Hi Bangalore
Hi Bangalore

Hi Bangalore

This is an e-magazine. Download App & Read offline on any device.

ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೦೯, ನವೆಂಬರ್ ೨೮, ೨೦೧೩ ಬೆಲೆ : ೧೫ ರು ಮುಖಪುಟ ಲೇಖನ ಎಂಪಿ ಪಲ್ಯ ಅಣ್ಣ ಅಂಗಿ ಬಿಚ್ಚಿ ಉಂಡ! ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವ ರನ್ನು ರಾಜ್ಯಕ್ಕೆ ಕರೆತಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೊಬ್ಬಿರಿಯುತ್ತಿದ್ದರೆ, ಅತ್ತ ಅವರ ಖಾಸಾ ಸಹೋದರ ಗೋಪಾಲ್ ಜೋಶಿ ಹುಬ್ಬಳ್ಳಿ ಯಲ್ಲಿ ಕುಳಿತು ರಾಷ್ಟ್ರೀಕೃತ ಕೆನರಾ ಬ್ಯಾಂಕ್‌ಗೆ ನೂರಾರು ಕೋಟಿ ಲೆಕ್ಕದಲ್ಲಿ ಉಂಡೆನಾಮ ತಿಕ್ಕಿ ಸಿಬಿಐ ಬಲೆಗೆ ಬಿದ್ದಿದ್ದಾನೆ. ಹಗರಣದ ಹಿಂದೆ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿಯ ಹೆಸರೂ ಕೇಳಿ ಬರುತ್ತಿರುವುದರಿಂದ ಬಿಜೆಪಿ ಪಡಸಾಲೆಯಲ್ಲೀಗ ನೀರವ ಮೌನ. ಬಂಧನದ ಭೀತಿ ಯಲ್ಲಿರುವ ಗೋಪಾಲ್ ಜೋಶಿ ಯಾವುದೇ ಕ್ಷಣದ ಲ್ಲಾದರೂ ಸಿಬಿಐ ವಶವಾಗಬಹುದು. ಆ ಮೂಲಕ ಜೋಶಿ ಸಹೋದರರ ಕೋಟಿ ಕೋಟಿ ಹಗರಣ ಹೊರ ಬೀಳುವುದು ಶತಃಸಿದ್ಧ. ಈ ಎಲ್ಲದರ ಕುರಿತು ಈ ವರದಿ. ಲೋಕೇಶ್ ಕೊಪ್ಪದ್ ಖಾಸ್‌ಬಾತ್ ಸಾಯಲಿಕ್ಕೆಂದೇ ನನ್ನ ಮನೆಗೆ ಬಂದವನು.....! ಅವನು ಬದುಕಿದ್ದಿದ್ದರೆ ಅವನಿಗೆ ಐವತ್ತಾರಾಗಿರುತ್ತಿದ್ದವು ವರ್ಷ. ಅವನಿದ್ದಿದ್ದರೆ ಆ ಏಳು ಮಕ್ಕಳ ಪೈಕಿ ನಾಲ್ಕನೆಯವನಾಗಿರುತ್ತಿದ್ದ. ಬದುಕಿದ್ದಿದ್ದರೆ ರಾಮು, ನನ್ನ ಮುಪ್ಪಿನ ಕಾಲದ ಅತ್ಯುತ್ತಮ ಗೆಳೆಯನಾಗಿರುತ್ತಿದ್ದ. ಏಕೆಂದರೆ ಅವನಿಗೆ ಧೂರ್ತತನ ಗೊತ್ತಿರಲಿಲ್ಲ. ವಂಚನೆ, ಆತ್ಮವಂಚನೆ, ಸ್ವಪ್ರಶಂಸೆ, ಪರನಿಂದೆ ಯಾವುದೂ ಅವನಲ್ಲಿರಲಿಲ್ಲ. ಏಕೆಂದರೆ ರಾಮುವಿಗೆ ಮಾತು ಬರುತ್ತಿರಲಿಲ್ಲ. ನಡೆಯಲು ಆಗುತ್ತಿರಲಿಲ್ಲ. ಬುದ್ಧಿ ಬೆಳೆದಿರಲಿಲ್ಲ. ರಾಮು ವಿಗೆ ಜಗತ್ತೇ ಗೊತ್ತಿರಲಿಲ್ಲ. ನನಗವನು ಮಿತ್ರನಾಗಿದ್ದ. ಪ್ರಶ್ನೆಯಾಗಿದ್ದ. ಕಥಾವಸ್ತುವಾಗಿದ್ದ. ೧೯೮೦ರ ದಶಕದಲ್ಲಿ ನಾನು ಬರೆದ ‘ಕಾಡು ಕೂಸು’ ಕಥೆಗೆ ಅವನೇ ಕಥಾನಾಯಕ. ಬೆರಳು, ಮೊಳಕಾಲು, ಸೊಂಟ, ನಾಲಗೆ, ಬುದ್ಧಿ-ಉಹುಂ, ಯಾವುದೂ ಅವನ ಹಿಡಿತದಲ್ಲಿರಲಿಲ್ಲ. ಆದರೂ ರಾಮು ಬದುಕಿನ ಸಂಕೇತವಾಗಿದ್ದ. ಸಾವೆಂಬುದು ಹತ್ತಿರಕ್ಕೂ ಸುಳಿಯಲಾರದಷ್ಟು ಜೀವನ್ಮುಖಿಯಾಗಿದ್ದ. ದುರಂತವೆಂದರೆ, ಅಂಥ ರಾಮೂ ನನ್ನ ಮನೆಗೇ ಬಂದ. ಸಾಯಲೆಂದೇ ಬಂದ. ನಮ್ಮೆಲ್ಲರ ಕಣ್ಣೆದುರಿಗೇ ಸತ್ತುಹೋದ. ಕಳೆದ ದೀಪಾವಳಿಗೆ ಬಹುಶಃ ರಾಮು ಸತ್ತು ಇಪ್ಪತ್ತೇಳು ವರ್ಷಗಳು. ಆರ್.ಬಿ ಸಾಫ್ಟ್ ಕಾರ್ನರ್ ಮಾಡಿದ ಪ್ರೀತಿ ಮರೆಯುವುದುಂಟೆ? ‘ಪ್ರೀತಿ’, ಬಹುಶಃ ಈ ಶಬ್ದಕ್ಕೆ ಒಂದು ನವಿರಾದ ಭಾವವನ್ನುಂಟು ಮಾಡುವ ಶಕ್ತಿ ಇದೆ. ಪ್ರೀತಿ ಅಂದರೆ ಮಾಧುರ್ಯ, ಅದೊಂದು ಅನುಭೂತಿ, ಬದುಕಿಗೊಂದು ಸುಯೋಗ ಅಂತೆಲ್ಲಾ ಅನಿಸುತ್ತದೆ. ಆದರೆ ಅದೇ ಪ್ರೀತಿ ಕೆಲವರಿಗೆ ಮುಗಿಯಲಾಗದ ದುಃಖ, ಕೊನೆಗೂ ಅರ್ಥವಾಗದೇ ಉಳಿದು ಹೋದ ಸಂಗತಿಯೂ ಆಗಿರಬಹುದು. ನೀವು ಪ್ರೀತಿ ಮಾಡಿದ್ದೀರಾ? ನಿಮಗೆ ಪ್ರೀತಿ ದಕ್ಕಿತಾ? ಸವಿ ಸಿಕ್ಕಿತಾ? ಇಲ್ಲಾ ಅರಳದೆ ನರಳಿ ಮುದುಡಿ ಹೋಯಿತಾ? ಬದುಕು ಬಣ್ಣವಾಯಿತಾ ಇಲ್ಲಾ ಬದುಕಿನ ಕ್ಯಾನ್ವಾಸೇ ಕಪ್ಪಾಯಿತಾ? ಆ ಪ್ರೀತಿ ಬದುಕಿಗೆ ಕೊಳಲಾಯಿತಾ ಇಲ್ಲಾ ಮನಸ್ಸಿಗೆ ಉರುಳಾಯಿತಾ? ನೀವು ಯಾವತ್ತೋ ಪ್ರೀತಿಸಿದ್ದಿರಬಹುದು. ನಿಮ್ಮ ಪ್ರೀತಿ ಯಶಸ್ವಿಯಾಗಿ ಬದುಕು ಸುಗಂಧವಾಗಿರಬಹುದು ಅಥವಾ ಕಳೆದು ಹೋಗಿ ಮರೆಯದ ನೆನಪಾಗಿರಬಹುದು. ಇವತ್ತಿನ ನಿಮ್ಮ ಮನಸ್ಸಿಗೆ ಅವತ್ತಿನ ಪ್ರೇಮ ಏನೆನಿಸುತ್ತದೆ? ನಿಮ್ಮದು ಯಶಸ್ವಿ ಪ್ರೇಮವಾಗಿದ್ದರೆ, ಪ್ರೀತಿಸಿ ಮದುವೆ ಆಗಿದ್ದು ಸರಿ ಎನಿಸುತ್ತದಾ? ಇಲ್ಲಾ ಎಲ್ಲರನ್ನೂ ದೂರ ಮಾಡಿಕೊಂಡು ತಪ್ಪು ಮಾಡಿಬಿಟ್ಟೆ ಅನಿಸುತ್ತದಾ? ಇಲ್ಲಾ ನನ್ನ ಬಾಳು ಬಂಗಾರವಾಯಿತು ಎನಿಸುತ್ತದಾ? ಬೆಳಗೆರೆ ಹಲೋ ಮೋದಿ ಮೋಡಿ ಯಾವತ್ತಾದರೂ ಶೂರ್ ಶಾಟ್! ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಹೋದ ನಂತರ ಕಾಂಗ್ರೆಸ್ ನಾಯಕರು ಆತಂಕಗೊಂಡಿದ್ದಾರೆ. ಮೋದಿ ತಮಿಳು ನಾಡಿಗೆ ಹೋಗಲಿ, ಆಂಧ್ರ ಪ್ರದೇಶಕ್ಕೆ ಹೋಗಲಿ ಅಥವಾ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‌ಗಡ್ ಹೀಗೆ ಎಲ್ಲಿಗೇ ಹೋಗಲಿ, ಒಟ್ಟಿನಲ್ಲಿ ಅವರು ಹೋಗಿ ಬಂದ ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರಿಗೆ ಅಥವಾ ಮಿತ್ರ ಪಕ್ಷಗಳ ನಾಯಕರಿಗೆ ಒಂದು ರೀತಿಯ ಧಾವಂತ ಶುರುವಾಗುತ್ತದೆ. ಹೀಗಾಗಿಯೇ ಶುರು ಶುರುವಿನಲ್ಲಿ ಮೋದಿಯನ್ನು ಟೀಕಿಸುವ ಭರದಲ್ಲಿ ಮೋದಿ ಅಲೆ ಎಲ್ಲೂ ಇಲ್ಲ. ಮೋದಿ ಮೋಡಿಯೂ ನಡೆಯುವುದಿಲ್ಲ ಎಂದು ಅವರು ಹೇಳುತ್ತಿದ್ದರು. ಆದರೆ ಕಾಲ ಕ್ರಮೇಣ ಮೋದಿ ಅಲೆ ಎಂಬುದು ಇದೆ ಅನ್ನುವುದು ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳ ನಾಯಕರಿಗೆ ಅರ್ಥವಾಗಿದೆ. ಹೀಗಾಗಿ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ತಮ್ಮ ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ ಪಕ್ಷವಂತೂ ಇನ್ನಿಲ್ಲದಂತೆ ಹೆಣಗಾಡುತ್ತಿದೆ. ಗುಜರಾತ್‌ನಲ್ಲಿ ನಡೆದ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಶುರುವಾಗುವ ಅವರ ಹೀಯಾಳಿಕೆ ಫೈನಲಿ, ಮೋದಿ ಒಬ್ಬ ನರಹಂತಕ ಎಂಬ ತೀರ್ಮಾನ ಕೊಡುವಲ್ಲಿಗೆ ತಲುಪುತ್ತದೆ. ರವಿ ಬೆಳಗೆರೆ ಬಾಟಮ್ ಐಟಮ್ ಮಕ್ಕಳು ತರುವ ತಲೆನೋವಿಗೆ ಮದ್ದೇನು? ನಾವು ಕಷ್ಟಪಟ್ಟಿದ್ದು ಸಾಕು, ಆ ಕಷ್ಟ ನಮ್ಮ ಮಕ್ಕಳಿಗೆ ಬೇಡ. ಅವು ಸುಖವಾಗಿರಬೇಕು. ನಮ್ಮ ಜೀವನಕ್ಕೆ ಇದಕ್ಕಿಂತ ಬೇರೆ ಗುರಿ ಏನಿದೆ? ಹಾಗಂತ ನಾವು-ನೀವು ಆಗಾಗ ಹೇಳಿರುತ್ತೇವೆ. ಬಾಲ್ಯದಲ್ಲಿ ನಾವು ಪಟ್ಟ ಕಷ್ಟ, ಬೆಳೆಯುವ ಸಂದರ್ಭದಲ್ಲಿ ಅನು ಭವಿಸಿದ ಪಡಿಪಾಟಲು ಇವನ್ನೆಲ್ಲ ಮನಸ್ಸಿನಲ್ಲಿಟ್ಟು ಕೊಂಡು ನಾವು ಈ ಮಾತು ಹೇಳಿರುತ್ತೇವೆ. ಈ ಮಾತು ಬರೀ ಮೇಲ್ತೋರಿಕೆಯದಲ್ಲ. ನಿಜಕ್ಕೂ ನಮ್ಮ ಹೃದಯದ ಆಳದಿಂದಲೇ ಬಂದಿದ್ದು. ಆದರೆ ಇಂತಹ ಮಾತುಗಳನ್ನಾಡುವ ನಾವು ಒಂದು ಸಂಗತಿಯನ್ನು ಬಹುಬೇಗ ಮನವರಿಕೆ ಮಾಡಿಕೊಳ್ಳ ಬೇಕು. ಇಂತಹ ಮಾತುಗಳನ್ನು ಆಡುವ ಮೂಲಕ ನಾವೇ ನಾವಾಗಿ ನಮ್ಮ ಮಕ್ಕಳ ಬದುಕಿಗೆ ಅಡ್ಡಗಾಲು ಹಾಕುತ್ತೇವೆ. ರವೀ ವರದಿ ಅತ್ತೆಯ ಸ್ವತ್ತು ಅಳಿಯ ದಾನ ಮಾಡಿದ ಕಥೆ ಬೆಂಗಳೂರಿನ ನಟೋರಿಯಸ್ ವಂಚಕ ದಂಪತಿ ಪೂರ್ಣಿಮಾ ಮತ್ತಾಕೆಯ ಗಂಡ ಶಶಿಕುಮಾರ್ ಪರಪ್ಪನ ಅಗ್ರಹಾರದ ಜೈಲಿನಿಂದ ಹೊರಬಂದಿದ್ದಾರೆ. ಅವರಿಗೀಗ ಮತ್ತ್ಯಾರನ್ನಾದರೂ ತಮ್ಮ ವಂಚನೆಯ ಬಲೆಗೆ ಬೀಳಿಸಿಕೊಳ್ಳುವ ಉಮೇದಿ ಶುರುವಾಗಿ ಹೋಗಿದೆ. ಹಾಗಾಗಿ ಅವರೀಗ ನಗರದ ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಕೆಲಸ ಮಾಡುವ ಅಮಾಯಕ ಟಿಕ್ಕಿಗಳ ಬೇಟೆ ಆರಂಭಿಸಿದ್ದಾರೆ. ಸದಾ ಬೆಂಝ್, ಬಿ.ಎಂ.ಡಬ್ಲ್ಯೂನಂತಹ ಐಷಾರಾಮಿ ಕಾರು ಗಳಲ್ಲಿ ಅಡ್ಡಾಡುವ ಈ ವಂಚಕ ದಂಪತಿಗಳ ಪೈಕಿ ಶಶಿ ಕುಮಾರ್‌ನ ಪತ್ನಿ ಪೂರ್ಣಿಮಾ ತನ್ನನ್ನು ತಾನು ಸರ್ಕಾ ರದ ಉನ್ನತ ಅಧಿಕಾರಿ ಎಂದು ಪರಿಚಯಿಸಿಕೊಳ್ಳುತ್ತಾಳೆ. ಮಾತೆತ್ತಿದರೆ ಮಾಜಿ ಪ್ರಧಾನಿ ದೇವೆಗೌಡರು ನನ್ನ ದೂರದ ಸಂಬಂಧಿ ಎಂದು ಭೋಂಗು ಬಿಡುತ್ತಾಳೆ. ಲಕ್ಷ್ಮೀಸಾಗರ ಸ್ವಾಮಿಗೌಡ ವರದಿ ಶಿವಮೊಗ್ಗದಲ್ಲಿ ವಕೀಲ ನಂಜುಡಪ್ಪನವರ ಮಗ ಹಳಿಬಿಟ್ಟನೇ? ಭದ್ರಾವತಿಯ ಖ್ಯಾತ ವಕೀಲ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಎಂ.ಬಿ. ನಂಜಪ್ಪನವರ ಕುಟುಂಬ ಅತ್ಯಾಚಾರ ಪ್ರಕರಣವೊಂದರ ಸಂಬಂಧ ಊರು ಬಿಡುವಂತಾಗಿದೆ. ಭದ್ರಾವತಿಯಲ್ಲಿ ಬಿಸಿ ಬಿಸಿ ಚರ್ಚೆಗೀ ಡಾಗುತ್ತಿರುವ ಪ್ರಕರಣ ಪೊಲೀಸ್ ಇಲಾಖೆಗೂ ಬಿಸಿ ಮುಟ್ಟಿಸಿದೆ. ಭದ್ರಾವತಿಯ ಹೊಸಬಳ್ಳಾಪುರದ ಆಶ್ರಯ ಬಡಾವಣೆಯ ಕಣ್ಣನ್ ಎಂಬ ಕೂಲಿ ಕೆಲಸ ಮಾಡುವಾತನ ಮಗ ರಮೇಶ ಭದ್ರಾವತಿ ನ್ಯೂಟೌನ್ ಠಾಣೆಯಲ್ಲಿ ಸೆಪ್ಟೆಂಬರ್ ಮೊದಲ ವಾರ ದೂರೊಂದನ್ನು ದಾಖಲಿಸುತ್ತಾನೆ. ತನ್ನ ತಂಗಿ ಪಾರು ಅಪ್ರಾಪ್ತೆಯಾಗಿದ್ದು ಆಕೆ ಎಂ.ಬಿ.ನಂಜಪ್ಪನ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದು ವಕೀಲರ ಪುತ್ರ ಕಾರ್ತಿಕ್ ತನ್ನ ತಂಗಿಯ ಮೇಲೆ ಅತ್ಯಾಚಾರ ನಡೆಸಿದ್ದರಿಂದ ಪಾರು ಪ್ರೆಗ್ನೆಂಟ್ ಆಗಿದ್ದಾಳೆ. ವರದಿಗಾರ ವರದಿ ಚಾಲಾಕಿ ಕಳ್ಳ ಖಾಜಾನನ್ನು ಶಿಷ್ಯರೇ ಬಡಿದು ಕೊಂದರು! ಚಿತ್ರದುರ್ಗದ ಚಾಲಕಿ ಕಳ್ಳ, ಅಲ್ಲಿನ ಪೊಲೀಸು ಠಾಣೆಗಳ ಎಂ.ಒ.ಬಿ ಗಿರಾಕಿ ನಟೋರಿ ಯಸ್ ಖದೀಮ ಖಾಜಾ ಬೀದಿ ಹೆಣವಾಗಿದ್ದಾನೆ. ಆತನನ್ನ ಅವನ ಖಾಸಾ ಶಿಷ್ಯ ಮನ್ಸೂರ್ ಮತ್ತಾತನ ಪುಡಿ ಶಿಷ್ಯರು ಸಿಕ್ಕಸಿಕ್ಕಲ್ಲಿ ಕತ್ತರಿಸಿ ಕೊಂದು ಹಾಕಿ ದ್ದಾರೆ. ಹಾಗಾಗಿ ಚಿತ್ರದುರ್ಗದ ಅಮಾಯಕ ಮಹಿಳೆ ಯರ ಜೊತೆಗೆ ಪೊಲೀಸರೂ ಖಾಜಾನ ಕಾಟ ತಪ್ಪಿತೆಂದು ನಿರುಮ್ಮಳವಾಗಿದ್ದಾರೆ. ಆದರೆ ತನ್ನ ಶಿಷ್ಯ ರಿಂದಲೇ ಬರ್ಬರವಾಗಿ ಕೊಲೆಯಾಗಿ ಹೋದ ಖದೀಮ ಖಾಜಾನಿಗೆ ಚಿತ್ರದುರ್ಗದಲ್ಲೊಂದು ನಟೋರಿಯಸ್ ಇತಿಹಾಸವಿದೆ. ಅದರ ಫುಲ್ ಡೀಟೇಲ್ಸ್ ಇಲ್ಲಿದೆ. ಕಾಂತರಾಜ್ ಅರಸ್ ವರದಿ ಶೋಕಿಲಾಲ ವೈದ್ಯನಿಗೆ ಇಂಥಾ ಸಾವು ಬರಬಾರದಿತ್ತು! ಬಾಗಲಕೋಟೆಯ ಹಿರಿಯ ಸ್ತ್ರೀರೋಗ ವೈದ್ಯ ಡಾ|| ಉದಯ ಹೆರೇಂಜಲ್ ತೀರಿಕೊಂಡಿದ್ದಾರೆ. ಈಗಷ್ಟೇ ಐವತ್ತೊಂಭತ್ತರ ಹರೆಯಕ್ಕೆ ಕಾಲಿಟ್ಟಿದ್ದ ಅವರದು ಸಾಯುವ ವಯಸ್ಸಲ್ಲ. ಆದರೂ ಅವರಿಗಿದ್ದ ಕಿಡ್ನಿ ಸಮಸ್ಯೆಯನ್ನೇ ನೆಪ ಮಾಡಿ ಕೊಂಡ ಜವರಾಯ ಹೆರೇಂಜಲ್‌ರನ್ನು ಎಬ್ಬಿಸಿ ಕೊಂಡು ಹೋಗಿಬಿಟ್ಟಿದ್ದಾನೆ. ಅವಿಭಜಿತ ವಿಜಾಪುರ ಜಿಲ್ಲೆ ಹೊರತುಪಡಿಸಿಯೂ ಇವರ ಸಾವು ಲಕ್ಷಾಂತರ ಬಡರೋಗಿಗಳ ಪಾಲಿಗೆ ಅಕ್ಷರಶಃ ತುಂಬಲಾರದ ನಷ್ಟ. ರವಿ ಕುಲಕರ್ಣಿ ವರದಿ ಸಿದ್ದುಗೆ ಬಿತ್ತು ನೋಡಿ ಕಡಿವಾಣ ಈಗ ರಾಹುಲ್ ಗಾಂಧಿಯೇ ಜಾಣ ಕರ್ನಾಟಕದ ರಾಜಕೀಯದಲ್ಲಿ ದೇವರಾಜ ಅರಸರಂತೆ ಪವರ್‌ಫುಲ್ ಸಿಎಂ ಆಗಿರಬೇಕು ಎಂದು ಹಪಹಪಿಸುತ್ತಿದ್ದ ಸಿಎಂ ಸಿದ್ಧರಾಮಯ್ಯನವರಿಗೆ ಕಡಿ ವಾಣ ಹಾಕಿರುವ ಕಾಂಗ್ರೆಸ್ ಹೈಕಮಾಂಡ್ ಆ ಮೂಲಕ ಪರಮೇಶ್ವರ್ ಅವರನ್ನು ಪರ್ಯಾಯ ಶಕ್ತಿಯಾಗಿ ಬೆಳೆ ಸುವ ಸ್ಪಷ್ಟ ಸೂಚನೆ ನೀಡಿದೆ. ಅಂದ ಹಾಗೆ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಅನ್ನಭಾಗ್ಯ ದಿಂದ ಹಿಡಿದು ಅಹಿಂದ ವರ್ಗಗಳ ಸಾಲ ಮನ್ನಾದ ತನಕ ಹಲವು ಯೋಜನೆಗಳನ್ನು ಪ್ರಕಟಿಸಿದ ಸಿಎಂ ಸಿದ್ಧರಾಮಯ್ಯ ಒಂದು ಮಟ್ಟದಲ್ಲಿ ಜನರ ಮೆಚ್ಚುಗೆ ಗಳಿಸಿದ್ದು ನಿಜ. ಯಾಕೆಂದರೆ ಒಂದು ರುಪಾಯಿಗೆ ಒಂದು ಕೆಜಿಯಂತೆ ಅಕ್ಕಿ ಕೊಡುವ ಯೋಜನೆ ನಾಡಿನ ಎಲ್ಲ ಬಡವರನ್ನು ತಲುಪುವ ಯೋಜನೆಯಾಗಿದ್ದರಿಂದ ಅದನ್ನು ಯಾರೂ ವಿರೋಧಿಸಲು ಸಾಧ್ಯವಿರಲಿಲ್ಲ. ಆರ್.ಟಿ.ವಿಠ್ಠಲಮೂರ್ತಿ ವರದಿ ಜೈಹಿಂದ್ ಆಂದ ಯೋಧನ ಬೀದಿಗೆ ತಂದು ನಿಲ್ಲಿಸಿದರಲ್ಲಾ? ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಖುದ್ದು ಗಮನಹರಿಸಿ ನ್ಯಾಯ ಕೊಡಿಸಬೇಕಾದ ಪ್ರಸಂಗವಿದು. ವಸತಿ ಸಚಿವ ಅಂಬರೀಷ್, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್ ಸ್ವಲ್ಪ ಕಣ್ತೆರೆದು ನೋಡಿದರೂ ಸಾಕು, ಈ ಸ್ವಾತಂತ್ರ್ಯವೀರನ ಕುಟುಂಬಕ್ಕೆ ನ್ಯಾಯ ಸಿಕ್ಕುತ್ತದೆ. ರಾಜಕೀಯ ಪಕ್ಷಗಳ ಜಿದ್ದಾಜಿದ್ದಿಗೆ ಒಬ್ಬ ದೇಶಭಕ್ತನ ಕುಟುಂಬ ಬೀದಿಗೆ ಬಿದ್ದಿದೆ. ಭರ್ತಿ ಐದು ವರ್ಷ ರಾಜ್ಯವನ್ನು ಲೂಟಿ ಹೊಡೆದ ಬಿಜೆಪಿ ಸರ್ಕಾರಕ್ಕೆ ಈ ಅಳಲು ಕೇಳಲಿಲ್ಲ. ಸತೀಶ್ ಬಿಲ್ಲಾಡಿ ಅಂಕಣ:ನೇವಿ ಅವನು ಬಿಡಿಸಿಕೊಂಡ ಹಗ್ಗ ಅವಳನ್ನು ಕಟ್ಟಿ ಹಾಕಿದ್ದು ಗಂಡ ಮನೆ ಬಿಟ್ಟು ಹೋದಾಗಲೂ ಪೊಲೀಸ್ ಸ್ಟೇಷನ್ನಿನ ಮೆಟ್ಟಿಲು ಹತ್ತದ ಪದ್ಮಾಂಬಿಕೆ ಹತ್ತಲೇ ಬೇಕಾದ ಅನಿವಾರ್ಯತೆ ಬಂದಿದ್ದು ಕುಲಶೇಖರ ಕಾಣೆಯಾದ ನಂತರ. ಐದೂವರೆ ಅಡಿ, ಎಣ್ಣೆಗೆಂಪು ಬಣ್ಣ, ಹುಬ್ಬುಗಳ ಮಧ್ಯೆ ಒಂದು ಮಚ್ಚೆ, ಕೊರಳ ಮೇಲೆ ಇನ್ನೊಂದು ಅಂಥದ್ದೇ ಮಚ್ಚೆ, ಸಾಧಾರಣ ರೂಪ, ಸೊಗಸಾದ ದನಿ. ಹೀಗೆ ಅವನ ಬಗ್ಗೆ ಅವಳು ಹೇಳಿದ ವಿವರಗಳಲ್ಲಿ ಪೊಲೀಸರಿಗೆ ಅಂಥ ಆಸಕ್ತಿ ಏನೂ ಹುಟ್ಟಿರಲಿಲ್ಲ ವಾದರೂ ಅವಳು ಅದ ನ್ನೆ ಹೇಳುವ ಮೂಲಕ ಬಹುಶಃ ಮಗನನ್ನು ತಾನು ಕಳೆದುಕೊಂಡಿರುವ ದುರಂತವನ್ನು ಅವನ ಚಹರೆಯ ವಿವರದಲ್ಲಿ ಮರಳಿ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಆದರೆ ಇದೆಲ್ಲವನ್ನೂ ಕಟ್ಟಿಟ್ಟು, ಅವನು ತೊಟ್ಟ ಬಟ್ಟೆಯ ಬಣ್ಣ, ಹಿನ್ನೆಲೆ, ಸ್ವಭಾವಗಳಷ್ಟನ್ನೇ ಕೇಳಿ ತಿಳಿದುಕೊಂಡು ಹುಡು ಕುತ್ತೇವೆ ಅಂತ ಹೇಳಿ ಪೊಲೀಸರು ಅವಳನ್ನು ಕಳಿಸಿ ಕೊಟ್ಟರು. ನೇವಿ ಅಂಕಣ: ಜಾನಕಿ ಕೆಳಗೂರು ಎಂಬ ವಿಸ್ಮಯ ನಗರಿಯ ಒಳಗೆ... ಹೊಸಗಾಲದ ಹುಡುಗರು ಹೇಗೆ ಬರೆಯು ತ್ತಾರೆ ಅನ್ನುವುದು ನಿಜಕ್ಕೂ ಕುತೂಹಲಕಾರಿ. ಅವರ ಗ್ರಹಿಕೆ, ನೋಟ ಎರಡೂ ಮತ್ತೇನನ್ನೋ ಹುಡುಕುತ್ತಾ, ಮತ್ತೇನನ್ನೋ ಬಗೆಯುತ್ತಾ ಇರುತ್ತದೆ. ನಾವು ಅಂದು ಕೊಂಡಿದ್ದನ್ನು ತಲೆಕೆಳಗು ಮಾಡುತ್ತದೆ. ಇತ್ತೀಚೆಗೆ ಕೀರ್ತಿ ಕೋಲ್ಗಾರ್ ಬರೆದ ಕಾದಂಬರಿ ಯೊಂದನ್ನು ಓದಿದೆ. ಮೇಲ್ನೋಟಕ್ಕೆ ಗೊಂದಲಗೊ ಳಿಸುವ, ಅಷ್ಟೇ ದಿಗ್ಭ್ರಮೆಗೊಳಿಸುವ ಕಾದಂಬರಿ ಅದು. ಅದನ್ನು ಓದಿದ ನಂತರ ಕೀರ್ತಿಗೊಂದು ಪತ್ರ ಬರೆದೆ. ಅದನ್ನು ಹಾಗ್ಹಾಗೇ ಇಲ್ಲಿ ಕೊಟ್ಟಿದ್ದೇನೆ. ಇದು ಕೀರ್ತಿಯ ಕಾದಂಬರಿಯ ವಿಪ್ಲವವನ್ನು ನಿಮಗೆ ದಾಟಿಸಿದರೂ ದಾಟಿಸೀತು. ಜಾನಕಿ ಅ೦ಕಣ:ಮರೆತ ಭಾರತ ಕಾರ್ತೀಕ ಭಜನೆಯ ಕರಾಮತ್ತು ಹಿಂದಿನ ಕಾಲದ ನಮ್ಮ ಹಳ್ಳಿಗಾಡಿನಲ್ಲಿ ದೀಪಾ ವಳಿ ಹಬ್ಬವನ್ನು ಈಗಿನಂತೆ ವಿಜೃಂಭಣೆಯಿಂದ ಆಚರಿಸು ತ್ತಿರಲಿಲ್ಲ. ಬಯಲು ಸೀಮೆಯ ನಮ್ಮ ಹಳ್ಳಿಗಳಲ್ಲಿ ಪ್ರತಿ ಯೊಬ್ಬರೂ ತಪ್ಪದೇ ಆಚರಿಸುತ್ತಿದ್ದ ಮತ್ತು ಈಗಲೂ ಆಚರಿಸುತ್ತಿರುವ ಹಬ್ಬವೆಂದರೆ ಉಗಾದಿಯೊಂದೆ. ನಮ್ಮ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಮುಸ್ಲಿಂ ಜನರು ಕೂಡ ಉಗಾದಿ ಹಬ್ಬವನ್ನು ತಮ್ಮ ಹಬ್ಬವೆಂಬಂತೆ ಆಚರಿಸು ತ್ತಾರೆ. ಶಿವರಾತ್ರಿಯಲ್ಲಿ ತಂಬಿಟ್ಟು ಮಾಡುತ್ತಿದ್ದುದ್ದರಿಂದ ಹಳ್ಳಿಗಾಡಿನ ಮಕ್ಕಳಿಗೆ ಅದು ಕೂಡ ವಿಶೇಷವಾಗಿ ರುತ್ತಿತ್ತು. ಶಿವರಾತ್ರಿಯಲ್ಲಿ ಮಾಡಿದ ತಂಬಿಟ್ಟು ಉಂಡೆ ಗಳನ್ನು ಹಳ್ಳಿಗರು ಗುಡಾಣಗಳಲ್ಲಿ ಇಟ್ಟುಕೊಂಡು ಎರಡು- ಮೂರು ತಿಂಗಳುಗಳ ತನಕ ತಿನ್ನುತ್ತಿದ್ದರು. ಇನ್ನೆರಡು ಗಮನಿಸಲ್ಪಟ್ಟ ಹಬ್ಬಗಳೆಂದರೆ ಸಂಕ್ರಾಂತಿ ಮತ್ತು ಗೌರಿ ಹಬ್ಬ. ಸಂಕ್ರಾಂತಿ ಹಬ್ಬದಲ್ಲಿ ದನ-ಕರುಗಳನ್ನು ತೊಳೆದು ಶೃಂಗಾರ ಮಾಡಿ ದೇವಸ್ಥಾನದವರೆಗೂ ಮೆರವಣಿಗೆ ಮಾಡಿ, ಸಂಜೆ ಹೊತ್ತು ಮುಳುಗುವ ಸಮಯದಲ್ಲಿ ಕಿಚ್ಚು ಹಾಯಿಸಲಾಗುತ್ತಿತ್ತು. ಸಂಕ್ರಾಂತಿ ಹಬ್ಬದಲ್ಲಿ ಕಡ್ಲೆ ಕಾಯಿ, ಅವರೆಕಾಯಿ, ಗೆಣಸು ಬೇಯಿಸಿ ಮನಸೋ ಇಚ್ಛೆ ತಿನ್ನುತ್ತಿದ್ದರು. ಕೇಶವರೆಡ್ಡಿ ಹಂದ್ರಾಳ ಅ೦ಕಣ: ಕೋಟೆ ಕಾಯ್ದ ತಾಯಂದಿರು ಕೆಂಬಾವುಟದಡಿ ಅರಳಿ ನಿಂತ ಸಂಗಾತಿ ಇವರು! ಹೋರಾಟದ ಹಾದಿಯಲ್ಲಿ ಜೊತೆಯಾದವರಿ ವರು. ಇಬ್ಬರು ನಡೆಯುವ ಹಾದಿಯೂ ಒಂದೇ ಆಗಿತ್ತು. ಮನಸ್ಸಿನೊಳಗೆ ಹೆಪ್ಪುಗಟ್ಟಿದ ಚಿಂತನೆಯು ಸಮ ಸಮಾಜ ನಿರ್ಮಾಣದೆಡೆಗೆ ದಾಪುಗಾಲು ಹಾಕಿಸಿತ್ತು. ದೂರದ ಹುಬ್ಬಳ್ಳಿಯಿಂದ ಭಾರತೀಯ ಕಮ್ಯುನಿಸ್ಟ್ ಪಕ್ಷದ ಹೋರಾಟಗಳಿಗೆ, ಚಿಂತನಾ ಶಿಬಿರಗಳಿಗೆ ತಪ್ಪದೇ ಹಾಜರಾಗುತ್ತಿದ್ದ ವಾಮನ ಮೂರ್ತಿಯಂತಿದ್ದ ಆ ಯುವಕ ಭಾಷಣಕ್ಕೆ ನಿಂತ ರಂತೂ ತ್ರಿವಿಕ್ರಮನೇ ಆಗಿಬಿಡುತ್ತಿದ್ದ. ಹೆಗಲ ಮೇಲೆ ಕೆಂಬಾವುಟ ಹೊತ್ತು ಬೀದಿಯಲ್ಲಿ ಹೊರಟರಂತೂ ಬಂದೂಕು, ಲಾಠಿ ಹಿಡಿದು ಎದುರು ನಿಂತ ಪೊಲೀ ಸರೂ ಈ ಯುವಕನಿಗೆ ಲೆಕ್ಕಕ್ಕೆ ಬರುತ್ತಿರಲೇ ಇಲ್ಲ. ಉತ್ತರ ಕರ್ನಾಟಕದ ಕಮ್ಯುನಿಸ್ಟ್ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಈ ಯುವಕ ತನ್ನ ಹೋರಾ ಟದ ಬದುಕಿನ ಆರಂಭದ ಹೊತ್ತಿನಲ್ಲೇ ದಾವಣಗೆರೆ ಯಿಂದ ಕಮ್ಯುನಿಸ್ಟ್ ಪಕ್ಷದ ಕಾರ್ಯಕ್ರಮಗಳಿಗೆ ಬರುತ್ತಿದ್ದ ಯುವತಿಯೊಬ್ಬಳ ಮನಗೆದ್ದು ಬಿಟ್ಟಿದ್ದ. ಇಬ್ಬರ ಭಾವನೆ, ಚಿಂತನೆ ಒಂದೆಯಾದರೂ ಇವರಿ ಬ್ಬರ ಮದುವೆಗೆ ಜಾತಿ ಅಡ್ಡ ಬಂದಿತ್ತು. ಲಕ್ಷ್ಮೀಸಾಗರ್ ಸ್ವಾಮಿಗೌಡ

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.