Hi Bangalore
Hi Bangalore

Hi Bangalore

This is an e-magazine. Download App & Read offline on any device.

Preview

ಹಾಯ್ ಬೆಂಗಳೂರ್! : ಸಂಪುಟ : ೨೦, ಸಂಚಿಕೆ : ೪, ಅಕ್ಟೋಬರ್ ೨೩, ೨೦೧೪ ಬೆಲೆ : ೧೫ ರು ಮುಖಪುಟ ಲೇಖನ ರೌಡಿ ನಖರಾ ಹತ್ಯೆ ಕವಳನ ಬಾಯ್ಸ್ ರಿವೆಂಜ್! ಇಷ್ಟು ಭೀಕರ ಪ್ರತೀಕಾರವಾ? ನಖರಾ ಬಾಬುವನ್ನು ಕತ್ತರಿಸಿ ಹಾಕಲಾಗಿದೆ. ಕವಳನನ್ನು ಕೊಂದು ಬೀಗುತ್ತಿದ್ದ ಬಾಬುವಿಗೆ ನೂರಾ ಒಂಬತ್ತು ದಿನದಲ್ಲೇ ಉತ್ತರ ನೀಡಲಾಗಿದೆ. ಕವಳನ ಶಿಷ್ಯ ನಂಜುಂಡ ಇಂತಹದೊಂದು ಪ್ರತೀಕಾರ ತೀರಿಸಿಕೊಂಡಿದ್ದಾನೆ. ಆದರೆ ಬಾಬು ಹತ್ಯೆ ಹಿಂದೆ ಕವಳನ ತಮ್ಮ ಮಣಿ ಇದ್ದಾನಾ? ರಿಯಲ್ ಎಸ್ಟೇಟ್ ಉದ್ಯಮಿ ರಾಜ್‌ಕಮಲ್‌ನ ಕೈವಾಡವಿದೆಯಾ? ಎಂಬುದೀಗ ಪೊಲೀಸರ ಮುಂದಿರುವ ಪ್ರಶ್ನೆಗಳಾಗಿವೆ. ಆದರೆ ಅಂಡರ್‌ವರ್ಲ್ಡ್‌ನ ಅಂತರಂಗವನ್ನು ಅರಿತಿದ್ದ ಬಾಬು ಯಾಮಾರಿದ ರೀತಿಯನ್ನು ಕಂಡು ಚಿಲ್ಟು ಹುಡುಗರೇ ನಗತೊಡಗಿದ್ದಾರೆ. ಸುನೀಲ್ ಹೆಗ್ಗರವಳ್ಳಿ ಖಾಸ್‌ಬಾತ್ ಮೇಘಾಲಯದಿಂದ ಬಂದು ಪುಟ್ಟ ಹುಡುಗನಂತೆ ಸಿಟ್ಟು ಮಾಡಿಕೊಂಡವನು ಅರುಣ್! ಅರುಣ್ ಕೆಂಭಾವಿ. “ನಾನು ಬ್ಯಾಸತ್ತು ಬಿಟ್ಟಿದ್ದೆ. ಆಯ್ತು, ಇವತ್ತಿಗೆ ಇದೇ ಕೊನೆ. ಇನ್ನು ಯಾವತ್ತೂ ನಿಮ್ಮ ಹತ್ತಿರಕ್ಕೆ ಬರೋದಿಲ್ಲ. ಹುಡುಕೋ ಪ್ರಯತ್ನ ಮಾಡೋದಿಲ್ಲ. ಇದು last!" ಅಂತ ಒಂದು ತೆರನಾದ ಸೆಡವು ಮಾಡಿಕೊಂಡು ಮಾತನಾಡುತ್ತಿದ್ದ ಅವನು ನನಗೆ ಮಗುವಿನಂತೆ ಮುದ್ದಾಗಿ ಕಾಣುತ್ತಿದ್ದ. ಮಗು ಯಾರೇ ಇರಲಿ: ಅದಕ್ಕೆ ಸಿಟ್ಟು ಬಂದುಬಿಟ್ಟರೆ ತುಂಬ ಮುದ್ದಾಗಿ ಕಾಣುತ್ತದೆ. ನನ್ನ ಕಣ್ಣಿಗೆ ಕೆಂಭಾವಿ ಹಾಗೇ ಕಾಣುತ್ತಿದ್ದ. ನನ್ನ ಟೇಬಲ್‌ನ ಎದುರಿಗೇ ನಿಂತು ಮಾತನಾಡುತ್ತಿದ್ದ. ನಾನು ನಗುತ್ತಾ, ಮೇಲಕ್ಕೆದ್ದು ಅನಾಮತ್ತು ಅವನನ್ನು ತಬ್ಬಿ ಕೊಂಡು ಕೆನ್ನೆಗೊಂದು ಮುತ್ತು ಕೊಟ್ಟೆ. ಸೆಟೆದು ಹಟ ಮಾಡುವ ಮಕ್ಕಳನ್ನು ನಾವು ಹತ್ತಿರಕ್ಕೆಳೆದುಕೊಂಡು ಒಂದು ಮುತ್ತು ಕೊಡುತ್ತೀವಲ್ಲ? ಆರ್.ಬಿ ಹಲೋ ಢಂಗುರ ಬಾರಿಸುವ ದಂಡಪಿಂಡಗಳ ಬಗ್ಗೆ ಎಚ್ಚರವಿರಲಿ ಸಿದ್ದಣ್ಣ! ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿರುವ ಮಂತ್ರಿಗಳ ಪೈಕಿ ಬಹಳಷ್ಟು ಮಂದಿ ಕ್ರಿಯಾಶೀಲರಲ್ಲ ಎಂಬುದು ರಹಸ್ಯದ ಸಂಗತಿಯೇನಲ್ಲ. ಬಹುಶಃ ತುಂಬ ಜನರಿಗೆ ಅವರು ಬಯಸಿದ ಖಾತೆ ಸಿಗದೆ, ಕೊಟ್ಟಿರುವ ಖಾತೆಯ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿರಬಹುದು ಎಂದು ಕೆಲವರು ಹೇಳಬಹುದು. ಉದಾಹರಣೆಗೆ ಟಿ.ಬಿ.ಜಯಚಂದ್ರ ಅವರಿಗೆ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗುವ ಬದಲು ನೀರಾವರಿ ಸಚಿವರಾಗ ಬೇಕು ಎಂಬ ಆಕಾಂಕ್ಷೆಯಿತ್ತು. ರವಿ ಬೆಳಗೆರೆ ಬಾಟಮ್ ಐಟಮ್ ಚಪ್ಪಾಳೆ ಹೊಡೆದವರು ನೀವು, ಶತಕ ಹೊಡೆದವರೂ ನೀವೇ ‘ಓ ಮನಸೇ..’ ಗೆ ನೂರು ತುಂಬಿತು. ದೇಹಕ್ಕೆ ವಯಸ್ಸಾಗುತ್ತದೆ, ಮನಸ್ಸಿಗೆ ವಯಸ್ಸಾಗುವುದು ಉಂಟಾ ಎಂದು ನೀವು ಕೇಳಬಹುದು. ಇದನ್ನೇ ಕೊಂಚ ಬೇರೆ ಥರ ಪಾಸಿಟಿವ್ ಆಗಿ ನೋಡಿ. ದೇಹಕ್ಕೆ ವಯಸ್ಸಾಗುವುದು ಅಂದರೆ ಸುಸ್ತಾ ಗುವುದು, ಅಂಗಾಂಗಗಳು ಕಸುವನ್ನು ಕಳೆದುಕೊಳ್ಳುವುದು. ಮನಸ್ಸಿಗೆ ವಯಸ್ಸಾಗುವುದು ಅಂದರೆ ಅದು ಇನ್ನಷ್ಟು ಮಾಗುವುದು ಮತ್ತು ಪ್ರಬುದ್ಧವಾಗುವುದು. ಆ ಲೆಕ್ಕಾಚಾರದಲ್ಲಿ ‘ಓ ಮನಸೇ..’ ಪತ್ರಿಕೆಯನ್ನು ನೀವು ನೋಡಬೇಕು ಅನ್ನುವುದು ನಮ್ಮ ಬಿನ್ನಹ. ರವೀ ವರದಿ ಫಿಲಂ ಛೇಂಬರ್‌ಗೆ ಗೂಟ ಹೊಡೆದು ಕೂತ ಗಂಗರಾಜ್ ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಗಳು ನಡೆಯಬೇಕಿತ್ತು. ಆದರೆ, ಚುನಾವಣೆಗಳು ನಡೆಯುವ ಸೂಚನೆಗಳು ಕಾಣಿಸುತ್ತಲೇ ಇಲ್ಲವಾದ್ದ ರಿಂದ ಸದ್ಯಕ್ಕೆ ಚುನಾವಣೆಗಳು ನಡೆಯಬಹುದು ಎಂಬ ನಂಬಿಕೆ ಯಾರಲ್ಲೂ ಇಲ್ಲ. ಅಲ್ಲಿಗೆ ಕನ್ನಡ ಚಲನಚಿತ್ರ ಕಲಾವಿದರ ಸಂಘ ಮತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಹಾದಿಯಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ನಡೆದಿದೆ. ಆ ಎರಡೂ ಸಂಸ್ಥೆಗಳಿಗೆ ಚುನಾವಣೆಗಳೇ ನಡೆದಿಲ್ಲ. ಕಲಾವಿದರ ಸಂಘಕ್ಕೆ ಚುನಾವಣೆ ಕೊನೆಯದಾಗಿ ಯಾವಾಗ ಆಗಿದ್ದೆಂದು ಕಲಾವಿದರಿಗೇ ನೆನಪಿಲ್ಲ. ಇನ್ನು ನಿರ್ಮಾಪಕರ ಸಂಘದ ಚುನಾವಣೆಗಳು ಕಳೆದ ವರ್ಷ ಆಗಬೇಕಿತ್ತು. ವರದಿ ಪೊಲೀಸ್ ಅಧಿಕಾರಿಯ ಪರವಾಗಿ ರಾಜ್ಯಪಾಲರಿಗೆ ಪತ್ರ ಬರೆದ ಜನ! ವೃತ್ತಿಪರ ಕಳ್ಳನೊಬ್ಬ ಸುಲಿಗೆ ಆರೋಪ ಮಾಡಿದ್ದ ರಿಂದ ಎಚ್.ಎ.ಎಲ್. ಠಾಣಾ ಇನ್ಸ್‌ಪೆಕ್ಟರ್ ಆರ್.ರಾಜೇಶ್ ಸಸ್ಪೆಂಡ್ ಆಗಿದ್ದಾರೆ. ರಾತ್ರಿ ವೇಳೆ ನಿರ್ಜನ ಪ್ರದೇಶದಲ್ಲಿ ಓಡಾಡುತ್ತಿದ್ದವರನ್ನು ಪ್ರಶ್ನಿಸಿ ಮುನ್ನೂರೈವತ್ತು ರುಪಾಯಿ ಕಿತ್ತುಕೊಂಡಿದ್ದಾರೆ ಎನ್ನಲಾದ ಪೊಲೀಸ್ ಪೇದೆಯ ಮೇಲೆ ಕ್ರಮ ಕೈಗೊಂಡಿಲ್ಲವೆಂಬ ಕಾರಣಕ್ಕೆ ಮಡಿವಾಳ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಜೇಶ್ ಹಾಗೂ ಬಾಡಿಗೆ ಮನೆಯಲ್ಲಿದ್ದ ಒಂಟಿ ಮಹಿಳೆ ಮನೆ ಮುಂದೆ ಗಲಾಟೆ ಮಾಡಿದ್ದ ಮದ್ಯವ್ಯಸನಿ ಪ್ರದೀಪ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕೆಂಪೇಗೌಡ ನಗರ ಠಾಣೆಯ ಇನ್ ಪೆಕ್ಟರ್ ಸಿ.ಡಿ.ನಾಗರಾಜ್ ಅವರನ್ನು ಅಮಾನತು ಮಾಡಲಾಗಿದೆ. ಸೂರ್ಯಪ್ರಕಾಶ್ ವರದಿ ಕೊಪ್ಪಳದ ಹೆಣ್ಣುಮಗಳ ಪಾಲಿನ ನರಕ ರಾಜಸ್ಥಾನ್ ಬೆಂಗಳೂರಿಗೆ ಮಹೇಂದರ್ ಹೊರಟು ನಿಂತಾಗ, ತನ್ನನ್ನೂ ಕರೆದೊಯ್ಯುವಂತೆ ಸುಮನ್ ಹಠ ಹಿಡಿಯುತ್ತಾಳೆ. ಆದರೂ ಅವಳನ್ನು ಮತ್ತೆ ರಾಜಸ್ತಾನದಲ್ಲೇ ಬಿಟ್ಟು ಹೊರಡುವ ಮಾರವಾಡಿಯ ನಿರ್ಧಾರದ ಮುಂದೆ ಅವಳ ಹಠದಿಂದ ಗೆಲ್ಲುತ್ತಾಳೆ. ಒಂದು ವರ್ಷದ ಯಮಯಾತನೆ ಅನುಭವಿಸಿದ ಸುಮನ್‌ಳಿಗೆ ಪುನಃ ಕರ್ನಾಟಕಕ್ಕೆ ವಾಪಸ್ಸಾಗುತ್ತಿರುವ ಸಂತೋಷ ಸಿಕ್ಕುತ್ತದೆ. ಮೊದಲೇ ಕಡುಬಡತನದಲ್ಲಿ ಬೆಂದಿರುವ ಸುಮನ್‌ಳ ಕುಟುಂಬಕ್ಕೆ ಇವಳ ನೋವು ಅರ್ಥವಾಗುವುದಿಲ್ಲ. ಗಂಡನ ಮನೆ ಅಂದ ಮೇಲೆ ಇವೆಲ್ಲಾ ಸಹಜ, ಅನುಸರಿಸಿಕೊಂಡು ಹೋಗಬೇಕು ಎಂಬ ತವರುಮನೆ ಉಪದೇಶವೂ ಸುಮನ್‌ಳನ್ನು ಅತಂತ್ರ ಸ್ಥಿತಿಗೆ ತಳ್ಳಿರುತ್ತದೆ. ಕೊನೆಗೆ ಬೆಂಗಳೂರಿನಲ್ಲೇ ಸಂಸಾರ ಹೂಡಿದ ಮಾರವಾಡಿ ಇಲ್ಲೂ ಆಕೆಗೆ ನೆಮ್ಮದಿ ಕೊಡುವುದಿಲ್ಲ. ಸತೀಶ್ ಬಿಲ್ಲಾಡಿ ವರದಿ ಕಡೆಗ ಪಮ್ಮಿ ಫಿನಿಶ್: ಸಿದ್ದುಗೆ ಸೂಪರ್ ಪವರ್! ಈಗಲೂ ಅಷ್ಟೇ. ರಾಜ್ಯದ ವಿವಿಧ ನಿಗಮ ಮಂಡಳಿಗಳ ನೇಮಕಾತಿಗೆ ಸಂಬಂದಂತೆ ಇನ್ನೇನು ಒಂದೆರಡು ದಿನಗಳಲ್ಲಿ ಎಲ್ಲವೂ ಸೆಟ್ಲಾಗುತ್ತದೆ ಎಂಬಂತಹ ಮಾತುಗಳು ತಿಂಗಳಾನುಗಟ್ಟಲೆ ಕಾಲದಿಂದ ಕೇಳುತ್ತಾ ಬಂದರೂ ಯಾರನ್ನು ನಿಗಮ ಮಂಡಳಿಗಳಲ್ಲಿ ಅಧಿಕಾರಕ್ಕೆ ಕೂರಿಸಬೇಕು ಎಂಬ ವಿಷಯದಲ್ಲಿ ಸಿದ್ದು-ಪಮ್ಮಿ ನಡುವೆ ಸಂಘರ್ಷ ನಡೆದೇ ಇದೆ. ಒಂದು ಸಲ ಇಬ್ಬರೂ ನಿಗಮ ಮಂಡಳಿಗಳಿಗೆ ಯಾರು ಅಧ್ಯಕ್ಷರಾಗಬೇಕು ಎಂಬ ಪಟ್ಟಿಯನ್ನು ರೆಡಿ ಮಾಡಿಕೊಂಡು ಹೋದರೂ ನಲವತ್ತೇ ನಿಮಿಷಗಳಲ್ಲಿ ಮಾತುಕತೆ ವಿಫಲವಾಗಿ ಹೊರಬಂದರು. ಕಾರಣ ಸ್ಪಷ್ಟವಾಗಿತ್ತು. ಸಿದ್ದರಾಮಯ್ಯನವರ ಪಟ್ಟಿಯಲ್ಲಿ ಕೃಷ್ಣ ವಿರೋಧಿಗಳ ಸಂಖ್ಯೆ ಹೆಚ್ಚಾಗಿತ್ತು. ಆರ್.ಟಿ.ವಿಠ್ಠಲಮೂರ್ತಿ ವರದಿ ಪವಾಡವಲ್ಲ ಸಾರ್: ಇದು ಅಥಣಿಯ ಪಾಯ್ಸನ್! ಅವತ್ತು ಜಾಗರಣೆಯನ್ನಾಗಿ ಆಚರಿಸಲಾಗುತ್ತಿತ್ತು. ಹೀಗಿರುವಾಗ ಗಣೇಶ ಯೋಗಿ ಮಹಾರಾಜರಿಗೆ ಅದೇನನ್ನಿಸಿತೋ ಗೊತ್ತಿಲ್ಲ. ಭಕ್ತರನ್ನು ಉದ್ದೇಶಿಸಿ “ನಾನು ವಿಷ ಕುಡಿದು ಸಾಯುತ್ತೇನೆ. ಅದಕ್ಕಾಗಿ ನೀವ್ಯಾರೂ ಆತಂಕ ಪಡುವ ಅಗತ್ಯವಿಲ್ಲ. ಸತ್ತ ಮೂರನೆಯ ದಿನ ಮತ್ತೆ ನಾನು ಹುಟ್ಟಿ ಬಂದು ನಿಮ್ಮ ಎದುರು ಜೀವಂತವಾಗಿ ಹಾಜರಾಗುತ್ತೇನೆ" ಅಂದಿದ್ದರು. ನುಡಿದ ಮಾತಿನಂತೆಯೇ ದೇವಸ್ಥಾನದಲ್ಲಿ ಅವತ್ತು ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಎರಡು ನೂರು ಮಿಲಿ ಕ್ರಿಮಿನಾಶಕ ಸೇವಿಸಿದ್ದರು. ಈ ವಿಷಯ ಹರಡಿದ್ದೇ ತಡ ಸಾವಿರಾರು ಭಕ್ತರು ಹರಿದು ಬಂದರು. ರವಿ ಕುಲಕರ್ಣಿ ವರದಿ ಇವರು ನಕ್ಸಲರು ಸರಿ; ಆದರೆ ಸರ್ಕಾರ ಎಷ್ಟು ಸರಿ? ಜನಪರ ಚಿಂತನೆಗಳ ನಡುವೆ ಆರೋಗ್ಯಕರ ಸಂವಾದವನ್ನು ಪ್ರಾರಂಭಿಸುವ, ಅವನ್ನು ಸಮಕಾಲೀನಗೊಳಿಸಿ, ಅಭಿವೃದ್ಧಿಪಡಿಸುವ ಕರ್ತವ್ಯ ನಮ್ಮೆಲ್ಲರ ಮುಂದಿದೆ. ನಮ್ಮ ಈ ನಿಲುವಿನ ಜೊತೆ ಸಹಮತವಿರುವವರ ಜೊತೆಗೂಡಿ ಸಮಕಾಲೀನ ಸಮಾಜವಾದಿ ಚಿಂತನೆಯನ್ನು ಬಲಗೊಳಿಸುವ ಸೈದ್ಧಾಂತಿಕ ಕೆಲಸದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಬಯಸುತ್ತಿದ್ದೇವೆ. ಸಿದ್ಧಾಂತಗಳನ್ನು, ಸಂಘಟನೆಗಳನ್ನು ಹಾಗೂ ಸಮಸ್ಯೆಗಳನ್ನು ಪರಸ್ಪರ ಸ್ಪರ್ಧೆಗೆ ನಿಲ್ಲಿಸದೆ ಎಲ್ಲಾ ಜನಪರ ಸಿದ್ಧಾಂತಗಳಿಂದ ಕಲಿಯುತ್ತ, ಎಲ್ಲಾ ಸಾಮಾಜಿಕ ಅನ್ಯಾಯಗಳ ವಿರುದ್ಧದ ಚಳವಳಿಗಳು ಒಳಗೊಂಡಲ್ಲಿ ಹಾಗೂ ಜೊತೆಗೂಡಿದಲ್ಲಿ ಎಲ್ಲ ರೀತಿಯ ಜನವಿರೋ ಕ್ರಮಗಳನ್ನು ಪ್ರತಿರೋಸುವ ಶಕ್ತಿ ಮತ್ತು ಸಾಮರ್ಥ್ಯ ಶೋಷಿತ ಜನತೆಗೆ ಸಿಕ್ಕಂತಾಗುತ್ತದೆ. ಶೃಂಗೇಶ್ ವರದಿ ಹುಬ್ಬಳ್ಳಿ ಮೂರು ಸಾವಿರ ಮಠ:ಗುರುಸಿದ್ಧನ ತಿಕ್ಕಲ ಚೇಷ್ಟೆ ಮತ್ತು ದಿಂಗಾಲೇಶ್ವರ ಗುರುಸಿದ್ಧರಿಗೆ ಇನ್ನೂ ಐವತ್ತಾರು ವರ್ಷ ವಯಸ್ಸು. ಪೀಠತ್ಯಾಗ ಮಾಡುವ ವಯಸ್ಸಂತೂ ಖಂಡಿತ ಅಲ್ಲ. ಗುರುಸಿದ್ಧರು ಯಾವಾಗ ದಿಂಗಾಲೇಶ್ವರರನ್ನು ತಂದು ಕೂರಿಸುವ ಯೋಚನೆ ಮಾಡಿದರೋ ಆಗಲೇ ಸಂಘರ್ಷ ಆರಂಭವಾಗಿತ್ತು. ದಿಂಗಾಲೇಶ್ವರರ ಬದ್ಧವೈರಿಯಾದ ರುದ್ರಮುನಿಯವರು ಘಟಪ್ರಭದ ಮಲ್ಲಿಕಾರ್ಜುನ ಸ್ವಾಮಿಗಳನ್ನು ಪೀಠಾಧಿಪತಿಯನ್ನಾಗಿ ಕೂರಿಸಬೇಕೆಂದು ಹಟ ಹಿಡಿದಿದ್ದರಿಂದಾಗಿ ಮೂರುಸಾವಿರ ಮಠಕ್ಕೆ ಉತ್ತರಾಕಾರಿಯ ವಿವಾದ ಆರಂಭವಾಯಿತು. ವರದಿಗಾರ ವರದಿ ಚಿತ್ರದುರ್ಗ: ಅಧಿಕಾರ ಪಡೆಯಲು ಆಂಜನೇಯನ ಮುಂದೆ ಪೆರೇಡ್ ನಿಗಮ ಮಂಡಳಿಯ ಅಧ್ಯಕ್ಷರಾಗಲು ಹಲವರು ಅಂಗಿ ಹೊಲಿಸಿಕೊಂಡು ಸಜ್ಜಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಲವು ಕಾಂಗ್ರೆಸ್ ಮುಖಂಡರಿಗೆ ಗೂಟದ ಕಾರಿನಲ್ಲಿ ಓಡಾಡುವ ಗೀಳು ಅಂಟಿಕೊಂಡಿದೆ. ಆದರೆ ಅದಕ್ಕೆ ಆಂಜನೇಯ ವರ ಕೊಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಪ್ತರಾಗಿರುವ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅಸ್ತು ಅಂದರೆ ಮಾತ್ರ ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಸ್ಥಾನಮಾನ ಸಿಗುತ್ತದೆ. ಇದನ್ನು ಅರ್ಥ ಮಾಡಿಕೊಂಡ ಹಲವರು ಆಂಜನೇಯನ ಮುಂದೆ ವರ ಕೇಳತೊಡಗಿದ್ದಾರೆ. ಕಾಂತರಾಜ್ ಅರಸ್ ನೇವಿ ಕಾಲಂ ತಾನು ನಂಬಿದ ಸತ್ಯದಲ್ಲಿ ಜಗಕೆ ನಂಬಿಕೆ ಇಲ್ಲ ಕುಡುವಿ ರಾತ್ರಿ ಕೇಳಿಸಿಕೊಂಡ ಸದ್ದು ಯಾರದ್ದು ಎಂಬ ಬಗ್ಗೆ ತನಿಖೆ ಶುರುವಾಯಿತಾದರೂ ಅದನ್ನು ಒಬ್ಬೊಬ್ಬರು ಒಂದೊಂದು ಥರ ವ್ಯಾಖ್ಯಾನಿಸಿ ಇನ್ನಷ್ಟು ಗೋಜಲು ಮಾಡಿದರೇ ಹೊರತು ಯಾರೂ ಅದಕ್ಕೆ ಒಂದು ಸ್ಪಷ್ಟ ರೂಪ ಕೊಡಲಿಲ್ಲ. ಅಷ್ಟಕ್ಕೂ ಅವಳ ಕಿವಿಯ ಹೊರತಾಗಿ ಇನ್ಯಾವುದೂ ಈ ರಾತ್ರಿಯ ಆಗಂತುಕನನ್ನು ಸಾಕ್ಷೀಕರಿಸುವವರಿರಲಿಲ್ಲ. ನೇವಿ ಜಾನಕಿ ಕಾಲಂ ಬಸ್ಸು ಕೆಟು ನಿಂತ ಹನ್ನೆರಡು ಗಂಟೆ ಹಬ್ಬಿದಾ ಮಲೆ. ಎಲ್ಲೆಲ್ಲೂ ಹಸಿರು. ಹಸಿರು ಬಯಲಲ್ಲಿ ಉಸಿರು ಬಿಗಿಹಿಡಿದು ಓಡುತ್ತಿರುವ ಪುಟ್ಟ ಹುಡುಗ. ಅವನ ಹಿಂದೆ ಏದುಸಿರು ಬಿಟ್ಟುಕೊಂಡು ಓಟ ಕಿತ್ತಿರುವ ತಾಯಿ. ಸಂಜೆಯಾಗುತ್ತಿತ್ತು. ನಾವು ಹೋಗುತ್ತಿದ್ದ ಬಸ್ಸು ಕೆಟ್ಟು ನಿಂತು ಮೂರೋ ನಾಲ್ಕೋ ಗಂಟೆಯಾಗಿತ್ತು. ಆ ರಸ್ತೆಯಲ್ಲಿ ಬೇರೆ ಯಾವ ಬಸ್ಸೂ ಬರುವುದಿಲ್ಲ ಎಂದು ಕಂಡಕ್ಟರ್ ಆತಂಕದಲ್ಲಿದ್ದ. ಬಸ್ಸಿನಲ್ಲಿದ್ದ ಮೂವತ್ತೋ ಮೂವತ್ತೈದೋ ಪ್ರಯಾಣಿಕರ ಪೈಕಿ ಅನೇಕರು ಕಂಗಾಲಾಗಿದ್ದರು. ಥರಹೇವಾರಿ ಮಂದಿ. ದೂರ ಪ್ರಯಾಣಕ್ಕೆ ಹೊರಟವರು. ಸಿಗರೇಟು ಸೇದಲು ಹಂಬಲಿಸುವವರು. ಜಾನಕಿ ಒಲಿದಂತೆ ಹಾಡುವೆ ಕಾಲಂ ಹನಿಮೂನ್-೨ ‘ನಾನು ಸಂತೃಪ್ತ’ ಈ ಪದಗಳು ಅವಳ ಮನದಲ್ಲಿ ಅಚ್ಚೊತ್ತಿದಂತೆ ನೆಲೆಸಿದವು. ಎಷ್ಟೋ ವರ್ಷಗಳ ನಂತರ ಈಗ ಅದನ್ನೆಲ್ಲ ನೆನಪಿಸಿಕೊಂಡಾಗ ಇದೇ ತಾನೆ ಅವನು ಆ ಮರದ ಮೇಲೆ ಕೆತ್ತಿದಂತೆ ಕಂಡಿತು. ಹಾಗೆಯೇ ಅಲ್ಲಿನ ಹಿಮಾಚ್ಛಾದಿತ ಪರ್ವತಗಳು, ಆ ಊರಿನ ಛಾವಣಿ ಮನೆಗಳು ವೈಸಿನ್ ರೊಸ್ಲಿಯ ಹಾಲಿನ ವಾಸನೆ, ಸುತ್ತಣ ಪೊದೆಗಳಿಂದ ಗಾಳಿಯಲ್ಲಿ ತೇಲಿ ಬರುತ್ತಿದ್ದ ಸಿಹಿ ಸುಗಂಧ... ಎಲ್ಲವೂ ಅವಳ ಭಾವಕೋಶದ ಭಾಗಗಳಾದವು. ಹಿಂದೆ ಹಲವು ಸಲ ಅಂದುಕೊಂಡಂತೆ ಈಗಲೂ ತನ್ನೊಳಗೆ ಹೇಳಿ ಕೊಂಡಳು. ಅವರೆಂದೂ ಅವರ ಬದುಕಿನಲ್ಲಿ ಅಂದು ಒಡಮೂಡಿದ ಒಲವ ಸಂಭ್ರಮದ ಒರತೆ ಬತ್ತಲು ಬಿಡಲಿಲ್ಲ. ಚಂದ್ರಶೇಖರ ಆಲೂರು

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.