Hi Bangalore
Hi Bangalore

Hi Bangalore

This is an e-magazine. Download App & Read offline on any device.

Preview

ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೩೯, ಜೂನ್ ೨೬, ೨೦೧೪ ಬೆಲೆ : ೧೫ ರು ಮುಖಪುಟ ಲೇಖನ ಶ್ರುತಿ-ಚೂಡಾ ಅವಲಕ್ಕಿ ಪವಲಕ್ಕಿ ಮತ್ತೆ ಅಪಶ್ರುತಿ... ಇವತ್ತು ಶ್ರುತಿಯ ವಿರುದ್ಧ ಹಲ್ಲೆ ಮತ್ತು ಪ್ರಾಣ ಬೆದರಿಕೆಯ ಆರೋಪ ಮಾಡುತ್ತಿರುವ ಶೋಭಾ ಕಳೆದ ಐದೂವರೆ ವರ್ಷಗಳಿಂದ ಬಸವೇಶ್ವರನಗರದ ಶ್ರುತಿಯ ಮನೆಯಲ್ಲೇ ಕೆಲಸಕ್ಕಿದ್ದವಳು. ಆಕೆಗಿರುವ ಒಬ್ಬಳೇ ಮಗಳು ಪೂಜಾಳನ್ನು ಶ್ರುತಿ ತನ್ನ ಮಗಳು ಮಿಲಿಗಿಂತಲೂ ಹೆಚ್ಚಾಗಿಯೇ ಹಚ್ಚಿಕೊಂಡಿದ್ದಳಂತೆ. ಪ್ರತಿ ಶನಿವಾರ-ಭಾನುವಾರ ಆ ಮಗು ಪೂಜಾ, ಶ್ರುತಿಯನ್ನು ನೋಡದಿದ್ದರೆ ಅಜ್ಜಿ ಬೇಕು ಎಂದು ರಚ್ಚೆ ಹಿಡಿಯುತ್ತಿದ್ದುದನ್ನು ಖುದ್ದು ಶ್ರುತಿಯೇ ಕಣ್ಣಾರೆ ಕಂಡಿದ್ದಾರೆ. ಜೊತೆಗೆ ಈ ಹೆಣ್ಣುಮಗಳು ಶೋಭಾಳದು ಬಡತನದ ಬದುಕು. ಆಕೆಯ ಗಂಡ ರಾಜಣ್ಣ ಅಲ್ಲೇ ಬಸವೇಶ್ವರನಗರದ ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಾನೆ. ಲಕ್ಷ್ಮಿಸಾಗರ ಸ್ವಾಮಿಗೌಡ ಖಾಸ್‌ಬಾತ್ ಎಲ್ಲರೂ ನಡೆದ ಹೆದ್ದಾರಿಗಿಂತ ನೀವೇ ಮಾಡಿಕೊಂಡ ಕಾಲುದಾರಿ ಅದ್ಭುತ ರಾತ್ರಿ ತುಂಬ ಹೊತ್ತಿನ ತನಕ ತೆಲುಗು ಕವಿ ಶ್ರೀಶ್ರೀ ಕವಿತೆಗಳೊಂದಿಗೆ ಆಟವಾಡುತ್ತಾ ಕುಳಿತಿದ್ದೆ. ಹೊರಗೆ ಜಡಿಮಳೆ. ಮನಸ್ಸಿನಲ್ಲಿ ಪ್ರಶ್ನೆಗಳ ನಾಗರಗಳಿದ್ದವು. ತಮಾಷೆಯೆಂದರೆ, ನನ್ನನ್ನು ಯಾವ ಸಮಸ್ಯೆಯೂ, ಯಾವ ಪ್ರಶ್ನೆಯೂ ದಿನಗಟ್ಟಲೆ ಬೆಂಬಿಡದ ಭೂತವಾಗಿ ಕಾಡಿಲ್ಲ. ಕೆಲವು ನಿರಾಸೆಗಳು ಕೆಲವು ಅವಮಾನಗಳು ಮಾತ್ರ ಹಾಗೆ ಬೆನ್ನತ್ತಿ ಬಂದು ಕಾಡಿವೆಯೆಂಬುದನ್ನು ಬಿಟ್ಟರೆ, ಸಮಸ್ಯೆಗಳನ್ನು ನಾನು ಸಲೀಸಾಗೇ handle ಮಾಡಿದ್ದೇನೆ. ಈ ಜನ್ಮದ ಅತಿದೊಡ್ಡ ಸೌಭಾಗ್ಯ ಎಂದು ಭಾವಿಸಿದ ನೌಕರಿ ಫಕ್ಕಂತ ಜೇಬಿನೊಳಗಿದ್ದ ಚಿಲ್ಲರೆ ಕಳೆದುಹೋದಂತೆ ಕಳೆದು ಹೋದಾಗ ಕೂಡ ಬಹಳ ಹೊತ್ತು ಕಳವಳ ಪಟ್ಟಿರಲಿಲ್ಲ. ಒಬ್ಬನೇ ಕುಳಿತು ಒಂದು ಟೀ ಕುಡಿದು, ಇಡಿಯಾಗಿ ಒಂದು ಸಿಗರೇಟು ಮುಗಿಸುವ ಹೊತ್ತಿಗೆ, ಒಂದು ನಿರ್ಧಾರಕ್ಕೆ ಬಂದುಬಿಡುತ್ತೇನೆ. ಆರ್.ಬಿ ಹಲೋ ಗದ್ದುಗೆ ಮೇಲೆ ಮೋದಿ ಕೂರುವ ಹೊತ್ತಿಗೆ ಡಾರ್ವಿನ್ನನ ನೆನಪಾಗಿತ್ತು.. ಯಾವ ದೇಶದ ಜನರಿಗೆ ಭೂತಕಾಲದ ಅರಿವಿಲ್ಲವೋ, ಅವರು ವರ್ತಮಾನದ ಬಗ್ಗೆ ದೊಡ್ಡ ಮಟ್ಟದ ನಿರ್ಲಕ್ಷ್ಯ ತೋರುತ್ತಾರೆ. ಹೀಗಾಗಿ ಭವಿಷ್ಯವನ್ನು ರೂಪಿಸಲು ಅವರ ಮನಸ್ಸು ತುಡಿಯುವುದಿಲ್ಲ. ಭಾರತದ ಸ್ಥಿತಿ ನೋಡಿದರೆ, ಕರ್ನಾಟಕದ ಸ್ಥಿತಿ ನೋಡಿದರೆ ಹಾಗೇ ಅನ್ನಿಸುತ್ತದೆ. ಇಡೀ ದೇಶ ಮೋದಿ ಚೆನ್ನಾಗಿ ಮಾತನಾಡುತ್ತಾರೆ ಅಂತ ಭಾವಿಸಿ ಗಣನೀಯ ಪ್ರಮಾಣ ದಲ್ಲಿ ಅವರಿಗೆ ಮತ ಹಾಕಿತು. ಅದು ತಪ್ಪು ಅಂತೇನೂ ಅಲ್ಲ. ಅವರು ಚೆನ್ನಾಗಿ ಕೆಲಸ ಮಾಡಿದರೆ ಉಳಿಯುತ್ತಾರೆ, ಇಲ್ಲವೇ ಮನೆ ಕಡೆ ಹೋಗುತ್ತಾರೆ. ಆದರೆ ಅವರು ಇದುವರೆಗೆ ಮಾಡಿರುವುದೇನಿದೆ ಅದೆಲ್ಲವೂ ಆರಂಭ ಶೂರತ್ವದ ಕೆಲಸಗಳು. ಒಂದು ವೇಳೆ ಪಾಕಿಸ್ತಾನ ಏನಾದರೂ ಗಡಿಯಲ್ಲಿ ದಾಳಿ ನಿಲ್ಲಿಸದಿದ್ದರೆ ಅವರೊಂದಿಗೆ ಮಾತುಕತೆ ಇಲ್ಲ ಎಂದರು ಅರುಣ್ ಜೇಟ್ಲಿ. ಇದನ್ನೇ ಹಿಂದಿದ್ದ ಯುಪಿಎ ಸರ್ಕಾರದ ಸಚಿವರೂ ಹೇಳುತ್ತಿದ್ದರು. ರವಿ ಬೆಳಗೆರೆ ಬಾಟಮ್ ಐಟಮ್ ಸಾವು ಫೋನ್ ಮಾಡಿ ಬರುವುದಿಲ್ಲ; ವಯಸ್ಸು ಯಾರ ಮಾತನ್ನೂ ಕೇಳುವುದಿಲ್ಲ "when your frienes begin to flatter you on how young you look, it's sure sign you're getting old" ಇದ್ದಕ್ಕಿದ್ದ ಹಾಗೆ ನಮ್ಮ ಜೀವದ ಗೆಳೆಯನೋ ದೂರದ ಸಂಬಂಧಿಯೋ ತೀರಿಕೊಳ್ಳುತ್ತಾನೆ. ಸಾವು ಅನ್ನೋದು ಫೋನ್ ಮಾಡಿ ಬರುವ ಅತಿಥಿಯೇ ನಲ್ವಲ್ಲ. ಸುದ್ದಿ ಕೇಳಿದಾಕ್ಷಣ ನಮಗೆ ಸಹಜವಾಗಿಯೇ ಆಘಾತವಾಗುತ್ತದೆ. ಅವನ ಜೊತೆ ನಾವು ಕಳೆದ ದಿನಗಳು ಒಂದು ಸಾರಿ ಕಣ್ಣ ಮುಂದೆ ಮೆರವಣಿಗೆ ಹೊರಡುತ್ತವೆ. ಕಳೆದ ವಾರವಷ್ಟೇ ಮನೆಗೆ ಬಂದಿದ್ದನಲ್ವಾ, ಕಲ್ಲು ಗುಂಡಿನಂತಿದ್ದ, ಇಬ್ಬರೂ ಕ್ಲಬ್ಬಿಗೆ ಹೋಗಿ ಗುಂಡು ಹಾಕಿದ್ದೆವು, ತಾಸುಗಟ್ಟಲೆ ಮಾತಾಡಿ ದ್ದೆವು. ಹೊಸ ಕಾರು ಖರೀದಿ ಮಾಡಬೇಕೂಂತ ಇದ್ದ, ಸೈಟಿಗೆ ಅಡ್ವಾನ್ಸು ಕೊಟ್ಟಿದ್ದ, ಮಗನನ್ನು ಯಾವುದಾದರೂ ಒಳ್ಳೇ ಕಾಲೇಜಿಗೆ ಸೇರಿಸಬೇಕು ಅಂತಿದ್ದ... ಇವೆಲ್ಲವೂ ನೆನಪಾಗುತ್ತವೆ. ರವೀ ವರದಿ ಕಥೆ ಕಳ್ಳಿ ಪೂಜಾ... ‘ಹಾಯ್ ಬೆಂಗಳೂರ್!’ ಪತ್ರಿಕೆಯಲ್ಲಿ ‘ಕಲ್ಪನಾ ವಿಲಾಸ’ ಎಂಬ ಹೆಸರಿನಲ್ಲಿ ಧಾರಾವಾಹಿ ಪ್ರಕಟವಾಗುತ್ತಿದ್ದಾಗ ನೂರಾರು ಓದುಗರು ಪತ್ರ ಬರೆಯುತ್ತಿದ್ದರು. ಫೋನ್ ಮಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದರು. ಅದರಲ್ಲೂ ಮಧ್ಯವಯಸ್ಕ ಹೆಣ್ಣುಮಕ್ಕಳು ತುಂಬ ತೀವ್ರ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದರು. ಬಹುಶಃ ಒಬ್ಬ ನಟಿಯನ್ನು ಹೀಗೆ ಇಷ್ಟೊಂದು ವಿಭಿನ್ನ ದೃಷ್ಟಿಕೋನದಲ್ಲಿ ನೋಡಿ, ಆಕೆಯ ಬದುಕನ್ನು, ಅದರ ಆಗುಹೋಗುಗಳನ್ನು ದಾಖಲಿಸಿರುವ ಕೆಲಸ ಕನ್ನಡದಲ್ಲಿ ಬಿಟ್ಟರೆ ಮತ್ತೊಂದು ಕಡೆ ಆಗಿಲ್ಲ. ಕನ್ನಡ ಚಿತ್ರರಂಗದಲ್ಲಿ ‘ಮಿನುಗುತಾರೆ’ ಎಂದೇ ಗುರುತಿಸಿಕೊಂಡಿದ್ದ ಕಲ್ಪನಾ ಒಬ್ಬ ಮೇರು ನಟಿ. ಒಳ್ಳೆಯ ಅಭಿರುಚಿಯಿದ್ದ ಹೆಣ್ಣುಮಗಳು. ಒಳ್ಳೆಯ ಗೃಹಿಣಿಯಾಗಬೇಕೆಂದು ಕಡೆಯ ತನಕ ಬಯಸಿದ ಭಾವುಕ ಜೀವಿ. ಆದರೆ ಆಕೆಯ ಬದುಕು ಪೂರ್ತಿ ‘ಶರಪಂಜರ’ವೇ ಆಯಿತು. ಸಿಕ್ಕ ಗಂಡಸರ‍್ಯಾರೂ ಕೈ ಹಿಡಿಯಲಿಲ್ಲ. ವಿಪರೀತ ಸಾಲ-ಸೋಲ ಮಾಡಿ ಬೆಂಗಳೂರಿನಲ್ಲಿ ಮನೆ ಕಟ್ಟಿದಳು. ನಿಜಕ್ಕೂ ಅದ್ಭುತವಾದ ಮನೆ ಅದು. ನಂತರ ಆಕೆಯ ತಮ್ಮನಿಗಾಗಿ ದುಡಿದದ್ದನ್ನೆಲ್ಲ ಸುರಿದಳು. ಲೋಕೇಶ್ ಕೊಪ್ಪದ್ ಹಾವೇರಿ: ಅಗಡಿಯ ಅಕ್ಕಿಮಠಕ್ಕೆ ಬಂದ ಬುಗುಡಿ ಗುರುಲಿಂಗ! ಅಗಡಿಯ ಅಕ್ಕಿಮಠಕ್ಕೆ ಬೆಂಕಿ ಬಿದ್ದಿದೆ. ಈಗ್ಗೆ ಕೆಲದಿನಗಳ ಹಿಂದೆ ಮಠದ ಪೀಠಕ್ಕೆ ಗುರುಲಿಂಗದೇವರು ಎಂಬ ಯಡವಟ್ಟು ಗಿರಾಕಿಯನ್ನು ಉತ್ತರಾಧಿಕಾರಿಯನ್ನಾಗಿ ಕೂರಿಸಿದ್ದು ಭಕ್ತರನ್ನು ಗಾಬರಿಗೊಳಿಸಿದೆ. ಅಕ್ಕಿಮಠದ ಮೇಲಿನ ಹಕ್ಕಿಗಾಗಿ ಗುರುಲಿಂಗದೇವರು ಮತ್ತು ದುರ್ಗದ ಘನಶರಣರ ಮಧ್ಯದ ವ್ಯಾಜ್ಯ ಕೋರ್ಟಿನ ಮೆಟ್ಟಿಲೇರಿ ರುವ ಹೊತ್ತಿನಲ್ಲೇ ಯಡವಟ್ಟು ಗುರುಲಿಂಗದೇವರು ಪಟ್ಟಕ್ಕೆ ಬಂದಿದ್ದು. ಅದರ ಹಿಂದೆ ಬ್ಯಾಡಗಿಯ ಕಾಂಗ್ರೆಸ್ಸು ಶಾಸಕ ಬಸವರಾಜ ಶಿವಣ್ಣ ನವರ ಮತ್ತವನ ಪಟಾಲಮ್ಮು ಇದ್ದದ್ದು ಹತ್ತುಹಲವು ಅನುಮಾನಗಳಿಗೆ ಕಾರಣವಾಗಿದೆ. ವರದಿ ಕೊಲ್ಲೂರಿನ ಮೂಕಾಂಬಿಕೆಗೆ ಎಲ್ಲಿದೆಯಪ್ಪಾ ಗಡಿ! ಕೊಲ್ಲೂರಿನಲ್ಲೀಗ ಗಡಿ ವಿವಾದವೊಂದು ಹುಟ್ಟಿ ಕೊಂಡಿದೆ. ಕಲ್ಲಡ್ಕ ಪ್ರಭಾಕರ ಭಟ್ಟರ ಶಿಷ್ಯ ಕೃಷ್ಣಪ್ರಸಾದ ಅಡ್ಯಂತಾಯನೆಂಬ ಎಡಬಿಡಂಗಿ ದೇವಸ್ಥಾನದ ಧರ್ಮ ದರ್ಶಿ ಹುದ್ದೆಗೆ ಬಂದು ಕುಳಿತಿದ್ದೇ ಬಂತು. ಪವಿತ್ರ ಮೂಕಾಂಬಿಕೆಯ ಕ್ಷೇತ್ರದಲ್ಲಿ ಸದಾ ಒಂದಿಲ್ಲೊಂದು ವಿವಾದಗಳು ಹುಟ್ಟಿಕೊಳ್ಳುತ್ತಲೇ ಇವೆ. ಆದರೆ, ಈಗ ದೇವಸ್ಥಾನಕ್ಕೆ ಕೂಗಳತೆಯ ದೂರದಲ್ಲೇ ಸ್ವಾಮಿ ವಿಮಲಾನಂದರ ದೇಹವನ್ನು ಸಮಾ ಮಾಡಿರುವ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿರುವುದು ದೇವಸ್ಥಾನಕ್ಕೆ ಬರುವ ಭಕ್ತರ ಮನಸ್ಸಿನಲ್ಲಿ ಆತಂಕ ಸೃಷ್ಟಿಸಿದೆ. ವರದಿಗಾರ ವರದಿ ಮೂಲ ಕಾಂಗ್ರೆಸ್ಸಿಗರಲ್ಲೇ ಎರಡು ಬಣ: ಬುಸುಗುಡುವ ಅಕ್ಕಯ್ಯನಿಗೆ ಸಖತ್ತಾಗಿ ಇಕ್ಕಿದರು ಸಿದ್ದು! ಅಹಿಂದ ಚಳವಳಿಗೆ ವಿಶೇಷ ಅಜೆಂಡಾ ಇರಲಿಲ್ಲ. ಸಿದ್ದರಾಮಯ್ಯನವರನ್ನು ಸಿಎಂ ಮಾಡಬೇಕು ಎಂಬುದನ್ನು ಬಿಟ್ಟರೆ, ಉಳಿದ ಮಹತ್ವದ ವಿಷಯವೇನೂ ಇರಲಿಲ್ಲ. ಇದ್ದುದರಲ್ಲಿ ಸಿ.ಎಂ.ಇಬ್ರಾಹಿಂ ತಮ್ಮ ಮಾತುಗಾರಿಕೆಯಿಂದ ಚಳವಳಿಗೆ ರಂಗು ತಂದು ಕೊಟ್ಟರೇ ವಿನಃ ಸಿದ್ದರಾಮಯ್ಯನವರಿಂದ ಚಳವಳಿ ದೊಡ್ಡ ಮಟ್ಟದಲ್ಲಿ ಬೆಳೆಯಲಿಲ್ಲ. ಇನ್ನೂ ಕೆಲ ತಿಂಗಳ ಕಾಲ ಅಹಿಂದ ಚಳವಳಿ ನಡೆದಿದ್ದರೆ ಸಿದ್ದರಾಮಯ್ಯ ರಾಜಕೀಯವಾಗಿ ತಣ್ಣಗಾಗುತ್ತಿದ್ದರು. ಅಹಿಂದ ಚಳವಳಿ ಅಡ್ಡಡ್ಡ-ಉದ್ದುದ್ದ ಮಲಗಿ ಬಿಡುತ್ತಿತ್ತು. ಯಾಕೆಂದರೆ ಕರ್ನಾಟಕದ ಅಹಿಂದ ವರ್ಗಕ್ಕೆ ಎಂದೂ ಮರೆಯದ ಉಪಕಾರ ಮಾಡಿದ ದೇವರಾಜ ಅರಸರನ್ನೇ ಇಂದಿರಾಗಾಂ ಸಿಎಂ ಹುದ್ದೆಯಿಂದ ತೆಗೆದು ಹಾಕಿದಾಗ ಯಾವ ಅಹಿಂದ ನಾಯಕರೂ ಅವರ ಹಿಂದೆ ಹೋಗಲಿಲ್ಲ. ಹೀಗಿರುವಾಗ ಸಿದ್ದರಾಮಯ್ಯ ರಾಜಕೀಯವಾಗಿ ಫಿನಿಷ್ ಆಗಿದ್ದರೆ ಅವರ ಹಿಂದೆ ಯಾರೂ ಹೋಗುತ್ತಿರಲಿಲ್ಲ. ಇಂತಹ ಸಂಕಷ್ಟ ಕಾಲದಲ್ಲಿ ಅವರ ನೆರವಿಗೆ ಬಂದಿದ್ದು ಎಚ್.ಎಂ.ರೇವಣ್ಣನವರಂತಹ ಸ್ವಜಾತಿಯ ನಾಯಕ. ಅವರು ಬಲವಂತದಿಂದ ಸಿದ್ದರಾಮಯ್ಯನವರನ್ನು ಕಾಂಗ್ರೆಸ್‌ಗೆ ಎಳೆದುಕೊಂಡು ಬಂದರು. ಆರ್.ಟಿ.ವಿಠ್ಠಲಮೂರ್ತಿ ವರದಿ ದಾವಣಗೆರೆ: ದುಡ್ಡೇ ದೊಡ್ಡಪ್ಪ ಅಂದ್ರೆ ಗೆಲ್ತೀನಿ ಅಂದ್ರು ಮುರುಗೇಂದ್ರಪ್ಪ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ದಿನದಿಂದ ದಿನಕ್ಕೆ ಭಾರೀ ರಂಗು ಪಡೆದುಕೊಳ್ಳುತ್ತಿದೆ. ಅಖಾಡಾದಲ್ಲಿರುವ ಮೂರೂ ಪಕ್ಷದ ಅಭ್ಯರ್ಥಿಗಳು ಗೆಲ್ಲಲೇಬೇಕೆಂದು ಪಣತೊಟ್ಟಿರುವುದರಿಂದ ಹಿಂದೆಂದಿಗಿಂತಲೂ ಈ ಬಾರಿಯ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುವ ಸಾಧ್ಯತೆ ಇದೆ. ಅಖಾಡಾದಲ್ಲಿರುವ ಅಷ್ಟೂ ಅಭ್ಯರ್ಥಿಗಳು ಅದಾಗಲೇ ಮತದಾರರನ್ನು ಓಲೈಸುವ ಕಸರತ್ತು ಆರಂಭಿಸಿದ್ದಾರೆ. ವಿದ್ಯಾ ವಂತ ಮತದಾರರಿಗೆ ಬಂಗಾರದ ರಿಂಗು, ಬೆಳ್ಳಿಯ ಬಟ್ಟಲು, ರೇಮಂಡ್ಸ್ ಸೂಟ್‌ನಂತಹ ಭರ್ಜರಿ ಗಿಫ್ಟಿನ ಆಮಿಷ ಒಡ್ಡುತ್ತಿದ್ದಾರೆ. ಕಾಂತರಾಜ ಅರಸ್ ವರದಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷಗಿರಿಗೆ ಸುಧಾಕರ್‌ನ ಭರ್ಜರಿ ತಯಾರಿ! ಚಿತ್ರದುರ್ಗದ ಡಿಸಿಸಿ ಬ್ಯಾಂಕಿನ ಅಧ್ಯಕ್ಷನಾಗಿ ಶಾಸಕ ಡಿ.ಸುಧಾಕರ್ ಮತ್ತೆ ವಕ್ಕರಿಸಿಕೊಂಡಿದ್ದಾನೆ. ಮಾಜಿ ಅಧ್ಯಕ್ಷ ಎನ್.ಆರ್.ಲಕ್ಷ್ಮೀಕಾಂತನ ಟೀಮು ವಂಚಕ ಸುಧಾಕರ್ ಹರಿಸಿದ ಹಣದ ಹೊಳೆಯ ಎದಿರು ವೇದಾವತಿ ನದಿಯಲ್ಲಿ ಕೊಚ್ಚಿಕೊಂಡು ಹೊರಟುಹೋಗಿದೆ. ಕಳೆದ ಬಾರಿಯ ಬ್ಯಾಂಕಿನ ಅಧ್ಯಕ್ಷರ ಚುನಾವಣೆ ವೇಳೆ ನಾಮಿನೇಶನ್ ಸಲ್ಲಿಸದೇ ದುರ್ಗದಿಂದ ಸುಧಾಕರ್ ನಾಪತ್ತೆಯಾಗಿದ್ದ. ಆದರೆ ಈ ಬಾರಿ ಆತ ಕಳೆದ ಬಾರಿಯ ಅವಮಾನದಿಂದ ಪಾಠ ಕಲಿತಿದ್ದ. ಡಿಸಿಸಿ ಬ್ಯಾಂಕಿನ ಅಂಗಳಕ್ಕೆ ಕಾಲಿಡುವ ಹೊತ್ತಿಗೇ ಹಣದ ಥೈಲಿಯನ್ನು ಕೈಯಲ್ಲಿಡಿದುಕೊಂಡೇ ಎಂಟ್ರಿ ಕೊಟ್ಟಿದ್ದ. ಕಾಂತರಾಜ್ ಅರಸ್ ವರದಿ ಬಾಗಲಕೋಟೆ; ಕಡ್ಡಿ ಪೈಲ್ವಾನನಂಥ ಡಿಸಿ ಮನೋಜ್ ಜೈನ್ ಜನರಿಗೆಂದೇ ದಿಡ್ಡಿ ಬಾಗಿಲು ತೆರೆದರು! ಬಾಗಲಕೋಟೆಯ ಮೈಗಳ್ಳ ಅಧಿಕಾರಿಗಳ ಅಂಡಿಗೆ ಬಲವಾಗಿಯೇ ಚಾಟಿ ಬೀಸಿದ್ದಾರೆ ಜಿಲ್ಲಾಧಿಕಾರಿ ಮನೋಜ್ ಜೈನ್. ಜಿಲ್ಲೆಗೆ ಬಂದ ಕೇವಲ ಹನ್ನೊಂದು ತಿಂಗಳ ಅವಧಿಯಲ್ಲೇ ಅವರು ತಾವೆಂತಹ ಖಡಕ್ಕು ಅಧಿಕಾರಿ ಎಂಬುದನ್ನು ಎಲ್ಲಾ ಇಲಾಖೆಯ ಪರ್ಸಂಟೇಜು ಗಿರಾಕಿಗಳಿಗೆ ತೋರಿಸಿ ಕೊಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ತುಂಬಾ ಪಾದರಸದಂತೆ ಅಡ್ಡಾಡುತ್ತ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿ ರುವ ಡಿ.ಸಿ.ಸಾಹೇಬರು ಅಸಲಿಗೆ ಇಲ್ಲಿನ ಭ್ರಷ್ಟ ಅಕಾರಿಗಳ ಪಾಲಿಗೆ ಸಿಂಹಸ್ವಪ್ನವಾಗಿರುವುದಂತೂ ದಿಟ. ರವಿ ಕುಲಕರ್ಣಿ ವರದಿ ಭೀಮಾತೀರ ನೆತ್ತರ ದಾಹಕ್ಕೆ ಮತ್ತೊಂದು ಬಲಿ;ಅಳಿಯನ ಒಂದೊಂದೇ ಅಂಗವನ್ನು ಕತ್ತರಿಸಿ ಕೊಂದೆಯಲ್ಲೋ ಮುಲ್ಲಾ! ಭೀಮಾ ತೀರದ ಹಂತಕರ ನೆತ್ತರ ದಾಹಕ್ಕೆ ಮತ್ತೊಂದು ಹೆಸರು ಜಮೆಯಾಗಿದೆ. ಇಂಡಿ ತಾಲ್ಲೂಕಿನ ಐರಸಂಗದ ಮುಲ್ಲಾಗಳಿಬ್ಬರ ಕುಟುಂಬದ ಮಧ್ಯದ ಬದ್ಧ ದ್ವೇಷಕ್ಕೆ ಏಳನೇ ಹೆಣ ಬಿದ್ದಿದೆ. ಆದರೆ, ಮೊನ್ನೆ ಜೂನ್ ಹದಿಮೂರರಂದು ಐರಸಂಗದ ಸುಪಾರಿ ಹಂತಕ ಪ್ರಕಾಶ್ ಉಮರ್ಜಿಯನ್ನು ಆತನ ಪತ್ನಿಯ ತಂದೆ ಹುಸೇನ್ ಲಾಲ್‌ಸಾಬ್ ಮುಲ್ಲಾನೇ ಮುಂದೆ ನಿಂತು ಕತ್ತರಿಸಿಕೊಂದ ರೀತಿಯಿದೆಯಲ್ಲಾ ಅದು ಎಂತಹ ಗಂಡೆದೆಯವರನ್ನು ಒಂದು ಕ್ಷಣ ಬೆಚ್ಚಿ ನಿಲ್ಲುವಂತೆ ಮಾಡಿಬಿಡುತ್ತದೆ. ರವಿ ಕುಲಕರ್ಣಿ ವರದಿ ಮೂಡಬಿದ್ರೆಯಲ್ಲಿ ಭಯ ಹುಟ್ಟಿಸುತ್ತಿದೆ ಅಭಯಚಂದ್ರರ ಗೂಂಡಾಪಡೆ ಮೂಡಬಿದ್ರೆಯಲ್ಲಿ ಮಂತ್ರಿ ಅಭಯಚಂದ್ರ ಜೈನರ ಗೂಂಡಾ ಸಾಮ್ರಾಜ್ಯ ಬೆಳೆಯುತ್ತಲೇ ಇದೆ. ಈ ಹಿಂದೆ ಅಲ್ಲಿನ ಹಿಂದೂ ಸಂಘಟನೆಯ ನಾಯಕ ಸುಖಾನಂದ ಶೆಟ್ಟಿಯನ್ನು ಕತ್ತರಿಸಿ ಕೊಂದ ಹಂತಕರ ತಂದೆ ಅಬೂಬಕ್ಕರ್ ಈಗ ಸಚಿವ ಅಭಯಚಂದ್ರರ ಬಲಗೈ ಭಂಟ. ಅಂತಹದೊಂದು ಹಂತಕ ಪಡೆಯ ಬೆಂಬಲ ತಮ್ಮ ಬೆನ್ನಿಗಿರುವ ಕಾರಣದಿಂದಲೋ ಏನೋ? ಅಭಯಚಂದ್ರ ಜೈನರು ಸಿಟ್ಟಿಗೆದ್ದಾಗಲೆಲ್ಲಾ ಎದುರಿಗಿದ್ದವರ ಮೇಲೆ ಮುರಕೊಂಡು ಬಿದ್ದು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸಿದ್ದು ಸಂಪುಟದಲ್ಲಿ ಮಂತ್ರಿಯಾದ ಬೆನ್ನಿಗೆ ಪ್ರತಿಭಟನೆ ನಡೆಸುತ್ತಿದ್ದ ಆಟೋ ಚಾಲಕರ ವಿರುದ್ಧ ಬಾಯಿ ಲೂಜು ಬಿಟ್ಟು ಸುದ್ದಿಯಾಗಿದ್ದರು. ವರದಿಗಾರ ನೇವಿ ಕಾಲಂ ಸುಮಂಗಲಾ ಕೇಳಿಸಿಕೊಂಡ ಗುಟ್ಟಿಗೆ ಬಾಯಿಯೇ ಇರಲಿಲ್ಲ ಕುಲಶೇಖರ ಕಾಡಿನ ದಾರಿ ಹಿಡಿಯುವ ಹಿಂದಿನ ದಿನ ಒಂದು ಫೋನು ಕರೆ ಬಂತು ಅಂತ ಪದ್ಮಾಂಬಿಕೆ ಸುಮಂಗಲಾಗೆ ಹೇಳತೊಡಗಿದಾಗ ಅಲ್ಲೊಂದು ಸತ್ಯ ಹುತ್ತಗಟ್ಟಿ ಕುಳಿತುಕೊಂಡ ಹಾಗೆ ಭಾಸವಾಯಿತು. ‘ಫೋನು ಮಾಡಿದ್ದು ಅವನ ಹೊಸ ಆಫೀಸಿನ ಮೆನೇಜರ್. ಅವನು ಸೇರಿಕೊಂಡ ಅದೆಂಥದ್ದೋ ಕಂಪನಿಯನ್ನು ಹಠಾತ್ ಬಿಟ್ಟು ಬಂದುಬಿಟ್ಟಿದ್ದಾನಂತೆ. ಇನ್ನೆಂದೂ ಆ ಆಫೀಸಿನ ಮೆಟ್ಟಿಲು ತುಳಿಯುವುದಿಲ್ಲ ಅಂತ ಹೇಳಿ ಬಂದಿದ್ದಾನೆ. ಒಳ್ಳೆ ಕೆಲಸಗಾರ, ಈ ಕಂಪನಿಯಲ್ಲೇ ಮುಂದುವರಿದರೆ ಅವನ ಭವಿಷ್ಯಕ್ಕೆ ಒಳ್ಳೆಯದಿದೆ, ನೀವಾದರೂ ಮಾತಾಡಿ ಅಂತ ಆ ಮೆನೇಜರ್ ಕೇಳಿಕೊಂಡಿದ್ದರು..’ ನೇವಿ ಜಾನಕಿ ಕಾಲಂ ತರಾಸು ಕಾರಂತರನ್ನ ಕರೀರಿ, ನಾನು ಯೋಗ್ಯನಲ್ಲ! ನಿನ್ನೆ ಸಾಪ್ತಾಹಿಕದಲ್ಲಿ ಒಂದು ಚೆಂದದ ಕತೆ ಓದಿದೆ ಮಾರಾಯ! ಹಾಗಂತ ಯಾರಾದರೂ ನಿಮಗೆ ಹೇಳಿ ಎಷ್ಟು ದಿನವಾಯಿತು ಯೋಚಿಸಿ. ಬಹುಶಃ ಹಾಗೆ ಹೇಳದೇ ವರುಷಗಳೇ ಕಳೆದಿರಬಹುದು. ನಾವೆಲ್ಲ ಗೆಳೆಯರು ಮಾತಿಗೆ ಕೂತಾಗ ಆ ವಾರ ಓದಿದ ಕತೆಯೊಂದು ಮಾತಿನ ನಡುವೆ ಬಂದು ಹೋಗುವ ದಿನವೊಂದಿತ್ತು. ಹಾಗೆ ಕತೆಯೊಂದು ಬಾರದೇ ಹೋದರೂ ಒಂದು ಸಿನೆಮಾವೋ ಒಂದು ಹಾಡೋ ಒಬ್ಬ ನಟನ ಮಾತೋ ಒಬ್ಬ ಲೇಖಕನ ಭಾಷಣದ ಸಾಲೋ ಮಾತಲ್ಲಿ ನುಸುಳುತ್ತಿತ್ತು. ಯಾರಾದರೂ ಅಂಥದ್ದೇನನ್ನಾದರೂ ಹೇಳಿದರೆ ನಾವು ಚಪ್ಪರಿಸಿಕೊಂಡು ಕೇಳುತ್ತಿದ್ದೆವು. ಕವಿತೆ ಗುನುಗುತ್ತಿದ್ದೆವು. ಚಿತ್ರಗೀತೆಯೊಂದು ಅಚಾನಕ್ ಮನಸ್ಸಿನಲ್ಲಿ ಸುಳಿದು ಮರೆಯಾಗುತ್ತಿತ್ತು. ಜಾನಕಿ

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.