಲ್ಲ. ವಾರಕ್ಕೊಮ್ಮೆ ಅಲಮೇಲದ ಸಂತೆಗೆ ಹೋಗುವುದು ಬಿಟ್ಟರೆ ಆತನ ಕೈಯಿಂದ ಈಗ ಏನೂ ಆಗುತ್ತಿಲ್ಲ. ವರದಿಗಾರ ಅಂಕಣ : ಆಕಾಶಬುಟ್ಟಿ ವಾಸ್ಕೋಡಿಗಾಮ-ಸಿನಿಮಾಗೆ ಸಂಬಂಧಿಸಿದ ನೆನಪುಗಳು ಮೂರು ವರ್ಷಗಳನ್ನು ಇನ್ವೆಸ್ಟ್ ಮಾಡಿದ್ವಿ ವಾಸ್ಕೋಡಿಗಾಮ ಸಿನಿಮಾ ಮಾಡಲು. ಅದೇ ಮೂರು ವರ್ಷಗಳಲ್ಲಿ ಸಿನಿಮಾದ ಹೀರೋ ಹೀರೋಯಿನ್ನುಗಳು ಮೂರು ಸಿನಿಮಾ ಮಾಡಿ ನೇಮು ಫೇಮು ಮನಿ ಸಂಪಾದಿಸಿರುತ್ತಾರೆ. ಬಟ್, ಡೈರಕ್ಟರ್ ಅನ್ನಿಸಿಕೊಂಡವನು ತನ್ನ ಸಿನಿಮಾವನ್ನು ಮಗುವಿನ ಥರ ಜೋಪಾನ ಮಾಡಿ ರೀಲೀಸ್ ಮಾಡಿಸುವುದಲ್ಲದೆ ಅದನ್ನು ‘ಓಡಿಸುವುದು’ ಸಹ ಅವನ ಮಾರ್ಕೆಟಿಂಗ್ ಸ್ಟ್ರಾಟರ್ಜಿಗಳ ಮೇಲೆ ನಿಂತಿದೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಸಿನಿಮಾ ಶೂಟ್ ಮಾಡಿಕೊಂಡು ರಿಲೀಸ್‌ಗೆ ರೆಡಿಯಾದಾಗ ನಿಜವಾದ ಚಾಲೆಂಜ್ ಎದುರಾಗುತ್ತದೆ ಸ್ಯಾಂಡಲ್‌ವುಡ್‌ನಲ್ಲಿ. ಸರಿ, ಡಿಸ್ಟ್ರಿಬ್ಯೂಟರ್ ನೂರು ಥಿಯೇಟರ್‌ನಲ್ಲಿ ರಿಲೀಸ್ ಮಾಡಿಸಿಕೊಡುತ್ತಾರೆ ಎಂದುಕೊಳ್ಳಿ. ಈಗ ನಿಮ್ಮ ಎದುರಿಗಿರುವುದು ಒಂದೇ ವಾರದ ಗಡುವು. ಆ ಒಂದು ವಾರದಲ್ಲಿ ನೀವು ನಿಮ್ಮ ಸಿನಿಮಾ ‘ಎದ್ದೇಳಬೇಕು’, ಎದ್ದು ‘ಓಡಬೇಕು’. ಹಾಗಾಗದೆ ‘ಬಿದ್ದರೆ’ ‘ನೆಲ ಕಚ್ಚಿದರೆ’ ನೋಡೋಣ.... ಎಚ್.ಡಿ. ಸುನೀತಾ ಅಂಕಣ : ನೂರು ಮುಖ ಸಾವಿರ ದನಿ ಮಾ ಹಿರಣ್ಣಯ್ಯ ನಿಜಕ್ಕೂ ತಂದೆಗೆ ತಕ್ಕ ಮಗ! ಬೆಂಗಳೂರು ನಗರದ ಹಾಲಿ ಬಿ.ಎಂ.ಟಿ.ಸಿ. ನಿಲ್ದಾಣ ಇರುವ ಜಾಗಕ್ಕೆ ಒಂದು ಕಾಲದಲ್ಲಿ “ಸುಭಾಷ್ ಮೈದಾನ ಎಂಬ ಹೆಸರಿತ್ತು. ಅಲ್ಲಿ ಯಾವಾಗಲೂ ತರಹೇವಾರಿ ಕೈಗಾರಿಕೆ, ಸಾಂಸ್ಕೃತಿಕ, ವಾಣಿಜ್ಯ ಹೀಗೆ ವಸ್ತುಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿತ್ತು. ಅಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಒಂದು ರಂಗಮಂದಿರ ಸಹ ಇತ್ತು. ಆ ರಂಗಮಂದಿರದಲ್ಲಿ ನಿರಂತರ ನಾಟಕ ಪ್ರದರ್ಶನಗಳಿರುತ್ತಿದ್ದವು. ಕೆಲವು ನಾಟಕಗಳು ವಾರಗಟ್ಟಲೆ, ತಿಂಗಳುಗಟ್ಟಲೆ, ಅಷ್ಟೇ ಅಲ್ಲ, ವರ್ಷಗಟ್ಟಲೆ ನಡೆಯುತ್ತಿದ್ದವು. ಆ ನಾಟಕಗಳು ಯಾವುವು ಗೊತ್ತೇ ಲಂಚಾವತಾರ, ಭ್ರಷ್ಟಾಚಾರ, ಕಪಿಮುಷ್ಠಿ, ನಡುಬೀದಿ ನಾರಾಯಣ, ಅನಾಚಾರ ಇತ್ಯಾದಿ. ಈ ನಾಟಕಗಳು ಯಾರವು ಗೊತ್ತೇ ಕಳೆದ ವಾರದ ಅಂಕಣದ ಗಣ್ಯ, ರಂಗಭೂಮಿಯ ಕಲ್ಚರ‍್ಡ್ ಕಮೆಡಿಯನ್ ಶ್ರೀ ಕೆ.ಹಿರಣ್ಣಯ್ಯನವರ ಏಕೈಕ ಸುಪುತ್ರ ಮಾಸ್ಟರ್ ಹಿರಣ್ಣಯ್ಯ ಅವರವು. ಎಂ.ವಿ. ರೇವಣಸಿದ್ದಯ್ಯ