O Manase
O Manase

O Manase

This is an e-magazine. Download App & Read offline on any device.

Preview

ಭಾವನೆಗಳ ಶರಪಂಜರದಿಂದ ಹೊರಬರುವುದು ಹೇಗೆ? ನಿಮ್ಮ ಮನಸ್ಸಿಗೆ ನೀವೇ ಟೀಚರ್ ಭಾವನೆಗೆ ಗುಡ್ ಬೈ, ಲಾಜಿಕ್ ಗೆ ಜೈ ಕಲ್ಪನಾಲೋಕದಲ್ಲಿ ಸುಖಿಸುವವನು ಕವಿ, ಅದರಿಂದ ಅವನಿಗೆ ಮತ್ತು ರಸಿಕರಿಗೆ ಲಾಭವೂ ಇದೆ. ನಮ್ಮನಿಮ್ಮಂಥ ಸಾಮಾನ್ಯರು ಭಾವನೆಗಳ ಅಡಿಯಾಳಾದರೆ ಆರೋಗ್ಯ ಕೆಟ್ಟುಹೋಗುತ್ತದೆ, ತಲೆ ಎಕ್ಕುಟ್ಟೋಗುತ್ತದೆ. ಅದರ ಬದಲು ಎಲ್ಲವನ್ನೂ ಲಾಜಿಕಲ್ ಆಗಿ ಯೋಚನೆ ಮಾಡಿ. ಅದರ ಮೂಲಕ ಜ್ಞಾನ ಸಂಪಾದನೆಯಾಗುತ್ತದೆ, ಬದುಕು ಬಂಗಾರವಾದರೂ ಆದೀತು. ಈ ಬಾರಿಯ ಓ ಮನಸೇ ಸಂಚಿಕೆಯಲ್ಲಿ ಇಂಥಾ ಮನಃಶಾಸ್ತ್ರಕ್ಕೆ ಸಂಬಂಧಪಟ್ಟ ಒಂದು ಚಂದದ ಲೇಖನವಿದೆ. ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ಅನ್ನುವುದನ್ನು ನಾವು ಹೇಳಿಕೊಡುತ್ತೇವೆ. ಗಲಾಟೆ ಮಾಡಿದ್ರೆ ಹುಷಾರ್ ಸಮೂಹಸನ್ನಿ ಮತ್ತು ದಂಗೆಯ ದಮನ ಜನರು ಯಾಕೆ ದಂಗೆ ಏಳುತ್ತಾರೆ? ಯಾಕೆ ದೊಂಬಿ ಮಾಡುತ್ತಾರೆ? ಆ ಸಂದರ್ಭದಲ್ಲಿ ಅವರ ಮನಸ್ಸು ಯಾವ ರೀತಿ ವರ್ತಿಸುತ್ತದೆ? ಸರ್ಕಾರ ಇಂಥಾ ದಂಗೆಗಳನ್ನು ಹತ್ತಿಕ್ಕುವುದಕ್ಕೆ ಹೂಡುವ ತಂತ್ರಗಳೇನು? ಇವೆಲ್ಲದರ ಬಗ್ಗೆ ನಾಗೇಶ್ ಹೆಗಡೆ ವಿವರವಾಗಿ ಬರೆಯುತ್ತಾರೆ. ಇದು ಸೋಷಿಯಲ್ ಸೈಕಾಲಜಿ ಆಪರೇಷನ್ ಕಿಲ್ V ಗೊತ್ತು ಗೊತ್ತಿದ್ದೇ ಹಾದಿತಪ್ಪಿದ ಹುಡುಗಿಯ ಕತೆ ಶೀಲವನ್ನು ಕಳೆದುಕೊಳ್ಳುವುದು ಕೂಡಾ ಒಂದು ಟ್ರೆಂಡ್ ಆಗುತ್ತಿದೆಯಾ? ‘ನಿಲ್ಲು ನಿಲ್ಲೇ ಪತಂಗ, ಬೇಡಬೇಡ ಬೆಂಕಿಯ ಸಂಗ’ ಎಂದು ಈಗಿನ ಹುಡುಗಿಯರು ಹಾಡುವುದಿಲ್ಲ. ‘ಎಲ್ಲಿ ಜಾರಿತು ಮನವೂ..’ ಎಂಬ ಕವಿತೆಯೂ ಅವರಿಗೆ ಗೊತ್ತಿಲ್ಲ. ಶೀಲಾ ಕಿ ಜವಾನಿ ಎಲ್ಲಿ ಕಳೆದುಹೋಯಿತು ಅನ್ನುವರ ಬಗ್ಗೆಯಷ್ಟೇ ಅವರಿಗೆ ಆಸಕ್ತಿ. ಒಂದು ಸತ್ಯಕತೆಯನ್ನು ಓದಿ ಬೆಚ್ಚಿಬೀಳುವುದಕ್ಕೆ ಸಿದ್ಧರಾಗಿ ಬಾಲ್ ಅಲ್ಲ ಇದು ಕಂಪ್ಯೂಟರ್! ಕಾಣುವುದಕ್ಕೆ ಚೆಂಡಿನ ಥರ ಇದೆ, ಆದರೆ ಇದು ಒಂದು ಕಂಪ್ಯೂಟರ್. ಈಗಿರುವ ಡೆಸ್ಕ್ ಟಾಪ್ ಕಂಪ್ಯೂಟರುಗಳಿಗಿಂತ ಚಿಕ್ಕದು. ಈ ಪುಟ್ಟ ಪೆಟ್ಟಿಗೆಯೊಳಗೆ ರ್ಯಾಮ್, ಮದರ್ ಬೋರ್ಡ್, ಹಾರ್ಡ್ ಡಿಸ್ಕ್ ಎಲ್ಲವೂ ಅಚ್ಚುಕಟ್ಟಾಗಿ ಕುಳಿತಿದೆ. ಊರೂರು ಸುತ್ತುವವರಿಗೆ ಹೇಳಿ ಮಾಡಿಸಿದ ಸಾಧನವಿದು. ಖರೀದಿಗೆ ಮುಂಚೆ ಈ ಲೇಖನ ಓದಿರಿ. ಪ್ರೀತಿ ಪಾರಿಜಾತ – 2 ಅಮೃತಾ-ಇಮ್ರೋಜ್ ಪ್ರೇಮ್ ಕಹಾನಿ ಅದು ಪ್ರೀತಿಯೋ, ಆರಾಧನೆಯೋ, ಪೂಜೆಯೋ, ಭಜನೆಯೋ, ಅವರಿಬ್ಬರಿಗಷ್ಟೇ ಗೊತ್ತು. ದೇವರನ್ನು ವಿಪರೀತ ನಂಬುತ್ತಿದ್ದ ಅಮೃತಾಗೆ ಆ ದೇವರೇ ಇಮ್ರೋಜ್ ರೂಪದಲ್ಲಿ ಸಿಕ್ಕಿದ್ರಾ? ಅವೆಲ್ಲವನ್ನೂ ಇಮ್ರೋಜ್ ಬಾಯಲ್ಲೇ ಕೇಳಬೇಕು. ಕಳೆದ ಸಂಚಿಕೆಯಿಂದ ಮುಂದುವರಿದ ಭಾಗ ಇಲ್ಲಿದೆ ಮದುವೆ ಅನ್ನುವ ಹಕ್ಕು, ಕರ್ತವ್ಯ ಮತ್ತು ಅನಿವಾರ್ಯ ಕರ್ಮ ಹೆಣ್ಮಕ್ಕಳ ಮದುವೆಯಾಗದೇ ಇರುವುದು ನಿಮ್ಮ ಹಕ್ಕು ಮತ್ತು ಮದುವೆಯಾಗುವುದು ನಿಮ್ಮ ಕರ್ತವ್ಯ. ಮದುವೆಯಾಗದೇ ಮಗು ಮಾಡಿಕೊಂಡರೆ ಮಹಾಪಾಪ. ಹಾಗಂತ ಸಂವಿಧಾನದಲ್ಲಿ ಹೇಳಿಲ್ಲ. ಆದರೂ ಎಲ್ಲರೂ ಮದುವೆಯಾಗುತ್ತಾರೆ. ಮದುವೆಯೆಂಬ ಇಂಜಿನ್ ಜೊತೆ, ತಲೆನೋವೆಂಬ ಬೋಗಿಗಳು ಉಚಿತವಾಗಿ ದೊರಕುತ್ತವೆ. ವಿವಾಹಿತರ ಸಂಕಷ್ಟಗಳ ಬಗ್ಗೆ ಮಹಾಶ್ವೇತ ಭಯಂಕರ ಸಹಾನುಭೂತಿಯಿಂದ ಬರೆದ ಲೇಖನ ಓದಿ ಇವೆಲ್ಲದರ ಜೊತೆಗೆ ಸೈನ್ಸ್ ಪೇಜ್, ಸಮಾಧಾನ, ಗುಣಮುಖ, ಲಾ ಪಾಯಿಂಟು, ಸೈಡ್ ವಿಂಗ್, ಫೇಸ್ ಬುಕ್ ಪದ್ಯಗಳು ಮೊದಲಾದ ಅಂಕಣಗಳು.

O manase