Hi Bangalore
Hi Bangalore

Hi Bangalore

This is an e-magazine. Download App & Read offline on any device.

ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೧೦, ಡಿಸೆಂಬರ್ ೫, ೨೦೧೩ ಬೆಲೆ : ೧೫ ರು ಮುಖಪುಟ ಲೇಖನ ಒಬ್ಬ ಮಗಳ ಸಾವಿಗೆ ನ್ಯಾಯ ಓದುತ್ತ ಹೋದೆ. ಹಿಂದೆ, ಅಂದರೆ ಐದು ವರ್ಷದ ಹಿಂದೆ ಪತ್ರಿಕೆ ಗಳಲ್ಲಿ ಓದಿದ್ದೆ. ಯಥಾಪ್ರಕಾರ ಟೀವಿಗಳು ಒಂದೇ ಸಮನೆ ಹಗಲಿಂದ ರಾತ್ರಿಯ ತನಕ ಅದೇ ವಿಷಯವನ್ನು ಹಿಡಿದು ಚಚ್ಚುತ್ತಿದ್ದವು. ದಿಲ್ಲಿಗೆ ಮೆತ್ತಿಕೊಂಡಂತಿರುವ ನೋಯಿಡಾದ ಅಪಾರ್ಟ್‌ಮೆಂಟೊಂದರಲ್ಲಿ ಆರುಷಿ ತಲವಾರ್ ಎಂಬ ಹದಿನಾಲ್ಕು ವರ್ಷದ ಎಳೆ ಹುಡುಗಿಯ ಕೊಲೆಯಾಗಿತ್ತು. ‘ಇದ್ದ ಮೂವರಲ್ಲಿ ಕದ್ದವರ‍್ಯಾರು’ ಎಂಬಂಥ ಸನ್ನಿವೇಶ. ಆ ಮನೆಯಲ್ಲಿದ್ದುದು ನಾಲ್ಕೇ ಜನ. ತಂದೆ ಡಾ.ತಲವಾರ್, ತಾಯಿ ಡಾ.ನೂಪುರ್ ತಲವಾರ್, ಮಗಳು ಆರುಷಿ ಮತ್ತು ಕೆಲಸದ ಆಳು ಹೇಮರಾಜ್ ನೇಪಾಳಿ. ಮೊದಲು ಗೊತ್ತಾದದ್ದು ಆರುಷಿಯ ಕೊಲೆಯಾಗಿರುವ ವಿಷಯ. “ಮನೆಯಲ್ಲಿ ಹೇಮರಾಜ್ ಇರಲಿಲ್ಲವಾದ್ದರಿಂದ ಅವನೇ ಹುಡುಗಿಯ ಕೊಲೆ ಮಾಡಿ ನಾಪತ್ತೆಯಾಗಿದ್ದಾನೆ. ಅವನನ್ನು ರೈಲ್ವೇ ನಿಲ್ದಾಣದಲ್ಲಿ ಹುಡುಕಿ, ನೇಪಾಳಕ್ಕೆ ಹೋಗಿ, ಬೇಕಾದಷ್ಟು ಖರ್ಚಾಗಲಿ. ಹಣ ನಾನು ಕೊಡುತ್ತೇನೆ. ತಗೊಳ್ಳಿ ಇಪ್ಪತ್ತೈದು ಸಾವಿರ. ''I want him to be brought and killed " ಎಂದು ಗೋಳಿಡುತ್ತಾ ಆರ್ತನಾದ ಮಾಡಿದ ಆರುಷಿಯ ತಂದೆ ಡಾ.ತಲವಾರ್‌ನ ಆಕ್ರಂದನ ಹೃದಯ ಹಿಂಡುವಂತಿತ್ತು. ರವಿ ಬೆಳಗೆರೆ ಮುಖಪುಟ ಲೇಖನ ಕಂಚಿ ಮುದುಕ ಖುಲಾಸೆ “ಕೊಲೆಯ ಹಿಂದಿನ ಉದ್ದೇಶ ಸಾಬೀತಾಗಿಲ್ಲ. ಜೊತೆಗೆ ಅದಕ್ಕೆ ಬೇಕಾದ ಪೂರಕ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ. ಜೊತೆಗೆ ಕೊಲೆಯಾದ ಶಂಕರ ರಾಮನ್ ಪುತ್ರಿಯೇ ನ್ಯಾಯಾಲಯದಲ್ಲಿ ಆರೋಪಿಗಳ ಗುರುತು ಹಚ್ಚಿಲ್ಲ. ಅಲ್ಲದೇ ಆರೋಪಿಗಳೇ ಹತ್ಯೆ ಮಾಡಿದ್ದಾರೆಂಬುದಕ್ಕೆ ನಂಬಲರ್ಹ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಒದಗಿಸಲು ವಿಫಲವಾಗಿದ್ದರಿಂದ ಈ ಕೇಸಿನಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದ ಅಷ್ಟೂ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ" ಹೀಗೆಂದು ಪುದುಚೇರಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಎಸ್. ಮುರುಗನ್ ಅವರು ಕಂಚಿಯ ವರದರಾಜ ಕೋಯಿಲ್‌ನ ಮ್ಯಾನೇಜರ್ ಶಂಕರ ರಾಮನ್ ಹತ್ಯೆ ಪ್ರಕರಣದ ತೀರ್ಪು ಪ್ರಕಟಿಸಿ ಹೊರ ನಡೆಯುತ್ತಿದ್ದಂತೆ ನ್ಯಾಯಾಲಯದ ಕಟ ಕಟೆಯಲ್ಲಿ ಕಿರಿಯ ಶ್ರೀ ವಿಜಯೇಂದ್ರ ಸರಸ್ವತಿಯೊಂದಿಗೆ ಪವಡಿಸಿದ್ದ ಹಿರಿಯ ವೃದ್ಧ ಸನ್ಯಾಸಿ ಶ್ರೀ ಜಯೇಂದ್ರ ಸರಸ್ವತಿಯವರ ದೇಹದಿಂದ ಹೊರಬಿದ್ದಿದ್ದು ದೊಡ್ಡದೊಂದು ನಿಟ್ಟುಸಿರು. ವರದಿಗಾರ ಖಾಸ್‌ಬಾತ್ ನೆನಪಿನ ಹಿತ್ತಲಿನಿಂದ ನೇರವಾಗಿ ಪಶ್ಚಾತ್ತಾಪದ ಅಂಗಳಕ್ಕೆ ಗಾಯತ್ರಿ ಬದುಕಿರಬೇಕಿತ್ತು. ತುಂಬ ಸರಳ ರೂಪಿನ ಹುಡುಗಿ. ಅವಳಿಗೆ ಚೆಂದದ hand writing ಇತ್ತು. ಸ್ವಲ್ಪ ಕ್ಲಿಷ್ಟವಾದ ಬಾಲ್ಯವಿದ್ದಿರಬೇಕು. ಏನೇನೊ ಅಹಂಕಾರವಿಲ್ಲದವಳು. ಹಗಲು ರಾತ್ರಿ ಓದುತ್ತಿದ್ದಳು.History ಅವಳ ಪ್ರೀತಿಯ ಸಬ್ಜೆಕ್ಟು. ನನ್ನ ಕ್ಲಾಸುಗಳಿಗೆ ದೇವರ ಮೇಲಿನ ಹೂವು ತಪ್ಪುವಂತಿಲ್ಲ-ಅನ್ನುವ ಹಾಗೆ ಬಂದು ಕೂಡುತ್ತಿದ್ದಳು. ಅವರದೊಂದು ಚಿಕ್ಕ ಗ್ಯಾಂಗು. ಮಾರವಾಡಿ ಹುಡುಗಿ ಲಲಿತ, ಅವಳದೇ ಜಾತಿಯ ಚೇತನಾ, ಅಯ್ಯರ್ ಅಥವಾ ಅಯ್ಯಂಗಾರಿ ಇರಬಹುದಾದ ಶ್ರೀದೇವಿ ಮತ್ತು ಈ ಹುಡುಗಿ ಗಾಯತ್ರಿ. ಎಲ್ಲೇ ಹೋದರೂ ಈ ನಾಲ್ಕು ಜನ. ಚೆನ್ನಾಗೇ ಓದುತ್ತಿದ್ದರು. ಬಿ.ಎ ಓದುವ ಹುಡುಗಿಯರಿಗಿರಬೇಕಾಗಿದ್ದ ತುಂಟತನಗಳಿದ್ದವು. ವಯಸ್ಸಿಗನುಗುಣವಾದ ತಲೆಹರಟೆಗಳಿದ್ದವು. boyfriends ಇದ್ದರೇ? ನಂಗೊತ್ತಿಲ್ಲ. ಅವರ ಪೈಕಿ ಗಾಯತ್ರಿ ಬಿ.ಎ ಮುಗಿಸಿದ ಮೇಲೆ ಐಎಎಸ್ ಮಾಡು ತ್ತೇನೆನ್ನುತ್ತಿದ್ದಳು. ಆದರೆ ಮಾಡಿದ್ದು ಬಿ.ಇಡಿ. ಬಳ್ಳಾರಿಯಲ್ಲೇ ಒಂದು ಶಾಲೆ ಯಲ್ಲಿ ಟೀಚರಳಾದಳು. ನನಗದು ಸ್ವಲ್ಪ ಅಸಹನೆಯ ವಿಷಯವಾಗಿತ್ತು. ಆರ್.ಬಿ ಸಾಫ್ಟ್ ಕಾರ್ನರ್ ಮಾಡಿದ ಪ್ರೀತಿ ಮರೆಯುವುದುಂಟೆ? ‘ಪ್ರೀತಿ’, ಬಹುಶಃ ಈ ಶಬ್ದಕ್ಕೆ ಒಂದು ನವಿರಾದ ಭಾವವನ್ನುಂಟು ಮಾಡುವ ಶಕ್ತಿ ಇದೆ. ಪ್ರೀತಿ ಅಂದರೆ ಮಾಧುರ್ಯ, ಅದೊಂದು ಅನುಭೂತಿ, ಬದುಕಿಗೊಂದು ಸುಯೋಗ ಅಂತೆಲ್ಲಾ ಅನಿಸುತ್ತದೆ. ಆದರೆ ಅದೇ ಪ್ರೀತಿ ಕೆಲವರಿಗೆ ಮುಗಿಯಲಾಗದ ದುಃಖ, ಕೊನೆಗೂ ಅರ್ಥವಾಗದೇ ಉಳಿದು ಹೋದ ಸಂಗತಿಯೂ ಆಗಿರಬಹುದು. ನೀವು ಪ್ರೀತಿ ಮಾಡಿದ್ದೀರಾ? ನಿಮಗೆ ಪ್ರೀತಿ ದಕ್ಕಿತಾ? ಸವಿ ಸಿಕ್ಕಿತಾ? ಇಲ್ಲಾ ಅರಳದೆ ನರಳಿ ಮುದುಡಿ ಹೋಯಿತಾ? ಬದುಕು ಬಣ್ಣವಾಯಿತಾ ಇಲ್ಲಾ ಬದುಕಿನ ಕ್ಯಾನ್ವಾಸೇ ಕಪ್ಪಾಯಿತಾ? ಆ ಪ್ರೀತಿ ಬದುಕಿಗೆ ಕೊಳಲಾಯಿತಾ ಇಲ್ಲಾ ಮನಸ್ಸಿಗೆ ಉರುಳಾಯಿತಾ? ನೀವು ಯಾವತ್ತೋ ಪ್ರೀತಿಸಿದ್ದಿರಬಹುದು. ನಿಮ್ಮ ಪ್ರೀತಿ ಯಶಸ್ವಿಯಾಗಿ ಬದುಕು ಸುಗಂಧವಾಗಿರಬಹುದು ಅಥವಾ ಕಳೆದು ಹೋಗಿ ಮರೆಯದ ನೆನಪಾಗಿರಬಹುದು. ಇವತ್ತಿನ ನಿಮ್ಮ ಮನಸ್ಸಿಗೆ ಅವತ್ತಿನ ಪ್ರೇಮ ಏನೆನಿಸುತ್ತದೆ? ನಿಮ್ಮದು ಯಶಸ್ವಿ ಪ್ರೇಮವಾಗಿದ್ದರೆ, ಪ್ರೀತಿಸಿ ಮದುವೆ ಆಗಿದ್ದು ಸರಿ ಎನಿಸುತ್ತದಾ? ಇಲ್ಲಾ ಎಲ್ಲರನ್ನೂ ದೂರ ಮಾಡಿಕೊಂಡು ತಪ್ಪು ಮಾಡಿಬಿಟ್ಟೆ ಅನಿಸುತ್ತದಾ? ಇಲ್ಲಾ ನನ್ನ ಬಾಳು ಬಂಗಾರವಾಯಿತು ಎನಿಸುತ್ತದಾ? ಬೆಳಗೆರೆ ಹಲೋ ಶಾಸಕರೇ ಉಂಡೆದ್ದು ಬರಬೇಡಿ, ಸಮಸ್ಯೆಗಳ ಪರಿಹಾರಕ್ಕಾಗಿ ಕೆಲಸ ಮಾಡಿ ರಾಜ್ಯ ವಿಧಾನಮಂಡಲದ ಅಧಿವೇಶನ ಎಂದಿನಂತೆ ನೀರಸವಾಗಿ ನಡೆಯುತ್ತಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನವನ್ನು ಸುಮ್ಮನೆ ಒಂದು ಬಾರಿ ಗಮನಿಸಿ ನೋಡಿ. ಅಲ್ಲಿ ಈ ರಾಜ್ಯದ ಜನ ಎದುರಿಸುತ್ತಿರುವ ಸಮಸ್ಯೆಗಳಿಗಿಂತ ಮುಖ್ಯವಾಗಿ ಹಾಹಾಕಾರ ನಡೆಯು ತ್ತಿದೆ. ಜಾಗತೀಕರಣದ ಪ್ರಭಾವ ಇಡೀ ದೇಶದ ಮೇಲೆ ಆಗಿರುವಾಗ ಅದರ ಪ್ರಭಾವದಿಂದ ಹೊರಬರಲು ಕರ್ನಾಟಕಕ್ಕೂ ಸಾಧ್ಯವಿಲ್ಲ. ಆದರೆ ನಮ್ಮ ಶಾಸಕಾಂಗ ಪ್ರಬಲವಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದರೆ ಜನಜೀವನ ಒಂದಷ್ಟು ಸರಾಗವಾಗುವಂತೆ ಮಾಡಬಹುದು. ರವಿ ಬೆಳಗೆರೆ ಬಾಟಮ್ ಐಟಮ್ ಬದುಕು ಅಲೆಗಳನ್ನು ಸೃಷ್ಟಿಸುವ ಸಾಗರವಲ್ಲವೇ? ಇಲ್ಲ, ಇನ್ನು ಈ ಚಕ್ರಸುಳಿಯಿಂದ ಪಾರಾಗಲು ನಮಗೆ ಸಾಧ್ಯವೇ ಇಲ್ಲ. ಹಾಗೊಂದು ವೇಳೆ ಪಾರಾಗುವ ದಾರಿ ಅಂತಿದ್ದರೆ ಅದು ಸಾವಿನಿಂದ ಮಾತ್ರ ಸಾಧ್ಯ. ಹಾಗಂತ ನಾವು ಹಲವು ಸಂದರ್ಭಗಳಲ್ಲಿ ಯೋಚಿ ಸಿರುತ್ತೇವೆ. ಅಷ್ಟೇ ಅಲ್ಲ, ಆ ಥರದ ತೀರ್ಮಾನಕ್ಕೂ ಬಂದಿರುತ್ತೇವೆ. ಅದು ಯಾವುದೇ ಸಮಸ್ಯೆ ಆಗಿರಬಹುದು. ಮೈ ಮನಸ್ಸುಗಳಲ್ಲಿ ತ್ರಾಣವೇ ಇಲ್ಲದಿದ್ದಾಗ ಸಾಲದ ಹೊರೆ ಎಂಬುದು ಈ ರೀತಿ ನಮ್ಮನ್ನು ಕಾಡಬಹುದು. ವೃತ್ತಿಯಲ್ಲಿ ಎದುರಾಗುವ ಅನಿಶ್ಚಿತತೆ ಇರಬಹುದು ಅಥವಾ ಇನ್ನೇನೋ ಸಮಸ್ಯೆ ಇರಬಹುದು. ಇಂತಹ ಸಮಸ್ಯೆಗೆ ನಾವು ಅಗತ್ಯಕ್ಕಿಂತ ಹೆಚ್ಚಾಗಿ ಹೆದರಿಕೊಂಡಿರುತ್ತೇವೆ. ಈ ಸಮಸ್ಯೆಯ ಪರಿಹಾರಕ್ಕೆ ಸಾವನ್ನು ಹೊರತುಪಡಿಸಿ ಬೇರೆ ಯಾವುದೇ ಮಾರ್ಗ ಇರಲು ಸಾಧ್ಯವಿಲ್ಲ ಅಂದುಕೊಂಡಿರುತ್ತೇವೆ. ರವೀ ವರದಿ ಹಿರೇಮಠ ಎಂಬ ಸಂತನ ಮನದಾಳದ ಮಾತು ಗಣಿ ಮಾಫಿಯಾ ಸೃಷ್ಟಿಸಿದ ಸನ್ನಿವೇಶದಿಂದ ಅಲ್ಲಿನ ಜನರು ಭಯದ ವಾತಾವರಣದಲ್ಲಿದ್ದರು. ಈ ಮಾಫಿಯಾದ ವಿರುದ್ಧ ದನಿ ಎತ್ತಲು ಸಾಧ್ಯವೇ ಇಲ್ಲ ವೇನೋ ಎನ್ನುವ ನಿಸ್ಸಹಾಯಕ ಸ್ಥಿತಿ ಅಲ್ಲಿತ್ತು. ಇಡೀ ಬಳ್ಳಾರಿ ಜಿಲ್ಲೆ ಅನ್ಯಾಯ, ಅಕ್ರಮಗಳ ಆಗರವಾಗಿತ್ತು. ಜನರಲ್ಲಿ ಅಸಂತೋಷ ಇತ್ತು. ಇಂತಹ ಸಂದರ್ಭದಲ್ಲಿ ಅಲ್ಲಿನ ಜನರ ಹೋರಾಟಕ್ಕೆ ಜೀವ ಕೊಡುವ ಅವಶ್ಯಕತೆ ಇತ್ತು. ಕೆಲವೊಮ್ಮೆ ಅಲ್ಲಿಗೆ ಬುದ್ಧಿಜೀವಿಗಳೆನಿಸಿಕೊಂಡ ಮಂದಿ ಬರುತ್ತಿದ್ದರಾದರೂ, ಅವರದು ಕೇವಲ ಪತ್ರಿಕೆಗಳಿಗೆ ಹೇಳಿಕೆ ಕೊಡುವು ದಕ್ಕಷ್ಟೇ ಸೀಮಿತ ವಾಗಿತ್ತೇ ಹೊರತು, ಅವರ ಹೋರಾಟ ಗಂಭೀರ ಸ್ವರೂಪ ಪಡೆಯಲೇ ಇಲ್ಲ. ಲಕ್ಷ್ಮೀಸಾಗರ ಸ್ವಾಮಿಗೌಡ ವರದಿ ಕೆಪಿಎಸ್ಸಿ ಕರ್ಮಕಾಂಡ! ಉಂಡನು ಗೋನಾಳ ಭೀಮಪ್ಪ ನರಳಿದ್ದು ಯಾರಪ್ಪ? ಕೆಪಿಎಸ್ಸಿ ಕರ್ಮಕಾಂಡ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಗೋನಾಳ್ ಭೀಮಪ್ಪ ಸೇರಿದಂತೆ ಹಲವರು ಸೇರಿ ಮಾಡಿದ ಅಕ್ರಮದಿಂದಾಗಿ ಪ್ರತಿಭಾನ್ವಿತ ಅಭ್ಯರ್ಥಿಗಳು ಕಣ್ಣೀರಿಡುವ ಸ್ಥಿತಿ ನಿರ್ಮಾಣವಾಗಿದೆ. ಹಣ ಪಡೆದು ತಮಗಿಷ್ಟ ಬಂದಷ್ಟು ಅಂಕ ನೀಡಿ ಅಕ್ರಮ ಮಾಡಿದ್ದು ಈಗ್ಗೆ ಕೆಲವು ತಿಂಗಳ ಹಿಂದೆಯೇ ಬಹಿರಂಗಗೊಂಡಿತ್ತು. ಸರ್ಕಾರ ಈ ಬಗ್ಗೆ ತನಿಖೆ ಮಾಡಲು ಸಿಓಡಿ ಪೊಲೀಸರಿಗೆ ವಹಿಸಿತ್ತು. ಸುನೀಲ್ ಹೆಗ್ಗರವಳ್ಳಿ ವರದಿ ಸರಂಡರ್ ಆಗಿದ್ದು ಇನ್ನೊಂದು ಕೊಲೆಗೆ ಮೂಹೂರ್ತ? ಬೆಂಗಳೂರಿನ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪೈಕಿ ಒಬ್ಬನಾದ ಸೈಕಲ್ ರವಿ ಪೊಲೀಸರಿಗೆ ಸರಂಡರ್ ಆಗಿ ದ್ದಾನೆ. ಸಿಸಿಬಿ ಡಿಸಿಪಿ ಲಾಭೂರಾಮ್ ಮತ್ತವರ ತಂಡ ಸಿಕ್ಕ ಸಿಕ್ಕ ರೌಡಿಗಳನ್ನು ತಂದು ಪರಪ್ಪನ ಅಗ್ರಹಾರದ ಹಾಸ್ಟೆ ಲ್‌ಗೆ ಕಳುಹಿಸುತ್ತಿದ್ದಾರೆ. ಅವರು ಸೈಕಲ್ ರವಿಯ ಹಿಂದೆಯೂ ಬಿದ್ದಿದ್ದರು. ಯಾಕಿದ್ದೀತು ಸಹವಾಸ ಎಂದು ಯೋಚಿಸಿರುವ ಸೈಕಲ್ ರವಿ ಸಿಸಿಬಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಆತನ ಮೇಲೆ ಹಲವಾರು ಮೊಕದ್ದಮೆಗಳಿವೆ. ಆ ಪೈಕಿ ಈಗ್ಗೆ ನಾಲ್ಕು ವರ್ಷಗಳ ಹಿಂದೆ ನಡೆದ ಕತ್ರಗುಪ್ಪೆ ಲಿಂಗನ ಕೊಲೆ ಪ್ರಕರಣವೂ ಒಂದು. ಸುನೀಲ್ ಹೆಗ್ಗರವಳ್ಳಿ ವರದಿ ತರಕಾರಿ ಹಾಲಮ್ಮನೆಲ್ಲಿ, ಭಟ್ಕಳದ ಪಾತಕಿ ಎಲ್ಲಿ? ಶಿವಮೊಗ್ಗದ ತರಕಾರಿ ಹಾಲಮ್ಮಳ ಮೊಮ್ಮಗ ಎಂ.ಡಿ.ಮಂಜುನಾಥ ಎಂಬ ಶೋಕಿಲಾಲ ೨೦೧೧ರ ಮೇನಲ್ಲಿ ತೀರ್ಥಹಳ್ಳಿ ಬೆಟ್ಟಮಕ್ಕಿಯ ಕಡಿದಾಳ್ ಬಡಾವಣೆಯ ಬಾಡಿಗೆ ಮನೆಯಲ್ಲಿ ಲುಂಗಿಯಿಂದ ನೇಣು ಬಿಗಿದುಕೊಂಡು ವಿಕಾರವಾಗಿ ಸತ್ತು ಹೋದ ಪ್ರಕರಣಕ್ಕೆ ಭಯೋತ್ಪಾದನೆಯ ಬಣ್ಣ ಬಳಿಯುವ ಮೂಲಕ ಮಂಜುನಾಥನ ಪತ್ನಿ ಯಶೋಧ ಮತ್ತವಳ ಮಗನನ್ನು ಮತ್ತೊಮ್ಮೆ ಬೀದಿಪಾಲು ಮಾಡುವ ಕೆಲಸ ನಡೆದಿದೆ. ಇಂತಹ ದೊಂದು ನಿರ್ದಯಿ ಕೆಲಸಕ್ಕೆ ಮಂಜುನಾಥನ ದುರುಳ ಸೋದರಿಯರ ಜೊತೆ ಸುದ್ದಿವಾಹಿನಿಯೊಂದು ಕೈ ಜೋಡಿಸಿದ ಪ್ರಕರಣ ಪ್ರಜ್ಞಾವಂತರಲ್ಲಿ ಜಿಗುಪ್ಸೆ ಮೂಡಿಸಿದೆ. ವರದಿಗಾರ ವರದಿ ಹಡಾಲೆದ್ದ ದಾವಣಗೆರೆ ಡಿ.ಸಿ.ಸಿ ಬ್ಯಾಂಕಿಗೆ ಮುಕ್ತಿ ಸಿಗುವುದೇ? ದಾವಣಗೆರೆಯ ಡಿ.ಸಿ.ಸಿ ಬ್ಯಾಂಕಿಗೆ ಅಂಟಿದ್ದ ಶನಿ ತಕ್ಕಮಟ್ಟಿಗಾದರೂ ತೊಲಗಿ ದಂತಾಗಿದೆ. ಹರಪನಹಳ್ಳಿಯ ಪಿ.ರಾಮನಗೌಡ ಎಂಬ ಸಭ್ಯ ಮನುಷ್ಯ ನೂತನ ಅಧ್ಯಕ್ಷರಾಗುವ ಮೂಲಕ ಬ್ಯಾಂಕಿಗೊಂದು ಹೊಸ ಕಳೆ ಬಂದಿದೆ. ಅಧ್ಯಕ್ಷಗಿರಿಗಾಗಿ ಕಡೆಯ ಕ್ಷಣದ ತನಕವೂ ಮಷ್ಕಿರಿ ಮಾಡಿದ ಬಿ.ವಿ.ಚಂದ್ರಶೇಖರ ಹಾಗೂ ಜೆ.ಆರ್.ಷಣ್ಮುಖಪ್ಪ ಎಂಬ ಹಳೇಹುಲಿಗಳನ್ನು ದೂರವಿಟ್ಟು ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಸರಿಯಾಗಿಯೇ ಟಾಂಗ್ ನೀಡಿದ್ದಾರೆ. ಕೆಟ್ಟು ಕೆರ ಹಿಡಿದಿರುವ ದಾವಣಗೆರೆ ಡಿ.ಸಿ.ಸಿ ಬ್ಯಾಂಕ್ ಈಗಲಾದರೂ ಸರಿ ಹೋದೀತಾ ಎಂಬುದು ದಾವಣಗೆರೆ ರೈತರ ಆಶಯ. ಲೋಕೇಶ್ ಕೊಪ್ಪದ್ ನೇವಿ ಕಾಲಂ ನಾವು ಅಪ್ಪನಾಗುವ ಮಗುವಿನ ನಿಜವಾದ ಅಪ್ಪ ಯಾರು? ಅವನು ರಾತ್ರಿ ಆಫೀಸಿನಿಂದ ಬಂದು ಶೂ ಕಳಚಿ ಉಸ್ಸಪ್ಪಾಅಂತ ಡೈನಿಂಗ್ ಟೇಬಲ್ ಮುಂದೆ ಕುಳಿತಾಗ ಆರು ವರ್ಷದ ಮಗ ಗುಡ್‌ನೈಟ್ ಹೇಳಿ ಮಲಗಲು ಹೋಗಿದ್ದಾನೆ. ಹೆಂಡತಿ ಊಟ ಬಡಿಸುವವಳು ಗಂಡನಿಗೆ ಹೇಳುತ್ತಾಳೆ: ಅದೇ ನನ್ನ ಹೆರಿಗೆ ಆಯ್ತಲ್ಲಾ.. ಆ ನರ್ಸಿಂಗ್ ಹೋಮ್‌ನಿಂದ ಫೋನ್ ಬಂದಿತ್ತು. ನಾವಿಬ್ಬರೂ ಒಂದು ಸಲ ಅಲ್ಲಿಗೆ ಹೋಗಿಬರಬೇಕಂತೆ. ಅವನು ವಿಚಿತ್ರ ಪ್ರಶ್ನಾರ್ಥಕ ಚಿಹ್ನೆಯಲ್ಲಿ ಅವಳ ಕಡೆ ನೋಡಿ ಯಾಕಂತೆ ಅಂತ ಕೇಳುತ್ತಾನೆ. ಅವಳದಕ್ಕೆ ‘ಗೊತ್ತಿಲ್ಲ, ಬಂದ ನಂತರವೇ ಹೇಳು ತ್ತೇವೆ ಅಂದಿದ್ದಾರೆ’ ಅಂತ ಪ್ರತಿಕ್ರಿಯಿಸುತ್ತಾಳೆ. ಇದೀಗ ಅವರು ಆಸ್ಪತ್ರೆಯ ಮುಖ್ಯಸ್ಥರ ಕೋಣೆಯಲ್ಲಿ ಕುಳಿತಿದ್ದಾರೆ. ಅವರು ಹೇಳುವ ಒಂದೊಂದೇ ವಿವರಕ್ಕೆ ಇವರಿಬ್ಬರೂ ಥರಥರ ನಡುಗಿ ಹೋಗುತ್ತಿದ್ದಾರೆ. ‘ನೋಡಿ, ಹಿಂದೆ ಈ ಥರ ಒಂದೆರಡು ಕೇಸುಗಳು ಆಗಿದ್ದವು. ಅದಕ್ಕಾಗಿ ನಾವು ತುಂಬ ಜಾಗ್ರತೆ ವಹಿಸಿದ್ದೆವು. ಹುಟ್ಟಿದ ತಕ್ಷಣ ಮಗುವಿನ ಕಾಲಿಗೆ ಮಾರ್ಕ್ ಹಾಕುವ ಕ್ರಮವನ್ನೂ ಜಾರಿಗೆ ತಂದಿದ್ದೆವು. ಆದರೆ ಮತ್ತೆ ಈ ಸಲ ಅದೇ ತಪ್ಪು ನಡೆದಿದೆ.’ ನೇವಿ ಜಾನಕಿ ಕಾಲಂ ತೇಜಶ್ರೀಯ ಮಾಗಿಯಲ್ಲಿ ನಾವೂ ಮಾಗಿ ನೀವೂ ಮಾಗಿ ಈಚೀಚಿನ ದಿನಮಾನದಲ್ಲಿ ಕವಿತೆ ಹೆಣ್ಣಿಗೆ ಒಲಿ ದಂತೆ ಗಂಡಿಗೆ ಒಲಿಯಲಿಲ್ಲ. ಆಧ್ಯಾತ್ಮಿಕತೆ ಕೂಡ ಅವಳಿಗೆ ದಕ್ಕಿದಷ್ಟು ಅವನಿಗೆ ದಕ್ಕಲಿಲ್ಲ. ಇವತ್ತು ಕಾವ್ಯವನ್ನೇ ತನ್ನ ಪ್ರಧಾನ ಧಾರೆಯ ನ್ನಾಗಿಸಿಕೊಂಡ ಎಲ್ಲ ಕವಯಿತ್ರಿಯರನ್ನೂ ಮನಸ್ಸಿನಲ್ಲಿಟ್ಟುಕೊಂಡು ಈ ಮಾತು ಹೇಳುತ್ತಿದ್ದೇನೆ. ಪ್ರತಿಭಾ ನಂದ ಕುಮಾರ್, ಲಲಿತಾ ಸಿದ್ಧಬಸವಯ್ಯ, ಜ.ನಾ.ತೇಜಶ್ರೀ, ಸಂಧ್ಯಾದೇವಿ, ಕಾವ್ಯಾ ಕಡಮೆ, ಎಚ್.ಎಲ್.ಪುಷ್ಪಾ, ಸರಸ್ವತಿ ಗೌಡ, ವಿನಯ ಒಕ್ಕುಂದ, ಪಿ.ಚಂದ್ರಿಕಾ, ವಿಭಾ ತಿರಕಪಡಿ-ಹೀಗೆ ನನ್ನ ಕಣ್ಮುಂದೆ ಇತ್ತೀಚಿಗೆ ನಾನು ಓದಿದ ಕವಯಿತ್ರಿಯರೆಲ್ಲ ಹಾದು ಹೋಗುತ್ತಿದ್ದಾರೆ. ಸದ್ಯಕ್ಕೆ ಕೈಯಲ್ಲಿ ತೇಜಶ್ರೀ ಅವರ ‘ಮಾಗಿ ಕಾಲದ ಸಾಲುಗಳು’ ಕವನ ಸಂಕಲನವಿದೆ. ‘ಆದಿಯೊಂದು ಭಾಗ, ಅನಾದಿಯಿನ್ನೊಂದು, ಕಾಳಿನ ನಡುವೆ ಹೊಡೆದ ಗೆರೆ, ನೀನು ವ್ಯಕ್ತಮಧ್ಯ ಸತ್ಯ’ ಎಂಬ ಸಾಲುಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತಾ ಪುಲಕ ಗೊಳಿಸುತ್ತಿವೆ. ಜಾನಕಿ ಅಂಕಣ:ಮರೆತ ಭಾರತ ಬಳೆ ಬಂತ್, ಬಳೆ ಬಂತ್ ಕೈ ಚಾಚ್ಕಳಿ ಬಹಳ ಹಿಂದೆ ಅಂದರೆ ನಲವತ್ತು, ಐವತ್ತು ವರ್ಷ ಗಳ ಹಿಂದೆ ನಾವು ಚಿಕ್ಕ ಹುಡುಗರಿದ್ದಾಗ ನಮ್ಮ ಬಯಲುಸೀಮೆಯ ಹಳ್ಳಿಗಾಡಿನ ಹೆಂಗಸರಿಗೆ ಈಗಿನವರಿಗಿರುವಂತೆ ಹೆಚ್ಚಿನ ಆಸೆ-ಆಕಾಂಕ್ಷೆಗಳಿರಲಿಲ್ಲ. ಬಹಳ ಸರಳ ವಾದ ಬದುಕನ್ನು ಮೈಗೂಡಿಸಿಕೊಂಡು ಸಂಸಾರ ತೂಗಿ ಸುವುದರಲ್ಲಿ ಗಂಡಸರಿಗೆ ತುಂಬಾ ನೆರವಾಗುತ್ತಿದ್ದರು. “ಸತ್ ಮೇಲೆ ತಗೊಂಡೋಗೋದೇನೈತೆ, ದೇವ್ರು ಹಣೇಲಿ ಏನು ಬರೆದವ್ನೋ ಅದನ್ನೆ ಪ್ರಸಾದ ಅಂತ ತಿಳ್ಕಂಡು ಕಾಲ ಹಾಕಿ ಕಣ್ಮುಚ್ಬೇಕು...." ಎಂದು ಪ್ರತಿಯೊಬ್ಬರು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದರು. ಕೇಶವರೆಡ್ಡಿ ಹಂದ್ರಾಳ ಅಂಕಣ :ಕೋಟೆ ಕಾಯ್ದ ತಾಯಂದಿರು ಅವಿಭಕ್ತ ಕುಟುಂಬದ ದೀಪ ಆರದಂತೆ ನೋಡಿಕೊಂಡವರಿವರು! ಊರ ತುಂಬಾ ಮಲ್ಲಿಗೆಯ ಘಮ. ಆಗಷ್ಟೇ ಹದಿಹರೆಯಕ್ಕೆ ಕಾಲಿಟ್ಟಿದ್ದ ಈ ಹೆಣ್ಣುಮಗಳು ಹೆರಳು ತುಂಬಾ ಮಲ್ಲಿಗೆ ಮೊಗ್ಗಿನ ದಂಡೆಯನ್ನು ಮುಡಿದು ಹೊರಟರೆ ಓರಗೆಯ ಹುಡುಗಿಯರ ದೃಷ್ಟಿ ತಾಕೀತೆಂದು ಅಮ್ಮ ಕೆನ್ನೆಗೆ ಕಾಡಿಗೆ ಹಚ್ಚಿಯೇ ಮನೆಯಿಂದ ಹೊರ ಕಳಿಸುತ್ತಿದ್ದುದು. ಅಮ್ಮ ಮನೆಯಲ್ಲಿ ಏನೇ ಹೇಳಿದರೂ ಹೂಂ ಎಂದು ಹೇಳುತ್ತಿದ್ದ ಇವರು ಜೊತೆಗಾತಿಯರ ಜೊತೆಗೂ ಅಷ್ಟೇ. ಮಾತು ಹೊರಬಿದ್ದರೆ ಮುತ್ತು ಸುರಿದು ಹೋದಾವು ಎಂಬಂತೆ ಮಹಾಮೌನಿ. ಆದರೂ ಈ ಹೆಣ್ಣುಮಗಳ ಮನಸ್ಸಿನಲ್ಲಿ ಬೆಟ್ಟದಷ್ಟು ಕನಸಿದ್ದವು. ಭವಿಷ್ಯದಲ್ಲಿ ತನ್ನದೇ ಮನೆಯಲ್ಲಿ ಪತಿ ಮತ್ತು ಮಕ್ಕಳೊಂದಿಗೆ ಚೆಂದದೊಂದು ಸಂಸಾರ ಕಟ್ಟಿಕೊಂಡು ಬದುಕುವ ಹಂಬಲವಿತ್ತು. ಎಳೆವೆಯಿಂದಲೂ ಮನಸ್ಸಿನ ಭಾವನೆಗಳೊಂದಿಗೆ ಹೊಯ್ದಾಡುತ್ತಾ ಬೆಳೆದ ಭಾವ ಜೀವಿ ಇವರು. ಲಕ್ಷ್ಮೀಸಾಗರ ಸ್ವಾಮಿಗೌಡ

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.