Hi Bangalore
Hi Bangalore

Hi Bangalore

This is an e-magazine. Download App & Read offline on any device.

ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೧೧, ಡಿಸೆಂಬರ್ ೧೨, ೨೦೧೩ ಬೆಲೆ : ೧೫ ರು ಮುಖಪುಟ ಲೇಖನ ಅಂಬಿ ರಮ್ಯಾ ಫೈಟ್; ದರ್ಶನ್ ಇಡ್ತಾನೆ ಏಟ್! ಚುನಾವಣೆಗೆ ನಿಲ್ಲಲು ಸಜ್ಜಾಗಿದ್ದಾನಾ ದರ್ಶನ್? ಆತ ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಾನೆಂಬ ಗುಲ್ಲು ಹಬ್ಬಿದೆ. ಅದಕ್ಕೆ ತದ್ವಿರುದ್ಧವಾಗಿ ದರ್ಶನ್ ವಿರುದ್ಧ ತೊಡೆ ತಟ್ಟಿ ಚುನಾವಣೆ ಎದುರಿಸಲು ಯಶ್ ಕೂಡ ಸಿದ್ಧನಾಗಿದ್ದಾನೆ. ದರ್ಶನ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದರೆ ಯಶ್ ಜಾತ್ಯತೀತ ಜನತಾದಳದ ಅಭ್ಯರ್ಥಿ ಯಾಗುವುದು ಬಹು ತೇಕ ಖಚಿತವಾಗಿದೆ. ಘಟಾನುಘಟಿ ರಾಜಕಾರಣಿಗಳ ಮಧ್ಯೆ ನಡೆಯುತ್ತಿದ್ದ ಮಂಡ್ಯ ಲೋಕಸಭಾ ಚುನಾವಣೆಗೆ ಸಿನೆಮಾರಂಗದ ರಂಗು ತಂದುಕೊಟ್ಟಿದ್ದು ನಟಿ ರಮ್ಯಾ. ಲಕ್ಷ್ಮೀಸಾಗರ ಸ್ವಾಮಿಗೌಡ ಖಾಸ್‌ಬಾತ್ ಆರುಷಿಯ ನೆತ್ತರು ಹರಿದ ಹಾದಿಯಗುಂಟ ಹುಟ್ಟು ಎರಡೇ ವಿಧ. ಒಂದು through proper channel. ಅವರು ಯೋನಿ ಸಂಜಾತರು. ಜಗತ್ತಿನಲ್ಲಿ ಇವತ್ತಿನ ಮಟ್ಟಿಗೆ ಯಾರೂ ವೃಕ್ಷ ಸಂಜಾತರಿಲ್ಲ. ಎರಡನೆಯ ಹುಟ್ಟು ಸಿಝೇರಿಯನ್ ಸೆಕ್ಷನ್‌ನದು. ಈ ಮಧ್ಯೆ ಯೋನಿ ಸಂಜಾತರಿಗಿಂತ ಕತ್ತರಿ ಸಂಜಾತ ಮಕ್ಕಳೇ ಜಾಸ್ತಿ. Thanks to modern nursing homes and docters.ಆದರೆ ಹುಟ್ಟು ಎರಡೇ ವಿಧದ್ದಾದರೆ ಸಾವು ಸಾವಿರ ವಿಧದ್ದು. ಸಹಜ ಸಾವಿನಿಂದ ಹಿಡಿದು ಅಸಹಜ ಸಾವಿನ ತನಕ, ಅಪಘಾತಗಳ ತನಕ, ಆತ್ಮಹತ್ಯೆಗಳ ತನಕ, ಕೊಲೆಗಳ ತನಕ, ಹಸಿವಿನ ತನಕ, ಅವಮಾನದ ತನಕ, ರೋಗಗಳ ತನಕ, ಖಿನ್ನತೆಯ ತನಕ, ಬದುಕು ಬೋರಾಗುವ ತನಕ natural calamityಗಳ ತನಕ-ಹೀಗೆ ಸಾವಿರ ವಿಧದಲ್ಲಿ ಬರುತ್ತದೆ ಸಾವೆಂಬ ಮಾಯಾವಿ. ಆರ್.ಬಿ ಸಾಫ್ಟ್ ಕಾರ್ನರ್ ಅಂದೇ ಮಲಗಿ ಅಂದೇ ಏಳುವವರು ಬೆಳಗಿನ ಜಾವ ಮಲಗಿದಾಗ ನಾಲ್ಕೂವರೆ ಆಗಿತ್ತು. ನಿರಂತರವಾಗಿ ಬರೆಯುತ್ತಿದ್ದೇನೆ. ಬರೆಯುವ ಉತ್ಸಾಹ ಇನ್ನೂ ಇತ್ತಾದರೂ ಖಾಯಿಲೆ ಬಿದ್ದು ಎದ್ದ ದೇಹ ದಣಿದಿತ್ತು. ಕಣ್ಣುಮುಚ್ಚಿ ಮಲಗಿದವನಿಗೆ ಬೆಳಗಿನ ಹತ್ತಕ್ಕೆಲ್ಲ ಎಚ್ಚರ. ಮೊದಲ ಕರೆ ಬಂದದ್ದು ಹಿರಿಯ ವಕೀಲ ಮಿತ್ರರಾದ ಚಂದ್ರಮೌಳಿ ಅವರಿಂದ. ಹೀಗೆ ಬೆಳಗಿನ ಜಾವ ನಾಲ್ಕೂವರೆ ತನಕ ಬರೆದು ಈಗಷ್ಟೇ ಎದ್ದೆ ಅಂದೆ. ಬೆಳಗೆರೆ ಹಲೋ ಜಾಗತೀಕರಣದ ಸುಳಿಯಲ್ಲಿ ಸಿಲುಕಿ ದುರ್ಬಲಗೊಂಡರೇ ಸಿದ್ದು! ಮುಖ್ಯಮಂತ್ರಿ ಸಿದ್ಧರಾಮಯ್ಯ ದಿನ ಕಳೆದಂತೆ ದುರ್ಬಲರಾಗುತ್ತಿದ್ದಾರೆ. ಕಬ್ಬು ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಓರ್ವ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಅದನ್ನು ಮತ್ತಷ್ಟು ನಿಚ್ಚಳಗೊಳಿಸಿದೆ. ಹಾಗಂತ ಈ ಬೆಳವಣಿಗೆಯೊಂದರಿಂದಲೇ ಸಿದ್ಧರಾಮಯ್ಯ ದುರ್ಬಲರಾಗಿದ್ದಾರೆ ಎಂದಲ್ಲ. ಯಾಕೆಂದರೆ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ. ಪ್ರತಿ ವರ್ಷ ನೂರಾರು ರೈತರು ಮಾಡಿಕೊಂಡ ಸಾಲವನ್ನು ತೀರಿಸಲಾಗದೆ ಅಥವಾ ಇನ್ನೇನೋ ಸಮಸ್ಯೆಗಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ರವಿ ಬೆಳಗೆರೆ ಬಾಟಮ್ ಐಟಮ್ ವಿಲ್‌ಪವರ್ ಹುಟ್ಟುವುದು ಬೆಳೆಯುವುದು ಏಕೆ ಗೊತ್ತಾ? ಅದೇನೇ ಹೇಳ್ರೀ, ಆ ಮನುಷ್ಯನ ವಿಲ್ ಪವರ್ ಮಾತ್ರ ಸಖತ್ತು ಕಣ್ರೀ ಅಂತ ನಮ್ಮ ಸುತ್ತಮುತ್ತ ಇರುವ ಕೆಲವರ ಬಗ್ಗೆ ನಾವು ಪ್ರಶಂಸೆ ವ್ಯಕ್ತಪಡಿಸುತ್ತಿರುತ್ತೇವೆ. ಹಾಗೆ ಗುರುತಿಸುವ ವ್ಯಕ್ತಿ ಬಡವನೇ ಆಗಿರಬಹುದು. ಅಥವಾ ದೊಡ್ಡ ಶ್ರೀಮಂತನೇ ಆಗಿರ ಬಹುದು. ಯಾವುದೇ ರಂಗದಲ್ಲಿ ಕೆಲಸ ಮಾಡುತ್ತಿರಬಹುದು. ಎಷ್ಟೋ ಸಲ ಅವರು ಸಿಲುಕಿಕೊಂಡಿರುವ ಸಮಸ್ಯೆಗಳ ಸುಳಿಯನ್ನು ಗಮನಿಸಿದಾಗ, ಹೀಗೆ ಸಮಸ್ಯೆಗಳ ಸುಳಿಯಲ್ಲಿ ಇದ್ದರೂ ಅವರು ಹೋರಾಡುವ ಪರಿಯನ್ನು ಕಂಡಾಗ ಇಂತಹ ಪ್ರಶಂಸೆಯ ಮಾತುಗಳು ಬರುತ್ತವೆ. ರವೀ ವರದಿ ವಕ್ಕಲಿಗರ ಸಂಘದಲ್ಲಿ ಕೆಂಚಪ್ಪಗೌಡರ ಕಿಚಿ-ಕಿಚಿ ರಾಜ್ಯ ವಕ್ಕಲಿಗರ ಸಂಘದ ಆಡಳಿತ ಮಂಡಳಿಗೆ ಮತ್ತೆ ಚುನಾವಣೆ ಎದುರಾಗಿದೆ. ಸಂಘದ ಹಾಲಿ ಅಧ್ಯಕ್ಷ ಬಿ.ಕೆಂಚಪ್ಪಗೌಡನೆಂಬ ನುಂಗುಬಾಕನ ಟೀಮು ಮತ್ತೊಂದು ಅವಗೆ ಸಂಘದ ಚುಕ್ಕಾಣಿ ಹಿಡಿಯಲು ಇನ್ನಿಲ್ಲದ ಕಸರತ್ತು ಆರಂಭಿಸಿದೆ. ಆದ್ದರಿಂದಲೇ ಸಂಘದ ಅರ್ಹ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಹಣ, ಹೆಂಡ ಮತ್ತು ಬಾಡೂಟದ ಆಮಿಷವನ್ನೂ ಒಡ್ಡುತ್ತಿದೆ. ಅದಕ್ಕೆ ಕಾರಣ, ಈ ಹಿಂದೆ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಹಾಲಿ ಅಧ್ಯಕ್ಷನಾಗಿ ಕೆಂಚಪ್ಪಗೌಡ ನಡೆಸಿರುವ ಭಾನಗಡಿಗಳು. ವರದಿಗಾರ ವರದಿ ಕವಳನ ಕಿಲ್ಲಿಂಗ್ ಗೇಮ್ ಬೇಜಾನ್ ರೌಂಡಿಂಗ್! ಬೆಂಗಳೂರಿನ ಪಾತಕ ಲೋಕದಲ್ಲಿ ಒಂದು ಹೆಣ ಬೀಳುವುದಂತೂ ಖಚಿತವಾದಂತಿದೆ. ಕುಟ್ಟಿ ರಾಜ ಮತ್ತು ಕವಳನ ಮಧ್ಯೆ ನಡೆಯುತ್ತಿ ರುವ ಶೀತಲ ಸಮರ ಬಲು ಜೋರಾಗಿದೆ. ಹಣ, ಹುಡುಗರ ಹಿಂಡಿನೊಂದಿಗೆ ಕವಳ ಅಲೆಯುತ್ತಿದ್ದರೆ ಆತನನ್ನು ಹತ್ಯೆ ಮಾಡಲೇಬೇಕು ಎಂಬ ನಿರ್ಧಾರಕ್ಕೆ ಬಂದಿರುವ ಕುಟ್ಟಿ ಮತ್ತು ರಾಜ ತಮ್ಮ ಜೊತೆಗೆ ಬೇರೆ ಬೇರೆ ರೌಡಿಗಳನ್ನು ಸೇರಿಸಿಕೊಂಡು ಹಿಂಡುಗಟ್ಟಲೆ ಹುಡುಗರನ್ನು ಕಲೆ ಹಾಕಿದ್ದಾರೆ. ಸುನೀಲ್ ಹೆಗ್ಗರವಳ್ಳಿ ವರದಿ ಕಾಂಗ್ರೆಸ್‌ನಲ್ಲಿ ಬಂಡಾಯದ ಕಿಡಿ; ಬಿಜೆಪಿಗೆ ನುಗ್ಗಲು ಯಡ್ಡಿ ರೆಡಿ ರಾಜ್ಯ ಕಾಂಗ್ರೆಸ್‌ನ ಪಡಸಾಲೆಯಲ್ಲಿ ಬಂಡಾಯಕ್ಕೆ ವೇದಿಕೆ ಅಣಿಯಾಗುತ್ತಿದ್ದಂತೆಯೇ ಇತ್ತ ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿ ಪಾಳಯಕ್ಕೆ ನುಗ್ಗಲು ಸಜ್ಜಾಗಿರುವ ಬೆಳವಣಿಗೆ ಕುತೂಹಲ ಹುಟ್ಟಿಸುವಂತಿದೆ. ಅಂದ ಹಾಗೆ ಕಾಂಗ್ರೆಸ್ ಇಕ್ಕಳದಲ್ಲಿ ಸಿಲುಕಿದ್ದ ಯಡಿಯೂರಪ್ಪ ಮೊನ್ನೆ ಮೊನ್ನೆಯ ತನಕ ಗೊಂದಲದಲ್ಲಿದ್ದುದು ಸಹಜವಾದರೂ, ಈಗ ನಿರ್ಣಾಯಕ ತೀರ್ಮಾನವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿ ಯಾಗಿರುವುದು ನಿಜ. ಆರ್.ಟಿ,ವಿಠ್ಠಲಮೂರ್ತಿ ವರದಿ ಚಿತ್ರದುರ್ಗ:ಗೆಟಪ್ಪು ಬದಲಿಸಿದರೂ ದಂಧೆ ಬಿಡಲಿಲ್ಲ ಡಬ್ಲಿಂಗ್ ಚಂದ್ರು ಚಿತ್ರದುರ್ಗದ ನಟೋರಿಯಸ್ ವಂಚಕ ಹಾಲಿ ನಗರಸಭಾ ಸದಸ್ಯ ಡಬ್ಲಿಂಗ್ ಚಂದ್ರ ಮತ್ತೆ ಸುದ್ದಿಗೆ ಬಂದಿದ್ದಾನೆ. ಪಟ್ಟನಾಯ್ಕನಹಳ್ಳಿಯ ಸಬ್ ಇನ್ಸ್‌ಪೆಕ್ಟರ್ ನದಾಫ್ ಈತನ ಮೇಲೆ ಫೋರ್‌ಟ್ವೆಂಟಿ ಕೇಸು ದಾಖಲಿಸಿದ್ದಾರೆ. ಆದರೆ ಆತ ನಾಪತ್ತೆ. ಚಿತ್ರದುರ್ಗದ ಜೆಡಿಎಸ್ ನಾಯಕ, ಮಾಜಿ ಶಾಸಕ ಎಸ್ಕೆ ಬಸವರಾಜನ್ ಅವರ ಬಲಗೈ ಭಂಟನಾದ ಡಬ್ಲಿಂಗ್ ಚಂದ್ರ ಕಳೆದ ಬಾರಿಯ ನಗರಸಭಾ ಚುನಾವಣೆಯಲ್ಲಿ ನಾಲ್ಕನೇ ವಾರ್ಡಿನಿಂದ ಗೆದ್ದು ರಾಜಕೀಯ ಗೆಟಪ್ಪು ಧರಿಸಿದ್ದಾನೆ. ಆದರೂ ಆತನ ವಂಚನಾ ಬುದ್ಧಿ ಬದಲಾಗಿಲ್ಲ. ಕಾಂತರಾಜ್ ಅರಸ್ ವರದಿ ಗುಟುರು ಹಾಕಿದ ಅರಭಾವಿ ಗೋಣು ಚೆಲ್ಲಿದ ಕಥೆ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಜಮಾವಣೆಗೊಂಡಿದ್ದ ರಾಜ್ಯದ ಸಾವಿರಾರು ಕಬ್ಬು ಬೆಳೆಗಾರರು ಇಂತಹದೊಂದು ಅನಿರೀಕ್ಷಿತ ಅವಘಡವನ್ನು ಊಹಿಸಿರಲಿಕ್ಕೂ ಸಾಧ್ಯವಿಲ್ಲ. ರೈತರ ಪ್ರತಿಭಟನೆ ಆರಂಭವಾದ ದಿನದಿಂದಲೂ ತಪ್ಪದೇ ಧರಣಿಯಲ್ಲಿ ಪಾಲ್ಗೊಂಡಿದ್ದ ರಾಯಬಾಗದ ಹಳ್ಳಿಯೊಂದರ ರೈತ ವಿಠ್ಠಲ ಅರಭಾವಿ ಅವತ್ತು ಇದ್ದಕ್ಕಿದ್ದಂತೆ ವೇದಿಕೆ ಏರಿ ಮೈಕ್ ಹಿಡಿದು ನಿಂತುಬಿಟ್ಟಿದ್ದ. ಆ ಕ್ಷಣದಲ್ಲಿ ಆತನ ಕಣ್ಣುಗಳಲ್ಲಿ ಆಳುವ ಸರ್ಕಾರದ ರೈತ ವಿರೋಧಿ ನೀತಿಯೆಡೆಗೆ ಆಕ್ರೋಶವಿತ್ತು. ರವಿ ಕುಲಕರ್ಣಿ ವರದಿ ತುಳು ಪಿಕ್ಚರ್ ಕೃಷ್ಣ ಏನ್ ಊದ್ತೀಯೋ ಕೊಳಲು? ಸಿನೆಮಾದವರ ಹೆಸರೇಳಿದರೆ ಸಾಕು ಮಂಗಳೂರಿನ ಮಂದಿ ಬೆಚ್ಚಿ ಬೀಳತೊಡಗಿದ್ದಾರೆ. ಇಲ್ಲಿಯ ಕೆಲ ತಲೆಮಾಸಿದ ಸಿನೆಮಾ ಮಂದಿ ನಿಮಗೆ ಸಿನೆಮಾಗಳಲ್ಲಿ ಅವಕಾಶ ಕೊಡಿಸ್ತೀವಿ, ನಾಯಕಿ ಪಾತ್ರ ಕೊಡಿಸ್ತೀವಿ ಅಂತ ಅಮಾಯಕ ಮುಗ್ಧ ಯುವತಿಯರನ್ನು ವಂಚಿಸುವುದನ್ನೇ ಕಾಯಕ ಮಾಡಿಕೊಂಡಿರುವುದರಿಂದ ಸಹಜವಾಗಿಯೇ ಮಂಗಳೂರಿನ ಮರ್ಯಾದಸ್ಥ ಕುಟುಂಬಗಳು ಬೆಚ್ಚಿಬಿದ್ದಿವೆ. ಲೋಕೇಶ್ ಕೊಪ್ಪದ್ ಅಂಕಣ:ನೇವಿ ಕಾಲಂ ವೆಂಕಟರಮಣ, ನಿನಗೇತಕೆ ಬಾರದೋ ಕರುಣ? ಜಗತ್ತು ತೀರಾ ದೊಡ್ಡದು, ನಾವು ಎನ್ನುವ ಜೀವ ತೀರಾ ಚಿಕ್ಕದು ಅನ್ನುವ ಬಿಗ್‌ಬ್ಯಾಂಗ್ ಥಿಯರಿಯನ್ನೇ ಬುಡಮೇಲು ಮಾಡುವಂತೆ ನಾವು ನಮ್ಮೊಳಗೆ ಎಷ್ಟು ದೊಡ್ಡ ಜಗತ್ತನ್ನು ಇಟ್ಟುಕೊಳ್ಳುತ್ತಾ ಬದುಕುತ್ತೇವೆ ಅನ್ನುವುದು ವೆಂಕಟರಮಣನನ್ನು ಹತ್ತಿರದಿಂದ ಯಾರು ನೋಡಿದ್ದರೂ ಬಹುಶಃ ಗೊತ್ತಾಗುತ್ತಿತ್ತು. ದುರಾದೃಷ್ಟವಶಾತ್ ವೆಂಕಟರಮಣನಿಗೆ ಹತ್ತಿರದಿಂದ ಹಾದು ಹೋದವರು, ಹತ್ತಿರ ಕೂತು ಹರಟಿದವರು ಅವನ ಜಗತ್ತಿನ ಒಂದು ಗುಂಡಿಯಲ್ಲಿ ಯಾವತ್ತೂ ಬಗ್ಗಿ ನೋಡಲಿಲ್ಲ. ನೇವಿ ಅಂಕಣ:ಜಾನಕಿ ಕಾಲಂ ರಾವಣನ ಮನಸ್ಸು ಸೀತೆಯ ಮೇಲಿರಲಿಲ್ಲ, ರಾಮನ ಒಳಗಿತ್ತು ಈ ನಾಲ್ಕು ಸಾಲುಗಳನ್ನು ಓದಿಕೊಳ್ಳಿ: ನಿನ್ನೊಳಿದೆ ನನ್ನ ಮನಸು-ಕವಿ ನಾ ನಿನ್ನ ಧ್ಯಾನದೊಳಿರಲು ಸದಾ-ದಾಸರು. ನನ್ನದು ಎನ್ನುವುದೆಲ್ಲವು ಸಂತತ ಚೆನ್ನಕೇಶವ ನಿನ್ನೊಳು ನಿಲಲಿ-ಕವಿ ನನ್ನೊಳು ನಾ, ನಿನ್ನೊಳು ನೀ, ಒಲಿವ ಮುನ್ನ, ನನ್ನೊಳು ನೀ ನಿನ್ನೊಳು ನಾ, ಒಲಿದ ಮೇಲೆ-ಕವಿ. ಮೊದಲನೆಯದು ಅಪ್ಪಟ ಪ್ರೀತಿಯ ಹೇಳಿಕೆ. ನಿನ್ನೊಳಿದೆ ನನ್ನ ಮನಸು ಅಂದರೆ ನಿನ್ನ ಮೇಲೆ ನನಗೆ ಮನಸ್ಸಿದೆ ಅಂತಲ್ಲ. ನಿನ್ನನ್ನು ನನ್ನ ಮನಸ್ಸು ಬಯಸುತ್ತಿದೆ ಅಂತಲೂ ಅಲ್ಲ. ಮನಸ್ಸೇ ನಿನ್ನೊಳಗಿದೆ ಅನ್ನುವುದು ಒಂದು ರೀತಿಯಲ್ಲಿ ಅದ್ವೈತ ಸ್ಥಿತಿ. ಅವಳ ಮನಸ್ಸು ಅವನೊಳಗೆ ಇದ್ದರೆ ಏನಾಗುತ್ತದೆ. ಅವನ ಮನಸ್ಸಿನಲ್ಲಿ ನಡೆಯುತ್ತಿರುವುದೆಲ್ಲ ಅವಳಿಗೆ ಗೊತ್ತಾಗುತ್ತದೆ. ಜಾನಕಿ ಅಂಕಣ:ಮರೆತ ಭಾರತ ಸೋಬಾನ, ಸೋಬಾನ, ಸೋಬಾನವೇ ಭಾರತದ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಮೊದಲಿನಿಂದಲೂ ಹಳ್ಳಿಗಾಡನ್ನು ಕಡೆಗಣಿಸಿಕೊಂಡು ಬಂದಿರುವುದು ತೆರೆದಿಟ್ಟ ಸತ್ಯ. ಒಟ್ಟಾರೆ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ನಗರೀಕರಣಕ್ಕೆ, ಕೈಗಾರಿಕಾಭಿವೃದ್ಧಿಗೆ ಕೊಟ್ಟಂತೆ ಪ್ರಾಮುಖ್ಯತೆಯನ್ನು ಗ್ರಾಮೀಣಾಭಿವೃದ್ಧಿಗೆ ಕೊಡಲಿಲ್ಲ. ನಮ್ಮ ಆರ್ಥಿಕ ಯೋಜನೆಗಳನ್ನು, ಬಜೆಟ್‌ಗಳನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸದೆ ಬಹುಪಾಲು ನಿರ್ಲಕ್ಷಿಸಲಾಗಿದೆ. ಇತ್ತೀಚೆಗಂತೂ ಇದು ಎಲ್ಲೆ ಮೀರಿದೆ. ಕೇಶವರೆಡ್ಡಿ ಹಂದ್ರಾಳ ಅಂಕಣ:ಕೋಟೆ ಕಾಯ್ದ ತಾಯಂದಿರು ಬದುಕಿಗೊಂದು ಉಪಮೆ ಈ ಅನುಪಮೆ ಕುಮಾರವ್ಯಾಸನ ಜನ್ಮಸ್ಥಳ ಗದಗದಲ್ಲಿ ಜಾಲಿಹಾಳರ ಕುಟುಂಬವೆಂದರೆ ಊರಿನವರಿಗೆ ಬಲು ಪ್ರೀತಿ. ಅಲ್ಲಿನ ವೈದ್ಯ ಡಾ|| ರಾಮಚಂದ್ರ ಜಾಲಿಹಾಳರೆಂದರೆ ಸಾಕು ಸಂಘ ಪರಿವಾರದವರ ಮೈ-ಮನಸ್ಸು ಅರಳಿ ನಿಲ್ಲುತ್ತದೆ. ಖುದ್ದು ಬಿಜೆಪಿಯ ವೃದ್ಧ ಸೇನಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಈ ಕುಟುಂಬದೊಂದಿಗೆ ಅವಿನಾಭಾವ ಸಂಬಂಧವಿದೆ. ಆದರೆ, ಜನಸಂಘದ ಮುಂಚೂಣಿಯಲ್ಲಿದ್ದ ಡಾ|| ಜಾಲಿಹಾ ಳರ ತಂದೆ ಅನಂತರಾಮ ಜಾಲಿಹಾಳರು ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರುಳೆನ್ನದೇ ಹೋರಾಡಿದ್ದರೆಂಬುದು ಅಷ್ಟೇ ಸತ್ಯ. ಲಕ್ಷ್ಮೀಸಾಗರ ಸ್ವಾಮಿಗೌಡ

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.