Hi Bangalore


Buy Now @ ₹ 15.00 Preview
ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೪೩, ಜುಲೈ ೨೪, ೨೦೧೪ ಬೆಲೆ : ೧೫ ರು ಮುಖಪುಟ ಲೇಖನ ಮೋಜು ಮಸ್ತಿ ಕುಡಿತ ಡಾನ್ಸು ರೇಪು! ನೋಡ್ರಪ್ಪೋ ಬೆಂಗಳೂರಿನ ನೈಟ್ ಲೈಫ್ ನನ್ನ ಪಕ್ಕದಲ್ಲಿ ಕುಳಿತಿದ್ದ ನಾಸಿರ್ ಹೈದರ್ ನನ್ನ ಎದೆ ಭಾಗವನ್ನು ಮುಟ್ಟಿ ತೊಂದರೆ ಕೊಡಲಾರಂಭಿಸಿದ. ಇದನ್ನು ವಿರೋಧಿಸಿದಾಗ ತಾವು ಪೊಲೀಸರೆಂದು ಹೇಳಿಕೊಂಡರು. ಆನಂತರ ಆತ ನನ್ನ ಒಳ ಉಡುಪು ತೆಗೆದ. ತನ್ನೊಂದಿಗೆ ಸಹಕರಿಸಿದರೆ ಬಿಟ್ಟು ಕಳುಹಿಸುವುದಾಗಿ ಬೆದರಿಸಿದ. ನಗರದಲ್ಲಿ ಗಂಟೆಗಟ್ಟಲೆ ಸುತ್ತಾಡಿಸಿದರು. ಕೊನೆಗೆ ಕಾಕ್ಸ್ ಟೌನ್ ರೈಲ್ವೆ ಟ್ರ್ಯಾಕ್ ಬಳಿ ನಿಲ್ಲಿಸಿದರು. ಕಾರಿನಿಂದ ಇಳಿದ ಮೂವರು ನನ್ನ ಗೆಳೆಯನ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ ಕೂಗದಂತೆ ಎಚ್ಚರಿಕೆ ಕೊಟ್ಟರು. ಆ ಸಮಯದಲ್ಲಿ ನಾಸಿರ್ ನನ್ನ ಜೊತೆಯಲ್ಲೇ ಕುಳಿತಿದ್ದ. ಆತನ ಸಹಚರರು ಹೋದ ತಕ್ಷಣವೇ ನನಗೆ ಲೈಂಗಿಕ ಹಿಂಸೆ ನೀಡಿದ. ಆತ ಎಲ್ಲಾ ರೀತಿಯಿಂದಲೂ ತೃಪ್ತಿ ಪಡೆದ ನಂತರ ಆತನ ಸಹಚರರು ಕಾರಿನ ಬಳಿ ಬಂದರು. ನಮ್ಮ ಕಾರಿನಲ್ಲೇ ಅಲ್ಲಿಂದ ಹರಡುವಂತೆ ಹೇಳಿದರು. ಎಂಬುದಾಗಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಯಜ್ಞಾ ದೂರು ನೀಡಿದ್ದಾರೆ. ಸುನೀಲ್ ಹೆಗ್ಗರವಳ್ಳಿ ಖಾಸ್‌ಬಾತ್ ಒಂದು ಮಾತು ಹೇಳದ ನಡೆದು ಹೋದ ನನ್ನ ಮುದ್ದು ಮಗಳು ಹುಬ್ಬಳ್ಳಿಯ ವೈದ್ಯರು ತಕ್ಷಣ ಕೀರ್ತಿಯನ್ನು ವೆಂಟಿಲೇಟರ್‌ಗೆ ಹಾಕಿದ್ದಾರೆ. ಆಗಲೇ ಕೀರ್ತಿಗೆ ಮಾತು ನಿಂತು ಹೋಗಿದೆ. ಅವಳು ಮತ್ತೆ ಮಾತೇ ಆಡಲಿಲ್ಲ. ಹುಬ್ಬಳ್ಳಿಗೆ ರವಿ ತಲುಪಿ ಕೊಂಡಾಗ ಕೀರ್ತಿಗೆ ಇನ್ನೂ ಜೀವವಿತ್ತು. ಆದರೆ ಮಾತಿರಲಿಲ್ಲ. ಸುಮಾರು ಎರಡು ಗಂಟೆ ಹೊತ್ತಿಗೆ ಕೀರ್ತಿ ಉಸಿರು ಚೆಲ್ಲಿ ದ್ದಾಳೆ. ಅಷ್ಟೆ. ಅವಳ ನೌಕರಿ, ಅವಳ ದಾಂಪತ್ಯ, ಅವಳ ಖುಷಿ, ಅವಳ ಕೀರ್ತಿ ರವಿತೇಜ, ಅವಳಿಗೆ ನನ್ನ ಮೇಲಿದ್ದ ಪ್ರೀತಿ, ಅವಳು ಕೊಂಡ ಮನೆ-ಉಹುಂ, ಯಾವುದೂ ಕೀರ್ತಿಯನ್ನು ತಡೆಯಲಿಲ್ಲ. ಈಗಿದ್ದ ಜೀವ ಈಗಿಲ್ಲ. ಹದ್ದು ಎಲ್ಲಿಂದಲೋ ಎರಗಿ ಬಂದು ಗುಬ್ಬಿ ಮರಿಯೊಂದನ್ನು ಛಕ್ಕಂತ ಎತ್ತಿಕೊಂಡು ಹೋಗಿ ಬಿಡುತ್ತ ದಲ್ಲಾ ಹಾಗೆ ಸಾವು ಬಂದು ಕೀರ್ತಿಯನ್ನು ಒಂದು ದಿನಕ್ಕಿಂತ ಹೆಚ್ಚು ಬದುಕಲು ಬಿಡಲಿಲ್ಲ. ಆರ್.ಬಿ ಹಲೋ ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಾದರೂ ಎಲ್ಲಿದೆ ವಿಧಾನಪರಿಷತ್ ಚುನಾವಣೆಯ ಟಿಕೆಟ್ ಬೇಕು ಎಂದರೆ ಒಬ್ಬೊಬ್ಬ ಶಾಸಕರಿಗೂ ಒಂದೊಂದು ಕೋಟಿ ರುಪಾಯಿಗಳನ್ನು ಕೊಡುವ ಸ್ಥಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದು ನಿಜಕ್ಕೂ ಸ್ಫೋಟಕ ಸುದ್ದಿಯೇ. ಒಂದೆರಡು ದಿನಗಳ ಕಾಲ ಎಲ್ಲ ಕಡೆಯೂ ಈ ಕುರಿತು ಚರ್ಚೆ ನಡೆಯಿತು. ಆಮೇಲೆ ಯಾವ ಪಕ್ಷದವರೂ ಈ ಕುರಿತು ಚಕಾರ ಎತ್ತಲು ಹೋಗಲಿಲ್ಲ. ಯಾಕೆಂದರೆ ರಾಜಕೀಯ ವ್ಯವಸ್ಥೆ ಯಾವ ರೀತಿ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಕಾಂಗ್ರೆಸ್‌ನಂತಹ ಭ್ರಷ್ಟ ಪಕ್ಷ ಮತ್ತೊಂದಿಲ್ಲ. ರವಿ ಬೆಳಗೆರೆ ಬಾಟಮ್ ಐಟಮ್ ದೇವರು ಕೊಡುವ ಬೋನಸ್ಸಿಗೆ ಕಾಯುವುದು ಮತ್ತು ಸಾವನ್ನು ಮುಂದೂಡುವುದು ‘ವಯಸ್ಸು ಐವತ್ತಾಯಿತಾ ಹಾಗಾದರೆ ನಿಮ್ಮ ಮುಂದಿನ ಜೀವನ ಆ ದೇವರು ಕೊಟ್ಟ ಬೋನಸ್ ಅಂದುಕೊಳ್ಳಿ!’ -ಹಾಗೆನ್ನುತ್ತಾ ನಮ್ಮೊಳಗೆ ಸಾವಿನ ಭಯ ಹುಟ್ಟಿಸುವ ಗೆಳೆಯರಿದ್ದಾರೆ. ಅದಕ್ಕೆ ತಕ್ಕಂತೆ ಐವತ್ತೆರಡಕ್ಕೆ ತೀರಿಕೊಳ್ಳುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗಿ, ಇನ್ನೇನು ನಾಳೆ ನಾಡಿದ್ದರಲ್ಲಿ ನಾನು ಕೂಡಾ ಗೋಡೆ ಮೇಲಿನ ಫೊಟೋ ಆಗುತ್ತೇನಾ ಎಂಬ ಭೀತಿ ಕೆಲವರನ್ನು ಕಾಡುವುದೂ ಉಂಟು. ಅಂಥವರು ದೇವರು ನೀಡುವ ಬೋನಸ್ ಸಲುವಾಗಿ ಇನ್ನಿಲ್ಲದಂತೆ ಸರ್ಕಸ್ ಮಾಡುತ್ತಾರೆ. ಯೋಗ, ಧ್ಯಾನ ಅಂದರೇನು ಎಂದು ಗೊತ್ತಿಲ್ಲದವರು ಕೂಡಾ ಬೆಳಗಾನ ಎದ್ದು ಸೂರ್ಯ ನಮಸ್ಕಾರ ಮಾಡುವುದಕ್ಕೆ ಶುರು ಹಚ್ಚಿಕೊಳ್ಳುತ್ತಾರೆ. ರವೀ ವರದಿ ಸ್ಟ್ರೈಟ್ ಫೈಟ್ ಅಂಬಿಗೆ ಸೈಟ್ ಯಾವ ಲೆಕ್ಕ ಮಂಡ್ಯದ ರಾಜಕೀಯದಂಗಳದಲ್ಲೀಗ ವಸತಿ ಸಚಿವ ಅಂಬಿಯದ್ದೇ ಸುದ್ದಿ. ಅಂಬರೀಶ್‌ರ ಜಾಯಮಾನವೇ ಅಂತಹದ್ದು. ನೇರ ನಡೆ, ನೇರ ನುಡಿ, ಒಂದರ್ಥದಲ್ಲಿ ಯಾವುದಕ್ಕೂ ಡೋಂಟ್‌ಕೇರ್ ಅನ್ನದ ಮನೋಭಾವ. ವಿರೋಧಿಗಳೊಂದಿಗೂ ಅಷ್ಟೇ ಕದ್ದು ಮುಚ್ಚಿ ಅವರು ಯುದ್ಧ ಮಾಡುವುದೇ ಇಲ್ಲ. ಅವರದೇನಿದ್ದರೂ ಸ್ಟ್ರೈಟ್‌ಫೈಟ್. ಅಭಿನಯದ ಬದುಕಿನಲ್ಲಾಗಲೀ, ರಾಜಕಾರಣದಲ್ಲಾಗಲೀ ಅಂಬರೀಶ್ ಎಲ್ಲೂ, ಯಾವತ್ತೂ ಏನನ್ನೂ ಮುಚ್ಚಿಟ್ಟವರಲ್ಲ್ಲ. ಅವರ ರಾಜಕೀಯ ಬದುಕೇ ತೆರೆದ ಪುಸ್ತಕ. ಅಭಿಮಾನಿಗಳನ್ನು ಅಷ್ಟೇ ಅಭಿಮಾನದಿಂದ ಪ್ರೀತಿಸುವ ಅವರು, ತಲೆ ಚಿಟ್ಟು ಹಿಡಿದಾಗ ಮನೆಯಂಗಳದಿಂದಲೇ ಮುಚ್ಚುಮರೆ ಇಲ್ಲದೆ ಹಚಾ ಅಂದುಬಿಡುತ್ತಾರೆ ಲಕ್ಷ್ಮೀಸಾಗರ ಸ್ವಾಮಿಗೌಡ ವರದಿ ಕಾಂಗ್ರೆಸ್ಸಿಗರ ಪಾಲಿಗೆ ದೇಶಪಾಂಡೆಯೇ ಶನಿ! ಮಗನ ಸೋಲಿನ ಹತಾಶೆಯಲ್ಲಿರುವ ಸಚಿವ ಆರ್.ವಿ.ದೇಶಪಾಂಡೆಯವರ ವರ್ತನೆಯಿಂದಾಗಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಅಸಮಾಧಾನದ ಅಲೆ ಸ್ಫೋಟಗೊಳ್ಳುವ ಹಂತ ತಲುಪಿದೆ. ಕಾಂಗ್ರೆಸ್ ಮುಖಂಡರು, ಶಾಸಕರು, ಸಚಿವರ ವಿರುದ್ಧ ತಿರುಗಿ ಬೀಳುವ ಸನ್ನಾಹದಲ್ಲಿದ್ದಾರೆ. ದೇಶಪಾಂಡೆ ಸಾಹೇಬರು ಕಾಂಗ್ರೆಸ್ಸಿಗರಿಗಿಂತ ವಿಪಕ್ಷದವರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರುವುದು ಕಾಂಗ್ರೆಸ್ಸಿಗರನ್ನು ಕೆರಳಿಸಿದೆ. ದೇಶಪಾಂಡೆ ಸಚಿವರಾದ ನಂತರ ಜಿಲ್ಲೆಯ ಬಿಜೆಪಿ ಮುಖಂಡರನ್ನೇ ಹೆಚ್ಚು ಹೆಚ್ಚು ಒಲಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆಂಬ ಆರೋಪವಿತ್ತು. ಮಗನನ್ನು ಲೋಕಸಭಾ ಚುನಾವಣೆಯ ಕಣಕ್ಕಿಳಿಸುವ ಅಂದಾಜಿನಲ್ಲಿ ದೇಶಪಾಂಡೆ ಕಾಂಗ್ರೆಸ್ ವಿರೋಧಿಗಳ ಸಖ್ಯದಲ್ಲಿದ್ದಾರೆಂಬ ಮಾತೂ ಕೇಳಿಬರುತ್ತಿತ್ತು. ವರದಿಗಾರ ವರದಿ ಯಡ್ಡಿಯ ಹೊಕ್ಕುಳ ಬಳ್ಳಿಗೇ ಇಕ್ಕಳ ಇಟ್ಟ ಸಿದ್ದು! ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂಬತ್ತು ಸೀಟುಗಳನ್ನು ಮಾತ್ರ ಗೆಲ್ಲಲು ಮೋದಿ ಅಲೆ ಮಾತ್ರವಲ್ಲ, ಯಡಿಯೂರಪ್ಪ ಮತ್ತು ಶ್ರೀರಾಮುಲು ವಾಪಸು ಬಿಜೆಪಿ ಸೇರಿದ್ದು ಮುಖ್ಯ ಕಾರಣ ಎಂದು ಸಿದ್ದರಾಮಯ್ಯ ಹೇಳತೊಡಗಿದ್ದಾರೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಿಬಿಐ ಅನ್ನು ಬಳಸಿಕೊಂಡು ಯಡಿಯೂರಪ್ಪನವರನ್ನು ಪಕ್ಷದಿಂದ ಹೊರಗೆ ಹಾಕುವ ಕೆಲಸ ಮಾಡಲಾಯಿತು. ಅವರು ಕೆಜೆಪಿ ಕಟ್ಟುವಂತೆ ನೋಡಿಕೊಳ್ಳಲಾಯಿತು. ಒಂದು ವೇಳೆ ಅವರು ಅಲ್ಲೇ ಉಳಿಯುವಂತೆ ಮಾಡಿದ್ದರೆ ಗೊಂದಲದಲ್ಲಿದ್ದ ಲಿಂಗಾಯತ ವರ್ಗ ಗಣನೀಯ ಪ್ರಮಾಣದಲ್ಲಿ ಕಾಂಗ್ರೆಸ್‌ಗೂ ಮತ ಹಾಕುತ್ತಿತ್ತು. ಅದೇ ರೀತಿ ವಾಲ್ಮೀಕಿ ಸಮುದಾಯದ ನಾಯಕ ಬಿ.ಶ್ರೀರಾಮುಲು ಕೂಡ ಕೊನೆಯ ಘಳಿಗೆಯಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರಿದರು. ವಾಲ್ಮೀಕಿ ಸಮುದಾಯದ ಮತಗಳು ನೂರಾ ನಲವತ್ತೊಂದು ವಿಧಾನಸಭಾ ಕ್ಷೇತ್ರದಲ್ಲಿವೆ. ಹೀಗಾಗಿ ಅವರ ಮರುಸೇರ್ಪಡೆಯೂ ಕಾಂಗ್ರೆಸ್ ಪಾಲಿಗೆ ಹೊಡೆತ ನೀಡಿ, ಮೋದಿ ಅಲೆಯ ಬಿರುಸಿನಲ್ಲಿ ಎಲ್ಲವೂ ಕೊಚ್ಚಿ ಹೋಯಿತು. ಇದಕ್ಕೆ ಸಂದರ್ಭ ಕಾರಣವೇ ಹೊರತು, ನಾನು ಕಾರಣ ಅಲ್ಲ ಎಂದು ಸಿದ್ದರಾಮಯ್ಯ ಹೇಳತೊಡಗಿದ್ದಾರೆ. ಆರ್.ಟಿ.ವಿಠ್ಠಲಮೂರ್ತಿ ವರದಿ ಹುಲಿಗಿಯ ಸಜ್ಜನ ಅಧಿಕಾರಿ ಚಂದ್ರಮೌಳಿಯ ಅಸಲಿ ತಾಕತ್ತೇ ಇದು! ಪತ್ರಿಕೆಯ ಹೆಗ್ಗಳಿಕೆಗೆ ಅಧಿಕಾರಿಯೊಬ್ಬರು ಕಾರಣವಾಗಿದ್ದು ಸಂತಸದ ವಿಷಯವೇ ಅನ್ನಿ. ಹೈದರಾಬಾದ್ ಕರ್ನಾಟಕದ ಅತ್ಯಂತ ಜನಪ್ರಿಯ ದೇವಸ್ಥಾನಗಳ ಪೈಕಿ ಹುಲಿಗಿ ಕ್ಷೇತ್ರದ ಹುಲಿಗೆಮ್ಮದೇವಸ್ಥಾನ ಪ್ರಮುಖಸ್ಥಾನ ಪಡೆದಿದೆ. ಈ ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ಸಿ.ಎಸ್. ಚಂದ್ರಮೌಳಿಯವರನ್ನು ವರ್ಗಾಯಿಸಲು ಶಾಸಕರಾದಿಯಾಗಿ ಅನೇಕರು ಕಸರತ್ತು ನಡೆಸಿದ್ದರು. ಆದರೆ ಯೋಗ್ಯ ಅಧಿಕಾರಿಯೊಬ್ಬರ ಸೇವೆಯನ್ನು ಕಳೆದುಕೊಂಡರೆ ದೇವಸ್ಥಾನ ಖಂಡಿತಾ ಕಳಾಹೀನವಾಗುತ್ತದೆಂಬ ವಾಸ್ತವತೆಯನ್ನು ಪಾರದರ್ಶಕವಾಗಿ ವಿವರಿಸುವ ವರದಿ ಪ್ರಕಟಿಸಿ ಚಂದ್ರಮೌಳಿಯವರ ಬೆನ್ನಿಗೆ ‘ಪತ್ರಿಕೆ’ ನಿಂತಿತ್ತು. ಸತೀಶ್ ಬಿಲ್ಲಾಡಿ ವರದಿ ದಾವಣಗೆರೆ: ಏ ಕಳ್ಳಿ ಅರ್ಜುಮಾನ್ ಯಾಕಮ್ಮಾ ಅರೆಸ್ಟ್ ಆಗಿಲ್ಲ ದಾವಣಗೆರೆಯ ಸರ್ಕಲ್ ಇನ್ಸ್‌ಪೆಕ್ಟರ್ ಅರ್ಜುಮಾನ್ ಬಾನುವಿನ ಮುಖವಾಡ ಕಳಚಿ ಬಿದ್ದಿದೆ. ಸರ್ಕಾರಿ ಅಧಿಕಾರಿಯಾದರೂ ಸ್ವಂತ ಮಗಳು ಸಫಾ ಖಾನ್‌ಳ ವಿದ್ಯಾಭ್ಯಾಸಕ್ಕೆ ಕೃಷಿಕರೆಂದು ಆದಾಯ ದೃಢೀಕರಣ ಪತ್ರ ಪಡೆದು ಸಿಕ್ಕಿಬಿದ್ದಿದ್ದಾಳೆ. ಈ ಕುರಿತು ದೂರು ಬರುತ್ತಿದ್ದಂತೆ ಎಚ್ಚೆತ್ತು ಕೊಂಡವರು ಪೂರ್ವವಲಯದ ಖಡಕ್ಕು ಐಜಿ ಡಾ ಪರಶಿವಮೂರ್ತಿ. ಹಾಗಾಗಿ ಅವರು ಅರ್ಜುಮಾನ್ ಬಾನುವಿನ ನಕಲಿ ಆದಾಯ ಪ್ರಮಾಣ ಪತ್ರದ ಕುರಿತು ತನಿಖೆ ನಡೆಸುವಂತೆ ಈ ಹಿಂದೆ ದಾವಣ ಗೆರೆಯ ಅಡಿಷನಲ್ ಎಸ್ಪಿಯಾಗಿದ್ದ ದಕ್ಷ ಅಧಿಕಾರಿ ರವಿ ನಾರಾಯಣ್ ಸಾಹೇಬರಿಗೆ ಸೂಚಿಸಿದ್ದರು. ರವಿ ನಾರಾಯಣ್ ಎಷ್ಟೇ ಆಗಲಿ ಮಾಸ್ಟರ್ ಇನ್‌ವೆಸ್ಟಿಗೇಟರ್. ವರದಿ ನಂಬಿ ಬಂದ ಹುಡುಗಿಯನ್ನು ಕೊಂದೇ ಬಿಟ್ಟೆಯಲ್ಲೋ ಜಾಬೀರ್! ದಾವಣಗೆರೆಯ ಜನ ಬೆಚ್ಚಿಬಿದ್ದಿದ್ದಾರೆ. ಮದು ವೆಯ ಕನಸು ಹೊತ್ತು ಬೆಂಗಳೂರಿನಿಂದ ಅಲ್ಲಿಗೆ ಹೆತ್ತವರನ್ನು ಬಿಟ್ಟು ಬಂದಿದ್ದ ಆ ಹುಡುಗಿ ಶಿಫಾ ಸುಲ್ತಾನಳ ಅಮಾನುಷ ಹತ್ಯೆಯ ವಿಷಯ ಕೇಳಿ ಮಮ್ಮಲ ಮರುಗಿ ಹೋಗಿದ್ದಾರೆ. ಅಸಲಿಗೆ, ಈಗ್ಗೆ ಕೆಲದಿನಗಳ ಹಿಂದೆ ಅಲ್ಲಿನ ಬೂದಿಹಾಳ್ ಎಂಬ ಹಳ್ಳಿಯ ರಾಜ ಕಾಲುವೆ ಬಳಿ ಹೆಣವಾಗಿ ಸಿಕ್ಕ ಶಿಫಾ ಸುಲ್ತಾನ ಬೆಂಗಳೂರಿನ ಮೈಕೋ ಲೇಔಟ್ ಠಾಣೆಯ ಇನ್ಸ್ ಪೆಕ್ಟರ್ ಬಿ.ಎಸ್.ಮಂಜುನಾಥ್ ಕೊಂಚ ತಡ ಮಾಡಿದ್ದರೂ ಅನಾಥ ಹೆಣವೆಂಬ ಹಣೆಪಟ್ಟಿ ಅಂಟಿಸಿಕೊಂಡು ಮಣ್ಣಾಗಿ ಬಿಡುತ್ತಿದ್ದಳು. ಆದರೆ, ದಾವಣಗೆರೆ ನಗರ ಠಾಣೆಯ ಸರಹದ್ದಿನಲ್ಲಿ ಅಪ್ರಾಪ್ತ ಹುಡುಗಿಯ ಶವ ಸಿಕ್ಕಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಅವರು ಅಲರ್ಟ್ ಆಗಿದ್ದರು. ಕಾಂತರಾಜ್ ಅರಸ್ ವರದಿ ಎಷ್ಟು ಮುಕ್ಕಿದೆಯೋ ಖೋಟ್ಟಿ ಬಿಲ್ವಿದ್ಯೆಯ ಅರುಣ! ಉಡುಪಿ ನಿರ್ಮಿತಿ ಕೇಂದ್ರದ ಅವ್ಯವಹಾರ ಬಯಲಿಗೆ ಬಿದ್ದಿದೆ. ಈಗ್ಗೆ ಕೆಲ ವರ್ಷಗಳಿಂದ ಕೇಂದ್ರದ ಪ್ರಾಜೆಕ್ಟ್ ಡೈರೆಕ್ಟರ್ ಆಗಿರುವ ಅರುಣ್‌ಕುಮಾರ್ ಎಂಬಾತ ರಣಹಸಿವಿನ ಮನುಷ್ಯ. ವರ್ಷವೊಂದಕ್ಕೆ ನೂರಾರು ಕೋಟಿ ರುಪಾಯಿ ಕಾಮಗಾರಿ ಬರುವ ಇಲ್ಲಿ ಖೊಟ್ಟಿ ಬಿಲ್ಲು ಬರೆದು ಸರ್ಕಾರದ ಬೊಕ್ಕಸಕ್ಕೆ ಗಡಪಾರೆ ಇಕ್ಕುವ ಕೆಲಸ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಉಡುಪಿಯ ಜಿಲ್ಲಾಧಿಕಾರಿ ಮುದ್ದುಮೋಹನ್ ಎಂಬ ಮೊದ್ದು ಮಣಿಯ ಮೂಗಿನ ನೇರಕ್ಕೆ ನಡೆಯುತ್ತಿರುವ ಅರುಣ್‌ಕುಮಾರ್ ಎಂಬ ಬ್ರಹ್ಮಾಂಡ ಭ್ರಷ್ಟನ ಖೊಟ್ಟಿ ಬಿಲ್ವಿದ್ಯೆಯ ಅಷ್ಟೂ ವಿವರವನ್ನು ‘ಪತ್ರಿಕೆ’ ಬಟಾಬಯಲು ಮಾಡುತ್ತಿದೆ. ವರದಿಗಾರ ನೇವಿ ಕಾಲಂ ನಮ್ಮೂರ ಬಂಡಿಯಲ್ಲಿ ನಿಮ್ಮೂರ ಬಿಡುವುದು ಎಷ್ಟು ಕಷ್ಟ ಆ ದಿನ ಪದ್ಮಾಂಬಿಕೆ, ರಾಧಾಬಾಯಿ ಮನೆಯಿಂದ ಕಾರಣವೇ ಇಲ್ಲದೇ ವಾಪಸಾದಳು. ಒಂದು ಬದುಕಿಗೆ ಅದೆಷ್ಟು ಬೆನ್ನುಗಳಿವೆಯೋ, ಗೊತ್ತೇ ಆಗುವುದಿಲ್ಲ. ತಿರುಗಿ ನೋಡಿದಷ್ಟೂ ಮುಗಿಯದ ಬೆನ್ನುಗಳ ಅಸಂಖ್ಯ ಆಲಾಪನೆ. ಆ ಬೆನ್ನುಗಳಲ್ಲಿ ಅದೆಂಥ ನೂರು ಭಾವಗಳು ಕಳೆದು ಹೋದ ಮಗನನ್ನು ಹುಡುಕಬೇಕೆಂದು ಅಲೆದಾಡುವ ತಾನು ನಮ್ಮ ನಡುವ ಕಳೆದು ಹೋಗಿರುವ ಅದೆಷ್ಟು ಭಾವಗಳನ್ನು, ನೋವುಗಳನ್ನು ಹುಡುಕಬೇಕಾಗಿದೆ ಸದಾ ಮುಖದ ಮೇಲೆ ಒಂದು ಸ್ಥಿತಪ್ರಜ್ಞೆಯನ್ನು ಸ್ಥಾಪಿಸಿಕೊಂಡು, ಸಮವಸ್ತ್ರದಲ್ಲಿ ಹಾಜರಾಗುವ ಷಣ್ಮುಖಪ್ಪ ಸಾಹೇಬರು ಒಳಗೊಳಗೇ ಬೇಯುತ್ತಿರುವುದನ್ನು ಯಾಕೆ ಕಂಡು ಹಿಡಿಯಲಾಗ ಲಿಲ್ಲ ತನಗೆ ನೇವಿ ಜಾನಕಿ ಕಾಲಂ ಹೊಸನೀರು ಬಂದರೂ ಅದೇ ಪುರಾತನ ಅಮಲು ಮತ್ತೆ ಯಾವಾಗ ಮರುಭೇಟಿ ಕಣ್ಣುಕಣ್ಣುಗಳ ಸಮ್ಮಿಲನ, ಮೌನದ ನಿಗೂಢ ಗಂಭೀರ ಸಂವಾದದ ಚಟಾಕಿ ಆತ್ಮೀಯ ದೀವಿಗೆ ಮತ್ತೆ ಬರಬಲ್ಲೆನೇ, ಏಳು ಕಡಲುಗಳ ದಾಟಿ ಬಂದರೂ ಕೂಡ ದೊರೆವುದೆ ಹೇಳು, ಈ ಇಂಥ ಸರಿಸಾಟಿ -‘ಚಿಂತಾಮಣಿಯಲ್ಲಿ ಕಂಡ ಮುಖ’ ಕವಿ ಬೆಳೆಯುತ್ತಾ ಹೋಗುತ್ತಾನೋ ರೂಪಾಂತರಗೊಳ್ಳುತ್ತಾನೋ -ಈ ಪ್ರಶ್ನೆಗೆ ಸಿಕ್ಕ ಉತ್ತರವನ್ನು ತಪ್ಪು ಎಂದು ಸಾಬೀತು ಮಾಡಿದವರು ಅಡಿಗರು. ಅಡಿಗರಲ್ಲಿ ಆದದ್ದು ರೂಪಾಂತರ. ನಮಗೆ ಗೊತ್ತಿರುವ ಬೇರೆ ಕವಿಗಳು ಕ್ರಮೇಣ ಹಂತಹಂತವಾಗಿ ಬೆಳೆಯುತ್ತಾ ಹೋದರು. ಅವರ ಆರಂಭದ ಕವಿತೆ ಗಳನ್ನೂ ಆನಂತರದ ಕವಿತೆಗಳನ್ನೂ ಓದುತ್ತಾ ಹೋದರೆ ಆ ವಿಕಾಸವಾದದ ಸುಳಿವು ಸಿಗುತ್ತದೆ. ಅಡಿಗರಲ್ಲದು ಸಿಗುವುದಿಲ್ಲ. ಜಾನಕಿ ಒಲಿದಂತೆ ಹಾಡುವೆಕಾಲಂ ದೊಡ್ಡವರೇ ಆಗದಿದ್ದರೆ ಎಷ್ಟು ಚೆಂದ! ಆಗ ಅಮ್ಮ ಲಿಯೊನಿ ಚಿಕ್ಕಮ್ಮನನ್ನು ಕೇಳಿದರು: “ಮುಂದೆ ಏನು ಮಾಡಬೇಕು ಅಂತಿದೀಯ. ಅದಕ್ಕೆ ಪ್ರತಿಯಾಗಿ ಚಿಕ್ಕಮ್ಮ “ಮಕ್ಕಳು ಒಂದು ವಾಕ್ ಹೋಗಲಿ ಎಂದಷ್ಟೆ ಹೇಳಿದರು. ನಾನು ಪ್ಯಾಂಪೆರ್ಲ್‌ನ ಕೈ ಹಿಡಿದುಕೊಂಡು ಹೊರ ನಡೆದೆ. ಅವನ ಮುಖ ಸ್ಯಾಲೊ ಮರದಂತೆ ಇತ್ತು. ಪ್ಯಾಂಪೆರ್ಲ್ ಏನೇನೊ ಮಾತಾಡುತ್ತಿದ್ದ. ಆದರೆ ಅದು ಆಸ್ಟ್ರಿಯನ್ ಅಥವಾ ವಿಯನ್ನಾ ಭಾಷೆಯಲ್ಲಿ ಇದ್ದುದರಿಂದ ಅದೊಂಥರಾ ತಮಾಷೆಯಾಗಿತ್ತು. ನನಗೇನೂ ಅರ್ಥವಾಗಲಿಲ್ಲ. ಹೊಳೆ ಬಿರುಸಾಗಿ ಹರಿಯುತ್ತಿದ್ದ ಕಡೆ ಅವನನ್ನು ಕರೆದು ಕೊಂಡು ಹೋದೆ. ಚಂದ್ರಶೇಖರ ಆಲೂರು