O Manase

Complimentary Offer

  • Pay via readwhere wallet and get upto 40% extra credits on wallet recharge.
O Manase

O Manase

This is an e-magazine. Download App & Read offline on any device.

Preview

ಅವನು ಬ್ಲಾಕ್ ಟೈಗರ್ ಇವನು ಏಕ್ ಥಾ ಟೈಗರ್! ರೀಲ್ ವರ್ಸಸ್ ರಿಯಲ್ ನೀವು ಆ ಸಿನಿಮಾ ನೋಡಿರುತ್ತೀರಿ, ಚಪ್ಪಾಳೆ ಹೊಡೆದಿರುತ್ತೀರಿ. ನಿಮ್ಮಿಂದಾಗಿ ಆ ಸಿನಿಮಾದ ಗಳಿಕೆ 500 ಕೋಟಿ ದಾಟುತ್ತದೆ. ಅದರಲ್ಲಿ ನಟಿಸಿದ ಹೀರೋಗೆ ನೂರು ಕೋಟಿ ಸಂಭಾವನೆ ಸಿಗುತ್ತದೆ. ಆದರೆ ಈ ಸಿನಿಮಾದ ಅದ್ಭುತ ಯಶಸ್ಸಿನ ಹಿಂದೊಂದು ದಾರುಣ ಕತೆಯಿದೆ, ಒಬ್ಬ ದೇಶಭಕ್ತನ ತ್ಯಾಗ ಬಲಿದಾನಗಳ ಮನಮಿಡಿಯುವ ಕತೆಯದು. ಅವನೂ ಕೂಡಾ ನಟ, ರಂಗಭೂಮಿ ನಟ. ಆದರೆ ವಿಧಿ ಅವನನ್ನು ಗಡಿಯಾಚೆ ಕಳಿಸುತ್ತದೆ. ದೇಶದ ಹಿತರಕ್ಷಣೆ ಮಾಡು ಅನ್ನುತ್ತದೆ. ಅದಕ್ಕಾಗಿ ಆತನಿಗೆ ಸಿಕ್ಕಿದ ಪ್ರತಿಲವಾದರೂ ಏನು? ಹೆಸರು, ಹಣ, ಪ್ರಶಸ್ತಿ..ಊಹೂಂ. ಆತನ ಹೆಸರು ನಿಮಗಾರಿಗೂ ಗೊತ್ತಿಲ್ಲ. ಆದರೆ ಅದೇ ಕತೆಯನ್ನು ಕದ್ದು ಸಿನಿಮಾ ಮಾಡಿದವರು ಆತನಿಗೊಂದು ಕ್ರೆಡಿಟ್ಟು ಕೂಡಾ ಕೊಡುವುದಿಲ್ಲ. ನೀವೆಲ್ಲರೂ ಓದಲೇಬೇಕಾದ ರಿಯಲ್ ಕತೆಯಿದು. ರೋಮ್ಯಾನ್ಸ್ ಅಲ್ಲ ವುಮ್ಯಾನ್ಸ್ ಗಂಡಸರು ಹೆಂಗಸರನ್ನು ಪ್ರೀತಿಸಿದರೆ ರೋಮಾನ್ಸ್. ಗಂಡಸರು ಗಂಡಸರನ್ನೇ ಇಷ್ಟಪಟ್ಟರೆ ಬೋಮ್ಯಾನ್ಸ್, ಹೆಂಗಸರು ಹೆಂಗಸರ ಜೊತೆಗೆ ಸಂಬಂಧ ಬೆಳೆಸಿದರೆ ವುಮ್ಯಾನ್ಸ್. ಇಂಥಾದ್ದೊಂದು ಕತೆ ನಮ್ಮ ನಡುವೆಯೇ ಇತ್ತೀಚೆಗೆ ನಡೆದಿದೆ. ತನ್ನ ಗೆಳತಿ ಮದುವೆಯಾದಳೆಂದು ಆಕೆಯನ್ನೇ ಕೊಲೆಮಾಡಿದ ಅಮರ ಪ್ರೇಮಿ ಸದ್ಯಕ್ಕೆ ಜೈಲಲ್ಲಿದ್ದಾಳೆ. ಏನಿದು ಈ ವಿಚಿತ್ರ ಸಂಬಂಧ? ಇದು ಅನೈಸರ್ಗಿಕ ಅನ್ನುವವರಿದ್ದಾರೆ, ಇದಕ್ಕೆ ಕಾನೂನು ಮಾನ್ಯತೆ ನೀಡಿ ಅನ್ನುವವರೂ ಇದ್ದಾರೆ. ಯಾಕಾಗಿ ಇಂತಾ ಸಂಬಂಧ ಹುಟ್ಟಿಕೊಳ್ಳುತ್ತದೆ? ಇದರ ಹಿಂದಿನ ಸೈಕಾಲಜಿ ಏನು? ಇದು ಬರಿಯ ಸ್ನೇಹವಾ ಅಲ್ಲ ಕಾಮವೂ ಉಂಟಾ? ಸುಣ್ಣದ ಬೆಳಕಲ್ಲಿ ಬಣ್ಣದ ಲೋಕ! ಐದುಸಾವಿರ ವರ್ಷಗಳ ಹಿಂದೆ ಮನುಷ್ಯನಿಗೆ ತಾನು ಅನ್ವೇಷಿಸಿದ ಚಕ್ರವೇ ದೊಡ್ಡ ತಂತ್ರಜ್ಞಾನವಾಗಿತ್ತು. ಆಮೇಲೆ ಗಣಿಗಾರಿಕೆ ದೊಡ್ಡ ತಂತ್ರಜ್ಞಾನವಾಯಿತು. ಅದಿರಿನಿಂದ ಲೋಹವನ್ನು ಬೇರ್ಪಡಿಸುವುದು ತನಗೆ ಒಲಿದ ಅತ್ಯುನ್ನತ ಟೆಕ್ನಾಲಜಿ ಎಂದು ಮನುಷ್ಯ ಭ್ರಮಿಸಿದ್ದ ಕಾಲವೂ ಒಂದಿತ್ತು. ಹೀಗೆ ಕಾಲಕಾಲಕ್ಕೆ ಅವನು ಏನೇನು ಕಂಡುಹಿಡಿಯುತ್ತ ಹೋದನೋ ಅವನ್ನೆಲ್ಲ ಮಾನವಕುಲದ ಉತ್ಕೃಷ್ಟ ಫಲಗಳು ಎಂದೇ ಭಾವಿಸುತ್ತಾ ಬಂದಿದ್ದಾನೆ. ಈಗ ನಾವು ನ್ಯಾನೋ ಟೆಕ್ನಾಲಜಿಯ ಬಗ್ಗೆ ಮಾತಾಡುತ್ತೇವೆ. ಇನ್ನೊಂದು ಶತಮಾನ ಕಳೆದ ಮೇಲೆ, ಇದೇ ಮನುಷ್ಯ ‘‘ಹಿಂದಿನ ಕಾಲದವರು ನ್ಯಾನೋ ಟೆಕ್ನಾಲಜಿಯನ್ನೇ ದೊಡ್ಡ ತಂತ್ರಜ್ಞಾನ ಎಂದು ತಿಳಿದಿದ್ದರು’’ ಎನ್ನುತ್ತಾನೆ! ನಿಯಂತ್ರಿಸಬೇಡಿ, ಸ್ಪೋಟಗೊಳ್ಳಿ ದೇವರ ಪೂಜೆ ಮಾಡುವವರು ಬೇರೆ ಉದ್ಯೋಗ ಮಾಡಬಾರದು ಅನ್ನುವ ನಂಬಿಕೆ ಇವತ್ತಿಗೂ ಅನೇಕ ಹಳ್ಳಿಗಳಲ್ಲಿದೆ. ಹೀಗಾಗಿ ಬುದ್ಧಿವಂತನಾದ ಹಿರಿಯ ಮಗ ಕೇವಲ ದೇವರ ಪೂಜೆ ಮಾಡುವುದಕ್ಕೆಂದೇ ತನ್ನ ಜೀವಿತಾವಧಿಯನ್ನು ಮೀಸಲಾಗಿಡುತ್ತಾನೆ. ಪ್ರತಿ ಮಧ್ಯಾಹ್ನ ಮಾಡುವ ಒಂದು ಗಂಟೆಯ ದೇವಾಲಯದ ಪೂಜೆಗೋಸ್ಕರ ಆತ ತನಗೆ ಗೊತ್ತಿರುವ ವಿದ್ಯೆ ಮತ್ತು ತನ್ನ ಬೆಳವಣಿಗೆಯ ಸಾಧ್ಯತೆಗಳನ್ನೆಲ್ಲ ಹತ್ತಿಕ್ಕಿಕೊಂಡು ಬದುಕುತ್ತಾನೆ. ಇಂಥದ್ದೇ ಸ್ಥಿತಿ ಬೇರೆ ಬೇರೆ ವೃತ್ತಿಗಳಲ್ಲೂ ಇದೆ. ಅಪ್ಪ ತೋರಿದ ಆಲದಮರಕ್ಕೇ ಜೋತುಬಿದ್ದರೆ ಏನೇನು ಅನಾಹುತಗಳಾಗುತ್ತವೆ ಅನ್ನೋದನ್ನು ಜಾನಕಿ ಕಾಲಂನಲ್ಲಿ ಓದಿ ನಿನ್ನೆ ಮತ್ತು ನಾಳೆಯಲ್ಲಿ ಬದುಕುತ್ತಿರುವವರು ರಾಮ ಹೆಂಡ ಕುಡಿಯುತ್ತಿದ್ದ ಎಂದು ಕತೆ ಹೇಳುತ್ತಾ ಕಾಲತಳ್ಳುವವರು ನಿನ್ನೆಗಳಲ್ಲಿ ಬದುಕುವವರು. ಅವರನ್ನು ನೆಚ್ಚಿಕೊಂಡರೆ ನೀವು ದಾರಿತಪ್ಪಿದ ಮಗನಾಗುತ್ತೀರಿ. ಇನ್ನು ಹತ್ತು ವರ್ಷಗಳಲ್ಲಿ ಮೋದಿ ಕ್ರಾಂತಿ ಮಾಡುತ್ತಾರೆ ಅನ್ನುವವರು ನಾಳೆಗಳಲ್ಲಿ ಬದುಕುವವರು.. ಅವರನ್ನು ನಂಬಿದರೆ ನಿಮಗೆ ವಯಸ್ಸಾಗುತ್ತದೆ. ನಾಳೆ ಎಂಬುದೇ ಇಲ್ಲವೆನ್ನುವ ರೀತಿಯಲ್ಲಿ ಇವತ್ತು ಬದುಕುವವನು ಗೆಲ್ಲುತ್ತಾನೆ. ಆದರೆ ನೀವು ಹಾಗಾಗುವುದಕ್ಕೆ ನಿಮ್ಮ ಅಕ್ಕಪಕ್ಕ ಇರುವವರು ಬಿಡುವುದಿಲ್ಲ. ಈ ಧರ್ಮಸಂಕಟದಿಂದ ಬಚಾವಾಗಬೇಕಾದರೆ ಈ ಮೂರು ಕತೆಗಳನ್ನು ಓದಿ. ಅವಳು ಊರು ಬಿಟ್ಟಾಗಲೇ ನಾನು ಆತಂಕಪಟ್ಟೆ! ‘ಅವಳಿಗೆ ಅನಾರೋಗ್ಯವಾಯಿತು. ನಾನು ಅವಳ ಆರೈಕೆ ಮಾಡಿದೆ. ತುಂಬ ನಿಗಾವಹಿಸಿದೆ. ಶ್ರದ್ಧೆಯಿಂದ ಅಟೆಂಡ್ ಮಾಡಿದೆ. ಹೀಗಿರುವಾಗಲೇ ಅವಳ ವಿದ್ಯಾಭ್ಯಾಸ ಅತಂತ್ರವಾಯಿತು. ಓದಿದ್ದು ಸಾಕು ಅಂತ ಅವಳಿಗೂ ಅನ್ನಿಸಿತು. ನೌಕರಿಗೆ ಸೇರಿಕೊಳ್ಳುತ್ತೇನೆ ಅಂದಳು. ಅದೇಕೋ ಅವಳು ಬೆಂಗಳೂರಿಗೆ ಹೋಗುವುದು ನನಗೆ ಇಷ್ಟವಿರಲಿಲ್ಲ. ಅಲ್ಲಿಗೆ ಹೋದರೆ ನನ್ನನ್ನು ಮರೆತು ಬಿಡುತ್ತಾಳೆ ಎಂಬ ಆತಂಕ. ಯಾವುದೋ ಸಿಕ್ಸ್ತ್ ಸೆನ್ಸ್ ಹಾಗಂತ ಹೇಳುತ್ತಿತ್ತು. ಅವಳು ನನ್ನ ಮಾತು ಕೇಳದೆ ಬೆಂಗಳೂರಿಗೆ ಹೋಗಿ ಕೆಲಸಕ್ಕೆ ಸೇರಿಬಿಟ್ಟಳು. ವಿಷ ನಗರಿ ಬೆಂಗಳೂರು ಅವಳನ್ನು ಬದಲಾಯಿಸಿ, ನಮ್ಮ ಪ್ರೇಮವನ್ನು ಕೊಂದು ಹಾಕಿತು. ಇದೇ ಬೇಸರದಲ್ಲಿ ಸಿಗರೇಟು, ಕುಡಿತಗಳೆರಡನ್ನೂ ಕಲಿತು ಬಿಟ್ಟೆ. ಮುಂದೇನು ಮಾಡಲಿ? ಸಮಾಧಾನ ಅಂಕಣಕ್ಕೆ ಬಂದ ಈ ಪ್ರಶ್ನೆಗೆ ರವಿ ಬೆಳಗೆರೆ ನೀಡಿದ ಉತ್ತರವೇನು? ನಿಮ್ಮ ಹಾಡಿಗೆ ದನಿಯಾಗುವ ಪುಟ್ಟ ಸ್ಪೀಕರ್ ಒಂಟಿಯಾಗಿರುವವರು, ವಿದ್ಯಾರ್ಥಿಗಳು, ಹಾಸ್ಟೆಲ್, ಅಡುಗೆ ಮನೆಯಲ್ಲಿ ಸಂಗೀತ ಕೇಳುವ ಅಭ್ಯಾಸವಿರುವವರಿಗೆ ಇದು ಬೆಸ್ಟ್. ಕಿಸೆಯಲ್ಲೇ ಇಟ್ಟುಕೊಂಡು ಹೊಲಕ್ಕೆ ಕೂಡ ಹೋಗಬಹುದು. ಇದೊಂದು ಪುಟ್ಟ ಸ್ಪೀಕರ್ ಮತ್ತು ಆಡಿಯೋ ಸಿಸ್ಟಂ. ಇದರಲ್ಲೇ ರೇಡಿಯೋ, ಹಾಡು ಎಲ್ಲವನ್ನೂ ಕೇಳಬಹುದು. ಇದರ ಬಗ್ಗೆ ಫುಲ್ ಡೀಟೇಲ್ಸ್ ಈ ಬಾರಿಯ ವಾಟ್ಸ್ ಅಪ್ ಕಾಲಂನಲ್ಲಿ. ಮನಸ್ಸಿಗೆ ತಟ್ಟುವ, ಮನಸ್ಸನ್ನು ಕಲಕುವ, ಮನಸ್ಸನ್ನು ಸಂತೈಸುವ ಇಂಥ ಹತ್ತಾರು ಲೇಖನಗಳ ಕಣಜದಂತಿರುವ ಓ ಮನಸೇ ಪತ್ರಿಕೆಯ 112ನೇ ಸಂಚಿಕೆ ಈಗಾಗಲೇ ಮಾರುಕಟ್ಟೆಯಲ್ಲಿದೆ. ಓದುವ ಸುಖ ನಿಮ್ಮದಾಗಲಿ.

O manase